Seetha Rama ; ಆಸೆ ಈಡೇರಿಸಿಕೊಳ್ಳಲು ಹೋಗಿ ತಾನೇ ಬೀಸಿದ ಬಲೆಗೆ ಸಿಲುಕುತ್ತಾಳಾ ಭಾರ್ಗವಿ..?
ಸೀತಾರಾಮ ಧಾರಾವಾಹಿಯಲ್ಲಿ ರಾಮ ಎಂಥಹದ್ದೇ ಪರಿಸ್ಥಿತಿ ಬಂದರೂ ಸೀತಾ ಹಾಗೂ ಸಿಹಿಯನ್ನು ಬಿಟ್ಟಕೊಡದಿರಲು ತೀರ್ಮಾನಿಸಿದ್ದಾನೆ. ಚರಣ್ ಗೆ ಇದ್ದಕ್ಕಿದ್ದ ಹಾಗೆಯೇ ಜ್ಞಾನೋದಯವಾಗಿದ್ದು, ಅಶೋಕನನ್ನು ಭೇಟಿ ಮಾಡಿ ಎಲ್ಲಾ ಸತ್ಯವನ್ನು ಹೇಳಲು ಮುಂದಾಗಿದ್ದಾನೆ. ತನ್ನ ಉಳಿವಿಗಾಗಿ ಭಾರ್ಗವಿ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾನೆ. ಭಾರ್ಗವಿ ತನ್ನ ಸಹಾಯಕ್ಕೆ ಸರಿಯಾಗಿ ಸ್ಪಂದಿಸದ ಕಾರಣ ಬಣ್ಣವನ್ನೆಲ್ಲಾ ಬಯಲಿಗೆಳೆದಿದ್ದಾನೆ. ಅಶೋಕನಿಗೆ ಈ ಸತ್ಯವೆಲ್ಲಾ ಗೊತ್ತಿದ್ದರೂ ತನಗೇನು ಗೊತ್ತಿಲ್ಲ ಎಂಬಂತೆ ನಡೆದುಕೊಂಡಿದ್ದಾನೆ.
ಅಶೋಕನಿಗೆ ಎಲ್ಲಾ ಸತ್ಯ ಹೇಳಿದ ಚರಣ್
ಭಾರ್ಗವಿ ಅವರು ಕೊಡುತ್ತಿದ್ದ ಹಣಕ್ಕೆ ಆಸೆ ಪಟ್ಟು ಅನ್ನ ಕೊಟ್ಟ ಕಂಪನಿಗೆ ದ್ರೋಹ ಮಾಡಿದೆ. ಅವರು ಹೇಳಿದಂತೆಲ್ಲಾ ಕೇಳಿದೆ. ಬೋನಸ್ ಹಣವನ್ನೆಲ್ಲಾ ಭಾರ್ಗವಿ ಅವರೇ ತೆಗೆದುಕೊಳ್ಳುತ್ತಿದ್ದರು. ಅದೇ ಹಣದಲ್ಲಿ ಕಂಪನಿಯನ್ನು ಕರೀದಿಸುವ ಆಲೋಚನೆ ಅವರದ್ದಾಗಿತ್ತು. ಸೀತಾ ಬೋನಸ್ ಬಗ್ಗೆ ಸತ್ಯ ಹೇಳಿದ್ದಕ್ಕೆ ಅವಳ ಮೇಲೆ ದ್ವೇಷ ಕಾರುತ್ತಿದ್ದಾರೆ. ಅದಕ್ಕಾಗಿಯೇ ರುದ್ರಪ್ರತಾಪ್‌ನ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ. ನಾನೇ ಆತನನ್ನು ಬಿಡುಗಡೆ ಮಾಡಿದ್ದೇನೆ. ರಾಮ ಮತ್ತು ಸೀತಾ ಮದುವೆ ಆಗಬಾರದು ಎಂಬುದು ಭಾರ್ಗವಿ ಪ್ಲಾನ್ ಎಂದು ಹೇಳುತ್ತಾನೆ. ಚರಣ್ ಮಾತನ್ನು ಕೇಳಿದ ಅಶೋಕ್ ಬೈಯುತ್ತಾನೆ. ಹೀಗೆಲ್ಲಾ ಮಾಡಿ ಮತ್ತೆ ನಮ್ಮೆದುರೇ ಬಂದಿದ್ದೀರಾ. ನನ್ನ ಕೈಯ್ಯಲಾದ ಸಹಾಯ ಮಾಡುತ್ತೇನೆ. ಆದರೆ, ಇನ್ಯಾವತ್ತು ಇಂಥಹ ಕೆಲಸವನ್ನು ಮಾಡಬೇಡಿ ಎಂದು ಬುದ್ಧಿ ಹೇಳಿ ಕಳಿಸುತ್ತಾನೆ.

