ಸಿಹಿ ಬೇಡಿಕೆ ಈಡೇರಿಸುತ್ತಾನಾ ರಾಮ ; ಹೇಳಿದ್ದೇನು ಸೀತಾ..?
ಸೀತಾರಾಮ ಧಾರಾವಾಹಿಯಲ್ಲಿ ಅಶೋಕನ ತಂಗಿ ಅಂಜಲಿ ಭಾರ್ಗವಿ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ತಾನು ಪಿಜಿಯಲ್ಲಿರುವುದಾಗಿ ಹೇಳಿ ಹೊರಟಿದ್ದಾಳೆ. ಆದರೆ, ಅಶೋಕ ರಾಮನಿಗೋಸ್ಕರ ಎಂತಹ ಅವಮಾನವನ್ನಾದರೂ ಸಹಿಸಿಕೊಳ್ಳಲು ತಯಾರಾಗಿದ್ದಾನೆ. ರಾಮ್ ಅಶೋಕನಿಗೆ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಇದನ್ನು ತಿಳಿದ ಭಾರ್ಗವಿ ಹೊಟ್ಟೆ ಉರಿಯುತ್ತಿದ್ದು, ಅಶೋಕ್ ನೆಮ್ಮದಿಯಾಗಿರಬಾರದು ಎಂದು ಭಾವಿಸಿ ಮನೆಯ ಬೀಗ ತೆಗೆದುಕೊಂಡು ಸಾಧನಾಳನ್ನು ಕರೆದುಕೊಂಡು ಹೋಗಿದ್ದಾಳೆ.
ಮನೆಯಲ್ಲಿ ಹುಳಿ ಹಿಂಡಿದ ಭಾರ್ಗವಿ
ಅಶೋಕನ ಹೊಸ ಮನೆಯ ತುಂಬೆಲ್ಲಾ ತನ್ನ ಕುಟುಂಬದ ಫೋಟೋಗಳನ್ನು ಹಾಕಿದ್ದಾಳೆ. ಅಶೋಕ ಜೀವನ ಪೂರ್ತಿ ನಮ್ಮ ಋಣದಲ್ಲೇ ಇರಬೇಕು ಎಂದು ಹೀಗೆ ಮಾಡಿದ್ದಾಳೆ. ಈ ಬಗ್ಗೆ ಸಾಧನಾ ಬರೀ ನಮ್ಮ ಮನೆಯ ಫೋಟೋಗಳ್ಯಾಕೆ, ಅಶೋಕ್ ಮತ್ತು ಅಂಜಲಿ ಫೋಟೋ ಕೂಡ ಹಾಕೋಣವಾ ಎಂದು ಕೇಳುತ್ತಾಳೆ. ಆಗ ಭಾರ್ಗವಿ ಸುಮ್ಮನಿರದೇ, ನೀನು ಆ ಮನೆಯ ಸೊಸೆ ಆದರೆ, ನಿನ್ನ ಸ್ಥಾನವೇನು. ನಿನಗೆ ಇಷ್ಟು ದೊಡ್ಡ ಉಡುಗೊರೆ ಸಿಕ್ಕಿದ್ಯಾ..? ಅಶೋಕ ಅನಾಥ ಅವನನ್ನು ಮನೆಗೆ ಕರೆದುಕೊಂಡು ಬಂದು ಓದಿಸಿದ್ದಲ್ಲದೇ, ನಮ್ಮದೇ ಕಂಪನಿಯಲ್ಲಿ ಕೆಲಸವನ್ನೂ ಕೊಟ್ಟಿದ್ದೀವಿ, ಈಗ ಈ ಮನೆ ಎಂದು ಸಾಧನಾಳಿಗೆ ನೀನು ಅಡುಗೆ ಮನೆಯಲ್ಲೇ ಇರು ಎಂಬಂತೆ ಆ ಮನೆಯ ಆಳಿನಂತೆ ಎಂದು ಹೇಳುತ್ತಾಳೆ. ಭಾರ್ಗವಿ ಮಾತುಗಳನ್ನು ಕೇಳಿದ ಸಾಧನಾಳಿಗೆ ನೋವಾಗುತ್ತದೆ.

