ವಾರದ ಕಥೆಯಲ್ಲಿ ಫುಲ್ ಜಾಲಿ ; ಹನುಮಂತನ ಮಾತು ಕೇಳಿ ಬೆಚ್ಚಿ ಬಿದ್ದ ಬಿಗ್ ಬಾಸ್ ಮನೆಯ ಸ್ಫರ್ಧಿಗಳು..!
ಬಿಗ್ ಬಾಸ್ ಮನೆಯು ಈ ವಾರ ಸ್ವಲ್ಪ ನೋಡುವಂತಿತ್ತು. ಪ್ರತಿ ದಿನ ಒಂದೊಂದು ಟಾಸ್ಕ್ ಇಡಲಾಗಿತ್ತು. ಪವರ್ ಕಾರ್ಡ್ ಗಾಗಿ ಎಲ್ಲರೂ ಗುದ್ದಾಡಿ ಆಡಿದ್ದೂ ಹೌದು.ಕಳೆದ ಒಂದು ತಿಂಗಳ ಕಾಲ ಇದು ಯಾವ ರೀತಿಯ ಆಟ, ಯಾವ ಸ್ಫರ್ಧಿ ಮನದಲ್ಲಿ ಏನಿದೆ ಎಂಬುದನ್ನು ಗೆಸ್ ಕೂಡ ಮಾಡಲಾಗದೇ ವೀಕ್ಷಕರು ಬೇಸತ್ತಿದ್ದರು.ಆದರೆ, ಈ ವಾರ ಎಲ್ಲರೂ ಸೀರಿಯಸ್ ಆಗಿ ಆಟವಾಡಿದ್ದಾರೆ. ಕೆಲವರು ಹಳೆಯದನ್ನೆಲ್ಲಾ ಮರೆತು ಹೊಸ ಆಟ ಶುರು ಮಾಡಿದ್ದಾರೆ. ಮತ್ತೆ ಕೆಲವರು ಅದೇ ಗೊಂದಲದಲ್ಲಿದ್ದಾರೆ.
ಭರ್ಜರಿಯಾಗಿತ್ತು ಈ ವಾರದ ಆಟ
ಈ ವಾರ ಬಿಗ್ ಬಾಸ್ ಮನೆಯವರಿಗೆ ಪವರ್ ಕಾರ್ಡ್ ಗಳು ಬೇಕೆಂದರೆ ಆಡಿ ಗೆಲ್ಲಿ ಎಂದು ಹೇಳಿದ್ದರು. ನಾಲ್ಕು ಪ್ರತ್ಯೇಕ ಟೀಂ ಮಾಡಲಾಗಿತ್ತು. ಪ್ರತಿ ವಾರ ತಮ್ಮವರದ್ದೇ ಟೀಂ ನಲ್ಲಿ ಆಡಿ ಬೋರಾಗಿದ್ದ ಸದಸ್ಯರೆಲ್ಲಾ ಈ ಬಾರಿ ತಮ್ಮ ಆಯ್ಕೆಗಳನ್ನು ಬದಲಾಯಿಸಿದ್ದರು. ಆಡುವವರು ಆಡಿದರು. ಆಟ ಬೇಡ ಎಂದುಕೊಂಡವರು ಸ್ಟ್ರ್ಯಾಟಜಿ ಹೆಸರಲ್ಲಿ ಕೆಲವರ ಕೆಂಗಣ್ಣಿಗೆ ಗುರಿಯಾದರು. ಆಡುವಾಗ ಎಲ್ಲರೂ ಜಗಳ ಮಾಡಿದರು. ದಿನ ಕಳೆದು ಮಲಗುವ ಹೊತ್ತಲ್ಲಿ ಮತ್ತೆ ಕೈ ಕುಲುಕಿ ಸ್ನೇಹ ಮುಂದುವರೆಸಿದರು. ಆದರೆ, ವಾರದ ಕೊನೆಯಲ್ಲಿ ಮತ್ತೆ ಎಲ್ಲರೂ ತಮ್ಮ ತಮ್ಮ ಗುಂಪು ಸೇರಿಕೊಂಡು ಕಳಪೆ, ಉತ್ತಮ ಎಂದು ತಮಗೆ ಬೇಕಾದವರಿಗೆ ಮಾತ್ರವೇ ನೀಡಿದರು. ಯಾರು ಏನೇ ಮಾಡಲಿ ತನ್ನ ಟೀಂಗೆ ಆಡುತ್ತೇನೆ ಎಂದು ಆಟವಾಡಿದ ಭವ್ಯ ಗೌಡ ಉಳಿದ ದಿನಗಳಿಂತಲೂ ಹೆಚ್ಚು ಆಕ್ಟೀವ್ ಆಗಿದ್ದರು. ಹಾಗಿದ್ದರೂ ಕೂಡ ಯಾರೊಬ್ಬರೂ ಚಪ್ಪಾಳೆ ತಟ್ಟಲಿಲ್ಲ.

