ಕಂಠಿ ಹಾರಕ್ಕಾಗಿ ಹಪ ಹಪಿಸಿದ ಭಾರ್ಗವಿ ; ರಾಮ ಪ್ರೀತಿಗೆ ಅಡ್ಡವಾಗುತ್ತಾ ಫಾರಿನ್ ಪ್ರವಾಸ..?
ಸೀತಾರಾಮ ಧಾರಾವಾಹಿಯಲ್ಲಿ ರುದ್ರ ಪ್ರತಾಪ್ ಗೆ ಈಗ ಅಶೋಕ್ ಹಾಗೂ ರಾಮ ಹುಡುಕುತ್ತಿದ್ದಾರೆ ಎಂಬ ಸತ್ಯ ತಿಳಿದಿದೆ. ಹೀಗಾಗಿ ಭಯಗೊಂಡಿದ್ದಾನೆ. ಭಾರ್ಗವಿ ರುದ್ರ ಪ್ರತಾಪ್ ಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾಳೆ. ರುದ್ರ ಪ್ರತಾಪ್ ಗೆ ಸೀತಾಳ ಗಂಡ ಯಾರು, ಸಿಹಿ ಮಗುವಿನ ತಾಯಿ ಯಾರು ಎಂದು ತಿಳಿದುಕೊಳ್ಳುವಂತೆ ಹೇಳಿದ್ದಾಳೆ. ರುದ್ರ ಪ್ರತಾಪ್ ಅಲ್ಲದೇ, ಚರಣ್ ಡಿ ಗೂ ಸಿಹಿ ತಂದೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತೆ ಹೇಳಿದ್ದಾಳೆ. ಈ ಮೂಲಕ ರಾಮ್ ಮದುವೆಯನ್ನು ಹಾಳು ಮಾಡಲು ಹೊರಟಿದ್ದಾಳೆ.
ರೂಮ್ ಖಾಲಿ ಮಾಡಿದ ಆರ್ ಪಿ
ಅಂಜಲಿಗೂ ಹೇಳದೇ ರುದ್ರ ಪ್ರತಾಪ್ ರೂಮ್ ಖಾಲಿ ಮಾಡಿದ್ದಾನೆ. ಅಂಜಲಿ ಆಸ್ಪತ್ರೆಗೆ ಬಂದು ರುದ್ರಪ್ರತಾಪ್ ನ ಹುಡುಕಾಡಿದ್ದಾಳೆ. ಆದರೆ ಎಲ್ಲೂ ಕಾಣಿಸಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಮೆಸೇಜ್ ಗೂ ರೆಸ್ಪಾನ್ಸ್ ಮಾಡುತ್ತಿಲ್ಲ. ಇದರಿಂದ ಅಂಜಲಿ ಗಾಬರಿಯಾಗಿದ್ದಾಳೆ. ಚರಣ್ ಡಿ ಉಳಿದುಕೊಂಡಿರುವ ಜಾಗದಲ್ಲೇ ರುದ್ರ ಪ್ರತಾಪ್ ಕೂಡ ಉಳಿದುಕೊಳ್ಳಬೇಕಿದೆ. ಇದರಿಂದ ಇಬ್ಬರೂ ಒಬ್ಬರ ಮೇಲೆ ಒಬ್ಬರು ಅನುಮಾನ ಪಟ್ಟಿದ್ದಾರೆ.

ಭಾರ್ಗವಿಗೆ ನಂಬಿಕೆ ಇಲ್ಲದೇ ಇಬ್ಬರನ್ನು ಒಬ್ಬರ ಮೇಲೊಬ್ಬರು ಕಾವಲಿರಲಿ ಎಂದು ಕಳಿಸಿದ್ದಾರೆ ಎಂದುಕೊಂಡಿದ್ದಾರೆ. ಇನ್ನು ರುದ್ರ ಪ್ರತಾಪ್ ಸೀತಾ ಅತ್ತಿಗೆಗೆ ಫೋನ್ ಮಾಡಿ ಸೀತಾ ಗಂಡ ಯಾರು ಎಂದು ಕೇಳಿದ್ದಾನೆ. ಅದಕ್ಕೆ ಅವಳು ಜೋರು ಮಾಡಿದ್ದಾಳೆ. ಶ್ರೀರಾಮ್ ದೇಸಾಯಿನೇ ಸೀತಾ ಗಂಡ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾಳೆ. ಇದರಿಂದ ರುದ್ರ ಪ್ರತಾಪ್ ಕೋಪ ಮಾಡಿಕೊಂಡು ಬೈದು ಫೋನ್ ಇಡುತ್ತಾನೆ.
