Seetha Rama ; ಚಾಂದಿನಿಗೆ ಹಗಲಲ್ಲೇ ಚಂದಮಾಮನನ್ನು ತೋರಿಸುತ್ತಿರುವ ಭಾರ್ಗವಿ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ತನ್ನ ಫ್ರೆಂಡ್ ರಾಮ ಬೇಗನೇ ಹುಷಾರಾಗಲಿ ಎಂದು ಪುಸ್ತಕದಲ್ಲಿ ಶ್ರೀರಾಮ, ಜೈರಾಮ ನಾಮವನ್ನು ಬರೆಯುತ್ತಿದ್ದಾಳೆ. ಇದನ್ನು ನೋಡಿದ ಅಜ್ಜಿ ತಾತನಿಗೆ ಖುಷಿ ಆಗುತ್ತದೆ. ಚಿಕ್ಕ ಮಗು ಆದರೂ ಕೂಡ ಫ್ರೆಂಡ್ ಹುಷಾರಾಗಲಿ ಎಂದು ಶ್ರದ್ಧೆ ಭಕ್ತಿಯಿಂದ ಶ್ರೀರಾಮ ನಾಮವನ್ನು ಬರೆಯುತ್ತಿದ್ದಾಳೆ ಎಂದು ಖುಷಿ ಪಡುತ್ತಾರೆ. ಇತ್ತ ಚಾಂದಿನಿ ರಾಮ ಆಫೀಸಿನಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾಳೆ. ಮುಂದೆ ರಾಮ ಜೊತೆಗೆ ಮತ್ತೇ ಪ್ರೀತಿ ಮಾಡುತ್ತಾ ಸುತ್ತಾಡುವುದು ಮಾತ್ರವೇ ಬಾಕಿ ಇದೆ.

ಚಾಂದಿನಿಗೆ ಆಸೆ ಹುಟ್ಟಿಸಿದ ಭಾರ್ಗವಿ

ಭಾರ್ಗವಿಗೆ ಫೋನ್ ಮಾಡುವ ಚಾಂದಿನಿ ಆಫೀಸಿನಲ್ಲಿ ಕೆಲಸವೇನೋ ಪಕ್ಕಾ ಆಯ್ತು. ಆದರೆ, ಈಗಲೇ ಕೆಲಸಕ್ಕೆ ಯಾಕೆ ಹೋಗಬೇಕು. ರಾಮ ಹುಷಾರಾದ ಮೇಲೆ ಹೋಗಬಹುದಾ ಎಂದು ಪ್ರಶ್ನಿಸುತ್ತಾಳೆ. ಆಗ ಭಾರ್ಗವಿ ನೀನು ಮೊದಲೇ ಆಫೀಸಿನಲ್ಲಿದ್ದರೆ, ರಾಮಗೆ ಸರ್ಪ್ರೈಸ್ ಆಗುತ್ತದೆ. ಇದರಿಂದ ಖುಷಿ ಪಡುತ್ತಾನೆ. ಮೊದಲಿನಂತೆಯೇ ರಾಮ ಪ್ರೀತಿಯನ್ನು ಗಳಿಸು. ಕಳೆದ ಬಾರಿ ಪ್ರೀತಿ ಮಾಡಿದಂತೆ ನಟಿಸಿದೆ. ಅದಕ್ಕೆ ನಿನ್ನ ಕೈ ತುಂಬಾ ಹಣ ಸೇರಿತ್ತು. ಆದರೆ, ಈ ಬಾರಿ ನೀನು ಪ್ರೀತಿಸಿ, ರಾಮ ನಿನ್ನ ಕಡೆಗೆ ತಿರುಗಿಸಿಕೊಂಡರೆ, ನೀನು ದೇಸಾಯಿ ಕುಟುಂಬದ ಸೊಸೆ ಆಗಬಹುದು. ತಾತ ಮೊಮ್ಮಗನ ಮದುವೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹುಡುಗಿಯನ್ನು ರಾಮ ತೋರಿಸಿದ ಕೂಡಲೇ ಮದುವೆ ಪಕ್ಕಾ ಎನ್ನುತ್ತಾಳೆ.

