Siri ; ಬಿಗ್ ಬಾಸ್ 'ಸಿರಿ'ಯ 'ಸೀರೆ' ಪ್ರೀತಿ, ತಮ್ಮ ಪತಿ ಜೊತೆ ಫ್ಲೈಟ್ ಏರಿ ಹೋಗಿದ್ದೆಲ್ಲಿಗೆ ನಟಿ..?

By ಪ್ರಿಯಾ ದೊರೆ

ಕನ್ನಡದ ಕಿರುತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ್ದ ನಟಿ ಸಿರಿಜಾ ಅವರು ʼಮನೆಯೊಂದು ಮೂರು ಬಾಗಿಲು', 'ಸಂಬಂಧ', 'ರಂಗೋಲಿ', 'ಬದುಕು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಏಕಕಾಲಕ್ಕೆ 3-4 ಧಾರಾವಾಹಿಗಳಲ್ಲಿ ಬ್ಯುಸಿಯಿರುತ್ತಿದ್ದ ನಟಿ ಸಿರಿ ಕನ್ನಡ ಜೊತೆ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಕೂಡ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡದ ಅನೇಕ ಮೆಗಾ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಸಿರಿಜಾ ಅವರು ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದರು. ಸದ್ಯ ಸಿರಿ ಅವರು ತಮ್ಮ 39ನೇ ವಯಸ್ಸಿನಲ್ಲಿ ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಕಿರುತೆರೆಯ ಮನೆ ಮಗಳು ಸಿರಿ

ಕನ್ನಡ ಕಿರುತೆರೆಯಲ್ಲಿ 2 ದಶಕಗಳಿಂದ ಕಾಣಿಸಿಕೊಳ್ಳುತ್ತಿರುವ ನಟಿ ಸಿರಿ ಎಲ್ಲರಿಗೂ ಚಿರಪರಿಚಿತ. ಕೆಲ ಸಮಯ ಮಾತ್ರ ಮಾಯವಾಗಿದ್ದ ಸಿರಿ ಅವರು ಪರಭಾಷೆಯಲ್ಲಿ ಬ್ಯುಸಿಯಾಗಿದ್ದರು. ಉದಯ ಟಿವಿಯಲ್ಲಿ ಮೂಡಿ ಬಂದ ಮದುಮಗಳು ಎಂಬ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಟಾಪ್ ಲಿಸ್ಟ್ ನಲ್ಲಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಸಿರಿಜಾ ಅವರು ಅಭಿನಯಿಸಿದ್ದರು. ʼಅಂಬಿಕಾ' , 'ನನ್ನವಳು ನನ್ನವಳು', 'ಬಂದೇ ಬರತಾವ ಕಾಲ', 'ಕೋಗಿಲೆ, 'ಈ ಬಂಧನ', 'ಗೀತಾಂಜಲಿ', 'ಜೋಡಿಹಕ್ಕಿ', 'ಅಂಜಲಿ' ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಸಿರಿಜಾ ನಟಿಸಿದ್ದಾರೆ.

ತ್ರಿಭಾಷಾ ನಟಿ ಸಿರಿಜಾ ಸಿನಿಮಾಗಳು

ಚಿಕ್ಕ ವಯಸ್ಸಿಗೆ ಸಿರಿಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ ಸೇರಿ ಪರಭಾಷೆಯಲ್ಲಿಯೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಭಿ ಪಾತ್ರದ ಮೂಲಕ ಸಿರಿಜಾ ಅವರು ಚಿರಪರಿಚಿತರಾಗಿದ್ದರು. ತೆಲುಗು ಚಿತ್ರರಂಗದಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಉಷಾ ಕಿರಣ್ ಬ್ಯಾನರ್ ಅಡಿ ಜ್ಯೂನಿಯರ್ ಎನ್ ಟಿಆರ್ ಅವರ 'ನಿನ್ನು ಚೂಡಾಲನಿ' ಸಿನಿಮಾದಲ್ಲಿಯೂ ಸಿರಿ ಬಣ್ಣ ಹಚ್ಚಿದ್ದರು. ಸ್ಯಾಂಡಲ್ ವುಡ್ ನಲ್ಲೂ ಸಿರಿಜಾ ಅವರು 'ಸಿಂಹಾದ್ರಿಯ ಸಿಂಹ', 'ಚಂದು' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿ ನಿಲ್ಲಿಸಿದ ನಟಿ

ಮದುಮಗಳು ಧಾರಾವಾಹಿಯಲ್ಲಿ ನಟಿ ಸಿರಿ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸುಂದರ್ ವೀಣಾ, ಭವೀಶ್, ರಕ್ಷಿತಾ ನಟಿಸಿದ್ದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಧಾರಾವಾಹಿ ರಾಮಾಚಾರಿ. ಇದರಲ್ಲೂ ದೊಡ್ಡ ತಾರಾ ಬಳಗವೇ ಇದೆ. ಜಯಶಂಕರ್ ಎರಡನೇ ಪತ್ನಿ ಶರ್ಮಿಳಾ ಪಾತ್ರದಲ್ಲಿ ನಟಿ ಸಿರಿ ಅವರು ಕಾಣಿಸಿಕೊಂಡಿದ್ದರು. ಇದರಲ್ಲಿ ಪಾಸಿಟಿವ್ ರೋಲ್ ಮಾಡಿದ್ದ ಸಿರಿ, ಆ ನಂತರ ಧಾರಾವಾಹಿಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದರು.

Written update on bigg boss fame actress siri bali trip

ಪತಿ ಜೊತೆಗೆ ಬಾಲಿಯಲ್ಲಿರುವ ನಟಿ

ಬಳಿಕ ಬಿಗ್ ಬಾಸ್ ನಲ್ಲಿ ನಟಿ ಸಿರಿ ಅವರು ಕಾಣಿಸಿಕೊಂಡು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದರು. ಬಹಳ ಸಾಫ್ಟ್ ಮನಸ್ಸಿನ ಸಿರಿಜಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮದುವೆಯಾಗಿ ಸುದ್ದಿಯಾದರು.

ಮದುವೆಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಸಿರಿಜಾ ಅವರು ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ತಮ್ಮ ವಯಕ್ತಿಕ ಜೀವನದಲ್ಲಿ ಸಿರಿಜಾ ಅವರು ಬ್ಯುಸಿಯಾಗಿದ್ದು, ಸಣ್ಣ-ಪುಟ್ಟ ಟ್ರಿಪ್ ಹೋಗುತ್ತಿದ್ದವರು. ಇದೀಗ ಪತಿ ಜೊತೆಗೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ ಹನಿಮೂನ್ ಮೂಡ್ ನಲ್ಲಿರುವ ಈ ಜೋಡಿಗಳು ಸಕತ್ ಜಾಲಿಯಾಗಿದ್ದಾರೆ. ಸಿರಿಜಾ ಅವರು ಅಲ್ಲಿ‌ನ ಫೋಟೋಗಳನ್ನು ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಅಪ್ ಡೇಟ್ ಕೊಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X