Brahmagantu; ಬ್ರಹ್ಮಗಂಟು ಧಾರಾವಾಹಿಯ ನಾಯಕಿ ನಟಿ ದಿಯಾ ಪಾಲಕ್ಕಲ್ ಬಗ್ಗೆ ನಿಮಗೆಷ್ಟು ಗೊತ್ತು..?
ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ದಿಯಾ ಪಾಲಕ್ಕಲ್ ಕನ್ನಡ ಕಿರುತೆರೆಗೆ ಹೊಸಬರೇನೂ ಅಲ್ಲ. ಆದರೂ ಕೂಡ ನಾಯಕಿ ಪಾತ್ರದಿಂದ ಮೊದಲ ಬಾರಿಗೆ ಗುರುತಿಸಿಕೊಂಡಿದ್ದಾರೆ. ನಟಿ ದಿಯಾ ಪಾಲಕ್ಕಲ್ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಕನ್ನಡ ಕಿರುತೆರೆಯಲ್ಲಿ ಬಾಲ ನಟಿಯಾಗಿ ಮಿಂಚಿದ್ದವರು, ಕನ್ನಡ, ತಮಿಳು ಕಿರುತೆರೆಯಲ್ಲಿ ನಟಿಸಿರುವ ದಿಯಾ ಅವರು ಸಿನಿಮಾಗಳಳ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯಾಗಿ ದೀಪಾ ಪಾತ್ರದ ಮೂಲಕ ನಟಿಸುತ್ತಿದ್ದು, ದಿಯಾ ಅವರ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ದಿಯಾ ಪಾಲಕ್ಕಲ್ ಅವರು ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ ಕಿನ್ನರಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. 2015 ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಐಶ್ವರ್ಯ ಎಂಬ ಪಾತ್ರಕ್ಕೆ ದಿಯಾ ಅವರು ಬಣ್ಣ ಹಚ್ಚಿದ್ದರು. ಇದಾದ ಬಳಿಕ ತಮಿಳು ಕಿರುತೆರೆಯಲ್ಲಿ ನಟಿ ಖುಷ್ಬೂ ಅವರು ನಟಿಸುತ್ತಿದ್ದ ಲಕ್ಷ್ಮೀ ಸ್ಟೋರ್ಸ್ ಎಂಬ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಸನ್ ಟಿವಿಯಲ್ಲಿ ಪ್ರಸಾರ ಕಂಡಿದ್ದ ಈ ಲಕ್ಷ್ಮೀ ಸ್ಟೋರ್ಸ್ ಧಾರಾವಾಹಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಕಿರುತೆರೆಗಳಷ್ಟೇ ಅಲ್ಲದೇ ದಿಯಾ ಅವರು ಕಿರುಚಿತ್ರ, ಸಿನಿಮಾಗಳಳ್ಲೂ ನಟಿಸಿದ್ದಾರೆ.

