Brahmagantu ; ರೂಪಾಳ ಮದುವೆ ತಯಾರಿ ಒಂದು ಕಡೆಯಾದರೆ, ಸೌಂದರ್ಯ ವಿರುದ್ಧ ಮಸಲತ್ತು ಮತ್ತೊಂದು ಕಡೆ..!

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿ ಶುರುವಾಗಿ ಇನ್ನೂ ಕೇವಲ 13 ಸಂಚಿಕೆಗಳು ಪ್ರಸಾರ ಕಂಡಿವೆ. ಅದಾಗಲೇ ಈ ಧಾರಾವಾಹಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಚಿರಾಗ್ ಅತ್ತಿಗೆ ಸೌಂದರ್ಯ ಇಡೀ ಮನೆಯನ್ನು ನಡೆಸುತ್ತಿದ್ದು, ತಮ್ಮ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಚಾರಗಳ ನಿರ್ಧಾರವನ್ನೂ ಸೌಂದರ್ಯಾಳೇ ತೆಗೆದುಕೊಳ್ಳುತ್ತಿದ್ದಾಳೆ. ಚಿರಾಗ್ ಸೇರಿದಂತೆ ಆ ಮನೆಯವರೆಲ್ಲರೂ ಸೌಂದರ್ಯಾಳನ್ನು ಅಷ್ಟೇ ನಂಬಿದ್ದಾರೆ. ಆದರೆ ಈ ಧಾರಾವಾಹಿಯ ವಿಲನ್ ಸೌಂದರ್ಯಾಳೇ ಆಗಿದ್ದಾಳೆ.

ಬಡವರ ಮನೆಗೆ ಬಂದ ಭಾಗ್ಯ

ಚಿರಾಗ್ ಚಿಕ್ಕವಯಸ್ಸಿನಿಂದಲೂ ಅತ್ತಿಗೆ ಸೌಂದರ್ಯ ಮಾತನ್ನೇ ಕೇಳಿಕೊಂಡು ಬಂದಿದ್ದಾನೆ. ಅತ್ತಿಗೆ ಏನೇ ಮಾಡಿದರೂ ಸರಿ ಎಂದು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾನೆ. ತಾನು ಮದುವೆಯಾಗುವ ಹುಡುಗಿಯನ್ನು ಕೂಡ ಸೌಂದರ್ಯ ಆಯ್ಕೆ ಮಾಡಿದ್ದು, ಚಿರಾಗ್ ಒಪ್ಪಿಕೊಂಡಿದ್ದಾನೆ. ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ತೊಟ್ಟಿಲು ತೂಗಬಾರದು, ಮಗುವಿನ ಅಳು ಕೇಳಬಾರದು ಎಂಬುದು ಸೌಂದರ್ಯಾಳ ಆಲೋಚನೆ. ಹಾಗಾಗಿ ಮುಖದಲ್ಲಿ ಒಂದೂ ಕಲೆ ಇಲ್ಲದ ಸೌಂದರ್ಯವತಿಯನ್ನು ಚಿರಾಗ್ ಗೆ ತಂದುಕೊಳ್ಳಲು ನಿರ್ಧರಿಸಿದ್ದು, ಆಕೆಗೆ ತಾಯಾಗುವ ಯೋಗ ಇಲ್ಲ ಎಂಬ ಸತ್ಯ ತಿಳಿದು ಬಡವರ ಮನೆಯಲ್ಲಿ ಸಂಬಂಧ ಬೆಳೆಸಿದ್ದಾಳೆ. ಕಳಸಾದಲ್ಲಿ ಕಾನ್ ಸ್ಟೇಬಲ್ ಆಗಿ ಜೀವನ ಮಾಡುತ್ತಿರುವ ವ್ಯಕ್ತಿಯ ಮೊದಲ ಮಗಳು ರೂಪಾಳನ್ನು ಸೌಂದರ್ಯ ಒಪ್ಪಿಕೊಂಡಿದ್ದಾಳೆ.

written update on brahmagantu serial

ಚಿರಾಗ್ ಗೆ ಗುರೂಜಿಯ ಶಾಪ ತಟ್ಟುತ್ತಾ..?

ಗುರೂಜಿ ಸೌಂದರ್ಯಾಳಿಗೆ ಶಾಪ ಹಾಕಿದ್ದು, ಯಾವುದೇ ಕಾರಣಕ್ಕೂ ಈ ಮನೆಗೆ ಸೌಂದರ್ಯ ತುಂಬಿದ ಹೆಣ್ಣು ಸೊಸೆಯಾಗಿ ಬರುವುದಿಲ್ಲ ಎಂದು ಶಾಪ ಹಾಕಿದ್ದಾರೆ. ಆದರೆ, ಸೌಂದರ್ಯ ಇದನ್ನೇ ಚಾಲೆಂಜ್ ಅನ್ನಾಗಿ ತೆಗೆದುಕೊಂಡಿದ್ದು, ಚಿರಾಗ್ ಮದುವೆ ಮಾಡಲು ಮುಂದಾಗಿದ್ದಾಳೆ. ಹುಡುಗಿ ಮನೆಗೆ ಹೋಗಿ ಮದುವೆಯ ಒಪ್ಪಂದವನ್ನು ಮಾಡಿಕೊಂಡು ಬಂದಿದ್ದಾಗಿದೆ. ಆದರೆ, ಹುಡುಗಿ ರೂಪಾ ಹೀರೋಯಿನ್ ಆಗುವ ಕನಸು ಕಾಣುತ್ತಿದ್ದು, ಬೇರೊಬ್ಬನನ್ನು ಪ್ರೀತಿ ಮಾಡುತ್ತಿದ್ದಾಳೆ. ಅವನ ಜೊತೆಗೆ ಓಡಿ ಹೋಗಬೇಕು ಎಂದುಕೊಂಡಿದ್ದಾಳೆ. ಗುರೂಜಿ ಶಾಪ ಸೌಂದರ್ಯ ಕುಟುಂಬಕ್ಕೆ ತಟ್ಟುತ್ತಾ ಎಂಬ ಅನುಮಾನ ಶುರುವಾಗಿದೆ.

