Seetha Raama: ರಾಮ್-ಸೀತಾ ಮಧ್ಯೆ ಬತ್ತಿ ಇಟ್ಟ ಭಾರ್ಗವಿ: ಸಿಹಿಯಿಂದ ಫ್ರೆಂಡ್ ದೂರಾಗುತ್ತಾನಾ..?

By ಪ್ರಿಯಾ ದೊರೆ

ಸೀತಾ ರಾಮ ಧಾರಾವಾಹಿಯಲ್ಲಿ ರಾಮನಿಗೆ ಬೆಸ್ಟ್ ಬಿಸಿನೆಸ್ ಐಕಾನ್ ಅವಾರ್ಡ್ ಸಿಕ್ಕಿದೆ. ಇದೇ ಖುಷಿಯಲ್ಲಿ ರಾಮನ ಮನೆಯವರು ಸಂಭ್ರಮಿಸುತ್ತಿದ್ದಾರೆ.

ಅಶೋಕನಿಗೆ ರಾಮ ತನ್ನ ಪ್ರೀತಿಯ ವಿಚಾರವನ್ನು ಸೀತಾ ಬಳಿ ಹೇಳಿಕೊಂಡು ಇಬ್ಬರೂ ಮದುವೆಯಾಗಿ ಸುಖವಾಗಿರಬೇಕು ಎನ್ನುವುದೊಂದೇ ಯೋಚನೆಯಾಗಿದೆ.

ಇತ್ತ ಸಿಹಿಗೆ ಫೈಟಿಂಗ್ ಮತ್ತು ಮದುವೆ ಮನೆಯಲ್ಲಾದ ಸಮಸ್ಯೆಗಳು ಕನಸಾಗಿ ಬಂದಿದ್ದು, ನಿದ್ರೆಯಲ್ಲಿ ಸೀತಮ್ಮ ನನ್ನ ಬಿಟ್ಟು ಹೋಗಬೇಡ ಎಂದು ಕನವರಿಸಿದ್ದಾಳೆ.

 written update on episode 05th January seetha raama serial

ರಾಮ್‌ನನ್ನು ಊಟಕ್ಕೆ ಕರೆದ ಸೀತಾ

ಸೀತಾ ರಾತ್ರಿ ಎಲ್ಲಾ ರಾಮ್ ಬಗ್ಗೆ ಯೋಚಿಸುತ್ತಿರುತ್ತಾಳೆ. ಥ್ಯಾಂಕ್ಸ್ ಹೇಳಬೇಕು ಎಂದು ಮುಂದಾಗುತ್ತಾಳೆ. ಬೇಡ ಬೆಳಗ್ಗೆ ಫೋನ್ ಮಾಡೋಣ ಎಂದುಕೊಂಡು ಸುಮ್ಮನಾಗುತ್ತಾಳೆ. ಅತ್ತ ರಾಮ್ ಕೂಡ ರಾತ್ರಿ ಪೂರ್ತಿ ಸೀತಾ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಬೆಳಗೆದ್ದ ಮೇಲೆ ಸೀತಾ, ರಾಮ್‌ಗೆ ಫೋನ್ ಮಾಡುತ್ತಾಳೆ. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನನ್ನ ಮತ್ತು ಸಿಹಿಗೆ ಅಪಾಯ ಬಂದಾಗಲೆಲ್ಲಾ ನೀವು ನಮ್ಮ ಕಷ್ಟವನ್ನೆಲ್ಲಾ ದೂರ ಮಾಡುತ್ತೀರಾ. ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಾಳೆ. ಆದರೆ ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ಯಾಕೆಂದರೆ, ರಾಮ್ ಫೋನ್ ಅನ್ನು ಭಾರ್ಗವಿ ರಿಸೀವ್ ಮಾಡಿರುತ್ತಾಳೆ.

ಸೀತಾಳಿಗೆ ಸತ್ಯ ಹೇಳಲು ರಾಮ್ ಆಲೋಚನೆ

ಇತ್ತ ರಾಮ್ ಖುಷಿಯಲ್ಲಿ ಸ್ವಿಮ್ಮಿಂಗ್ ಮಾಡುತ್ತಿರುತ್ತಾನೆ. ಅಶೋಕನಿಗೆ ಇವತ್ತು ಸೀತಾ ಬಳಿ ತನ್ನ ಬಗ್ಗೆ ಎಲ್ಲಾ ಸತ್ಯವನ್ನು ಹೇಳುವುದಾಗಿ ತಿಳಿಸುತ್ತಾನೆ. ಇದರಿಂದ ಅಶೋಕ ಫುಲ್ ಖುಷಿಯಾಗುತ್ತಾನೆ. ಈ ದಿನಕ್ಕೋಸ್ಕರ ಕಾಯುತ್ತಿದ್ದೆ. ಆದಷ್ಟು ಬೇಗ ಸತ್ಯ ಹೇಳಿ, ಇಬ್ಬರೂ ಮದುವೆಯಾಗಿ ಎಂದು ಖುಷಿ ಖುಷಿಯಲ್ಲಿ ಮಾತನಾಡುತ್ತಿರುತ್ತಾರೆ. ರಾಮ್ ಮತ್ತು ಅಶೋಕ್ ಮಾತನಾಡುವುದನ್ನು ಭಾರ್ಗವಿ ಕೇಳಿಸಿಕೊಳ್ಳುತ್ತಿರುತ್ತಾಳೆ.

