Chandu Gowda ; ಮಗಳ ಹುಟ್ಟುಹಬ್ಬದ ಬಳಿಕ ಕುಟುಂಬದ ಜೊತೆಗೆ ಫೋಟೋ ಹಂಚಿಕೊಂಡ ನಟ ಚಂದು

By ಪ್ರಿಯಾ ದೊರೆ

ನಟನೆ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ಆಸಕ್ತಿ ಹೊಂದಿದ್ದ ಚಂದು ಗೌಡ ಗೃಹಲಕ್ಷ್ಮೀ ಧಾರಾವಾಹಿಯಲ್ಲಿ ಮನೆಯ ಯಜಮಾನನಾಗಿ, ಮಡದಿಯ ಮುದ್ದಿನ ಪತಿಯಾಗಿ ಎಲ್ಲರ ಗಮನ ಸೆಳೆದಿದ್ದರು.ಅದಾದ ಬಳಿಕ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೂಡ ಅಷ್ಟೇ ಖ್ಯಾತಿಯನ್ನು ತಂದುಕೊಟ್ಟಿತ್ತು. ನಂತರ ತ್ರಿನಯನಿ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡರು.ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ನಟಿಸಿದರು. ನಟನೆ ಜೊತೆಗೆ ಮಾಡೆಲಿಂಗ್ ನಲ್ಲೂ ಕೂಡ ಚಂದು ಅವರು ಸಕ್ರಿಯರಾಗಿದ್ದಾರೆ.

ಕಿರುತೆರೆ ಜೊತೆಗೆ ಸಿನಿಮಾದಲ್ಲೂ ಸಕ್ರಿಯ

ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಚಂದು ಮಿಂಚಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಚಾಟ್ ಕಾರ್ನರ್ ಎಂಬ ಟಾಕಿಂಗ್ ಶೋ ಮೂಲಕ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಅಭಿನಯಿಸಿದ್ದರು. ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಚಂದು, ಕುಷ್ಕ, ಜಾಕ್ ಪಾಟ್, ದ್ವಿಪಾತ್ರ, ಫ್ಲಾಟ್ #9, ಕೃಷ್ಣ ಗಾರ್ಮೆಂಟ್ಸ್, ಕಮರೊಟ್ಟು ಚೆಕ್ ಪೋಸ್ಟ್, ಶ್ರೀ, ದ್ವಿಪಾತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Written update on chandu gowda shares family photo

ಬೈಕ್ ಕ್ರೇಜ್ ಹೊಂದಿರುವ ನಟ

ಸಿನಿಮಾಗಳಲ್ಲಿ ನಟಿಸುವ ಆಫರ್ ಗಳು ಬರುತ್ತಿವೆ. ಆದರೆ ಚಂದುಗೆ ಸಿನಿಮಾಗಿಂತಲೂ ಕಿರುತೆರೆಯಲ್ಲಿರುವುದೇ ಇಷ್ಟವಂತೆ. ಇನ್ನು ಚಂದು ಅವರಿಗೆ ನಟನೆಗೆ ಬರುವುದಕ್ಕೂ ಮುಂಚೆಯಿಂದಲೂ ಬೈಕ್ ರೇಸ್ ಮಾಡುವ ಕ್ರೇಜ್ ಇದೆ. ಹಾಗಾಗಿ ರೇಸ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಅವರ ಬಳಿ ಬೈಕು, ಕಾರುಗಳೇ ಹೆಚ್ಚಿವೆಯಂತೆ. ಅದು ಕಡಿಮೆ ಮೊತ್ತದ ಬೈಕುಗಳೇ ಅಲ್ಲ. ಬದಲಿಗೆ ಲಕ್ಷ ಲಕ್ಷ ದುಬಾರಿಯ ಕಾರುಗಳು, ಬೈಕ್ ಗಳು. ಥರ್ಡ್ ಜನರೇಷನ್ ಫಾಲ್ಕನ್ ಬೈಕ್ ಚಂದು ಗೌಡ ಅವರ ಬಳಿ ಇದೆ.


ಫಿಟ್ನೆಸ್ ಬಗ್ಗೆ ಕಾಳಜಿ ಹೆಚ್ಚು

ನಟನೆಗೆ ಬಂದ ಹೊಸತರಲ್ಲಿ ಚಾಕಲೇಟ್ ಹೀರೋನಂತೆ ಮುದ್ದು ಮುದ್ದಾಗಿ ಕಾಣುತ್ತಿದ್ದ ಚಂದು ಈಗ ಬಾಡಿ ಬಿಲ್ಡ್ ಮಾಡಿಕೊಂಡು, ಸಖತ್ ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಚಂದು ಸೋಷಿಯಲ್ ಮೀಡಿಯಾ ನೋಡಿದರೆ ಗೊತ್ತಾಗುತ್ತೆ ಅವರು ಫಿಟ್ನೆಸ್ ಗೆ ಎಷ್ಟು ಗಮನ ಕೊಡುತ್ತಾರೆ ಎಂಬುದು. ಫಿಟ್ನೆಸ್ ಎಂದರೆ ಆಸಕ್ತಿ ಇರುವ ಚಂದು ಸಾಕಷ್ಟು ಗಮನ ಕೊಡುತ್ತಾರೆ. ಅವರ ಫಿಟ್ನೆಸ್ ಗಾಗಿಯೇ ಸಾಕಷ್ಟು ಹೆಣೈಕ್ಳು ಫಿದಾ ಆಗಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಆಗ ಚಂದು ಕಂಡಾಗ ನಾಚಿ ನೀರಾಗುವ ಮನಸ್ಸುಗಳಿಗೆ ಈಗಿನ ಚಂದು ಮೇಲೆ ಕ್ರಶ್ ಆಗದೆ ಇರದು.

ಕುಟುಂಬದೊಂದಿಗೆ ಫೋಟೋ ಹಂಚಿಕೊಂಡ ನಟ

ಚಂದು ಗೌಡ ಅವರು ಬಹುಕಾಲದ ಗೆಳತಿ ಶಾಲಿನಿ ಜೊತೆಗೆ 2020ರಲ್ಲಿ ಸಪ್ತಪದಿ ತುಳದಿದ್ದು, ಸದ್ಯ ಅವರಿಗೆ ಮುದ್ದಾದ ಹೆಣ್ಣು ಮಗು ಇದೆ. ಮಗಳನ್ನು ಅತೀಯಾಗಿ ಪ್ರೀತಿಸುವ ಚಂದು ಅವರು ಸಮೀರಾ ಎಂದು ಹೆಸರು ಇಟ್ಟಿದ್ದಾರೆ. ಕಳೆದ ವಾರವಷ್ಟೇ ಮಗಳಿಗೆ ಎರಡು ವರ್ಷ ಕಂಪ್ಲೀಟ್ ಆಗಿದ್ದು, ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿದ್ದಾರೆ. ಇದರ ವೀಡಿಯೋ ಕೂಡ ಚಂದು ಅವರು ಶೇರ್ ಮಾಡಿಕೊಂಡಿದ್ದಾರೆ. ಹೆಂಡತಿ ಮಗಳ ಜೊತೆಗೆ ಟ್ರೆಡಿಷನಲ್ ಲುಕ್ ನಲ್ಲಿ ಫೋಟೋ ತೆಗೆಸಿಕೊಂಡು ಸೋಶಿಯಮ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಚಂದು ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಕುಟುಂಬಕ್ಕೆ ಸಮಯ ಕೊಡುತ್ತಿರುತ್ತಾರೆ. ಇನ್ನು ಮಗಳ ಮೇಲೆ ಬಹಳಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X