ಹಿತಾಗೆ ಜೊತೆಯಾದ ಚಾರ್ಲಿ : ಶ್ವಾನದ ಜೊತೆಗೆ ಜೋರಾಗಿದೆ ಮಹಿತಾಳ ರೀಲ್ಸ್ ಗಳು
ನಾ ನಿನ್ನ ಬಿಡಲಾರೆ ಧಾರಾವಾಹಿ ಕುತೂಹಲಭರಿತವಾಗಿದೆ. ಒಂದು ಕಡೆ ಅಮ್ಮನ ಆತ್ಮ, ಮತ್ತೊಂದು ಕಡೆ ದೇವಿಯ ಪವಾಡ. ಇದರ ನಡುವೆ ದುಷ್ಟ ಶಕ್ತಿಗಳ ಆಟವೂ ಜೋರಾಗಿದೆ. ಆದರೆ, ಧಾರಾವಾಹಿಯ ಹಳೆ ಕಥೆಯನ್ನು ಇನ್ನೂ ಬಿಟ್ಟು ಕೊಡದ ನಿರ್ದೇಶಕರು ವೀಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದ್ದಾರೆ. ಹಿತಾಳ ಮೌನ ಎಲ್ಲರಿಗೂ ಬೇಸರವನ್ನೂ ತಂದಿದೆ. ತಾಯಿ ಸಾವನ್ನು ಕಂಡು ಮೌನಕ್ಕೆ ಶರಣಾಗಿರುವ ಹಿತಾಳಿಗೆ ಸದ್ಯ ತನ್ನ ತಂದೆಯನ್ನೇ ಶತ್ರುವಿನಂತೆ ನೋಡುತ್ತಿದ್ದಾಳೆ. ಅಮ್ಮನ ಆತ್ಮ ಮಗಳು ಮತ್ತು ಗಂಡನನ್ನು ಒಂದು ಮಾಡಲು ಮುಂದಾಗಿದೆ.
ಚಾರ್ಲಿ ಜೊತೆಗೆ ಮಹಿತಾ ರೀಲ್ಸ್
ಇನ್ನು ಹಿತಾ ಯಾರೊಂದಿಗೂ ಮಾತನಾಡುವುದಿಲ್ಲ. ಅಪ್ಪನ ಮೇಲೆ ಕೋಪ, ಅಜ್ಜಿ ಜೊತೆಗೆ ಸ್ವಲ್ಪ ಒಡನಾಟವನ್ನು ಹೊಂದಿದ್ದು, ಹಿತಾಳಿಗೆ ಸದ್ಯ ಜೊತೆಯಾಗಿರುವುದೇ ಚಾರ್ಲಿ. ಚಾರ್ಲಿ ಎಂಬ ಶ್ವಾನ ಹಿತಾಳ ಹಿತವನ್ನು ಕಾಪಾಡುತ್ತಿರುತ್ತದೆ. ಧಾರಾವಾಹಿಯಲ್ಲಿ ಚಾರ್ಲಿ ಕೂಡ ಮುದ್ದಾಗಿಯೇ ಆಕ್ಟ್ ಮಾಡುತ್ತಿದೆ. ರೀಲ್ ಹೊರತು ಪಡಿಸಿ ಶೂಟಿಂಗ್ ನ ಬಿಡುವಿನಲ್ಲೂ ಹಿತಾ ಅಲಿಯಾಸ್ ಮಹಿತಾ ಜೊತೆಗೆ ಚಾರ್ಲಿ ಆಟವಾಡುತ್ತಿರುತ್ತದೆ. ಬಾಲ ನಟಿಯಾಗಿ ಇತ್ತೀಚೆಗೆ ಫೇಮಸ್ ಆಗಿರುವ ಮಹಿತಾಳೇ ಈಗ ಹಿತಾ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಹಾಡು ಹಾಡುತ್ತಾ, ರೀಲ್ಸ್ ಮಾಡುತ್ತಾ, ಕಾಮಿ ಮಾಡಿ ನಗಿಸುತ್ತಾ ಫೇಮಸ್ ಆಗಿರುವ ಮಹಿತಾ ಸದ್ಯ ಹೆಚ್ಚಾಗಿ ಶ್ವಾನದ ಜೊತೆಗೆ ರೀಲ್ಸ್ ಗಳನ್ನು ಮಾಡುತ್ತಿರುತ್ತಾಳೆ. ಈ ವೀಡಿಯೋಗಳು ಕೂಡ ವೈರಲ್ ಆಗಿವೆ.