 written update on episode 05th January seetha raama serial

ರಾಮ್ ವಿರುದ್ಧ ಭಾರ್ಗವಿ ಪ್ಲಾನ್

ಫ್ರೆಂಡ್ ಎಂದರೆ, ಸೀತಾ. ರಾಮ್ ಮತ್ತು ಸೀತಾ ಇಬ್ಬರೂ ಬಹಳ ಕ್ಲೋಸ್ ಇದ್ದಾರೆ. ಆದರೆ, ಸೀತಾಳಿಗೆ ಸುಳ್ಳು ಹೇಳುವುದು ಎಂದರೆ ಇಷ್ಟವಿಲ್ಲ ಎಂಬುದನ್ನು ತಿಳಿದ ಭಾರ್ಗವಿ, ರಾಮ್ ವಿರುದ್ಧ ದೊಡ್ಡ ಪ್ಲಾನ್ ಮಾಡುತ್ತಾಳೆ. ತಕ್ಷಣವೇ ಭಾರ್ಗವಿ ನ್ಯೂಸ್ ಚಾನೆಲ್‌ಗಳಿಗೆ ಫೋನ್ ಮಾಡುತ್ತಾಳೆ. ರಾಮ್‌ಗೆ ಬಿಸಿನೆಸ್ ಐಕಾನ್ ಅವಾರ್ಡ್ ಬಂದ ಸುದ್ದಿ ಹೇಳಿ. ಇದನ್ನು ಈ ಕೂಡಲೇ ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲೂ ಪ್ರಸಾರ ಮಾಡಬೇಕು ಎಂದು ರಾಮ್ ಅವಾರ್ಡ್ ಪಡೆದ ವೀಡಿಯೋಗಳನ್ನು ಕಳಿಸುತ್ತಾಳೆ.

ಸೀತಾಳಿಗೆ ಶಾಕ್ ಕೊಟ್ಟ ಸುದ್ದಿ

ತರಕಾರಿ ತರಲೆಂದು ಮಾರ್ಕೆಟ್‌ಗೆ ಹೋಗಿರುವ ಸೀತಾ, ಅಂಗಡಿಯಲ್ಲಿ ಪ್ರಸಾರವಾಗುತ್ತಿದ್ದ ರಾಮ್ ವೀಡಿಯೋವನ್ನು ನೋಡುತ್ತಾಳೆ. ಮನೆಯಲ್ಲೂ ಅಜ್ಜಿ ತಾತ, ಸಿಹಿ, ಪ್ರಿಯಾ ಎಲ್ಲರೂ ಈ ಸುದ್ದಿ ನೋಡುತ್ತಾರೆ. ಎಲ್ಲರಿಗೂ ರಾಮ್ ದೇಸಾಯಿ ಕುಟುಂಬದ ಕುಡಿ, ಅವನೇ ಕಂಪನಿಯ ಬಾಸ್ ಎಂಬುದು ಗೊತ್ತಾಗುತ್ತದೆ. ಸೀತಾಳಿಗೂ ಈ ಸತ್ಯ ತಿಳಿದು ಬಹಳ ದೊಡ್ಡ ಶಾಕ್ ಆಗುತ್ತದೆ.

ಭಾರೀ ಕುತೂಹಲ

ಸಿಹಿ ಅಂತೂ ಫ್ರೆಂಡ್ ಅನ್ನು ಬಿಟ್ಟುಕೊಡುವುದಿಲ್ಲ ಎಂಬ ಒಂದೇ ಭರವಸೆ ಉಳಿದಿದ್ದು, ರಾಮ್ ತನ್ನ ಬಳಿ ಹೇಳಿರುವ ದೊಡ್ಡ ಸುಳ್ಳನ್ನು ಸೀತಾ ಅರಗಿಸಿಕೊಳ್ಳುತ್ತಾಳಾ..? ಇಲ್ಲವೇ ರಾಮ್‌ನನ್ನು ತನ್ನ ಬದುಕಿನಿಂದಲೇ ದೂರ ಇಡುತ್ತಾಳಾ? ಎಂಬ ಕುತೂಹಲ ಒಂದು ಕಡೆಯಾದರೆ, ಭಾರ್ಗವಿ ಮಾಡಿರುವ ಪ್ಲಾನ್ ರಾಮ್‌ಗೆ ಲಕ್ ಆಗಿ ಬದಲಾಗುತ್ತಾ..? ಇಲ್ಲ ಚಿಕ್ಕಿಯ ಹಾವು-ಏಣಿ ಆಟದಲ್ಲಿ ರಾಮ್ ಸಿಕ್ಕಿ ಬೀಳುತ್ತಾನಾ? ಗೊತ್ತಾಗುತ್ತಿಲ್ಲ.

More from Filmibeat

English summary
Seetha Raama serial today update. Bhargavi planned to destroy ram and seethe friendship;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X