SeethaRaama: ಹಠಮಾರಿ ಸಿಹಿ, ಆತಂಕದಲ್ಲಿ ಪ್ರಿಯಾ ; ಕೌತುಕ, ಕುತೂಹಲದ ಗೂಡು ಸೀತಾರಾಮ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತಾ, ರಾಮನನ್ನು ಸರ್ ಎನ್ನದೇ ಇರುವುದು ನಿಜವೇ ಆದರೂ ಕೂಡ ಇನ್ನೂ ರಾಮನಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ. ಹರಾಜ್ ಆದ ಮನೆಯಲ್ಲೇ ಈಗ ಬಾಡಿಗೆಗೆ ಇರಲು ಮಾಲೀಕರು ಒಪ್ಪಿರುವ ಕಾರಣ ಸೀತಾಳಿಗೆ ನೆಮ್ಮದಿ ಸಿಕ್ಕಂತಾಗಿದೆ.

ಇಲ್ಲದೇ ಹೋದರೆ, ಸಿಹಿಗೆ ಅರ್ಥ ಮಾಡಿಸುವುದು ಹೇಗೆ ಎಂಬ ಯೋಚನೆ ಸೀತಾಳದ್ದಾಗಿತ್ತು. ಸದ್ಯ ಅದೇ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಸಿಕ್ಕಿರುವುದರಿಂದ ಸೀತಾ ಖುಷಿಯಾಗಿದ್ದಾಳೆ. ಪ್ರಿಯಾ ಹತ್ತಿರ ಈ ಸಂತಸದ ವಿಚಾಋವನ್ನ ಹಂಚಿಕೊಂಡಿದ್ದಾಳೆ.

 written update on episode 02 February seetha rama serial

ಪ್ರೀತಿಯ ಆತಂಕದಲ್ಲಿ ಪ್ರಿಯಾ

ಆದರೆ, ಪ್ರಿಯಾ ಆತಂಕದಲ್ಲಿದ್ದಾಳೆ. ಹಸಿವು ಎಂದು ಮನೆಗೆ ಬಂದವಳೇ, ಸೀತಾ ಬಳಿ ತಿಂಡಿ ಕೇಳಿದ್ದಾಳೆ. ಪ್ರಿಯಾಳಿಗಾಗಿ ಸೀತಾ ಚಪಾತಿ ಮಾಡಿ ಕೊಟ್ಟಿದ್ದು, ಇದೇ ಮನೆಯಲ್ಲಿ ಸೀತಾ ಬಾಡಿಗೆಗೆ ಇರುವ ಸುದ್ದಿ ಕೇಳಿ ನಿನ್ನದೇನೋ ಸರಿ ಹೋಯ್ತು. ನನ್ನ ಸಮಸ್ಯೆ ಅನ್ನು ಯಾರಿಗೆ ಹೇಳಲಿ ಎಂದು ಗೋಳಾಡಿದ್ದಾಳೆ. ಯಾಕೆಂದರೆ, ಅಶೋಕನ ಪರ್ಸ್ ನಲ್ಲಿ ಪ್ರಿಯಾ ಫೋಟೋ ನೋಡಿದ್ದು, ಆ ಫೋಟೋದಲ್ಲಿ ಅಶೋಕನ ಹೆಗಲ ಮೇಲೆ ಹುಡುಗಿಯೊಬ್ಬಳ ಬಳೆ ಕೈಗಳನ್ನು ಗಮನಿಸಿದ್ದಾಳೆ.

ಆದರೆ, ಹುಡುಗಿಯ ಮುಖ ಕಾಣದ ಕಾರಣ ಈಗ ಪ್ರಿಯಾಳಿಗೆ ಆತಂಕ ಎದುರಾಗಿದೆ. ಆ ಹುಡುಗಿಯ ಕೈ ಯಾರದ್ದಿರಬಹುದು. ಈಗಾಗಲೇ ಅಶೋಕ್ ಬೇರೆಯವರನ್ನು ಪ್ರೀತಿಸುತ್ತಿದ್ದಾನಾ ಎಂಬ ಪ್ರಶ್ನೆ ಪ್ರಿಯಾ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಇದಕ್ಕೆ ಉತ್ತರ ಕಂಡು ಕೊಳ್ಳುವುದು ಹೇಗೆ ಎಂದು ಸೀತಾಳ ಬಳಿ ಪರಿಹಾರ ಕೇಳಿದ್ದಾಳೆ. ಆದರೆ, ಸೀತಾ ಒಂದೇ ಮಾತಿನಲ್ಲಿ ಅಶೋಕ್ ಹೆಸರು ನಿನ್ನ ಹಣೆಯಲ್ಲಿ ಬರೆದಿದ್ದರೆ, ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

