Seetha Rama ; ಸೀತಾಗೆ ಕಾಟ ಕೊಡಲು ಶುರು ಮಾಡಿದ ಚಾಂದಿನಿ ; ಸಿಹಿಗೆ ಸಿಗುತ್ತಾ ರಾಮನ ಮನೆ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮಗೆ ಅಪಘಾತವಾಗಿದೆ. ಸದ್ಯ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾನೆ. ಅಂಜಲಿ ರಾಮನನ್ನು ನೋಡಿಕೊಳ್ಳುತ್ತಿದ್ದಾಳೆ. ಆಕ್ಸಿಡೆಂಟ್ ನಿಂದಾಗಿ ರಾಮಗೆ ಮಾತನಾಡಲು ಆಗುತ್ತಿಲ್ಲ. ಆದರೂ ಕೂಡ ಆಗಾಗ ರಾಮ ಸೀತಾಳಿಗೆ ವೀಡಿಯೋ ಕಾಲ್ ಮಾಡಿ ಸಿಹಿ ಜೊತೆಗೆ ಮಾತನಾಡುತ್ತಿದ್ದಾನೆ. ರಾಮ ಸಿಹಿ ಗೆ ನೀಡುವ ಪ್ಲೈನ್ ಕಿಸ್ ನ ಸಿಹಿ ಸೀತಾಳಿಗೆ ನೀಡಿದ್ದಾಳೆ. ಇದು ಸೀತಾಳಿಗೆ ಮುಜುಗರವುಂಟು ಮಾಡಿದೆ. ಇನ್ನು ಸಿಹಿ ರಾಮ ನನ್ನು ನೋಡಲು ಹೋಗೋಣ ಎಂದು ಸೀತಾ ಬಳಿ ಕೇಳಿದ್ದಾಳೆ.

ಸ್ಕೂಲ್ ಬಿಟ್ಟು ಹೊರಟ ಸಿಹಿ

ಸೀತಾ ಮನೆಗೆ ಹೋಗಿ ರಾಮನನ್ನು ನೋಡುವುದು ಸರಿಯಲ್ಲ. ಅವರು ಎಷ್ಟೇ ಆದರೂ ನನಗೆ ಬಾಸ್ ಎಂದು ಹೇಳಿದ್ದಾಳೆ. ಆದರೆ, ಸಿಹಿ ಮನಸ್ಸು ಫ್ರೆಂಡ್ ನನ್ನು ನೋಡಲೇಬೇಕು ಎಂದು ಹಠ ಮಾಡಿದೆ. ಹೀಗಾಗಿ ತನ್ನ ಹುಂಡಿಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ, ಸ್ಕೂಲ್ ಗೆ ಹೋಗುವ ಬದಲು ರಾಮ ಮನೆಯನ್ನು ಹುಡುಕುತ್ತಿದ್ದಾಳೆ. ಅಡ್ರೆಸ್ ತಿಳಿಯದೇ ರಸ್ತೆಯಲ್ಲಿ ಓಡಾಡುತ್ತಿರುವವರನ್ನೆಲ್ಲ ವಿಚಾರಿಸುತ್ತಿದ್ದಾಳೆ.

written update on episode 05 March seetha rama serial

ರಾಮ್ ಗೆ ಆಫೀಸಿಗೆ ಹೋಗುವ ಕಾತುರ

ರಾಮ ಸ್ವಲ್ಪ ಸ್ವಲ್ಪವೇ ನಡೆದಾಡುತ್ತಿದ್ದು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ, ರಾಮ ಸೀತಾಳಿಗೋಸ್ಕರವಾದರೂ ಆಫೀಸಿಗೆ ಹೋಗಬೇಕು ಎಂದು ಕಾತುರಗೊಂಡಿದ್ದಾನೆ. ಆದರೆ, ರಾಮ ಆಫೀಸಿಗೆ ಹೋಗಲು ಅಶೋಕ್ ಬಿಡುತ್ತಿಲ್ಲ.

ಆಗ ಸೂರಿ ತಾತ ಹುಷಾರಾದ ಮೇಲೆ ಆಫೀಸಿನಲ್ಲಿ ನಿನಗೆ ಒಂದು ಸರ್ಪ್ರೈಸ್ ಇದೆ ಎನ್ನುತ್ತಾರೆ. ಸೀತಾ ಜೊತೆಗೆ ತಾತ ಮಾತನಾಡಿದ್ದಾರೆ. ಆದರೆ, ಏನೇನು ಮಾತನಾಡಿದರು ಎಂಬುದು ಗೊತ್ತಿಲ್ಲ ಎಂದು ಅಶೋಕ್ ರಾಮಗೆ ಹೇಳ್ತಾನೆ. ರಾಮ ಈಗ ಸೀತಾ ಜೊತೆಗೆ ತಾತ ಏನು ಮಾತನಾಡಿರಬಹುದು ಎಂದು ಯೋಚಿಸುತ್ತಿದ್ದಾನೆ.