written update on episode 01 March seetha rama serial

ಕೆಲಸಕ್ಕೆ ರಾಜೀನಾಮೆ ಕೊಟ್ಟ ಸೀತಾ

ಈ ಮಾತು ಕೇಳಿದ ಕೂಡಲೇ ಚಾಂದಿನಿ ಕನಸು ಕಾಣಲು ಶುರು ಮಾಡುತ್ತಾಳೆ. ಆದರೆ, ಭಾರ್ಗವಿ ಪ್ಲಾನ್ ಬೇರೆಯೇ ಇದೆ. ಚಾಂದಿನಿಯನ್ನು ಬಕ್ರ ಮಾಡುತ್ತಿದ್ದು, ತನ್ನ ಕೆಲಸವನ್ನು ಸಾಧಿಸಿಕೊಳ್ಳುತ್ತಿದ್ದಾಳೆ ಅಷ್ಟೇ. ಆದರೆ, ಇದು ಚಾಂದಿನಿಗೆ ಅರ್ಥವಾಗುತ್ತಿಲ್ಲ. ಇನ್ನು ಸೀತಾ ಅಂದು ರಾಮ ಮನೆಯನ್ನು ಖರೀದಿಸಿದ ವಿಚಾರ ತಿಳಿದ ಕೂಡಲೇ ಕೋಪ ಮಾಡಿಕೊಂಡು ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ಇದರ ಫೈಲ್ ಅನ್ನು ಆಫೀಸಿನವರು ಸೂರಿ ತಾತನ ಬಳಿಗೆ ತಂದು ಕೊಡುತ್ತಾರೆ. ಸೀತಾ ರಿಸೈನ್ ಮಾಡಿದ್ದಾಳೆ. ಅದಕ್ಕೆ ಸಹಿ ಹಾಕಬೇಕು ಎನ್ನುತ್ತಾರೆ. ಈಗಾಗಲೇ ಸೀತಾ, ರಾಮ ಜೊತೆಗೆ ನಡೆದುಕೊಂಡಿರುವ ರೀತಿಯಿಂದ ಬೇಸರ ಮಾಡಿಕೊಂಡಿದ್ದಾರೆ. ಸೀತಾ ಕಂಪನಿಯಿಂದಲೂ ದೂರ ಉಳಿಯುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

written update on episode 01 March seetha rama serial

ರಾಹುಲ್ ಆದ ರುದ್ರಪ್ರತಾಪ್

ಇತ್ತ ರುದ್ರಪ್ರತಾಪ್ ಬೇಕಂತಲೇ ರಾಹುಲ್ ಹೆಸರಿನ ಮೂಲಕ ಅಂಜಲಿ ಆಸ್ಪತ್ರೆಗೆ ಬಂದಿದ್ದಾನೆ. ತನ್ನ ಮೈಕೈ ಮೂಳೆಗಳಿಗೆ ಆಗಿರುವ ಸಮಸ್ಯೆಗೆ ಚಿಕಿತ್ಸೆ ಪಡೆಯುವುದರ ಜೊತೆಗೆ ಅಂಜಲಿ ಮೂಲಕ ರಾಮ ಬದುಕಿನಲ್ಲಿ ಆಟವಾಡಲು ಮುಂದಾಗಿದ್ದಾನೆ. ಅಂಜಲಿ ರಾಹುಲ್ ನ ಮಾತನಾಡಿಸಿದ್ದು, ಅವನ ನಿಜ ಬಣ್ಣ ಗೊತ್ತಾಗಿಲ್ಲ. ಮುಂದೆ ರುದ್ರಪ್ರತಾಪ್ ರಾಹುಲ್ ವೇಷದಲ್ಲಿ ಯಾವೆಲ್ಲಾ ಗೇಮ್ ಪ್ಲಾನ್ ಮಾಡುತ್ತಾನೆ ಎಂಬುದು ಅರ್ಥವಾಗುತ್ತಿಲ್ಲ.

written update on episode 01 March seetha rama serial

ಸೀತಾಳಿಗಾಗಿ ಮಿಡಿಯುತ್ತಿರುವ ರಾಮ

ಇನ್ನು ರಾಮ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾನೆ. ರಾಮ ನನ್ನು ಮನೆಯಲ್ಲಿ ನೋಡಿ ಸೂರಿ ತಾತ ಖುಷಿ ಪಟ್ಟಿದ್ದಾರೆ. ಭಾರ್ಗವಿ ರಾಮ್ ಗೆ ದೃಷ್ಠಿ ತೆಗೆದಿದ್ದಾಳೆ. ಅಶೋಕ್ ರಾಮ್ ನನ್ನು ಬಿಟ್ಟು ಒಂದು ಕ್ಷಣವೂ ದೂರ ನಿಲ್ಲುತ್ತಿಲ್ಲ. ರಾಮ ಮಾತನಾಡಲಾಗದೇ ಒದ್ದಾಡುತ್ತಿದ್ದಾನೆ. ಕ್ಷಣ ಕ್ಷಣವೂ ಸೀತಾ ಮತ್ತು ಸಿಹಿ ಬಗ್ಗೆಯೇ ಯೋಚಿಸುತ್ತಿದ್ದಾನೆ. ಅಶೋಕ ಈಗ ರಾಮ, ಚಾಂದಿನಿಯನ್ನು ಭೇಟಿಯಾಗುವ ಮುನ್ನ ಸೀತಾ ಮತ್ತು ರಾಮ ಒಂದಾಗಬೇಕು ಎಂದು ಬಯಸಿದ್ದಾನೆ.

More from Filmibeat

English summary
Seetha resigned for ram company. Rudraprathap changed name as rahul.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X