Seetha Rama ; ಸೀತಾಳನ್ನು ಸಮಾಧಾನ ಮಾಡಿದ ರಾಮ : ಬೇರೆಯೇ ಪ್ಲಾನ್ ಮಾಡಿರುವ ಭಾರ್ಗವಿ..!
ಸೀತಾರಾಮ ಧಾರಾವಾಹಿಯಲ್ಲಿ ಸೂರಿ ತಾತ ಸೀತಾಳಿಗೆ ಹಾಕಿದ ಕಂಡೀಷನ್ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ರಾಮನಿಗಂತೂ ಏನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಸೂರಿ ತಾತ ಬಹಳ ಸಹಜವಾಗಿಯೇ ತಮಗೆ ವಂಶೋದ್ಧಾರಕ ಬೇಕು. ಇದಕ್ಕೆ ಒಪ್ಪಿಗೆ ಇದ್ದರೆ ಮಾತ್ರವೇ ಈ ಮದುವೆ ನಡೆಯಲಿ ಎಂಬುದು ಸೂರಿಯ ಆಜ್ಞೆ. ಆದರೆ, ಇದು ಸೀತಾಳನ್ನು ಅಲ್ಲಾಡಿಸಿದೆ. ಅವಳಿಗೆ ತೀರಾ ಕಷ್ಟವನ್ನು ತಂದೊಡ್ಡಿದಂತಿದೆ. ಸಿಹಿಯನ್ನು ಹೊರತು ಪಡಿಸಿ ಮತ್ತೊಂದು ಮಗುವಿನ ಬಗ್ಗೆ ಎಂದೂ ಯೋಚಿಸದ ಸೀತಾ ಈಗ ಚಿಂತೆಗೀಡಾಗಿದ್ದಾಳೆ.
ಕೋಪ ಮಾಡಿಕೊಂಡ ಸಿಹಿ ಮಾಡಿದ್ದೇನು..?
ಸೂರಿ ತಾತನನ್ನು ಭೇಟಿಯಾದ ಬಳಿಕ ಸೀದಾ ಮನೆಗೆ ಅಳುತ್ತಲೇ ಬರುತ್ತಾಳೆ. ಶ್ರೀರಾಮನ ಬಳಿ ಸೀತಮ್ಮ ಹಾಗೂ ಫ್ರೆಂಡ್ ಮದುವೆ ನಡೆಯಲಿ ಎಂದು ಬೇಡಿಕೊಳ್ಳುತ್ತಿದ್ದ ಸಿಹಿಗೆ ಆಘಾತವಾಗಿದೆ. ಯಾವತ್ತೂ ಕಣ್ಣೀರು ಹಾಕದ ಸೀತಮ್ಮ ಇವತ್ತು ಬಿಕ್ಕಿ ಬಿಕ್ಕಿ ಒಬ್ಬಳೇ ಅಳುತ್ತಿರುವುದನ್ನು ನೋಡಿ ಗಾಬರಿಯಾಗಿದ್ದಾಳೆ. ಫ್ರೆಂಡ್ ಹಾಗೂ ಸೂರಿ ತಾತನ ಮೇಲೆ ಕೋಪ ಮಾಡಿಕೊಂಡ ಸಿಹಿ ಸೂರಿಗೆ ಫೋನ್ ಮಾಡಿದ್ದಾಳೆ. ನನ್ನ ಸೀತಮ್ಮನನ್ನು ನೀವ್ಯಾಕೆ ಅಳಿಸಿದ್ರಿ. ಅಮ್ಮನಿಗೆ ನೋವಾಗುವಂತೆ ನೀವೇನು ಮಾತನಾಡಿದ್ದೀರಾ. ನಿಮ್ಮಿಂದಾಗಿ ನನ್ನ ಸೀತಮ್ಮ ಅಳುತ್ತಿದ್ದಾಳೆ. ನೀವೆಲ್ಲಾ ಬ್ಯಾಡ್. ನಿಮ್ಮನ್ನು ಹಾಗೂ ನನ್ ಫ್ರೆಂಡ್ ರಾಮ್ ನ ತುಂಬಾ ನಂಬಿದ್ದೆ. ನಿಮ್ಮಿಂದ ಅಮ್ಮನಿಗೆ ನೋವಾಗಿದೆ ಎಂದು ಟು ಬಿಟ್ಟು ಫೋನ್ ಇಡುತ್ತಾಳೆ. ರಾಮ್ ಸಮಾಧಾನ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ.

