Seetha Rama ; ಸೀತಾಳನ್ನು ಕಾಡಿದ ಅನಾಮಿಕ ಮೆಸೇಜ್ : ಎರಡನೇ ಸಂಬಂಧ ಎಂದು ಗಾಬರಿಯಾದ ಸೂರಿ..!
ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ಮತ್ತು ಪ್ರಿಯಾ ಮದುವೆಗೆ ಶಾಪಿಂಗ್ ಮಾಡಲಾಗುತ್ತಿದೆ. ಈ ವೇಳೆ ಸೀತಾಳಿಗೆ ,ಚಾಂದಿನಿಗೆ ಬಹಳ ಬೇಸರವಾಗಿದೆ. ಸಿಹಿಗೆ ಮದುವೆ, ಅಪ್ಪ, ಗಂಡ-ಹೆಂಡತಿ ಎಂಬ ವಿಚಾರಗಳಲ್ಲಿ ಒಂದಷ್ಟು ಅನುಮಾನ ಹಾಗೂ ಕುತೂಹಲಗಳಿವೆ. ಅಶೋಕ್ ಮತ್ತು ಪ್ರಿಯಾಳನ್ನು ಪ್ರಶ್ನೆ ಕೂಡ ಮಾಡುತ್ತಾಳೆ. ಅಶು ಅಂಕಲ್ ಬಳಿ ಮಗು ಆದ ಮೇಲೆ ನೀವು ಪ್ರಿಯಾ ಆಂಟಿ ನ ಬಿಟ್ಟು ಹೋಗುತ್ತೀರಾ ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿದ್ದಕ್ಕೆ ಇಬ್ಬರೂ ಶಾಕ್ ಆಗುತ್ತಾರೆ.
ಸಿಹಿ ಮಾತಿಗೆ ಬೆಚ್ಚಿದ ಅಶೋಕ-ಪ್ರಿಯಾ..!
ಅದಕ್ಕೆ ಯಾಕೆ ಹಾಗೆ ಕೇಳುತ್ತೀಯಾ ಸಿಹಿ. ಪ್ರಿಯಾ ಆಂಟಿಗೆ ಪಾಪು ಆದ ಮೇಲೆ ಮಗು ಮತ್ತು ಪ್ರಿಯಾ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಹೇಳುತ್ತಾನೆ. ಪ್ರಿಯಾನ ಇನ್ನೂ ಇಷ್ಟ ಪಡುತ್ತೀನಿ. ನೀನು ಯಾಕೆ ಹೀಗೆ ಕೇಳ್ತಿದ್ದೀಯಾ ಎಂದು ಕೇಳುತ್ತಾನೆ. ಆಗ ಸಿಹಿ ಅಪ್ಪಂದಿರೇ ಹಾಗೆ ಅಲ್ವಾ ಎಂದು ಹೇಳುತ್ತಾಳೆ. ಆಗ ಅಶೋಕ್ ಅಪ್ಪ ಹಾಗೆಲ್ಲಾ ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ. ಸಿಹಿ ಮನದಲ್ಲಿ ಅಪ್ಪನ ಬಗ್ಗೆ ಇರುವ ಭಾವನೆ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಶೋಕ್ ಹಾಗೂ ಪ್ರಿಯಾ ಜೋಡಿಯನ್ನು ನೋಡಿ ಸೀತಾ ಮತ್ತು ರಾಮ ಮದುವೆಗೆ ಸಿಹಿ ಒಪ್ಪಿದರೂ ಒಪ್ಪಬಹುದು.

ಚಾಂದಿನಿ ಎಂದರೆ ಸಿಹಿಗೆ ಹೊಟ್ಟೆ ಉರಿ..!
ಇನ್ನು ರಾಮ್ ಜೊತೆಗೆ ಕ್ಲೋಸ್ ಆಗಿ ಮಾತನಾಡಲು ಚಾಂದಿನಿ ಪ್ರಯತ್ನಿಸುತ್ತಿರುತ್ತಾಳೆ. ಇದನ್ನು ಗಮನಿಸುವ ಸಿಹಿಗೆ ಇಷ್ಟವಾಗುವುದಿಲ್ಲ. ಅಶೋಕ್-ಪ್ರಿಯಾ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದ ಬಗ್ಗೆ ರಾಮ ಬಳಿ ಚಾಂದಿನಿ ಮಾತನಾಡುತ್ತಿರುತ್ತಾಳೆ. ಇವರಿಬ್ಬರೂ ಮಾತನಾಡುವುದನ್ನೇ ಗಮನಿಸುವ ಸಿಹಿ ಬೇಕಂತಲೇ ಬಂದು ಡಿಸ್ಟರ್ಬ್ ಮಾಡಲು ಯತ್ನಿಸುತ್ತಾಳೆ. ಸಾಧ್ಯವಾಗುವುದಿಲ್ಲ. ಆಗ ಬೇಕಂತಲೇ ಐಸ್ ಕ್ರೀಂನ ಚಾಂದಿನಿ ಬಟ್ಟೆಗೆ ಮೆತ್ತಿ ಅವಳನ್ನು ಅಲ್ಲಿಂದ ಕಳಿಸುತ್ತಾಳೆ. ರಾಮನನ್ನ ಅಪ್ಪಿಕೊಂಡು ಖುಷಿಯಾಗಿರುತ್ತಾಳೆ. ರಾಮ್ ಮೇಲೆ ಪೊಸೆಸಿವ್ ಸಿಹಿಗೆ ಇದ್ದು, ಯಾರಿಗೂ ಬಿಟ್ಟುಕೊಡಲು ಇಷ್ಟಪಡುವುದಿಲ್ಲ.

