Seetha Rama ; ಬಡ್ಡಿ ಬಂಗಾರಮ್ಮನ ಅವತಾರದಲ್ಲಿ ಸಿಹಿ ; ಮುಂದೇನ್ಮಾಡ್ತಾಳೆ ಭಾರ್ಗವಿ..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ, ರಾಮನನ್ನು ಅಪ್ಪ ಎಂದು ಒಪ್ಪಿಕೊಳ್ಳುತ್ತಿಲ್ಲ. ರಾಮ ತಾಳ್ಮೆಯಿಂದ ಕಾಯುತ್ತಿದ್ದು, ಇಂದಲ್ಲ ಸಿಹಿ ತನ್ನನ್ನು ಅಪ್ಪ ಎಂದು ಕರೆಯಬಹುದು ಎಂದು ಕಾಯುತ್ತಿದ್ದಾನೆ. ಆದರೆ, ಸಿಹಿಗೆ ಅಪ್ಪ ಆಗಿ ಬರುವವರು ಹೆಚ್ಚು ಕಾಲ ತನ್ನ ಜೊತೆಗೆ ಇರುವುದಿಲ್ಲ. ಈಗಾಗಲೇ ಅಪ್ಪ ಎಂದು ಬಂದ ರುದ್ರಪ್ರತಾಪ್ ನಿಂದ ಸಿಹಿ ಮನದಲ್ಲಿ ಬಹಳ ಕಹಿ ನೆನಪುಗಳಾಗಿವೆ. ಸಿಹಿ ಮನದಲ್ಲಿರುವ ಗಾಯವನ್ನು ಹೇಗಾದರೂ ಮಾಡಿ ಹೋಗಲಾಡಿಸಬೇಕು. ಬಳಿಕವಷ್ಟೇ ಸಿಹಿ ಪುಟಾಣಿಯ ಮನದಲ್ಲಿ ರಾಮ ಗೆ ತಂದೆಯ ಸ್ಥಾನ ಸಿಗುವುದು.
ಬಡ್ಡಿ ಬಂಗಾರಮ್ಮನ ಅವತಾರದಲ್ಲಿ ಸಿಹಿ
ಸಿಹಿ ಸ್ಕಿಟ್ ಒಂದರಲ್ಲಿ ಭಾಗವಹಿಸಿದ್ದು, ಬಡ್ಡಿ ಬಂಗಾರಮ್ಮನ ವೇಷ ಧರಿಸಿದ್ದಾಳೆ. ಸ್ಕಿಟ್ ಆಡುವ ಮುನ್ನವೇ ಶಾಂತಮ್ಮನ ವಠಾರಕ್ಕೆ ಅತಿಥಿಯ ಆಗಮನವಾಗಿದೆ. ಅದು ಬೇರೆ ಯಾರೂ ಅಲ್ಲ ಭಾರ್ಗವಿ. ರಾಮ ಪ್ರೀತಿಸುತ್ತಿರುವ ಸೀತಾ ಮನೆಗೆ ಹೋಗಿ ಕಿತಾಪತಿ ಮಾಡಬೇಕು ಎಂದುಕೊಂಡು ವಠಾರಕ್ಕೆ ಭಾರ್ಗವಿ ಬಂದಿದ್ದಾಳೆ. ಆದರೆ, ಸೀತಾ ಮನೆಯಲ್ಲಿ ಇಲ್ಲ. ಸಿಹಿಗೋಸ್ಕರ ಸ್ಕೆಚ್ ಪೆನ್, ಡ್ರಾಯಿಂಗ್ ಶೀಟ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಖರೀದಿಸಲು ಹೋಗಿದ್ದಾಳೆ. ಇದೇ ಸಂದರ್ಭದಲ್ಲಿ ಮನೆಗೆ ಬಂದ ಭಾರ್ಗವಿಯನ್ನು ನೋಡಿ, ನೀವು ನಿಜವಾಗಲೂ ಬಡ್ಡಿ ಬಂಗಾರಮ್ಮನಂತೆ ಕಾಣಿಸುತ್ತೀರಾ ಎಂದು ಭಾರ್ಗವಿಗೆ ಕಾಂಪ್ಲಿಮೆಂಟರಿ ಕೂಡ ಕೊಟ್ಟಿದ್ದಾಳೆ. ಅಲ್ಲದೇ, ಸೀತಾ ಮನೆಯಲ್ಲಿ ಸಿಹಿ ಇರುವುದನ್ನು ಕಂಡು ಶಾಕ್ ಆಗಿದ್ದಾಳೆ.