ಫ್ರೆಂಡ್ ಗಾಗಿ ಹಠ ಮಾಡಿದ ಸಿಹಿ

ಇತ್ತ ಸೀತಾ ಮನೆಯ ಬಾಗಿಲಲ್ಲಿ ಅಂಟಿಸಿದ್ದ ಬ್ಯಾಂಕ್ ನೋಟೀಸ್ ಅನ್ನು ತೆಗೆಯುವಾಗ ಸಿಹಿಯ ಅರಮನೆ ಚಿತ್ರದ ಪೇಪರ್ ಅನ್ನೂ ತೆಗೆದಿದ್ದಾಳೆ. ಇದನ್ನು ನೋಡಿದ ಸಿಹಿ ಸೀತಾ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ನಾನು ನನ್ನ ಫ್ರೆಂಡ್ ನ ಭೇಟಿ ಮಾಡಲೇ ಬೇಕು ಎಂದು ಹಠ ಮಾಡುತ್ತಾಳೆ. ಕಛೇರಿಗೆ ನಾನು ಬರುತ್ತೀನಿ ಎಂದು ಸಿಹಿಗೆ ಸೀತಾ ಬೈದು ಬುದ್ಧಿ ಹೇಳಲು ಯತ್ನಿಸಿದ್ದಾಳೆ. ಆದರೆ, ಸೀತಾಳ ಸೂಕ್ಷ್ಮ ಮನಸ್ಸನ್ನು ಅರಿಯದ ಪ್ರಿಯಾ, ಸಿಹಿನಾ ತನ್ನ ಆಫೀಸಿಗೆ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟಿದ್ದಾಳೆ.

 written update on episode 02 February seetha rama serial

ಅಂಜಲಿಯನ್ನು ಕಂಡು ಖುಷಿಪಟ್ಟ ಸೂರಿ

ರಾಮ್ ಗೆಳೆಯ ಅಶೋಕ್ ಗೆ ಸರ್ಪ್ರೈಸ್ ಕೊಡಲು ಅವನ ಸಹೋದರಿ ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಂಜಲಿ ತನ್ನ ಮಾತನ್ನು ಕೇಳದೇ ಓದಲು ದೂರ ಹೋಗಿದ್ದಕ್ಕೆ ಅಶೋಕನಿಗೆ ಕೋಪವಿರುತ್ತದೆ. ಆದರೆ, ಅಂಜಲಿ, ರಾಮ ಮತ್ತು ಅಶೋಕ್ ಇಬ್ಬರಿಗೂ ರಾಖಿ ಕಟ್ಟಿ ಮಾತನಾಡಿಸುತ್ತಾಳೆ. ಸೂರಿ ತಾತನೂ ಕೂಡ ಅಂಜಲಿ ಅನ್ನು ಎರಡು ವರ್ಷಗಳ ಬಳಿಕ ನೋಡಿದ್ದಕ್ಕೆ ಖುಷಿ ಪಡುತ್ತಾರೆ. ಇನ್ಮುಂದೆ ನೀನು ಇಲ್ಲೇ ಇರಬೇಕು ಎಂದು ಕೂಡ ಹೇಳುತ್ತಾರೆ.

ಅಂಜಲಿ ತಾಳ್ಮೆ ಪರೀಕ್ಷಿಸುತ್ತಿರುವ ಭಾರ್ಗವಿ

ಆದರೆ, ಭಾರ್ಗವಿಗೆ ಅಂಜಲಿ ಬಂದಿರುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಹೋದವಳು ತಿರುಗಿ ಬಂದಿದ್ದಾಳೆ ಎಂದು ಆಡಿಕೊಳ್ಳುತ್ತಾಳೆ. ಅಲ್ಲದೇ, ಅಂಜಲಿಯನ್ನು ಇದೇ ಮನೆಯಲ್ಲಿ ಇರಲು ಹೇಳುವ ಮೂಲಕ ಭಿಕ್ಷೆ ಬೇಡುತ್ತಿರುವ ಅನಾಥರಿಗೆ ಹೋಲಿಸುತ್ತಾಳೆ. ಅಂಜಲಿಯ ತಾಳ್ಮೆಯನ್ನು ಭಾರ್ಗವಿ ಪರೀಕ್ಷೆ ಮಾಡುತ್ತಿದ್ದಾಳೆ. ಆದರೆ, ಅಂಜಲಿ ಈಗಾಗಲೇ ಪಿಜಿ ಮಾಡಿಕೊಂಡಿದ್ದು, ಅಲ್ಲೇ ಉಳಿದುಕೊಳ್ಳುವುದಾಗಿ ಹೇಳಿದ್ದಾಳೆ. ಇದು ಸೂರಿ ತಾತ ಹಾಗೂ ರಾಮಗೆ ಕೊಂಚವೂ ಇಷ್ಟವಿಲ್ಲ.

More from Filmibeat

English summary
After anjali comes back bhargavi feeling irritated
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X