ಸೀತಾಳಿಗಾಗಿ ತ್ಯಾಗ ಮಾಡಿದನಾ ರಾಮ..?
ಇನ್ನು ಸೀತಾಳಿಗಾಗಿ ತನ್ನ ಆಸೆಗಳೆಲ್ಲವನ್ನೂ ರಾಮ ತ್ಯಾಗ ಮಾಡುತ್ತಿದ್ದಾನಾ ಎಂಬ ಅನುಮಾನ ಮೂಡಿದೆ. ಸೀತಾಳಿಗೆ ಸಿಹಿ ಬಿಟ್ಟು ಇನ್ನೊಂದು ಮಗು ಮಾಡಿಕೊಳ್ಳುವ ಆಸೆಯಿಲ್ಲ. ಸೀತಾಳನ್ನು ಮದುವೆ ಆಗುವ ಆಸೆಯಲ್ಲಿ ರಾಮ ತನ್ನ ಮಗು ಅಥವಾ ಮನೆಯ ವಾರಸುದಾರನನ್ನೇ ತ್ಯಾಗ ಮಾಡುತ್ತಿದ್ದಾನಾ ಎಂಬುದನ್ನು ಕಾದು ನೋಡಬೇಕಿದೆ. ತನ್ನಿಂದ ಆಗಲೀ ಅಥವಾ ತನ್ನ ಮನೆಯವರಿಂದ ಆಗಲೀ ಯಾವುದೇ ಕಾರಣಕ್ಕೂ ಸೀತಾ ಮತ್ತು ಸಿಹಿ ಇಬ್ಬರಿಗೂ ನೋವಾಗದಂತೆ ನೋಡಿಕೊಳ್ಳಬೇಕು ಎಂದು ಆಲೋಚಿಸಿದ್ದಾನೆ.

ಆತಂಕದಲ್ಲಿ ರುದ್ರಪ್ರತಾಪ್ ಮಾಡಿದ್ದೇನು..?
ಇತ್ತ ರುದ್ರಪ್ರತಾಪ್ ನ ಆಸೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂಜಲಿಯ ಜೊತೆಗೆ ಸೆಲ್ಫಿ ತೆಗೆಸಿಕೊಂಡಿದ್ದಾಯ್ತು. ಈಗ ಅಂಜಲಿಯನ್ನು ತನ್ನ ಜೊತೆಗೆ ಇಡೀ ರಾತ್ರಿ ಇರು ಎಂದು ಕೇಳಿದ್ದಾನೆ. ಅಷ್ಟರಲ್ಲಿ ಅಶೋಕ್ ಫೋನ್ ಮಾಡಿ ಅಂಜಲಿಯ ಬಳಿ ರುದ್ರಪ್ರತಾಪ್ ಬಗ್ಗೆ ವಿಚಾರಿಸಿದ್ದಾನೆ. ಈ ವಿಚಾರ ತಿಳಿದ ರುದ್ರಪ್ರತಾಪ್ ಭಾರ್ಗವಿಗೆ ಫೋನ್ ಮಾಡಿದ್ದಾನೆ. ತನಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದಾನೆ. ಭಾರ್ಗವಿ ಈಗ ಸಿಹಿಯ ತಂದೆಯ ಬಗ್ಗೆ ಮಾಹಿತಿ ಕೊಟ್ಟರೆ, ಎಲ್ಲಾ ವ್ಯವಸ್ಥೆ ಮಾಡಿಕೊಡುವ ಭರವಸೆ ಕೊಟ್ಟಿದ್ದಾಳೆ.

ತಾನು ಬೀಸಿದ ಬಲೆಗೆ ಸಿಲುಕುತ್ತಾಳಾ ಭಾರ್ಗವಿ
ಭಾರ್ಗವಿ ರಾತ್ರಿ ರುದ್ರಪ್ರತಾಪ್ ಬಳಿ ಮಾತನಾಡುತ್ತಿದ್ದನ್ನು ರಾಮ ಕೇಳಿಸಿಕೊಂಡು ಬಂದಿದ್ದಾನೆ. ಎಲ್ಲಿ ಸಿಕ್ಕಿ ಬೀಳೂತ್ತೇನೋ ಎಂದು ಭಾರ್ಗವಿ ತಲೆ ಸುತ್ತುವಂತೆ ನಟಿಸಿದ್ದಾಳೆ. ವಾಣಿ ಅಕ್ಕನಿಗೆ ಮೋಸ ಮಾಡಲ್ಲ. ರಾಮ ಮದುವೆಯನ್ನು ಆದಷ್ಟು ಬೇಗ ಮಾಡುತ್ತೇನೆ ಎಂದು ಮಾತನಾಡಿದ್ದಾಳೆ. ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಭಾರ್ಗವಿ ಮಾತನಾಡಿದ್ದನ್ನು ಕೇಳಿಸಿಕೊಂಡ ಮನೆಯವರು ರಾಮ ಮದುವೆಯ ಬಗ್ಗೆ ಭಾರ್ಗವಿ ಹೆಚ್ಚು ತಲೆಕೆಡಿಸಿಕೊಂಡಿದ್ದಾಳೆ ಎಂದುಕೊಂಡಿದ್ದಾರೆ. ಆದರೆ, ಭಾರ್ಗವಿ ಸೀತಾಳಿಗೆ ಬಲೆ ಬೀಸಲು ಹೋಗಿ ತಾನೇ ಸಿಕ್ಕಿ ಬೀಳುತ್ತಾಳಾ ಎಂಬ ಅನುಮಾನ ಹೊಸದಾಗಿ ಮೂಡಿದೆ. ಮುಂದೇನಾಗುತ್ತೋ ಎಂಬ ಕುತೂಹಲ ಹೆಚ್ಚಾಗಿದೆ.


Click it and Unblock the Notifications











