Nooru Janmaku ; ಆತ್ಮವಾಗಿ ಬಂದ ಚಂದನಾ ಗೌಡ : ಇದು ಹಿಂದಿಯ ರಿಮೇಕ್ ಎಂದ ನೆಟ್ಟಿಗರು..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಸ್ಲಾಟ್ ಗಾಗಿ ಕಾಯುತ್ತಾ ಕುಳಿತಿದೆ. ಇಷ್ಟರಲ್ಲೇ ಯಾವುದಾದರೂ ಒಂದು ಧಾರಾವಾಹಿ ಮುಕ್ತಾಯಗೊಳಲ್ಲಿದ್ದು, ಆ ಜಾಗಕ್ಕೆ ನೂರು ಜನ್ಮಕೂ ಸೀರಿಯಲ್ ಎಂಟ್ರಿ ಕೊಡಲಿದೆ. ಈಗಾಗಲೇ ನೂರು ಜನ್ಮಕೂ ಧಾರಾವಾಹಿಯ ಎರಡು ಪ್ರೋಮೋಗಳು ರಿಲೀಸ್ ಆಗಿವೆ. ಈ ಪ್ರೋಮೋದಲ್ಲಿ ಧಾರಾವಾಹಿ ಹಾರರ್ ಎಂಬುದಂತೂ ಪಕ್ಕಾ ಆಗಿದೆ. ನಾಯಕ-ನಾಯಕಿಯ ನಡುವೆ ಬರುವ ಆ ಆತ್ಮ ಯಾವುದು ಎಂಬುದು ತಿಳಿಯಬೇಕಿದೆ. ನಾಯಕನ್ನು ಕಾಡುವ ಆತ್ಮಕ್ಕೆ ನಾಯಕಿ ಶಾಂತಿ ಕೊಡಿಸುತ್ತಾಳಾ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಹಾರರ್ ಕಥೆಯಲ್ಲಿ ಧನುಷ್ ಗೌಡ
ಹಾರರ್ ಕಥಾ ಹಂದರವನ್ನೊಳಗೊಂಡ ಈ ಹೊಸ ಧಾರಾವಾಹಿ ನೂರು ಜನ್ಮಕೂ ಶೀಘ್ರದಲ್ಲಿ ಪ್ರಸಾರ ಕಾಣಲಿದೆ. ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಮತ್ತೆ ಕಲರ್ಸ್ ಕುಟುಂಬಕ್ಕೆ ಧನುಷ್ ಗೌಡ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಧನುಷ್ ಗೌಡ ಅವರು ಈ ಹಿಂದೆ ಗೀತಾ ಧಾರಾವಾಹಿಯಲ್ಲಿ ನಾಯಕ ವಿಜಯ್ ಪಾತ್ರದ ಮೂಲಕ ಕಮಾಲ್ ಮಾಡಿದ್ದರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಗೌರಿಶಂಕರ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನೂರು ಜನ್ಮಕೂ ಧಾರಾವಾಹಿ ಮೂಲಕ ಮತ್ತೆ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಧನುಷ್ ಗೌಡ ನಟನೆಯ ಮೇಲಿನ ಆಸೆಯಿಂದ ಬಣ್ಣದ ಲೋಕಕ್ಕೆ ಬಂದವರೇ ಮೊದಲ ಧಾರಾವಾಹಿಯಲ್ಲೇ ನಾಯಕರಾದರು.

