Seetha Raama ; ಸೀತಾಗೆ 'ಸಿಹಿ'ಯಾದ ಉಡುಗೊರೆ ನೀಡಿದ ರಾಮ್
ಸೀತಾರಾಮ ಧಾರಾವಾಹಿಯಲ್ಲಿ, ಸಿಹಿ ಸ್ಕೂಲ್ ಡೇ ನಲ್ಲಿ ರಾಮ್ ಎಂಜಾಯ್ ಮಾಡಿದ್ದಾನೆ. ಸಿಹಿ ಜೊತೆಗೆ ಡ್ಯಾನ್ಸ್ ಮಾಡಿ ರವಿಚಂದ್ರನ್ ಅವರ ಬಳಿ ಮಾತನಾಡಿದ್ದಾನೆ. ಇದರಿಂದ ರಾಮ್ ಮತ್ತು ಸೀತಾ ಸಂಬಂಧ ಸರಿ ಹೋಗುವಂತೆ ಕಾಣುತ್ತಿದೆ.
ಇನ್ನೂ ಮುನಿಸಿದ್ದರೂ ಕೂಡ ತನ್ನ ನಿರ್ಧಾರಗಳನ್ನು ಸ್ವಲ್ಪ ಸಹಿಸಿಕೊಂಡಿದ್ದಾಳೆ ಸೀತಾ. ಆದರೆ, ಸೀತಾ ಮತ್ತು ರಾಮ್ ನನ್ನು ನೋಡಿದ ಜನರು ಮತ್ತೆ ಮತ್ತೆ ಕೆಟ್ಟ ಮಾತುಗಳನ್ನು ಆಡಿ ಸೀತಾಳಿಗೆ ಬೇಸರವಾಗುವಂತೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಸೀತಾ ಯಾರ ಬಳಿಯೂ ಚರ್ಚೆ ಮಾಡಿಲ್ಲ.

ವಿಶ್ವ ಚಿಕ್ಕಪ್ಪನ ಮೇಲೆ ಅನುಮಾನ
ಈ ಕಡೆ ರಾಮ್ ಗೆ ಸೀತಾ ಮನೆ ಹರಾಜಾಗುತ್ತಿರುವ ಸತ್ಯ ಗೊತ್ತಾಗಿದೆ. ಅಶೋಕ್ ಮನೆಯನ್ನು ಯಾರು ಖರೀದಿಸುತ್ತಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಪಡೆದಿದ್ದಾನೆ. ಚರಣ್ ನ ಆಫೀಸಿನಿಂದ ಕಳಿಸಿದ ಬಳಿಕ ಅವನ ಮೇಲೆ ಅಶೋಕ್ ಒಂದು ಕಣ್ಣಿಟ್ಟಿದ್ದ.
ಯಾವುದಕ್ಕೂ ಇರಲಿ ಎಂದು ಚರಣ್ ಫೋನ್ ನ ಟ್ಯಾಪ್ ಮಾಡಲಾಗಿತ್ತು. ಈ ಮೂಲಕ ಈಗ ಸೀತಾ ಮನೆಯನ್ನು ಹರಾಜಿನಲ್ಲಿ ಖರೀದಿಸಲು ಚರಣ್ ಮುಂದಾಗಿದ್ದಾನೆ ಎಂಬ ಸತ್ಯವನ್ನು ಅರಿತಿದ್ದಾನೆ. ಈ ಬಗ್ಗೆ ರಾಮ್ ಗೆ ಮಾಹಿತಿ ನೀಡಿದ್ದು, ರಾಮ್, ವಿಶ್ವ ಚಿಕ್ಕಪ್ಪನ ಬಗ್ಗೆ ಅನುಮಾನಗೊಂಡಿದ್ದಾನೆ.
ಚರಣ್ ಮೇಲೆ ಭಾರ್ಗವಿ ಕೋಪ
ಹಳೆ ಬೆಂಗಳೂರಿನಲ್ಲಿ ಬ್ಯಾಂಕ್ ನಿಂದ ಚಿಕ್ಕ ಜಾಗವೊಂದು ಹರಾಜಿಗೆ ಬಂದಿದೆ. ಅದನ್ನು ಖರೀದಿಸಬೇಕು ಎಂದು ವಿಶ್ವ ಚಿಕ್ಕಪ್ಪ ಹೇಳಿದ್ದನ್ನ ರಾಮ್ ನೆನಪು ಮಾಡಿಕೊಳ್ಳುತ್ತಾನೆ. ಹೀಗಾಗಿ ಚರಣ್‌ಗೆ ಆ ಮನೆಯನ್ನು ಖರೀದಿಸಲು ವಿಶ್ವ ಚಿಕ್ಕಪ್ಪನೇ ಹೇಳಿರಬೇಕು ಎಂದು ರಾಮ್ ಭಾವಿಸುತ್ತಾನೆ.

