Brahmagantu ; ಬ್ರಹ್ಮಗಂಟು ಧಾರಾವಾಹಿಯಲ್ಲಿ ಹಳ್ಳಿ ಜನರಿಗೆ ಅವಮಾನ,ಕೆರಳಿದ ನೆಟ್ಟಿಗರು..!
ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾಳನ್ನು ಚಿರು ತನ್ನ ಹೆಂಡತಿ ಎಂದು ಒಪ್ಪಿಕೊಳ್ಳಲು ಇಂದಿಗೂ ತಯಾರಿಲ್ಲ. ದೀಪಾಳಿಗೆ ಅವಮಾನಿಸಿ ಸೌಂದರ್ಯ ಮನೆಯಿಂದ ಹೊರಗೆ ಹಾಕಲು ಪ್ಲಾನ್ ಮಾಡಿದ್ದಾಳೆ. ಆದರೆ, ದೀಪಾಳಿಗೆ ವ್ಯವಹಾರದಲ್ಲಿ ಹಕ್ಕು ಕೊಡಬೇಕು ಎಂದು ಮಾವ ನಿರ್ಧಾರ ಮಾಡಿದ್ದು, ಅರ್ಚನಾ ನಾದಿನಿಯನ್ನು ಕಂಪ್ಲೀಟ್ ಆಗಿ ಒಪ್ಪಿಕೊಂಡಿದ್ದಾಳೆ. ಇನ್ನೂ ದೀಪಾ ಚಿರುನ ಪತಿ ಎಂದು ಒಪ್ಪಿಕೊಂಡು ತನ್ನ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾಳೆ. ಸೌಂದರ್ಯಳನ್ನು ಕೂಡ ಒಪ್ಪಿಸಿ ಆ ಮನೆಗೆ ತಕ್ಕ ಸೊಸೆಯಾಗಬೇಕು ಎಂದುಕೊಂಡಿದ್ದಾಳೆ.
ಚಿರು ಪರ ಮಾತನಾಡಿದ ದೀಪಾ
ಈ ಸಂದರ್ಭದಲ್ಲಿ ಆರತಕ್ಷತೆ ಬೇರೆ ಇಟ್ಟುಕೊಂಡಿದ್ದು, ಸೌಂದರ್ಯ ಎಲ್ಲಾ ಅರೇಂಜ್ ಮೆಂಟ್ಸ್ ನ ಅಚ್ಚುಕಟ್ಟಾಗಿ ಮಾಡಿದ್ದಾಳೆ. ತಮ್ಮ ಮನೆಯ ಸಿರಿಗೆ ತಕ್ಕಂತೆ ವೈಭೋಗದಿಂದ ರಿಸೆಪ್ಶನ್ ಅನ್ನು ಮಾಡುತ್ತಿದ್ದಾಳೆ. ದೀಪಾಳ ಕುಟುಂಬಕ್ಕೆ ಅವಮಾನ ಮಾಡಬೇಕೆಂದೇ ಹಳ್ಳಿ ಜನರನ್ನೂ ಕರೆದು ತರಲು ಹೇಳಿದ್ದಾಳೆ. ಮಗಳ ರಿಸೆಪ್ಶನ್ ಎಂದು ಜಯರಾಂ ಕುಟುಂಬದ ಜೊತೆಗೆ ತನ್ನ ಗೆಳೆಯರು, ಹಳ್ಳಿ ಜನರನ್ನೂ ಕರೆ ತಂದಿದ್ದಾನೆ. ಎಲ್ಲರೂ ವಿಚಿತ್ರವಾಗಿ ನಡೆದುಕೊಂಡಿದ್ದು, ಕುರ್ಚಿಗಾಗಿ ಕಿತ್ತಾಡುತ್ತಾರೆ. ದೀಪಾ ಮತ್ತು ಚಿರು ಜೊತೆಗೆ ಸ್ಟೇಜ್ ಮೇಲೆ ಫೋಟೋ ತೆಗೆಸಿಕೊಳ್ಳಲು ಎಲ್ಲರೂ ಮುಗಿ ಬೀಳುತ್ತಾರೆ. ಹಳ್ಳಿ ಜನರ ನಡವಳಿಕೆ ಎಲ್ಲರಿಗೂ ಮುಜುಗರವನ್ನುಂಟು ಮಾಡುತ್ತದೆ. ಅಲ್ಲದೇ, ರಿಸೆಪ್ಶನ್ ಗೆ ಬಂದ ಜನರೊಂದಿಗೆ ಜಗಳ ಮಾಡುತ್ತಾರೆ. ಕುರ್ಚಿಗಾಗಿ ಕಿತ್ತಾಡಿದ್ದಕ್ಕೆ ದೀಪಾ ಕೋಪ ಮಾಡಿಕೊಳ್ಳುತ್ತಾಳೆ. ಚಿರು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ದೀಪಾ ಗಂಡನ ಪರ ಮಾತನಾಡುತ್ತಾಳೆ.

