Drishtibottu ; ದೃಷ್ಟಿಬೊಟ್ಟು ಧಾರಾವಾಹಿ ಪ್ರಸಾರದ ಸಮಯ ತಿಳಿಸಿದ ಕಲರ್ಸ್ ಕನ್ನಡ
ಗೌರಿ ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮನರಂಜನೆಯ ಸುರಿಮಳೆ ಸುರಿಯುವುದಂತೂ ಪಕ್ಕಾ ಆಗಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸುವ ಸ್ಫರ್ಧಿಗಳು ಯಾರು, ಲಿಸ್ಟ್ ನಲ್ಲಿ ಯಾರು ಯಾರು ಇದ್ದಾರೆ ಎಂಬ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆಯೇ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯು ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿದ್ದು, ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ.
ಗೌರಿ-ಗಣೇಶ ಹಬ್ಬಕ್ಕೆ ಹೊಸ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ನನ್ನ ದೇವ್ರು ಧಾರಾವಾಹಿ ಪ್ರಾರಂಭವಾಗಿದೆ. ಈ ಧಾರಾವಾಹಿ ಕುತೂಹಲಗಳಿಂದ ಕೂಡಿದ್ದು, ವೀಕ್ಷಕರನ್ನು ಸೆಳೆಯುತ್ತಿದೆ. ಇದರ ಬೆನ್ನಲ್ಲೇ ಈಗ ವಾಹಿನಿಯು ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿದೆ. ದೃಷ್ಟಿಬೊಟ್ಟು ಎಂಬ ಹೆಸರಿನ ಹೊಸ ಧಾರಾವಾಹಿಯ ಪ್ರೊಮೋ ಈಗಾಗಲೇ ವಾಹಿನಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಧಾರಾವಾಹಿಯನ್ನು ಪ್ರಸಾರ ಮಾಡುವ ಸಮಯ ಮತ್ತು ದಿನಾಂಕವನ್ನು ಕೂಡ ಈಗ ವಾಹಿನಿ ತಿಳಿಸಿದೆ. ಮುಂದಿನ ವಾರ ಗೌರಿ-ಗಣೇಶ ಹಬ್ಬವಿದೆ. ಈ ಹಬ್ಬ ಮುಗಿದ ಬಳಿಕ ದೃಷ್ಟಿಬೊಟ್ಟು ಧಾರಾವಾಹಿ ಪ್ರಸಾರ ಕಾಣಲಿದೆ.

ದತ್ತ ಭಾಯ್ ಆದ ಚಾಕ್ಲೇಟ್ ಬಾಯ್
ಸೆಪ್ಟೆಂಬರ್ 9 ರಿಂದ ಸಂಜೆ 6:30ಕ್ಕೆ ದೃಷ್ಟಿಬೊಟ್ಟು ಧಾರಾವಾಹಿ ಶುರುವಾಗಲಿದೆ. ಈ ಧಾರಾವಾಹಿಯು ಡಿಫರೆಂಟ್ ಆಗಿದ್ದು, ಪ್ರೋಮೋ ಮೂಲಕವೇ ಜನರನ್ನು ಸೆಳೆಯುತ್ತಿದೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿದ್ದ ನಟ ವಿಜಯ್ ಸೂರ್ಯ ಅವರು ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಾಕ್ಲೇಟ್ ಬಾಯ್ ನಂತೆ ಇದ್ದ ಈ ನಟ ಈಗ ದೃಷ್ಟಿಬೊಟ್ಟು ನಲ್ಲಿ ದತ್ತ ಭಾಯ್ ಆಗಿ ಬಂದಿದ್ದಾರೆ. ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡ ನಾಯಕ
ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರು ಖಡಕ್ ಎಂಟ್ರಿ ಕೊಟ್ಟಿದ್ದಾರೆ. ದತ್ತಾ ಶ್ರೀರಾಮ ಪಾಟಿಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಗು ಮನಸ್ಸಿನ ಖಡಕ್ ಹುಡುಗ ಆಗಿದ್ದಾರೆ. ಕೊಟ್ಟ ಮಾತನ್ನು ತಪ್ಪದ ದತ್ತ ಭಾಯ್ ಗೆ ಸೌಂದರ್ಯ ಅಂದ್ರೇನೇ ಆಗೋದಿಲ್ಲ. ಹಾಲಿನಂತಹ ಮನಸ್ಸಿನವರು ಎಂದರೆ ಬಹಳ ಇಷ್ಟ. ಈ ಧಾರಾವಾಹಿಯಲ್ಲಿ ನಟಿ ಅರ್ಪಿತಾ ಮೋಹಿತೆ ಅವರು ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇನ್ನು ಮುಖ್ಯಭೂಮಿಕೆಯಲ್ಲಿ ನಟಿ ದೀಪಶ್ರೀ ಹರೀಶ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಾಯಕಿಗೆ ಸೌಂದರ್ಯವೇ ಶಾಪವಾಗಿದ್ದು, ನಾಯಕನಿಗೆ ಸೌಂದರ್ಯ ಎಂದರೆ ಆಗೋದಿಲ್ಲ. ಇವರಿಬ್ಬರು ಹೇಗೆ ಒಂದಾಗುತ್ತಾರೆ ಎಂಬುದೇ ಧಾರಾವಾಹಿಯ ಕಥೆ. ಈ ಧಾರಾವಾಹಿಯನ್ನು ನಟ ರಕ್ಷ್ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಶ್ರವಂತ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯ ಪ್ರೋಮೋ ಅಂತೂ ಅದ್ಭುತವಾಗಿ ಮೂಡಿ ಬಂದಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ನಟ ವಿಜಯ್ ಸೂರ್ಯ ಪಯಣ
ಇನ್ನು ನಟ ವಿಜಯ್ ಸೂರ್ಯ ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಉತ್ತರಾಯಣ, ಪಾರ್ವತಿ ಪರಮೇಶ್ವರ, ಅಗ್ನಿಸಾಕ್ಷಿ, ಪ್ರೇಮಲೋಕ, ನಮ್ಮ ಲಚ್ಚಿ, ಜೊತೆ ಜೊತೆಯಲಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಷ್ಟಕಾಮ್ಯ , ಕ್ರೇಜಿಲೋಕ, ಗಾಳಿಪಟ-2, ಕದ್ದು ಮುಚ್ಚಿ, ವೀರಪುತ್ರ , ಲಕ್ನೌ ಟು ಮುಂಬೈ, ಸ, ಡಿಟೆಕ್ಟಿವ್ ತೀಕ್ಷಣ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸದ್ಯ ದೃಷ್ಟಿಬೊಟ್ಟು ಧಾರಾವಾಹಿ ಬಹಳ ನಿರೀಕ್ಷೆ ಮೂಡಿಸಿದ್ದು, ಗೌರಿ-ಗಣೇಶ ಹಬ್ಬದ ಬಳಿಕ ವೀಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











