ShreeGowri: ದೇವಸ್ಥಾನದಲ್ಲಿ ಅನಾವರಣವಾಯಿತು ಗೌರಿಯ ನೋವಿನ ಕಥೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಶ್ರೀಗೌರಿ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ರಾತ್ರಿ 8.30ಕ್ಕೆ ಶ್ರೀಗೌರ ಪ್ರಸಾರವಾಗಲಿದ್ದು, ವಾಹಿನಿ ಹೊಸ ಪ್ರೊಮೋವನ್ನು ರಿಲೀಸ್ ಮಾಡಿದೆ.
ಪ್ರಥಮ ಬಾರಿಗೆ 7 ನಿಮಿಷಕ್ಕೂ ಸುದೀರ್ಘ ಪ್ರೊಮೋ ಪ್ರಸಾರ ಆಗಿದೆ. ಶ್ರೀಗೌರಿ ಧಾರಾವಾಹಿಯ ಬಗ್ಗೆ ಒಂದು ಸಣ್ಣ ಝಲಕ್ ಕೊಟ್ಟಿದೆ.
ಹೂವಂತೆ ಅರಳುವ ಹುಡುಗಿ, ರಾತ್ರಿ ಬಾಡುವ ಭಯವಿಲ್ಲದ ಈಕೆ ಸರ್ವ ಗುಣ ಸಂಪನ್ನೆ. ಆದರೆ, ಇವಳಲ್ಲೂ ಕೂಡ ಲೋಪಗಳಿದ್ದು, ಈಗ ಇದೇ ಇವಳ ಬಾಳಿಗೆ ಮುಳ್ಳಾಗಿದೆ.

ಅಮೂಲ್ಯ-ಕಾರ್ತಿಕ್ ಜೋಡಿ
ಶ್ರೀಗೌರಿ ಧಾರಾವಾಹಿಯನ್ನು ನಟ ಜಗನ್ ನಾಥ್ ನಿರ್ಮಿಸುತ್ತಿದ್ದಾರೆ. 'ಲಕ್ಷಣ', 'ರಕ್ಷಾಬಂಧನ' ಹಾಗೂ 'ಗೃಹಪ್ರವೇಶ' ಧಾರಾವಾಹಿಯನ್ನು ನಟ ಜಗನ್ನಾಥ್ ಅವರೇ ನಿರ್ಮಿಸಿದ್ದರು. ಇದೀಗ 'ಶ್ರೀಗೌರಿ' ಧಾರಾವಾಹಿಯ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಟಿ ಅಮೂಲ್ಯ ಓಂಕಾರ್ ಗೌಡ ನಾಯಕಿ ಪಾತ್ರವನ್ನು ನಿರ್ವಹಿಸಯತ್ತಿದ್ದಾರೆ. ಇನ್ನೂ ನಾಯಕನನ್ನು ವಾಹಿನಿ ರಿವೀಲ್ ಮಾಡಿದ್ದು, ಅದು ಬೇರೆ ಯಾರೂ ಅಲ್ಲ ಕಾರ್ತಿಕ್. ಆದರೆ, ನಟ ಜಗನ್ನಾಥ್ ಅವರೇ ನಾಯಕ ಆಗಿ ನಟಿಸಬಹುದು ಎಂದು ಕೆಲವರು ಗೆಸ್ ಮಾಡಿದ್ದರು. ಆದರೆ ಅದು ಸುಳ್ಳಾಗಿದೆ. ಇತ್ತೀಚೆಗೆ ತೋರಿಸಿದ ಪ್ರೊಮೋದಲ್ಲಿ ನಾಯಕನನ್ನು ರಿವೀಲ್ ಮಾಡಲಾಗಿದೆ.
ಸರ್ವಗುಣ ಸಂಪನ್ನೆ ಶ್ರೀಗೌರಿ
ಹೊಸ ಪ್ರೊಮೋ ಪ್ರಕಾರ ನಾಯಕಿ ಗೌರಿಗೆ ಈ ವರ್ಷವಾದರೂ ಮದುವೆಯಾಗಲಿ ಎಂದು ಹೆಗಡೆ ಬಯಸಿ ಹರಕೆ ಕಟ್ಟಿ ಪೂಜೆ ಮಾಡಿಸುತ್ತಾರೆ. ಇದೇ ದೇವಾಲಯಕ್ಕೆ ಬಂದು ತಮ್ಮ ಮಗನ ಮದುವೆಗೆ ಹರಕೆ ಕಟ್ಟಿದ ಕುಟುಂಬದವರು ಗೌರಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ದೇವಸ್ಥಾನದಲ್ಲೇ ನಿಮ್ಮ ಮಗಳನ್ನು ನಮ್ಮ ಮಗನಿಗೆ ಕೊಡಿ. ಅವನು ನೋಡಲು ಸುಂದರವಾಗಿದ್ದಾನೆ. ಫಾರಿನ್‌ನಲ್ಲಿದ್ದಾನೆ ಎಂದು ಕೇಳುತ್ತಾರೆ. ಆಗ ಗೌರಿ ಮನೆಯವರಿಗೆ ಒಂದು ಕ್ಷಣ ಖುಷಿಯಾಗುತ್ತದೆ. ಕೊನೆಗೆ ಹೆಗಡೆ ನಿಮಗೆ ಯಾವ ಥರಹದ ಹುಡುಗಿ ಬೇಕು ಎಂದು ಪ್ರಶ್ನಿಸುತ್ತಾನೆ.