written update on episode 05 March seetha rama serial

ಸೀತಾಳಿಗೆ ಅವಮಾನಿಸಿದ ಚಾಂದಿನಿ

ಇತ್ತ ಚಾಂದಿನಿ ಸೀತಾಳಿಗೆ ತನ್ನನ್ನು ಮ್ಯಾಮ್ ಎಂದು ಕರೆಯಬೇಕು ಎಂದು ಅವಾಜ್ ಹಾಕುತ್ತಾಳೆ. ಅಲ್ಲದೇ, ಬ್ರೇಕ್ ಫಾಸ್ಟ್ ಬುಕ್ ಮಾಡಿ ನನ್ನ ಟೇಬಲ್ ನಲ್ಲಿ ತಂದಿಡು ಎಂದು ಆರ್ಡರ್ ಮಾಡುತ್ತಾಳೆ. ಸೀತಾ ಮರೆತು ಬಿಡುತ್ತಾಳೆ. ಚಾಂದಿನಿಗೆ ಕೋಪ ಬಂದು ಸೀತಾಳನ್ನು ಬೈಯುತ್ತಾಳೆ. ಆಫೀಸ್ ಬಾಯ್ ಗೆ ಹೇಳಿ ಸ್ಯಾಂಡ್ ವಿಚ್ ತರಿಸುತ್ತಾಳೆ.

ಸೀತಾ ಬೇಸರವಾಗಿ ಕುಳಿತಿರುತ್ತಾಳೆ. ಆಗ ಪ್ರಿಯಾ ಬಂದು ಏನಾಯ್ತು ಎಂದು ವಿಚಾರಿಸುತ್ತಾಳೆ. ಸೀತಾ ನಡೆದ ವಿಚಾರವನ್ನು ಹೇಳಿ, ರಾಮ ನನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ. ರಾಮ ನೀವು ತುಂಬಾ ಒಳ್ಳೆಯವರು. ನೀವು ಹತ್ತಿರವಿದ್ದಾಗ ನಿಮ್ಮ ಬೆಲೆ ಅರ್ಥವಾಗಲಿಲ್ಲ. ಆದರೆ, ಈಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮನದಲ್ಲಿ ಸ್ಮರಿಸಿಕೊಳ್ಳುತ್ತಿರುತ್ತಾಳೆ.

written update on episode 05 March seetha rama serial

ಚಾಂದಿನಿಗೆ ಶೇಪ್ ಔಟ್

ಇನ್ನು ಪ್ರಿಯಾ ಬೇಕಂತಲೇ ಸ್ಯಾಂಡ್ ವಿಚ್ ಗೆ ಚಿಲ್ಲಿ ಸಾಸ್ ಹಾಕಿ ಕೊಡುತ್ತಾಳೆ. ಚಾಂದಿಗೆ ಮೊದಲೇ ತುಂಬಾ ಹೊಟ್ಟೆ ಹಸಿದುಕೊಂಡಿರುತ್ತಾಳೆ. ಸ್ಯಾಂಡ್ ವಿಚ್ ತಿಂದು ಖಾರವಾಗುತ್ತದೆ. ಕೋಪದಲ್ಲಿ ಆಫೀಸ್ ಬಾಯ್ ನನ್ನು ಕರೆಯುವ ಚಾಂದಿನಿ ಸ್ಯಾಂಡ್ ವಿಚ್ ಎಸೆದು ಕೆನ್ನೆಗೆ ಹೊಡೆದು ಅವಮಾನಿಸುತ್ತಾಳೆ.

ಇದನ್ನೆಲ್ಲಾ ಪ್ರಿಯಾ ಬೇಕಂತಲೇ ವೀಡಿಯೋ ಮಾಡುತ್ತಾಳೆ. ಬಳಿಕ ಪ್ರಿಯಾ ಸ್ಯಾಂಡ್ ವಿಚ್ ಗೆ ಚಿಲ್ಲಿ ಸಾಸ್ ಹಾಕಿದ್ದು ತಾನೇ ಎಂದು ಹೇಳುತ್ತಾಳೆ. ಅಲ್ಲದೇ, ಚಾಂದಿನಿ ತಪ್ಪನ್ನು ಎಲ್ಲರ ಮುಂದೆ ಹೇಳಿ ಅವಮಾನ ಮಾಡಿದ್ದಾಳೆ. ಇನ್ಮುಂದೆ ಚಾಂದಿನಿ ಆಟ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
chandini scolds Seetha where priya makes shape out foe chandini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X