Seetha Rama ; ಸೀತಾ ಬಯಸಿದ ಸೀರೆಗೆ ಕಿತ್ತಾಟ : ಸಿಹಿ ಮನದಲ್ಲಿದೆ ಒಂದು ಆತಂಕ..!
ಸೀತಾರಾಮ ಧಾರಾವಾಹಿಯಲ್ಲಿ ಈಗಾಗಲೇ ಸೀತಾ ಹಾಗೂ ರಾಮ ಲವ್ ಸ್ಟೋರಿ ಶುರುವಾಗಿದೆ. ಇಬ್ಬರೂ ಕೂಡ ಸದಾ ಒಟ್ಟಿಗೆ ಇರಲು ಬಯಸುತ್ತಿದ್ದಾರೆ.
ರಾಮ ಅವಕಾಶ ಸಿಕ್ಕಾಗಲೆಲ್ಲಾ ಸೀತಾಳನ್ನು ನೋಡಲು ಬರುತ್ತಾನೆ. ಸೀತಾ ಕೂಡ ಈಗ ರಾಮ ಜೊತೆಗೆ ಚಾಟ್ ಮಾಡುವುದು, ವಾಯ್ಸ್ ಮೆಸೇಜ್ ಮಾಡುತ್ತಿರುತ್ತಾಳೆ. ಸೀತಾ ಮನೆಗೆ ನೆಂಟರು ಬಂದಿದ್ದು, ಈಗ ಸೀತಾಳಿಗೆ ಮನೆಯಲ್ಲಿ ಕೆಲಸ ಜಾಸ್ತಿಯಾಗಿದೆ. ಅಲ್ಲದೇ, ಪಾಯಸ, ಬಿಸಿಬೇಳೆ ಬಾತ್ ಸೇರಿದಂತೆ ಬಗೆ ಬಗೆಯ ಅಡುಗೆಯನ್ನು ಮಾಡಿದ್ದಾಳೆ.

ಸೀತಾ ಕಳಿಸಿದ ಊಟ ಸವಿದ ರಾಮ
ಸೀತಾ ಮಾಡಿರುವ ಅಡುಗೆ ಬಗ್ಗೆ ತಿಳಿದ ರಾಮಗೆ ಅದನ್ನೆಲ್ಲಾ ಸವಿಯುವ ಆಸೆಯಾಗಿದೆ. ಸೀತಾ ಕೂಡ ಪ್ರಿಯಾ ಸಹಾಯ ಪಡೆದು, ರಾಮಗೆ ಸೊಪ್ಪಿನ ಪಲ್ಯ, ಪಾಯಸ, ಬಿಸಿಬೇಳೆ ಬಾತ್ ಸೇರಿದಂತೆ ಮಾಡಿರುವ ಅಡುಗೆಯನ್ನೆಲ್ಲಾ ಕಳಿಸಿದ್ದಾಳೆ. ಸೀತಾ ಮಾಡಿದ ಅಡುಗೆಯನ್ನು ರಾಮ ಸವಿದಿದ್ದು, ಅವಳಿಗೂ ಏನಾದರೂ ಕೊಡಬೇಕು ಎಂದು ಕಾಫಿ ಮಾಡಿಕೊಂಡು ಹೋಗಿದ್ದಾನೆ. ತನ್ನ ಕಾರಿನ ಡಿಕ್ಕಿಯಲ್ಲೇ ಕಾಫಿ ಟೇಬಲ್ ಅರೇಂಜ್ ಮಾಡಿ, ನನ್ನ ನಿಮ್ಮ ಕಾಫಿ ಡೇಟ್ ಎಂದು ಹೇಳಿ ಕಾಫಿ ಕೊಟ್ಟಿದ್ದಾನೆ. ರಾಮ ಕೊಟ್ಟ ಸರ್ಪ್ರೈಸ್ ಸೀತಾಳಿಗೆ ಇಷ್ಟವಾಗಿದೆ.
ಮದುವೆ ಎಂದರೆ ಗಾಬರಿಯಾಗುವ ಸಿಹಿ
ರಾಮ ನನ್ನು ಅಪ್ಪ ಎಂದು ಸಿಹಿ ಒಪ್ಪಿಕೊಳ್ಳುತ್ತಿಲ್ಲ ಎಂಬ ಸತ್ಯ ಪ್ರಿಯಾಳಿಗೂ ಗೊತ್ತಾಗಿದೆ. ಸಮಯ ಕಳೆಯುತ್ತಾ ಸಿಹಿ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ನೀನೇನು ಚಿಂತಿಸಬೇಡ ಎಂದು ಸಮಾಧಾನ ಮಾಡುತ್ತಾಳೆ. ಪ್ರಿಯಾ ಬಾಯಲ್ಲಿ ಮದುವೆ ವಿಚಾರ ಕೇಳಿದ ಕೂಡಲೇ ಸಿಹಿ ತುಂಬಾ ಡಲ್ ಆಗಿ ಬಿಡುತ್ತಾಳೆ. ಇದನ್ನು ಗಮನಿಸಿದ ಸೀತಾಳಿಗೆ ಏನು ಮಾಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಆದರೆ ಸಿಹಿಗೆ, ರಾಮ ಬೆಸ್ಟ್ ಫ್ರೆಂಡ್ ಆಗಿದ್ದು, ಆತನನ್ನು ಬಿಟ್ಟು ಕೊಡಲು ಕೂಡ ಇಷ್ಟವಿಲ್ಲ. ಆದರೆ, ಸೀತಾ ಹಾಗೂ ರಾಮ ಸಿಹಿನ ಹೇಗೆ ಅರ್ಥ ಮಾಡಿಸುತ್ತಾರೆ ಎಂಬುದು ಗೊತ್ತಿಲ್ಲ.