ಮತ್ತೆ ಕ್ಯಾಪ್ಟನ್ ಆದ ತ್ರಿವಿಕ್ರಮ್
ಇನ್ನು ಕ್ಯಾಪ್ಟೆನ್ಸಿ ಆಟದಲ್ಲಿ ಕೊನೆ ಉಳಿದಿದ್ದು, ತ್ರಿವಿಕ್ರಮ್ ಮತ್ತು ಭವ್ಯ ಗೌಡ. ಭವ್ಯ ಕ್ಯಾಪ್ಟನ್ ಆಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ತ್ರಿವಿಕ್ರಮ್ ಎಂದರೆ ಉರಿದು ಬೀಲುವವರು ಕೂಡ ವಿಕ್ಕಿಗೆ ಓಟ್ ಮಾಡಿದರು. ಈಗಾಗಲೇ ಕಪಲ್ ಕ್ಯಾಪ್ಟೆನ್ ಆಟದಲ್ಲಿ ಒಂದು ವಾರ ಐಶ್ವರ್ಯ ಜೊತೆಗೆ ತ್ರಿವಿಕ್ರಮ್ ಸೇರಿ ಕ್ಯಾಪ್ಟನ್ ಆಗಿದ್ದರು. ಇದೀಗ ಮತ್ತೆ ಮತ್ತೆ ತ್ರಿವಿಕ್ರಮ್ ಕ್ಯಾಪ್ಟನ್ ಆಗಿದ್ದಾರೆ. ಎರಡನೇ ಬಾರಿ ಕ್ಯಾಪ್ಟನ್ ಆಗಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಇನ್ನು ಭವ್ಯ ಗೌಡ ಸೀಸನ್ 11 ರ ಮೊದಲ ಉತ್ತಮ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ಮತ್ತು ಧನರಾಜ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ.
ಹನುಮಂತ ಬಹಳ ಬುದ್ಧಿವಂತ ಎಂದ ಸದಸ್ಯರು
ಹನುಮಂತು ಕ್ಯಾಪ್ಟನ್ ಆಗಿದ್ದರೂ ಕೂಡ ಕ್ಯಾಪ್ಟನ್ ರೂಮಿನಲ್ಲಿ ಒಂದು ದಿನವೂ ಕಳೆಯಲಿಲ್ಲ. ಈ ಬಗ್ಗೆ ಬಿಗ್ ಬಾಸ್ ಬೇಸರ ತೋರ್ಪಡಿಸಿದ್ದು, ಹನುಮಂತು ಅವರು ಒಂದು ವಾರ ಮನೆಯನ್ನು ನಡೆಸಿಕೊಟ್ಟ ರೀತಿಗೆ ಖುಷಿ ಪಟ್ಟಿದ್ದಾರೆ. ಇನ್ನು ಹನುಮಂತು ಈ ವಾರದ ಕ್ಯಾಪ್ಟನ್ ಗೆ ಯಾರು ಏನೇ ಹೇಳಿದರೂ ಕೇರ್ ಮಾಡಬೇಡಿ, ನಿಮಗನಿಸಿದ ನಿರ್ಧಾರ ಕೈಗೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ಇನ್ನು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯವರೆಲ್ಲಾ ಹನುಮಂತು ನೋಡಲು ಇನ್ನೊಸೆಂಟ್ ವ್ಯಕ್ತಿ. ಆದರೆ, ಆತ ಬಹಳ ಬುದ್ಧಿವಂತ ಎಂದು ಹೇಳಿದ್ದಾರೆ. ಈ ಮಾತಿಗೆ ಹಿಂದೆ ಮುಂದೆ ಯೋಚಿಸದ ಹನುಮಂತು ನೇರವಾಗಿ ಮಾತನಾಡಿದ್ದಾನೆ.
ಮನೆಯ ಬಗ್ಗೆ ನೇರವಾಗಿ ಉತ್ತರಿಸಿದ ಹನುಮಂತ
ಮನೆಯವರ ಮಾತಿಗೆ ಹನುಮಂತು ಇಲ್ಲಿಗೆ ಬಂದಿರುವವರು ಎಲ್ಲರೂ ಇನ್ನೊಸೆಂಟ್. ಆದರೆ, ಏನೂ ಗೊತ್ತಿಲ್ಲದಂತೆ ಎಲ್ಲರೂ ನಾಟಕ ಮಾಡುತ್ತಿದ್ದಾರೆ. ಈ ಮಾತು ನನಗೂ ಕೂಡ ಅನ್ವಯಿಸುತ್ತದೆ ಎಂದು ಕಿಚ್ಚನಿಗೆ ನೇರವಾಗಿ ಹೇಳಿದ್ದಾನೆ. ಹನುಮಂತು ಮನೆಯ ಆಟದಲ್ಲೂ ಅದ್ಭುತವಾಗಿ ಆಡಿದ್ದು, ಆಟ ಎಂದು ಬಂದಾಗ ಗೆಳೆತನ, ಸಂಬಂಧವನ್ನು ಮರೆತು ಆಡಿದ್ದಾನೆ. ಮನೆ ಎಂದು ಬಂದಾಗ ಎಲ್ಲರ ಜೊತೆಗೂ ಕೂಡಿ ಬದುಕಿದ್ದಾನೆ. ಹನುಮಂತು ಆಟ ನೋಡಿ ಮನೆಯವರು ಕಲಿಯುವು ಬಹಳಷ್ಟಿದೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.


Click it and Unblock the Notifications