ಆತ್ಮಕ್ಕೆ ಅಡ್ಡಿಯಾಗುವ ರಾಯರು
ಸಾಮಾನ್ಯ ಧಾರಾವಾಹಿಗಳಲ್ಲಿ ಅಕ್ಕ-ತಂಗಿ, ಅತ್ತೆ-ಸೊಸೆ ನಡುವೆ ವೈರತ್ವ ಇರುತ್ತದೆ. ಆದರೆ ನೂರು ಜನ್ಮಕೂ ಕಥೆಯಲ್ಲಿ ನಾಯಕನ ಮೇಲೆ ದೇಹ ತೊರೆದಿರುವ ಆತ್ಮವೊಂದು ಧ್ವೇಷ ಕಾರುತ್ತಿದೆ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ಧ್ವೇಷವಿದೆ. ನಾಯಕನ ತಪ್ಪೇನಿದೆ. ಇನ್ನು ನಾಯಕಿ ಮೈತ್ರಿ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಎಂಬುದೇ ಕಥೆಯಾಗಿದೆ. ಇನ್ನು ನಾಯಕಿ ಮೈತ್ರಿ ರಾಯರ ಅಪ್ಪಟ ಭಕ್ತೆ. ಸದಾ ರಾಯರನ್ನು ಧ್ಯಾನಿಸುವ ಮೈತ್ರಿ ಆತ್ಮವನ್ನು ತೊಲಗಿಸಲು ರಾಘವೇಂದ್ರ ಸ್ವಾಮಿಗಳೇ ಸಹಾಯ ಮಾಡುತ್ತಾರಾ ಎಂಬುದು ಪ್ರೊಮೋದಲ್ಲಿ ಸ್ಪಷ್ಟವಾಗಿದೆ.
ನಾಯಕಿಯಾಗಿ ಶಿಲ್ಪಾ ಕಾಮತ್ ನಟನೆ
ಇನ್ನು ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು, ಶಿಲ್ಪಾ ಕಾಮತ್. ಮಂಗಳೂರಿನ ಬೆಡಗಿ ಆಗಿರುವ ಶಿಲ್ಪಾ ಕಾಮತ್ ಈ ಹಿಂದೆ ಮಿಸ್ ಮಂಗಳೂರು ಪಟ್ಟವನ್ನು ಅಲಂಕರಿಸಿದ್ದಾರೆ. ಸದ್ಯ ಧನುಷ್ ಗೌಡ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದು, ಇದು ಇವರ ಮೊದಲ ಧಾರಾವಾಹಿಯಾಗಿದೆ. ನಾಕಿಗೆ ಇದು ಮೊದಲ ಧಾರಾವಾಹಿಯಾಗಿದ್ದು, ಇನ್ನು ಧಾರಾವಾಹಿಯಲ್ಲಿ ಯಾವೆಲ್ಲಾ ಪಾತ್ರಗಳಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.
ಆತ್ಮದ ರೂಪದಲ್ಲಿ ಚಂದನಾ ಗೌಡ
ಧಾರಾವಾಹಿಯಲ್ಲಿ ಆತ್ಮವಾಗಿ ಕಾಡುವ ನಟಿ ಬೇರೆ ಯಾರೂ ಅಲ್ಲ. ಈ ಹಿಂದೆ ಕನ್ಯಾದಾನ ಧಾರಾವಾಹಿಯಲ್ಲಿ ನಟಿಸಿದ್ದ ನಟಿ ಚಂದನಾ ಗೌಡ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಕಣ್ಣುಗಳ ಮೂಲಕವೇ ನಟಿಸಿ ಜಡ್ಜ್ ಗಳ ಮನ ಗೆದ್ದಿದ್ದರು. ಇದೀಗ ಚಂದನಾ ಅವರು ಆತ್ಮದ ರೂಪದಲ್ಲಿ ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈನ್ನು ಇದು ಹಿಂದಿಯ ಸುಹಗಾನ್ ಚುಡೈಲ್ ಎಂಬ ಧಾರಾವಾಹಿಯ ರಿಮೇಕ್ ಎಂದು ಹೇಳಲಾಗಿದೆ. ಇನ್ನು ವೀಕ್ಷಕರು ಧಾರಾವಾಹಿಯನ್ನು ನೋಡಲು ಕಾತುರರಾಗಿದ್ದಾರೆ. ಯಾವಾಗ ಸೀರಿಯಲ್ ಪ್ರಸಾರ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