ಈ ಬಗ್ಗೆ ರಾಮ್ ಭಾರ್ಗವಿ ಬಳಿ ಹೇಳುತ್ತಾನೆ. ಭಾರ್ಗವಿಗೆ ಚರಣ್ ಫೋನ್ ಟ್ಯಾಪ್ ಆಗಿರುವುದು ತಿಳಿಯುತ್ತದೆ. ರಾಮ್ ಮುಂದೆ ತನಗೇನು ಗೊತ್ತಿಲ್ಲ ಎಂದು ನಟಿಸುವ ಭಾರ್ಗವಿ ಎಲ್ಲಾ ತಪ್ಪು ವಿಶ್ವನದ್ದೇ ಎಂಬಂತೆ ನಡೆದುಕೊಳ್ಳುತ್ತಾಳೆ. ನಂತರ ಚರಣ್ ಬಳಿ ಹೋಗಿ ಬೈಯುತ್ತಾಳೆ. ಆತನ ಫೋನ್ ಟ್ಯಾಪ್ ಆಗಿರುವ ಬಗ್ಗೆ ಹೇಳಿ ಫೋನ್‌ನ್ನು ಬದಲಿಸುತ್ತಾಳೆ.
ಸೀತಾಗಾಗಿ ಹೊಸ ಪ್ಲಾನ್ ಮಾಡಿದ ರಾಮ್
ವಿಶ್ವನ ಮೇಲಿನ ಅನುಮಾನಗಳು ಸರಿಯಾಗೆ ಇದೆ ಎಂದು ರಾಮ್ ಈಗ ನಂಬಿರುವುದಲ್ಲದೇ, ಇತ್ತ ಸೀತಾ ಮನೆಯನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ರಾಮ್ ಹಣ ಕೊಟ್ಟರೆ ಸೀತಾ ತೆಗೆದುಕೊಳ್ಳುವುದಿಲ್ಲ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ಹಾಗಾಗಿ ರಾಮ್ ಹೊಸ ಪ್ಲಾನ್ ಅನ್ನು ಮಾಡಿದ್ದಾನೆ. ಹೊಸ ವ್ಯಕ್ತಿಯನ್ನು ಹುಟ್ಟುಹಾಕಿದ್ದು, ಆತನನ್ನು ತಾನೇ ಬ್ಯಾಂಕ್ ನಿಂದ ಮನೆಯನ್ನು ಖರೀದಿಸುತ್ತಿರುವ ಬಗ್ಗೆ ಸೀತಾಳನ್ನು ನಂಬಿಸುವಂತೆ ಕಳಿಸಿದ್ದಾನೆ.
ಸಿಹಿಗೆ ಮನೆಯನ್ನು ಉಳಿಸಿಕೊಟ್ಟ ರಾಮ್
ಸೀತಾ ಬಳಿ ಹೋದ ಆ ವ್ಯಕ್ತಿ ಮನೆಯನ್ನು ಖರೀದಿಸುತ್ತಿರುವ ಬಗ್ಗೆ ಹೇಳುತ್ತಾನೆ. ಸೀತಾ ಮನೆಯನ್ನು ಖಾಲಿ ಮಾಡಲು ಸ್ವಲ್ಪ ಸಮಯ ಕೇಳುತ್ತಾಳೆ. ಬಳಿಕ ಆ ಮನೆಯಲ್ಲಿ ತಾನು ಬಾಡಿಗೆ ಕೊಟ್ಟು ಇರಬಹುದಾ ಎಂದು ವಿಚಾರಿಸುತ್ತಾಳೆ. ಅದಕ್ಕೆ ವ್ಯಕ್ತಿ ಒಪ್ಪಿಕೊಳ್ಳುತ್ತಾನೆ. ಇದೆಲ್ಲವೂ ಕೂಡ ರಾಮ್ ಪ್ಲ್ಯಾನ್ ಆಗಿದ್ದು, ಸಿಹಿಗೆ ಅವಳ ಅರಮನೆಯನ್ನು ಉಳಿಸಿಕೊಟ್ಟಿದ್ದಾನೆ. ಆದರೆ, ಇದರ ಹಿಂದೆ ರಾಮ್ ಇದ್ದಾನೆ ಎಂಬ ವಿಚಾರ ಸೀತಾಳಿಗೆ ಗೊತ್ತಾಗದಂತೆ ನೋಡಿಕೊಂಡಿದ್ದಾನೆ. ಮುಂದೆ ರಾಮ್ ಸೀತಾ ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