ಹಳ್ಳಿಯಿಂದ ಬಂದವರಿಗೆ ಅವಮಾನ
ಹಳ್ಳಿ ಜನರು ನಡೆದುಕೊಂಡ ರೀತಿ ಚಿರು ಮನೆಯವರಿಗೆ ಮುಜುಗರವನ್ನುಂಟು ಮಾಡುತ್ತದೆ. ಅಲ್ಲದೇ, ದೀಪಾಳಿಗೆ ಅವರೆಲ್ಲಾ ಚಿರು ಬಗ್ಗೆ ಕೇವಲವಾಗಿ ಮಾತನಾಡಿದ್ದು ಇಷ್ಟವಾಗುವುದಿಲ್ಲ. ಹಾಗಾಗಿ ಎಲ್ಲರನ್ನು ಇಷ್ಟವಿದ್ದರೆ ಇರಿ, ಇಲ್ಲದೇ ಹೋದರೆ ಎಲ್ಲರೂ ಹೊರಡಬಹುದು ಎಂದು ದೀಪಾ ನೇರವಾಗಿ ಹೇಳುತ್ತಾಳೆ. ಹಳ್ಳಿ ಜನರೆಲ್ಲಾ ದೀಪಾ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತಮಗೆಲ್ಲಾ ಅವಮಾನ ಮಾಡಿದರು ಎಂದು ಎಲ್ಲರೂ ಊರಿಗೆ ಹೊರಡುತ್ತಾರೆ. ಇತ್ತ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಹಳ್ಳಿ ಜನರನ್ನು ಇಷ್ಟು ಕೇವಲವಾಗಿ ತೋರಿಸಬಾರದಿತ್ತು ಎಂದಿದ್ದಾರೆ.
ನೆಟ್ಟಿಗರ ಕೋಪಕ್ಕೆ ಗುರಿಯಾದ ಸಂಚಿಕೆ
ಹಳ್ಳಿ ಜನರು ಬಡವರಾಗಿದ್ದರೂ, ಮುಗ್ಧರಾಗಿದ್ದರೂ ಕೂಡ ಹೀಗೆಲ್ಲಾ ಹೊರಗಡೆ ಹೋದಾಗ ತಪ್ಪಾಗಿ ನಡೆದುಕೊಳ್ಳುವುದಿಲ್ಲ. ತಳುಕು ಬಳುಕು ಕಾಣದ ಜನ ಹಳ್ಳಿಗರು. ಹಳ್ಳಿ ಜನರಿಗೂ ತಿಳುವಳಿಕೆ ಇದೆ. ಇಷ್ಟು ಚೀಪ್ ಆಗಿ ಹಳ್ಳಿ ಜನರನ್ನು ತೋರಿಸುವ ಅಗತ್ಯವಿರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸೀರಿಯಲ್ ತಂಡದ ಮೇಲೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಇಷ್ಟು ಓವರಾಗಿ ತೋರಿಸಬಾರದಿತ್ತು ಎಂದು ಹೇಳಿದ್ದಾರೆ.

ದೀಪಾಳಿಗೆ ಮಾಡಲಿಲ್ಲವೇಕೆ ಮೇಕಪ್..?
ಇನ್ನು ನಟಿ ದೀಪಾ ಕಪ್ಪಗೇ ಇರಬಹುದು. ಆದರೆ, ಅವಳ ಆರತಕ್ಷತೆ ಇರುವಾಗ ಕೇವಲ ಸೀರೆ ಉಡಿಸಿ, ಒಡವೆ ಹಾಕಿದರೆ ಮುಗಿಯಿತಾ. ಇಷ್ಟು ಅದ್ಧೂರಿಯಾಗಿ ನೀವೂ ರಿಸೆಪ್ಶನ್ ಗೆ ಅರೇಂಜ್ ಮಾಡಿರುವಾಗ ದೀಪಾಳಿಗೆ ಒಳ್ಳೆಯ ಹೇರ್ ಸ್ಟೈಲ್ ಮಾಡಿ ಮೇಕಪ್ ಮಾಡಬಹುದಿತ್ತು. ಅದ್ಯಾಕೆ ಕಾಡಿಗೆ ಕೂಡ ಹಾಕದೆಯೇ ದೀಪಾಳನ್ನು ರೆಡಿ ಮಾಡಿದ್ದೀರಾ ಎಂದು ಬೇಸರಗೊಂಡಿದ್ದಾರೆ. ಸೀತಾರಾಮದಲ್ಲಿ ಸೀತಾಳನ್ನು ರೆಡಿ ಮಾಡಿದಂತೆ ಡ್ರೆಸ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.


Click it and Unblock the Notifications











