BBK 11 ; ಎಲ್ಲರಿಗೂ ಸೆಡ್ಡು ಹೊಡೆದು ಕೊನೆವರೆಗೂ ಇರ್ತಾರಾ ಧರ್ಮ ಗೆಳತಿ ಅನುಷಾ ರೈ...?

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 11ರಲ್ಲಿ ಎಲ್ಲವೂ ಗೊಂದಲ ಮಯವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಡೆಯದಂತಹ ಘಟನೆಗಳು ನಡೆದಿದ್ದು, ಬಿಗ್ ಬಾಸ್ ಗೂ ಶಾಕ್ ಆಗಿದೆ. ಸದ್ಯ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳಿಸಿದ್ದು, ಎಲಿಮಿನೇಷನ್ ಎನ್ನುವುದಕ್ಕಿಂತಲೂ ಮಾಡಿದ ತಪ್ಪಿಗೆ ಶಿಕ್ಷೆ ಎಂಬಂತೆ ಅರ್ಧದಲ್ಲಿಯೇ ಹೊರಗೆ ಕಳಿಸಲಾಗಿದೆ. ಜಗದೀಶ್ ಮನೆಯಿಂದ ಹೊರಗೆ ಹೋಗಿದ್ದನ್ನು ಒಪ್ಪಿದ ಸ್ಫರ್ಧಿಗಳು, ರಂಜಿತ್ ಬಗ್ಗೆ ಪಡೆದ ಬಿಗ್ ಬಾಸ್ ನಿರ್ಧಾರವನ್ನು ಒಪ್ಪಲು ಯಾರೂ ತಯಾರಿಲ್ಲ. ಇನ್ನು ಇದೆಲ್ಲದರ ಮಧ್ಯೆ ಹಲವರಿಗೆ ನಿಜಕ್ಕೂ ಈ ಸೀಸನ್ ನಲ್ಲಿ ಟಾಪ್ ಕಂಟೆಸ್ಟೆಂಟ್ ಯಾರಿರಬಹುದು ಎಂಬ ಅನುಮಾನ ಶುರುವಾಗಿದೆ.


ಗೊಂದಲಮಯವಾದ ಬಿಗ್ ಬಾಸ್ ಮನೆ

ಬಿಗ್ ಬಾಸ್ ಸೀಸನ್ 11 ಶುರುವಾದಾಗಿನಿಂದಲೂ ಕೂಡ ಆಡಿ ಗೆಲ್ಲುವುದಕ್ಕಿಂತಲೂ ಕುತಂತ್ರದಿಂದ ಆಡಿದವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೇ, ನ್ಯಾಯವಾಗಿ ಆಡಲು ಯಾರೂ ತಯಾರಿಲ್ಲ. ಕಿಚ್ಚ ಸುದೀಪ್ ಅವರು ಪ್ರಾಮಾಣಿಕತೆ ಬಗ್ಗೆ ಅಷ್ಟು ವಿವರಣೆ ನೀಡಿದರೂ ಕೂಡ ಸ್ಫರ್ಧಿಗಳು ಇದ್ಯಾವುದನ್ನೂ ಗಮನಕ್ಕೆ ಹಾಕಿಕೊಂಡಿಲ್ಲ. ನನ್ನನ್ನು ನಾಮಿನೇಟ್ ಮಾಡಿದ್ದು ತಪ್ಪು, ಕೊಟ್ಟ ಕಾರಣ ಸರಿಯಿಲ್ಲ ಎಂದೇ ಕಿತ್ತಾಡುತ್ತಿದ್ದಾರೆ. ಈ ಬಾರಿಯ ಆಟ ಬಲು ಮಸ್ತಾಗಿರುತ್ತೆ ಎಂದು ಭಾವಿಸಿದ್ದ ವೀಕ್ಷಕರಿಗೆ ಬೇಸರವಾಗಿರೋದಂತೂ ನಿಜವೇ. ಹೀಗಿರುವಾಗ ವೀಕ್ಷಕರು ಈ ಸೀಸನ್ ನಲ್ಲಿ ಫೈನಲ್ ತಲುಪಿ ಕಪ್ಪು ಯಾರ ಗೆಲ್ಲಬಹುದು ಎಂದು ಗೆಸ್ ಮಾಡಲು ಶುರು ಮಾಡಿದ್ದಾರೆ.

written-update-on-bigg-boss-season-11-top-contestants

ಫೈನಲಿಸ್ಟ್ ಲಿಸ್ಟ್ ನಲ್ಲಿ ಯಾರಿರಬಹುದು..?

