Seetha Raama: ಸೀತಾ ಮದುವೆ ನಿಂತಾಯ್ತು: ಸಿಹಿಗಾಗಿ ರಾಮ್ ವಾಪಸ್ ಬಂದಾಯ್ತು

By ಪ್ರಿಯಾ ದೊರೆ

ಸೀತಾ ರಾಮ ಧಾರಾವಾಹಿಯಲ್ಲಿ ರಾಮ್ ಈಗಾಗಲೇ ಮಲೇಷಿಯಾಗೆ ಹೊರಟು ನಿಂತಿದ್ದಾನೆ. ಸೀತಾಳನ್ನು ದೂರ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದಾನೆ.

ಇತ್ತ ರುದ್ರಪ್ರತಾಪ್ ಸೀತಾಳನ್ನು ಮದುವೆಯಾಗಲು ಸಜ್ಜಾಗಿ ಹಸೆಮಣೆ ಮೇಲೆ ಕೂತಿದ್ದಾನೆ. ಕೆಲ ಸಮಯದಲ್ಲೇ ಇಬ್ಬರ ಮದುವೆಯೂ ನಡೆದು ಬಿಡುತ್ತದೆ ಎಂದುಕೊಂಡಿದ್ದಾನೆ.

written update on episode 01 January seetha raama serial

ಸಿಹಿಗೆ ಸೀತಮ್ಮನ ಮದುವೆ ಮುಗಿದ ಮೇಲೆ ತನ್ನ ಭವಿಷ್ಯ ಏನು? ಎಂಬುದು ಗೊತ್ತಾಗಿ ಹೋಗಿದೆ. ಇದರಿಂದ ಸಿಹಿ ಮುಂದೇನು ಅಂತ ಬಹಳ ಆತಂಕಗೊಂಡಿದ್ದಾಳೆ.

ಸಿಹಿ ಮಾತು ಕೇಳಿದ ರಾಮ್

ತನ್ನ ಗೆಳೆಯ ರಾಮ್‌ಗೆ ಈ ಸತ್ಯ ಹೇಳಲು ಸಿಹಿ ಪ್ರಯತ್ನಿಸಿದ್ದಾಳೆ. ಆದರೆ, ರಾಮ್ ಫೋನ್ ಆಫ್ ಆಗಿದ್ದರಿಂದ, ವಾಯ್ಸ್ ನೋಟ್ ಕಳಿಸಿ ಏನು ಮಾಡುವುದು ಎಂದು ಚಿಂತೆಗೀಡಾಗಿದ್ದಾಳೆ. ಫ್ರೆಂಡ್ ಬೇಗ ಬನ್ನಿ. ನೀವು ಬಂದು ಮ್ಯಾಜಿಕ್ ಮಾಡಿ ಎಂದು ಹುಡುಕಾಡುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ರಾಮ್ ಫೋನ್ ಆನ್ ಮಾಡಿ ಸಿಹಿಯ ವಾಯ್ಸ್ ನೋಟ್ ಅನ್ನು ಕೇಳಿಸಿಕೊಳ್ಳುತ್ತಾನೆ. ಹೊಸ ಫ್ರೆಂಡ್ ಅಮ್ಮನನ್ನು ಮದುವೆಯಾಗಿ ಈ ವಠಾರವನ್ನು ಮಾರಾಟ ಮಾಡಿ, ನನ್ನನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ ಎಂದು ಹೇಳಿರುತ್ತಾಳೆ. ಈ ಮಾತನ್ನು ಕೇಳಿದ ರಾಮ್ ಕೂಡಲೇ ಅಶೋಕನಿಗೆ ಫೋನ್ ಮಾಡಿ ರುದ್ರಪ್ರತಾಪ್ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸುತ್ತಾನೆ.

ಸಿಹಿಗಾಗಿ ಹುಡುಕಾಡುತ್ತಿರುವ ಸೀತಾ

ಅಶೋಕ್, ಸೂರಿ ಸಹಾಯ ಪಡೆದು ಪೊಲೀಸ್ ಕಮೀಷನರ್ ಮೂಲಕ ರುದ್ರಪ್ರತಾಪ್ ಯಾರು ಎಂಬುದನ್ನು ತಿಳಿದುಕೊಳ್ಳಲು ಯತ್ನಿಸುತ್ತಾನೆ. ಆಗ ರಿಯಲ್ ಎಸ್ಟೇಟ್ ಉದ್ಯಮಿ ಸಿಕ್ಕಿ ಬೀಳುತ್ತಾನೆ. ಇತ್ತ ಸೀತಾ ಹಸೆಮಣೆ ಏರುವ ಮುನ್ನ ಸಿಹಿಯನ್ನು ಹುಡುಕುತ್ತಾಳೆ. ಸಿಹಿ ಎಲ್ಲೂ ಕಾಣಿಸುವುದಿಲ್ಲ. ರುದ್ರಪ್ರತಾಪ್ ಕಡೆಯವರು ಸಿಹಿಯನ್ನು ಕಿಡ್ನ್ಯಾಪ್ ಮಾಡಿರುತ್ತಾರೆ. ಸೀತಾಲಿಗೆ ಸಿಹಿ ಕಾಣುತ್ತಿಲ್ಲ ಎಂದು ಆತಂಕವಾಗಿರುತ್ತದೆ. ಆದರೆ, ಎಲ್ಲರ ಬಲವಂತಕ್ಕೆ ಹಸೆಮಣೆ ಏರುತ್ತಾಳೆ. ತಾತ ವಠಾರವೆಲ್ಲಾ ಹುಡುಕಿದರೂ ಸಿಹಿ ಮಾತ್ರ ಎಲ್ಲೂ ಕಾಣಿಸುವುದಿಲ್ಲ.