ದಿಯಾ ಪಾಲಕ್ಕಲ್ ಅವರು 2018ರಲ್ಲಿ ರಾಜ್ ಬಿ ಶೆಟ್ಟಿ ಹಾಗೂ ವೈಜಯಂತಿ ಅಡಿಗ ಅವರು ನಟಿಸಿದ್ದ ಸಿನಿಮಾದಲ್ಲೂ ನಟಿಸಿದ್ದಾರೆ. ಅಮ್ಮಚ್ಚಿಯೆಂಬ ನೆನಪು ಅನ್ನೋ ಈ ಸಿನಿಮಾದಲ್ಲಿ ದಿಯಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರಶಸ್ತಿ ಕೂಡ ಪಡೆದುಕೊಂಡಿದೆ. ಇನ್ನು ಜಾನ್ ಜಾನಿ ಜನಾರ್ಧನ್, ಭರ್ಜರಿ,ಜಾನಿ ಜಾನಿ ಎಸ್ ಪಪ್ಪಾ ಸಿನಿಮಾಗಳಲ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. 50 ಎಂಬ ಕಿರುಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಬ್ರಹ್ಮಗಂಟು ಎಂಬ ಧಾರಾವಾಹಿಯಲ್ಲಿ ದಿಯಾ ಅವರು ದೀಪಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಿಯಲ್ ಲೈಫ್ ನಲ್ಲಿ ಸುಂದರವಾಗಿ ಕಾಣುವ ದಿಯಾ ಅವರು ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಕೃಷ್ಣ ಸುಂದರಿಯಾಗಿದ್ದಾರೆ. ಅಕ್ಕ ರೂಪಾಳಿಗಾಗಿ ತನ್ನದೆಲ್ಲವನ್ನೂ ತ್ಯಾಗ ಮಾಡುವ ದೀಪಾ, ಸಸ್ಯ ಅಕ್ಕನ ಮದುವೆಯ ಓಡಾಟದಲ್ಲಿ ಬ್ಯೂಸಿಯಾಗಿದ್ದಾಳೆ. ಆದರೆ, ಅಕ್ಕ ಮದುವೆಯಾಗಬೇಕಿರುವ ಹುಡುಗನನ್ನು ದೀಪಾ ಮದುವೆಯಾಗುವ ಸಂದರ್ಭ ಒದಗಿ ಬಂದಿದ್ದು, ಧಾರಾವಾಹಿ ಆರಂಭದಲ್ಲೇ ಕುತೂಹಲ ಕೆರಳಿಸಿದೆ. ಇದರಲ್ಲಿ ರೂಪಾ ಪಾತ್ರವನ್ನು ಗೌರಿಶಂಕರ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ರಮೇಶ್ ನಿರ್ವಹಿಸಿದ್ದು, ನಾಯಕನಾಗಿ ಪುಣ್ಯವತಿ ಧಾರಾವಾಹಿ ಖ್ಯಾತಿಯ ನಟ ಭುವನ್ ಅಭಿನಯಿಸಿದ್ದಾರೆ.

ಇನ್ನು ದಿಯಾ ಅವರ ತಾಯಿ, ಚಿಕ್ಕಮ್ಮ ಹಾಗೂ ಕೆಲ ಸಂಬಂಧಿಕರು ಕೂಡ ಕಿರುತೆರೆಯಲ್ಲಿ ಫೇಮಸ್ ಆಗಿರುವವರೇ. ದಿಯಾ ಅವರ ತಾಯಿ ಹೆಸರು ರಮ್ಯಾ ಅಜಯ್. ಇವರು ಭರತನಾಟ್ಯ ಕಲಾವಿದೆ ಆಗಿದ್ದು, ತ್ರಿನಿದಾದ್ ಆಂಡ್ ಟೊಬ್ಯಾಕೋದಲ್ಲಿ ಮಹಾತ್ಮ ಗಾಂಧಿ ಇನ್ ಸ್ಟಿಟ್ಯೂಟ್ ಫಾರ್ ಕಲ್ಚರಲ್ ಕಾರ್ಪೋರೇಷನ್ ನ ನಿರ್ದೇಶಕರಾಗಿದ್ದಾರೆ. ಇವರ ಸಹೋದರಿ ರಾಧಾ ಅವರು ಕೂಡ ಕನ್ನಡ ಕಿರುತೆರೆಯಲ್ಲಿ ನಟಿಸಿದ್ದಾರೆ. ನಟಿ ವಿದ್ಯಾ ಮೂರ್ತಿ ಇವರ ಸಂಬಂಧಿ ಆಗಿದ್ದು, ರಮ್ಯಾ ಅವರು ಇವಳು ಸುಜಾತ, ಸರ್ವ ಮಂಗಳ ಮಾಂಗಲ್ಯೆ, ಐಶೋದಾ, ಜೋಡಿ ಹಕ್ಕಿ ಅಂತಹ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಕಾನಿಸಿಕೊಂಡಿದ್ದಾರೆ. ಇನ್ನು ದಿಯಾ ಪಾಲಕ್ಕಲ್ ಅವರು ಟ್ರೆನಿಡಾಡ್‌ನಲ್ಲಿರುವ Maple leaf international school ನಲ್ಲಿ ಪದವಿ ಪಡೆದಿದ್ದಾರೆ.


Click it and Unblock the Notifications