ಸೌಂದರ್ಯಾಳಿಗೆ ಅಣ್ಣನೇ ಶತ್ರು

ಇಷ್ಟೇ ಅಲ್ಲದೇ, ಸೌಂದರ್ಯಳ ದುರಹಂಕಾರದಿಂದ ಅವರ ಅಣ್ಣ ತಮ್ಮ ಮಗಳನ್ನು ಕಳೆದುಕೊಂಡಿರುತ್ತಾನೆ. ಅದೇ ಧ್ವೇಷದಲ್ಲಿರುವ ಆತ ತಂಗಿಯ ಬಳಿ ಒಳ್ಳೆಯವನಂತೆ ನಟಿಸಿದ್ದು. ಸೌಂದರ್ಯಾಳನ್ನು ಮಟ್ಟ ಹಾಕಬೇಕು ಎಂದುಕೊಂಡಿದ್ದಾನೆ. ಹೋಗಾಗಿ ರೂಪ ಜೊತೆಗೆ ಚಿರಾಗ್ ಮದುವೆ ನಡೆಯಬಾರದು, ಇದರಿಂದ ಸೌಂದರ್ಯಾಳಿಗೆ ಅವಮಾನವಾಗಬೇಕು ಎಂದು ಧ್ವೇಷ ಕಾರುತ್ತಿದ್ದಾನೆ. ತಂಗಿಗೆ ಅಣ್ಣನೇ ಶತ್ರು ಆಗಿದ್ದು, ಈ ಮದುವೆ ಹೇಗೆ ನಡೆಯುತ್ತದೆ ಎಂಬ ಕುತೂಹಲ ಮೂಡಿದೆ.

written-update-on-brahmagantu-serial

ರೂಪಾಳ ಮದುವೆಗೆ ಸಿದ್ಧತೆ

ಇತ್ತ ರೂಪಾ ಮನೆಯಲ್ಲಿ ಮಗಳಿಗೆ ಜಾತಕದಲ್ಲಿ ಮಕ್ಕಳಾಗುವುದಿಲ್ಲ ಎಂಬ ದೋಷವಿದೆ. ಹಾಗಿದ್ದರೂ ಕೂಡ ಅವಳಿಗೆ ಮದುವೆ ಗೊತ್ತಾಗಿರುವುದಕ್ಕೆ ಖುಷಿಯಲ್ಲಿದ್ದಾರೆ. ಮೂರೇ ದಿನದಲ್ಲಿ ಮದುವೆ ಇರುವುದರಿಂದ ಮದುವೆ ಕಾರ್ಯಗಳು ಚುರುಕಾಗಿ ನಡೆಯುತ್ತಿದೆ. ಋೂಪಾಳಿಗೆ ತಂಗಿ ದೀಪಾ ಇದ್ದು, ದೀಪ ನೋಡಲು ಕಪ್ಪಗಿದ್ದಾಳೆ. ಆದರೂ ಗುಣದಲ್ಲಿ ಮಾತ್ರ ವಜ್ರದಂತೆ. ಅಕ್ಕನಿಗೆ ಒಳ್ಳೆಯದಾಗಲಿ ಎಂದು ಬಯಸುವ ದೀಪ ಬಟ್ಟೆ ಹೊಲಿಗೆ ಹಾಕಿ ಅಪ್ಪನಿಗೆ ಸಹಾಯ ಮಾಡುತ್ತಿದ್ದಾಳೆ. ಸದ್ಯ ಅಕ್ಕನ ಮದುವೆಯ ಸಂಭ್ರಮದಲ್ಲಿ ಹಿಗ್ಗಿ ಹೋಗಿದ್ದಾಳೆ. ಆದರೆ, ಪ್ರೋಮೋ ಪ್ರಕಾರ ದೀಪಾ ಜೊತೆಗೆ ಚಿರಾಗ್ ಮದುವೆ ನಡೆಯುತ್ತದೆ. ಹಾಗೇನಾದರೂ ಆದರೆ, ಸೌಂದರ್ಯ ಹೇಗೆ ನಡೆದುಕೊಳ್ಳುತ್ತಾಳೆ. ಧಾರಾವಾಹಿ ಹೇಗೆ ನಡೆಯುತ್ತದೆ. ಹಾಗೂ ದೀಪಾ ಬದುಕಿನಲ್ಲಿ ಮುಂದೇನಾಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಬಹಳ ಕಾತುರದಲ್ಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X