ಈ ಲಿಸ್ಟ್ ನಲ್ಲಿ ಅನುಷಾ ರೈ ಅವರು ಮೊದಲಿದ್ದಾರೆ. ಮೊದಲ ವಾರ ಮೋಕ್ಷಿತಾ ಮತ್ತು ಗೌತಮಿ ಇಬ್ಬರೂ ಒಳ್ಳೆಯ ಆಟಗಾರರು ಎಂದು ತೀರ್ಮಾನಿಸಿದ್ದ ವೀಕ್ಷಕರು ಈಗ ಸೈಲೆಂಟ್ ಆಗಿಯೇ ಆಡುತ್ತಿರುವ ನಟಿ ಅನುಷಾ ರೈ ಅವರು ಫೈನಲಿಸ್ಟ್ ಆಗುತ್ತಾರೆ ಎನ್ನುತ್ತಿದ್ದಾರೆ. ಫೈನಲಿಸ್ಟ್ ಲಿಸ್ಟ್ ನಲ್ಲಿ ಅನುಷಾ ರೈ ಅವರು ಇರುತ್ತಾರೆ. ಅವರನ್ನು ನಾಮಿನೇಟ್ ಮಾಡಿರುವುದು ಸರಿಯಿಲ್ಲ ಎಂದು ಪ್ರತಿಯೊಬ್ಬರೂ ಕೂಡ ಕಮೆಂಟ್ ಮಾಡುತ್ತಿದ್ದಾರೆ. ನೇರವಾಗಿ ಮಾತನಾಡುವ ಅನುಷಾ ಅವರು ಬಿಗ್ ಬಾಸ್ ಮನೆಗೆ ಒಳ್ಳೆಯ ಕಂಟೆಸ್ಟೆಂಟ್ ಎಂದು ಹೇಳುತ್ತಿದ್ದಾರೆ.

ನಟಿಯ ಬಣ್ಣದ ಪಯಣ

ಇನ್ನು ನಟಿ ಅನುಷಾ ರೈ ಅವರು ಮೂಲತಃ ತುಮಕೂರಿನ ಹುಡುಗಿ ಆಗಿದ್ದು, ಹಳ್ಳಿಯಲ್ಲಿ ಬೆಳೆದ ನಟಿ ತುಮಕೂರಿನಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದ್ದಾರೆ. ತಂದೆ ಹನುಮಂತ್ ರಾಜ್ ಹಾಗೂ ತಾಯಿ ಭಾಗ್ಯ. ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿರುವ ಅನುಷಾ ಅವರು 2017ರಲ್ಲಿ ತೆರೆಕಂಡ ಮಹಾನುಭಾವರು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಕರ್ಷಣಂ, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬಾ ಮುಂತಾದ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಅನುಷಾ ರೈ ಫೈನಲಿಸ್ಟ್‌ ಆಗಲಿ..

ಇದಿಷ್ಟೇ ಅಲ್ಲದೇ ಅನುಷಾ ಅವರು ಅಣ್ಣಯ್ಯ, ಸರಯೂ, ರಾಜಕುಮಾರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು 2016ರಲ್ಲಿ ಬೆಸ್ಟ್‌ ಮಾಡೆಲ್‌ ಆಫ್‌ ಕರ್ನಾಟಕ ಕಿರೀಟವನ್ನೂ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ನಟಿ ಅನುಷಾ ರೈ ಅವರು ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಐದನೇ ಸ್ಫರ್ಧಿಯಾಗಿ ಮನೆಗೆ ಎಂಟ್ರಿಕೊಟ್ಟರು. ಸೈಲೆಂಟ್‌ ಆಗಿಯೇ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸುತ್ತಿರುವ ಅನುಷಾ ರೈ ಅವರು ಎಲ್ಲೂ ಕೂಡ ಕುಗ್ಗದೇ, ಬಂದಿದ್ದೆಲ್ಲವನ್ನೂ ಮನೆಯಲ್ಲಿ ಎದುರಿಸುತ್ತಿದ್ದಾರೆ. ಇವರ ಈ ಗುಣವನ್ನು ಮೆಚ್ಚಿಕೊಂಡಿರುವ ವೀಕ್ಷಕರು ಅನುಷಾ ರೈ ಅವರು ಫೈನಲಿಸ್ಟ್‌ ಆಗಬೇಕು ಎಂದು ಬಯಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X