written update on episode 01 January seetha raama serial

ರುದ್ರಪ್ರತಾಪ್ ಬಂಡವಾಳ ಬಯಲು

ರುದ್ರಪ್ರತಾಪ್ ಒಬ್ಬ ಫ್ರಾಡ್ ಎಂದು ತಿಳಿದ ರಾಮ್ ಸೀದಾ ಮದುವೆ ಮನೆಗೆ ಬರುತ್ತಾನೆ. ಸೀತಾ ಇನ್ನೇನು ರುದ್ರಪ್ರತಾಪ್‌ಗೆ ಹಾರ ಹಾಕಬೇಕು ಅಷ್ಟರಲ್ಲಿ ಮದುವೆ ನಿಲ್ಲಿಸುತ್ತಾನೆ. ರುದ್ರಪ್ರತಾಪ್ ಒಬ್ಬ ಫ್ರಾಡ್. ವಠಾರದ ಆಸ್ತಿಗೋಸ್ಕರ ಸೀತಾಳನ್ನು ಮದುವೆಯಾಗುತ್ತಿದ್ದಾನೆ. ಸೀತಾಳನ್ನು ಮದುವೆಯಾದ ಕೂಡಲೇ ಮನೆ ಮಾರಾಟ ಮಾಡುತ್ತಾನೆ. ಈಗಾಗಲೇ ರುದ್ರಪ್ರತಾಪ್ ಹಲವು ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಸಿಹಿ ಅನ್ನು ಸೀತಾಳಿಂದ ದೂರ ಮಾಡಿ ಅನಾಥಾಶ್ರಮಕ್ಕೆ ಸೇರಿಸಲು ಪ್ಲಾನ್ ಮಾಡಿದ್ದಾನೆ ಎಂದು ಹೇಳುತ್ತಾನೆ. ಈ ಮಾತುಗಳನ್ನು ಕೇಳಿದವರೆಲ್ಲಾ ಶಾಕ್ ಆಗುತ್ತಾರೆ. ಇದೆಲ್ಲಾ ಸತ್ಯಾನಾ? ಎಂಬಂತೆ ಆಶ್ಚರ್ಯ ಪಡುತ್ತಾರೆ.

ಮುರಿದು ಬಿತ್ತು ಸೀತಾಳ ಮದುವೆ

ಸೀತಾ ಮದುವೆ ಮುರಿದು ಬೀಳುತ್ತದೆ. ಸಾಕ್ಷಿ ಸಮೇತ ರುದ್ರಪ್ರತಾಪ್ ಅನ್ನು ಹಿಡಿಯುತ್ತಾನೆ. ಕೊನೆಗೆ ಸಿಹಿ ಅನ್ನು ಕಿಡ್ನ್ಯಾಪ್ ಮಾಡಿದ್ದಕ್ಕೆ ರಾಮ್ ಫೈಟ್ ಮಾಡುತ್ತಾನೆ. ಕಾರ್‌ನಲ್ಲಿ ಚೇಸ್ ಮಾಡಿಕೊಂಡು ಹೋಗಿ ಸಿಹಿಯನ್ನು ಬಿಡಿಸಿಕೊಂಡು ಬರುತ್ತಾನೆ. ರುದ್ರಪ್ರತಾಪ್ ಅನ್ನು ಪೊಲೀಸರಿಗೆ ಹಿಡಿದುಕೊಡುತ್ತಾನೆ. ಸೀತಾ ಮದುವೆ ಮಾಡಲು ಹೋಗಿ ಅನ್ಯಾಯ ಮಾಡುತ್ತಿದ್ದೆವಲ್ಲ ಎಂದು ಅಜ್ಜಿ ತಾತ ಬೇಸರ ಪಟ್ಟುಕೊಂಡು ಕಣ್ಣಿರು ಹಾಕುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಮದುವೆ ಮಂಟಪದಿಂದ ಹೊರಟು ಹೋಗುತ್ತಾರೆ. ಸಿಹಿ, ರಾಮ್‌ನನ್ನು ಕೂಡ ಕರೆದುಕೊಂಡು ಹೋಗುತ್ತಾಳೆ. ಮುಂದೆ ಸೀತಾ ಹಾಗೂ ರಾಮ್ ಹೇಗೆ ಒಂದಾಗುತ್ತಾರೆ? ಎಂಬ ಕುತೂಹಲ ಮೂಡಿದೆ.

More from Filmibeat

English summary
Seetha Raama serila latest episode upadate; Ram saves seetha and sihi. And he gives rudraprathap to police
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X