ಕಿಡ್ನ್ಯಾಪ್ ಆಗಿದ್ದ ಸಿಹಿ ಸಿಕ್ಕಿದ್ದಾಳೆ
ಇತ್ತ ಸಿಹಿ ಖುಷಿ ಖುಷಿಯಿಂದ ರಾಮ್ ನನ್ನು ನೋಡಲು ಆಫೀಸಿಗೆ ಬಂದಿದ್ದಾಳೆ. ದಾರಿಯಲ್ಲಿ ಬರುವಾಗಲೇ ಗಂಡಾಂತರವೊಂದು ಎದುರಾಗುತ್ತದೆ. ಬೈಕ್ ನಲ್ಲಿ ಬಂದ ವ್ಯಕ್ತಿ ಸಿಹಿ ಹಾಗೂ ಸೀತಾಳಿಗೆ ಡಿಕ್ಕಿ ಆಗುವಂತೆ ಸ್ಪೀಡ್ ಆಗಿ ಹೋಗಿದ್ದಾನೆ. ಸೀತಾ ಮತ್ತು ಸಿಹಿ ಸ್ವಲ್ಪದರಲ್ಲೇ ಜಸ್ಟ್ ಮಿಸ್ ಆಗಿದ್ದಾರೆ. ಇನ್ನು ಆಫಿಸಿಗೆ ಬಂದ ಬಳಿಕ ರಾಮ್ ಸಿಹಿಯನ್ನು ಎತ್ತಿಕೊಂಡಾಗ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಬಂದು ರಾಮ್ ಕೈಗೆ ಚಾಕುವಿನಲ್ಲಿ ಗಾಯ ಮಾಡಿ ಓಡಿ ಹೋಗುತ್ತಾನೆ. ರಾಮ್ ಕಡೆಗೆ ಎಲ್ಲರ ಗಮನ ಹೋದಾಗ ಮತ್ತೊಬ್ಬ ವ್ಯಕ್ತಿಯೊಬ್ಬ ಬಂದು ಸಿಹಿ ಅನ್ನು ಕಿಡ್ನ್ಯಾಪ್ ಮಾಡುತ್ತಾನೆ. ಸ್ವಲ್ಪ ಸಮಯದ ಬಳಿಕ ಸಿಹಿಯನ್ನು ವಾಪಸ್ ಕರೆದುಕೊಂಡು ಬಂದು ಬಿಡುತ್ತಾರೆ.
ರಾಮನನ್ನು ಒಪ್ಪಿಕೊಂಡ ಸೀತಾ
ಇದೆಲ್ಲವೂ ಸೀತಾ, ರಾಮ ಗೆ ಗಾಬರಿಯನ್ನು ಹುಟ್ಟು ಹಾಕುತ್ತದೆ. ಸಿಸಿಟಿವಿಯಲ್ಲಿ ಬೈಕ್ ಬಗ್ಗೆ ಪತ್ತೆ ಹಚ್ಚಿ ಯಾಕೆ ಹೀಗೆ ಮಾಡಿದರು ಎಂಬುದನ್ನು ತಿಳಿದುಕೊಳ್ಳುವುದಾಗಿ ರಾಮ ಸೀತಾಳಿಗೆ ಹೇಳುತ್ತಾನೆ. ಇನ್ನು ಸಿಹಿ ರಾಮ ಗೆ ಅರಮನೆ ಡ್ರಾಯಿಂಗ್ ನೀಡುತ್ತಾಳೆ. ಸೀತಾಳಿಗೆ ರಾಮ ಜೊತೆಗೆ ಮಾತನಾಡುವಂತೆ ಹೇಳುತ್ತಾಳೆ. ಸೀತಾ ಇದಕ್ಕೆ ಒಪ್ಪಿದ್ದು, ರಾಮ ಹೊರಗಡೆ ಮಾತ್ರವೇ ಸ್ನೇಹಿತ. ಆಫೀಸಿನಲ್ಲಿ ಇರುವಾಗ ಬಾಸ್ ಎಂದು ಹೇಳುತ್ತಾಳೆ. ಈ ಕಾರಣಕ್ಕೆ ರಾಮನಿಗೆ ಫುಲ್ ಖುಷಿಯಾಗುತ್ತದೆ. ಸೀತಾ ತನ್ನನ್ನು ಫ್ರೆಂಡ್ ಆಗಿ ಒಪ್ಪಿದ್ದಕ್ಕೆ ಮುಂದಿನ ದಾರಿ ಸುಲಭವಾಯ್ತು ಎಂದು ಅಶೋಕ್ ಮತ್ತು ರಾಮ್ ಖುಷಿಯಾಗುತ್ತಾರೆ.

ಫ್ರೆಂಡ್ ರಾಮ ಬಗ್ಗೆ ಬೇಡಿಕೆಗಳನ್ನಿಟ್ಟ ಸಿಹಿ
ಸಿಹಿ ಅಶೋಕ್ ಜೊತೆಗೆ ಸೀಕ್ರೆಟ್ ಆಗಿ ಮಾತನಾಡಲು ಹೋಗುತ್ತಾಳೆ. ಅಶೋಕ್ ಬಳಿ ನನ್ನ ಬಳಿ ಲಿಸ್ಟ್ ಇದೆ. ಅದೆಲ್ಲಾ ಕೆಲಸವೂ ಆಗಬೇಕು ಎನ್ನುತ್ತಾಳೆ. ಅಶೋಕ್ ಕೂಡ ಸಿಹಿ ಜೊತೆಗೆ ಮಗುವಿನಂತೆ ಅವಳ ಮಾತುಗಳನ್ನು ಕೇಳುತ್ತಾನೆ. ಸಿಹಿ, ಫ್ರೆಂಡ್ ಮತ್ತೆ ಮೊದಲಿನಂತೆ ಮನೆಗೆ ಬರಬೇಕು. ಸೀತಮ್ಮ , ರಾಮ್ ಇಬ್ಬರೂ ಒಂದಾಗಬೇಕು, ನಾವು ಮೂವರೂ ಕೂಡ ಹೊರಗಡೆ ಸುತ್ತಾಡಲು ಹೋಗಬೇಕು, ಫ್ರೆಂಡ್ ನನಗೆ ಪ್ಯಾಲೆಸ್ ಮಾಡಿಕೊಡಬೇಕು, ಹೆಲಿಕಾಪ್ಟರ್ ನಲ್ಲಿ ಹೋಗಬೇಕು ಎಂದೆಲ್ಲಾ ತನ್ನ ಬೇಡಿಕೆಯನ್ನು ಇಡುತ್ತಾಳೆ.


Click it and Unblock the Notifications