ಸೀತಾ ಮಗಳ ಬಗ್ಗೆ ತಿಳಿದ ಭಾರ್ಗವಿ..!
ಸಿಹಿಯ ಜೊತೆಗೆ ಸೀತಾ ಫೋಟೋವನ್ನು ನೋಡುತ್ತಿದ್ದಂತೆಯೇ ಭಾರ್ಗವಿ ಪ್ಲಾನ್ ಎಲ್ಲವೂ ಬದಲಾದಂತೆ ಕಾಣುತ್ತಿದೆ. ಸೀತಾಳಿಗೆ ಈಗಾಗಲೇ ಒಂದು ಮದುವೆಯಾಗಿರಬೇಕು ಎಂದು ಭಾವಿಸಿದ್ದಾಳೆ. ಸೀತಾಳಿಗೆ ಮಗು ಇದೆ ಎಂದ ಮೇಲೆ ಒಂದಾ ಡಿವೋರ್ಸ್ ಮಾಡಿರಬೇಕು. ಇಲ್ಲವೇ ಅವಳ ಬದುಕಲ್ಲಿ ಕಹಿ ಘಟನೆ ಸಂಭವಿಸಿರಬೇಕು. ಹಾಗಾದರೆ ಸಿಹಿ ತಂದೆ ಯಾರಾಗಿರಬಹುದು ಎಂಬುದು ಭಾರ್ಗವಿ ತಲೆಯಲ್ಲಿ ಓಡುತ್ತಿದೆ. ಹೀಗಾಗಿ ಸೀತಾ ಹಿನ್ನೆಲೆ ತಿಳಿಯುವ ಆಸೆಯನ್ನು ಹೊತ್ತು ಭಾರ್ಗವಿ ಅಲ್ಲಿಂದ ಹೊರಟಿದ್ದಾಳೆ. ಸಿಹಿಯನ್ನು ನೋಡಿದ ಭಾರ್ಗವಿಯಿಂದಾಗಿ ಸೀತಾ ಬಾಳಿಗೆ ಮತ್ತೊಂದು ಬಿರುಗಾಳಿ ಏಳುತ್ತಾ ಎಂಬ ಕುತೂಹಲ ಮೂಡಿದೆ.

ತಂದೆ ಜವಾಬ್ದಾರಿ ಹೊರಲು ರಾಮ ತಯಾರಿ
ಇತ್ತ ಸಿಹಿಗೆ ಅಪ್ಪನ ಸ್ಥಾನದ ಬಗ್ಗೆ ಹೇಗೆ ಅರ್ಥ ಮಾಡಿಸುವುದು. ಈ ಮದುವೆಗೆ ಸಿಹಿ ಗ್ರೀನ್ ಸಿಗ್ನಲ್ ಕೊಡುವಂತೆ ಮಾಡುವುದು ಹೇಗೆ. ಅಲ್ಲದೇ, ಅಪ್ಪನ ಜವಾಬ್ದಾರಿಗಳು ಯಾವುವು. ತಂದೆಯಾದವನು ಹೇಗೆಲ್ಲಾ ಇರಬೇಕು ಎಂದು ವಿಶ್ವ ಚಿಕ್ಕಪ್ಪ ಹಾಗೂ ಸತ್ಯ ಚಿಕ್ಕಪ್ಪನ ಬಳಿ ಪ್ರಶ್ನೆ ರಾಮ ಮಾಡಿದ್ದಾನೆ. ರಾಮ ಪ್ರಶ್ನೆಗಳು ಇಬ್ಬರಲ್ಲೂ ಆಶ್ಚರ್ಯವನ್ನು ಉಂಟು ಮಾಡಿದೆ. ಅಲ್ಲದೇ, ಸೂರಿ ತಾತನ ಬಳಿ ರಾಮ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸಿಹಿಗೆ ತಂದೆಯಾಗುವ ಜವಾಬ್ದಾರಿ ಹೊರಲು ತಯಾರಿ ನಡೆಸುತ್ತಿದ್ದಾನೆ.

ಪ್ರಿಯಾ ತಾಯಿ ಸಿಹಿ ಮನೆಗೆ ಬಂದಾಯ್ತು
ಸೀತಾಳಿಗೆ ಮನೆಗೆ ಬಂದು ಸಿಹಿ ಮಾಯವಾದ ಬಡ್ಡಿ ಬಂಗಾರಮ್ಮನ ಬಗ್ಗೆ ವಿವರವಾಗಿ ಹೇಳುತ್ತಿದ್ದಾಳೆ. ಆದರೆ, ಸೀತಾಳಿಗೆ ಮನೆಗೆ ಬಂದಿದ್ದು ಯಾರು ಎಂದು ಗೆಸ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅಷ್ಟರಲ್ಲಿ ಪ್ರಿಯಾ ಅವರ ತಾಯಿ ಊರಿನಿಂದ ಆಗಮಿಸಿದ್ದಾರೆ. ಪ್ರಿಯಾ ಮತ್ತು ಅಶೋಕ್ ಮದುವೆ ಶೀಘ್ರದಲ್ಲಿಯೇ ನೆರವೇರುವಂತೆ ಕಾಣುತ್ತಿದೆ. ಸೀತಾ ಮನೆಯ ತುಂಬಾ ನೆಂಟರಿದ್ದು, ಸೀತಾಳಿಗೆ ರಾಮ ಜೊತೆ ಮಾತನಾಡಲು ಕೂಡ ಪ್ರೈವೆಸಿ ಇಲ್ಲದಂತಾಗಿದೆ.


Click it and Unblock the Notifications