ರಿಯಾಲಿಟಿ ಶೋ ಮೂಲಕ ಎಂಟ್ರಿ
ಬಾಲ ನಟಿ ಮಹಿತಾ ಈಗಾಗಲೇ ಎರಡು ರಿಯಾಲಿಟಿ ಶೋಗಳು ಹಾಗೂ ಎರಡು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಮೊದಲನೇಯ ಧಾರಾವಾಹಿ ಚುಕ್ಕಿತಾರೆ. ಎರಡನೇ ಸೀರಿಯಲ್ ನಾ ನಿನ್ನ ಬಿಡಲಾರೆ. ಏಳು ವರ್ಷದ ಈ ಪುಟಾಣಿ ಮಹಿತಾ ಟ್ಯಾಲೆಂಟ್ ಬಾಕ್ಸ್ ಆಗಿದ್ದಾಳೆ. ಹಾಡುವುದು, ಡ್ಯಾನ್ಸ್, ನಟನೆ ಎಲ್ಲವುದರಲ್ಲೂ ಮುಂದೆ ಇದ್ದಾಳೆ. ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾಳೆ.
ಟ್ರೆಂಡಿಂಗ್ ಹಾಡುಗಳಿಗೆ ಹೊಸ ಲಿರಿಕ್ಸ್
ಬಹಳ ಟ್ರೆಂಡ್ ನಲ್ಲಿರುವ ಹಾಡುಗಳಿ ಮ್ಯೂಸಿಕ್ ಗೆ ತಕ್ಕಂತೆ ಬೇರೆ ಲಿರಿಕ್ಸ್ ಬರೆದು ಮಹಿತಾ ಹಾಡುತ್ತಿರುತ್ತಾಳೆ. ಅಮ್ಮ ನಾನ್ ಓದಲ್ಲ ಎಂಬ ರೀಲ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದಕ್ಕೆ ಸರಿಸುಮಾರು ಮೂರುವರೆ ಸಾವಿರ ಕಮೆಂಟ್ ಗಳು ಬಂದಿದ್ವು. ಇನ್ನು ರಾವುಲ್ಲಾ ರಾವುಲ್ಲಾ, ಕರಮಣಿ ಮಾಲೀಕ ನೀನಲ್ಲ, ನಾನು ನಂದಿನಿ ಸೇರಿದಂತೆ ಹಲವು ಟ್ರೆಂಡಿಂಗ್ ಹಾಡುಗಳಿಗೆ ಬೇರೆ ಲಿರಿಕ್ಸ್ ಬರೆದು ಹಾಡು ಹಾಡಿ ಫೇಮಸ್ ಆಗಿದ್ದಾಳೆ. ಮಹಿತಾಳಲ್ಲಿ ಯಾವ ಟ್ಯಾಲೆಂಟ್ ಗೂ ಕಡೆಮೆ ಇಲ್ಲ. ಮಹಿತಾ ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು.
ಹೆಚ್ಚುತ್ತಿದೆ ಮಹಿತಾ ಫ್ಯಾನ್ ಪೇಜ್ ಗಳು
ಕಾಮಿಡಿ, ರೀಲ್ಸ್, 192 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಮಹಿತಾ ಹೊಂದಿದ್ದಾಳೆ. ಇದುವರೆಗೂ ಬರೋಬ್ಬರಿ 831 ಪೋಸ್ಟ್ ಗಳು ಮಹಿತಾ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಇವೆ. ಇನ್ನೂ ಏಳು ವರ್ಷದ ಈ ಪುಟಾಣಿಗೆ ಸಾಕಷ್ಟು ಫ್ಯಾನ್ ಫೇಜ್ ಗಳು ಕೂಡ ಹುಟ್ಟಿಕೊಂಡಿವೆ. ಇನ್ನು ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಮಹಿತಾ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮಕ್ಕಳಿಗೆ ಇಂತಹ ಒಳ್ಳೊಳ್ಳೆಯ ಪಾತ್ರಗಳನ್ನು ಕೊಡಿ ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ. ಈಗಾಗಲೇ ಮಹಿತಾ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ನಟಿಸಿ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ.

Click it and Unblock the Notifications