ಪ್ರಿಯಾ ಮದುವೆ ಶಾಪಿಂಗ್
ಇನ್ನು ಪ್ರಿಯಾ ಮದುವೆ ಶಾಫಿಂಗ್ ಗೆ ಹೊರಟಿದ್ದು, ಸಿಹಿನ ಕೂಡ ಕರೆದುಕೊಂಡು ಹೋಗಲು ಮುಂದಾಗುತ್ತಾಳೆ. ಸೀತಾಳನ್ನು ರಾಮ ಶಾಪಿಂಗ್ ಗೆ ಕರೆಯುತ್ತಾನೆ. ಆದರೆ, ಚಾಂದಿನಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾಳೆ. ಇದು ಅಶೋಕನಿಗೆ ಸ್ವಲ್ಪವೂ ಇಷ್ಟವಿಲ್ಲ. ಆದರೆ, ಭಾರ್ಗವಿಯೇ ಚಾಂದಿನಿಗೆ ಎಲ್ಲಾ ಜವಾಬ್ದಾರಿಯನ್ನು ನೀಡಿರುವುದಕ್ಕೆ ಏನೂ ಮಾತನಾಡಲಾಗದೇ ಸುಮ್ಮನಿದ್ದಾನೆ. ವಿಶ್ವ ಚಿಕ್ಕಪ್ಪನಿಗೆ ಚಾಂದಿನಿ ತಾನು ಮತ್ತು ರಾಮ ಎಕ್ಸ್ ಲವರ್ಸ್ ಎಂದು ಹೇಳುತ್ತಾಳೆ.

ಸಿಹಿಗೆ ಕಾಡುತ್ತಿರುವ ಆತಂಕವೇನು..?
ಇನ್ನು ಶಾಪಿಂಗ್ ಮಾಡುವಾಗ ಸಿಹಿಗೂ ಚಾಂದಿನಿ ರಾಮ ಪ್ರೀತಿ ವಿಚಾರ ಗೊತ್ತಾಗುತ್ತದೆ. ಅಷ್ಟೇ ಅಲ್ಲದೇ, ಸಿಹಿಗೆ ಚಾಂದಿನಿ ಮೇಲೆ ಒಂದು ರೀತಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾಳೆ. ಪ್ರಿಯಾ ಮದುವೆಗೆಂದು ಸೀತಾ ಸೀರೆಯನ್ನು ಆರಿಸಿಕೊಳ್ಳುತ್ತಾಳೆ. ಸೀತಾ ಬಯಸಿದ ಸೀರೆಯನ್ನೇ ಚಾಂದಿನಿ ತನಗೂ ಬೇಕು ಎಂದು ಹೇಳುತ್ತಾಳೆ. ಆದರೆ, ಸಿಹಿ ಇದು ಸೀತಮ್ಮನೇ ತಗೋಬೇಕು ಎಂದು ಹಠ ಮಾಡುತ್ತಾಳೆ. ಸಿಹಿಯನ್ನು ಸಮಾಧಾನ ಮಾಡಲು ಅಶೋಕ್ ಮತ್ತು ಪ್ರಿಯಾ ಇಬ್ಬರೂ ಅವಳಿಗೆ ಫ್ರಾಕ್ ಕೊಡಿಸಲು ಹೋಗುತ್ತಾರೆ. ಆಗ ಸಿಹಿ ನಿಮಗೆ ಮದುವೆ ಆದ ಮೇಲೆ ಮಗು ಯಾವಾಗ ಆಗುತ್ತೆ..? ಆ ಮಗುನಾ ನೀವು ಬಿಟ್ಟು ಹೋಗುತ್ತೀರಾ ಎಂದು ಅಶೋಕ್ ನನ್ನು ಪ್ರಶ್ನೆ ಮಾಡುತ್ತಾಳೆ. ಈ ಪ್ರಶ್ನೆ ಕೇಳಿದ ಕೂಡಲೇ ಅಶೋಕ್ ಹಾಗೂ ಪ್ರಿಯಾಳಿಗೆ ಶಾಕ್ ಆಗುತ್ತದೆ.


Click it and Unblock the Notifications











