Seetha Raama: ರಾಮ್-ಅಶೋಕನ ಅದಲು ಬದಲು ಆಟ ತಿಳಿದ ಭಾರ್ಗವಿ
ಸೀತಾ ರಾಮ ಧಾರಾವಾಹಿಯಲ್ಲಿ ಮದುವೆ ಮುರಿದು ಬಿದ್ದಕ್ಕೆ ರಾಮ್, ಸೀತಾ ಬಳಿ ಕ್ಷಮೆ ಕೇಳುತ್ತಾನೆ. ತಾನೇ ಮದುವೆಗೆ ಒತ್ತಾಯ ಮಾಡಿದೆ ಎನ್ನುತ್ತಾನೆ.
ಮೊದಲೇ ರುದ್ರಪ್ರತಾಪ್ ಬಗ್ಗೆ ಮಾಹಿತಿ ಪಡೆದು ಮದುವೆಗೆ ಮುಂದುವರೆಯಬೇಕಿತ್ತು. ಸಿಹಿಗೆ ಅಪ್ಪ ಸಿಗಲಿ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿಬಿಟ್ಟೆ ಕ್ಷಮಿಸಿ ಎಂದು ಕ್ಷಮೆ ಕೇಳುತ್ತಾನೆ.

ಸೀತಾ ಕೂಡ ಒಳ್ಳೆಯದೇ ಆಯ್ತು. ಸಿಹಿಗೋಸ್ಕರ ಈ ಮದುವೆಗೆ ಒಪ್ಪಿಕೊಂಡೆ, ನನಗೂ ಈ ಮದುವೆ ಬೇಕಿರಲಿಲ್ಲ ಎಂದು ಹೇಳುತ್ತಾಳೆ. ಬಳಿಕ ಮೂವರು ಹೊರಗಡೆ ಸುತ್ತಾಡಿಕೊಂಡು ಬರಲು ಹೋಗುತ್ತಾರೆ.
ಖುಷಿಯಾಗಿರುವ ಸೀತಾ-ಸಿಹಿ
ಮೂವರು ಶುಗರ್ ಲೆಸ್ ಐಸ್ ಕ್ರೀಂ ತಿನ್ನುತ್ತಾ ಖುಷಿಯಾಗಿ ಕಾಲ ಕಳೆಯುತ್ತಾರೆ. ಸಿಹಿ, ರಾಮ್ ಮ್ಯಾಜಿಕ್‌ಗೆ ಫಿದಾ ಆಗಿರುತ್ತಾಳೆ. ಇನ್ನು ವಠಾರದವರು ಕೂಡ ರಾಮ್ ಮಾಡಿದ ಸಾಹಸಕ್ಕೆ ಆಶ್ಚರ್ಯ ಪಟ್ಟಿದ್ದು, ಅವನಿಂದ ನಮ್ಮ ವಠಾರ ಉಳಿಯಿತು ಎಂದು ನೆಮ್ಮದಿಯಾಗಿರುತ್ತಾರೆ. ಇದರ ಜೊತೆಗೆ ಸೀತಾ ಆಫಿಸಿಗೆ ಖುಷಿಯಿಂದ ಹೊರಟಿದ್ದನ್ನು ನೋಡಿ, ರಾಮ್ ಮತ್ತು ಸೀತಾ ಇಷ್ಟಪಡುತ್ತಿರಬೇಕು. ಅದಕ್ಕೆ ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಈ ಮಾತನ್ನು ಕೇಳಿಸಿಕೊಂಡ ಅಜ್ಜಿ ಸೀದಾ ಪತಿ ಬಳಿ ಹೋಗಿ ರಾಮ್‌ಗೂ ಸೀತಾಳಿಗೆ ಮದುವೆ ಮಾಡಿಸಬಹುದಲ್ವಾ? ಎಂದು ಮಾತನಾಡಿಕೊಳ್ಳುತ್ತಾರೆ.
ಹುಡುಗಿ ಪರಿಚಯಿಸುವೆ ಎಂದ ರಾಮ್
ಇನ್ನು ಸೀತಾ, ರಾಮ್‌ಗೆ ನಿಮ್ಮ ಹುಡುಗಿಯನ್ನು ಪರಿಚಯ ಮಾಡಿಸಿ ಎಂದು ಕೇಳುತ್ತಾಳೆ. ಅದಕ್ಕೆ ರಾಮ್ ಸ್ವಲ್ಪವೂ ಯೋಚಿಸದೇ ಸರಿ ನಾಳೆ ಪರಿಚಯ ಮಾಡಿಸುವುದಾಗಿ ಹೇಳುತ್ತಾನೆ. ಸೀತಾ, ರಾಮ್ ಹುಡುಗಿ ಯಾರೆಂದು ನೋಡಲು ಕುತೂಹಲಗೊಂಡಿದ್ದಾಳೆ. ಆದರೆ, ರಾಮ್ ಏನು ಮಾಡುತ್ತಾನೋ ಗೊತ್ತಿಲ್ಲ. ಇತ್ತ ಸೀತಾ ಆಫಿಸಿಗೆ ಬಂದಾಗ ಎಲ್ಲರೂ ಶಾಕ್ ಆಗುತ್ತಾರೆ. ಮದುವೆ ನಿಂತರೂ ಯೋಚಿಸದೇ, ಬೇಸರವಿಲ್ಲದೇ ಆಫಿಸಿಗೆ ಬಂದಿದ್ದಕ್ಕೆ ಆಶ್ಚರ್ಯ ಪಡುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ಭಾರ್ಗವಿ ಕೂಡ ಆಫಿಸಿಗೆ ಬರುತ್ತಾಳೆ. ಸೀತಾಳನ್ನು ಕಂಡು ಆಶ್ಚರ್ಯ ಪಡುತ್ತಾಳೆ.