ಗೌರಿಯಲ್ಲಿನ ಕೊರತೆಗಳು
ಆಗ ಹುಡುಗನ ಮನೆಯವರು ಈಕೆಯಂತೆ ಸರ್ವ ಗುಣಗಳ ಸಂಪನ್ನೆ ಆಗಿರಬೇಕು ಎಂದು ಹೇಳುತ್ತಾರೆ. ಈ ಮಾತು ಕೇಳುತ್ತಿದ್ದಂತೆ ಈ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಹೆಗಡೆ ಹೊರಟು ಬಿಡುತ್ತಾನೆ. ಈ ಮಾತಿನ ಅರ್ಥವಾಗದ ಹುಡುಗನ ಮನೆಯವರು ಗೊಂದಲಕ್ಕೆ ಒಳಗಾಗುತ್ತಾರೆ. ಅಷ್ಟಕ್ಕೂ ಗೌರಿಯಲ್ಲಿರುವ ಆ ಕೊರತೆ ಯಾವುದು ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ನಿತ್ಯ ರಾತ್ರಿ ವೇಳೆಯಲ್ಲಿ ಗೌರಿ ಅನ್ನು ಕೂಡಿ ಹಾಕುವುದು ಯಾಕೆ ಎಂಬ ಈ ಎರಡು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಶ್ರೀಗೌರಿ ಧಾರಾವಾಹಿಯಲ್ಲಿ ನಟ-ನಟಿಯರು
ಇನ್ನು ಶ್ರೀಗೌರಿ ಧಾರಾವಾಹಿಯಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ಸುನಿಲ್ ಪುರಾಣಿಕ್ ಕಾಣಿಸಿಕೊಂಡಿದ್ದಾರೆ. ನಟ ರಾಜೇಶ್ ಧ್ರುವ, ಹಿರಿಯ ನಟಿ ಗಾಯತ್ರಿ ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ, ನಾಯಕ ಹಾಗೂ ನಾಯಕಿ ಇಬ್ಬರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಪ್ರಮೋಷನ್ ಮಾಡಿದ್ದರು. 'ಯಶೋದೆ' ಧಾರಾವಾಹಿ ಬಳಿಕ ಈಗ ಮತ್ತೆ ನಾಯಕ ಕಾರ್ತಿಕ್ ಕಮ್ ಬ್ಯಾಕ್ ಮಾಡಿದ್ದಾರೆ.


Click it and Unblock the Notifications