ಅನಾಮಿಕ ಮೆಸೇಜ್ ಗೆ ಬೆಚ್ಚಿದ ಸೀತಾ..!
ಇತ್ತ ಶಾಪಿಂಗ್ ಮುಗಿದ ಬಳಿಕ ಪ್ರಿಯಾ ಮತ್ತು ಅಶೋಕ್ ತಾಳಿ ತರಲು ಹೊರಡುತ್ತಾರೆ. ಚಾಂದಿನಿ ಮತ್ತು ವಿಶ್ವ ಚಿಕ್ಕಪ್ಪ ಮನೆಗೆ ಹೋಗುತ್ತಾರೆ. ಸೀತಾ, ಸಿಹಿ ಮತ್ತು ರಾಮ ಮನೆಗೆ ಹೊರಡುತ್ತಾರೆ. ಆಗ ಸೀತಾ ಮೊಬೈಲ್ ಗೆ ಅನಾಮಿಕ ಮೆಸೇಜ್ ಒಂದು ಬರುತ್ತದೆ. ಅದನ್ನು ಓದುವ ಸೀತಾಳಿಗೆ ಶಾಕ್ ಆಗುತ್ತದೆ. ಅಷ್ಟು ಸುಲಭಕ್ಕೆ ಎಲ್ಲ ಮರೆತು ಇಷ್ಟೊಂದು ಮುಂದುವರದಿದೀಯ. ಅದು ಹೇಗೆ ನಿನ್ನ ಇತಿಹಾಸನ ಮರೆತು ಬಿಟ್ಟೆ ಸೀತಾ ಎಂದು ಮೆಸೆಜ್ ನಲ್ಲಿ ಬರೆದಿರುತ್ತದೆ. ಇದನ್ನು ನೋಡಿದ ಕೂಡಲೇ ಸೀತಾ ತಲೆ ತಿರುಗಿ ಬೀಳುತ್ತಾಳೆ. ಸೀತಾಳನ್ನು ಜೋಪಾನ ಮಾಡಿ ರಾಮ ಮನೆಗೆ ಕರೆದುಕೊಂಡು ಬರುತ್ತಾನೆ. ಸೀತಾಳನ್ನು ರಾಮ ಹುಷಾರಾಗಿ ನೋಡಿಕೊಳ್ಳುವುದನ್ನು ಸಿಹಿ ಗಮನಿಸುತ್ತಾಳೆ. ಇನ್ನು ಮೆಸೇಜ್ ಬಗ್ಗೆ ತಿಳಿದ ರಾಮ, ಸೀತಾಳಿಗೆ ಧೈರ್ಯ ಹೇಳುತ್ತಾನೆ. ಅಲ್ಲದೇ, ಆ ನಂಬರ್ ಗೆ ಕರೆ ಮಾಡಿ ಮಾತನಾಡಿ. ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ನಾನು ನಿನ್ನ ಜೊತೆಗೆ ಇದ್ದೀನಿ ಎಂದು ಹೇಳುತ್ತಾನೆ. ಆ ಮೆಸೇಜ್ ಬಂದಿರುವುದಂತೂ ಭಾರ್ಗವಿ ಕಡೆಯಿಂದಲೇ ಆದರೆ, ಯಾರು ಎಂಬುದನ್ನು ಕಾದು ನೋಡಬೇಕಿದೆ.

ಮತ್ತೆ ಸೂರಿ ತಾತನಿಗೆ ಆರೋಗ್ಯ ಸಮಸ್ಯೆ..!
ಇತ್ತ ಭಾರ್ಗವಿ ಬೇಕಂತಲೇ ಡಿವೋರ್ಸ್ ಆಗಿ ಒಂದು ಮಗು ಇರುವ ಸಂಬಂಧವನ್ನು ಸಾಧನಾ ಮೂಲಕ ಸೂರಿ ತಾತನಿಗೆ ತೋರಿಸುತ್ತಾಳೆ. ಸೂರಿ ತಾತ ಕೋಪ ಮಾಡಿಕೊಂಡು ನನ್ನ ಮೊಮ್ಮಗ ರಾಮ ಗೆ ಎರಡನೇ ಸಂಬಂಧ ಬೇಡ ಎಂದು ಹೇಳುತ್ತಾರೆ. ಅಲ್ಲದೇ, ಬಿಪಿ ಏರುಪೇರಾಗಿ ಆರೋಗ್ಯ ಸಮಸ್ಯೆ ಇಮ್ಮಡಿಸುತ್ತದೆ. ಈ ವಿಚಾರವನ್ನು ರಾಮಗೆ ಭಾರ್ಗವಿ ತಿಳಿಸುತ್ತಾಳೆ.


Click it and Unblock the Notifications