ಬಾಲ ಸುಟ್ಟ ಬೆಕ್ಕಿನಂತಾಗಿದ್ದಾಳೆ ಭಾರ್ಗವಿ
ಇತ್ತ ಭಾರ್ಗವಿಗೆ ಮದುವೆಗೆ ಸೂರಿ ಮಾವ ಒಪ್ಪಿಕೊಂಡಿರುವ ವಿಚಾರ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅದಾಗಲೇ ಒಂದು ಮಗು ಇರು ಹೆಣ್ಣು ಈ ಮನೆಗೆ ವಂಶೋದ್ಧಾರಕನನ್ನು ಕೊಡಬೇಕು. ಅಂದರೆ ನಾವೆಲ್ಲಾ ಏನು. ಈ ಮದುವೆ ಅದು ಹೇಗೆ ನಡೆಯುತ್ತದೆ. ರಾಮ ಬದುಕು ಸರಿಯಾಗಲು ನಾನು ಬಿಡುವುದಿಲ್ಲ ಎಂದು ಕೂಗಾಡುತ್ತಾಳೆ. ರಾಮ ಇಲ್ಲಿದ್ದರೆ ಅಲ್ವಾ ಅವನ ಮದುವೆ, ಅವನನ್ನು ಪ್ಯಾರಿಸ್ ಗೆ ಕಳಿಸುತ್ತೇನೆ ಎಂದು ಚಾಂದಿನಿಗೆ ಫೋನ್ ಮಾಡುತ್ತಾಳೆ. ಬಟ್ಟೆ ಪ್ಯಾಕ್ ಮಾಡಿಕೊಂಡು ರಾಮ ಜೊತೆಗೆ ಪ್ಯಾರಿಸ್ ಗೆ ಹೋಗಿ ಬಾ ಎಂದಿದ್ದಾಳೆ. ಈಗ ರಾಮ್ ಏನು ಮಾಡುತ್ತಾನೋ ಕಾದು ನೋಡಬೇಕಿದೆ.
ಸೀತಾಳಿಗೆ ಸಮಾಧಾನ ಮಾಡಿದ ರಾಮ
ಸೀತಾ ಅಳುತ್ತಿದ್ದಾಳೆ ಎಂಬ ವಿಚಾರವನ್ನು ಕೇಳಿದ ರಾಮ್ ಇರಲಾಗದೇ ವಠಾರಕ್ಕೆ ರಾತ್ರಿ ಹೊತ್ತಲ್ಲೇ ಓಡಿ ಬಂದಿದ್ದಾನೆ. ರಾಮ್ ಬಂದಿದ್ದಕ್ಕೆ ಸಿಹಿ ಕೋಪದಲ್ಲೇ ಇದ್ದು, ಕೂಗಾಡುತ್ತಾಳೆ. ಸೀತಾಳಿಗೆ ರಾಮ್ ಸಮಾಧಾನ ಮಾಡುತ್ತಾನೆ. ನನಗೆ ಸಿಹಿ ಒಬ್ಬಳೇ ಮಗಳು. ಅವಳಷ್ಟೇ ನಮ್ಮ ಬದುಕಿಗೆ ಸಾಕು. ತಾತ ಮಗುವಿನಂತೆ ಅವರ ಮಾತಿಗೆಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಮಾಡುತ್ತಾನೆ. ಸೀತಾಳನ್ನು ನಗಿಸಿದ ಬಳಿಕ ಸಿಹಿ ಕೂಡ ರಾಮ್ ಬಳಿ ಕ್ಷಮೆ ಕೇಳುತ್ತಾಳೆ. ಸಿಹಿ ಬಹಳ ದೊಡ್ಡವಲಂತೆ ಅವರ ತಾಯಿ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಳೆ.

ಅಶೋಕನ ಬಳಿ ಸತ್ಯ ಹೇಳಿದ ಚರಣ್ ಡಿ
ಅಶೋಕ್ ಗೆ ದಾರಿಯಲ್ಲಿ ಚರನ್ ಡಿ ಸಿಗುತ್ತಾನೆ. ನನ್ನನ್ನು ಕ್ಷಮಿಸಿ ನಾನು ಮಾಡಿದ ತಪ್ಪುಗಳನ್ನು ಮರೆತು ನನಗೊಂದು ಕೆಲಸ ಕೊಡಿಸಿ. ನಾನು ಭಾರ್ಗವಿ ಮಾತನ್ನು ನಂಬಿ ಮೋಸ ಹೋದೆ, ಕಂಪನಿಗೆ ದ್ರೋಹ ಬಗೆದೆ. ರುದ್ರಪ್ರತಾಪ್ ನನ್ನು ಜೈಲಿನಿಂದ ಬಿಡಿಸಿದ್ದೇನೆ ಎಂದು ಹೇಳುತ್ತಾನೆ. ಅಶೋಕನಿಗೆ ಚರಣ್ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ.


Click it and Unblock the Notifications