ಆಫೀಸ್ ರಹಸ್ಯ ತಿಳಿದ ಭಾರ್ಗವಿ
ಚರಣ್ ಡಿ ಬಳಿ ಆಫಿಸಿನ ಬಗ್ಗೆ ಮಾಹಿತಿ ಪಡೆಯಲು ಹೋದಾಗ, ಬಾಸ್ ಬರೊಲ್ಲ ಎಂದ ಹೇಳಿದ್ದಿರಿ, ಆದರೆ, ಬಾಸ್ ಆಫಿಸಿಗೆ ಬಂದಿದ್ದಾರೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಭಾರ್ಗವಿಗೆ ಶಾಕ್ ಆಗುತ್ತದೆ. ರಾಮ್ ಹೈದರಾಬಾದ್‌ಗೆ ಹೋಗಿಲ್ವಾ ಎಂದು ಕೇಳಿದ್ದಕ್ಕೆ, ಅವನೊಬ್ಬ ವೇಸ್ಟ್ ಫೆಲೋ ಎನ್ನುತ್ತಾನೆ. ಕೋಪ ಮಾಡಿಕೊಂಡ ಭಾರ್ಗವಿ, ಚರಣ್ ಡಿ ಕಪಾಳಕ್ಕೆ ಬಾರಿಸುತ್ತಾಳೆ. ದೇಸಾಯಿ ಕುಟುಂಬದವರ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದಾಗ ಬಾಸ್ ಅಶೋಕ್ ಅವರ ಬಗ್ಗೆ ಮಾತನಾಡಲಿಲ್ಲ ಎನ್ನುತ್ತಾನೆ. ಆಗ ಭಾರ್ಗವಿಗೆ ರಾಮ್ ಮತ್ತು ಅಶೋಕನ ಅದಲು ಬದಲು ಆಟ ಅರ್ಥವಾಗುತ್ತದೆ.
ರಾಮ್ ಮುಂದಿನ ನಡೆ ಏನು..?
ಅಶೋಕ್‌ಗೆ ಭಾರ್ಗವಿ ಚಿಕ್ಕಿಗೆ ಎಲ್ಲಾ ಸತ್ಯ ತಿಳಿಯಿತು ಎಂದು ಗೊತ್ತಾಗುತ್ತದೆ. ಹೈದರಾಬಾದ್‌ನಲ್ಲಿ ರಾಮ್‌ಗೆ ಅವಾರ್ಡ್ ಕೊಟ್ಟಿರುತ್ತಾರೆ. ಇದನ್ನು ಕೇಳಿ ಮನೆಯವರೆಲ್ಲಾ ಖುಷಿಯಿಂದ ಇದ್ದರೆ, ಭಾರ್ಗವಿ ಮಾತ್ರ ಕೋಪದಲ್ಲಿರುತ್ತಾಳೆ. ಭಾರ್ಗವಿಗೆ ಆಫಿಸಿನಲ್ಲಿ ನಡೆಯುತ್ತಿರುವ ಆಟಗಳು ಗೊತ್ತಾಗಿದೆ ಎಂಬುದು ಅವಳ ಪತಿಗೂ ತಿಳಿಯುತ್ತದೆ.
ಭಾರ್ಗವಿ ವ್ಯಂಗ್ಯ
ರಾಮ್ ಕೋರ್ಟ್ ಬಿಚ್ಚಲು ಕಷ್ಟಪಡುತ್ತಿದ್ದಾಗ ಭಾರ್ಗವಿ ಬೇಕಂತಲೇ ಅಶೋಕ್ ಫ್ರೆಂಡ್‌ಗೆ ಸಹಾಯ ಮಾಡು. ಹೇಗಿದ್ದರೂ, ಕೋರ್ಟ್ ಬಿಚ್ಚುವುದು ನಿನಗೆ ಸುಲಭವಾಗಿ ಬರುತ್ತದೆ ಎಂದು ಆಡಿಕೊಳ್ಳುತ್ತಾಳೆ. ಈಗ ರಾಮ್, ಸೀತಾ ವಿಚಾರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