ರಾಮ ತಂದೆ ತಾಯಿ ಹೆಸರಲ್ಲಿ ಪೂಜೆ
ಇತ್ತ ರಾಮ ಮನೆಯಲ್ಲಿ ಭಾರ್ಗವಿ ಬೇಕಂತಲೇ ರಾಮ ತಂದೆ ತಾಯಿ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾಳೆ. ಮನೆಯಲ್ಲಿ ಹೋಮ ನಡೆಯಲ್ಲಿ ಸೀತಾ ಮನೆಯವರೂ ಬರಲಿ ಎಂದು ಹೇಳಿದ್ದಾಳೆ. ಅಲ್ಲದೇ, ರಾಮ ಬಳಿ ಮದುವೆಯಾದ ಮೇಲೆ ಎಲ್ಲವೂ ಬದಲಾಗುತ್ತದೆ. ಮಗು ಸಹಜವಾಗಿಯೇ ಆಗುತ್ತದೆ. ಅದಕ್ಕೆಲ್ಲಾ ಚಿಂತೆ ಮಾಡಿಕೊಳ್ಳುವ ಬದಲು ಸುಮ್ಮನೆ ಮುಂದುವರೆಯಿರಿ. ಇದಕ್ಕೆಲ್ಲಾ ಯೋಚನೆ ಮಾಡಿಕೊಂಡಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಹೇಳುತ್ತಾರೆ.

ಸತ್ಯ ತಿಳಿದ ಅಶೋಕನಿಗೆ ಅನುಮಾನ
ಇನ್ನು ಚರಣ್ ಡಿ ಅಶೋಕನಿಗೆ ಫೋನ್ ಮಾಡಿದ್ದಾನೆ. ರಾಮನನ್ನು ಫಾರಿನ್ ಗೆ ಕಳಿಸಲು ಭಾರ್ಗವಿ ಪ್ಲಾನ್ ಮಾಡಿದ್ದಾರೆ. ರಾಮ ಹೋದ ಬಳಿಕ ಸೀತಾಳಿಗೆ ತೊಂದರೆ ಮಾಡಬಹುದು ಎಂದು ಹೇಳಿ ಫೋನ್ ಇಡುತ್ತಾನೆ. ಇದರಿಂದ ಅಶೋಕನಿಗೆ ಗಡಿಬಿಡಿ ಆಗುತ್ತದೆ. ರಾಮಗೆ ಕಾಲ್ ಮಾಡಿ ನೀನೇನಾದರೂ ಫಾರಿನ್ ಬಿಸಿನೆಸ್ ಟೂರ್ ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ಆದರೆ ರಾಮ ಇಲ್ಲ ಎಂದು ಹೇಳುತ್ತಾನೆ. ಅಶೋಕನಿಗೆ ಸತ್ಯ ಹೇಳುವುದು ಹೇಗೆ ಎಂಬುದು ಗೊತ್ತಾಗದೇ ಒದ್ದಾಡುತ್ತಾನೆ.
ಕಂಠಿ ಹಾರಕ್ಕಾಗಿ ಭಾರ್ಗವಿ ಕಣ್ಣೀರು
ಪೂಜೆ ಹಿನ್ನೆಲೆ ಸೂರಿ ವಾಣಿಗೆ ಸೇರಿದ ಒಡವೆಯನ್ನು ತೆಗೆದುಕೊಂಡು ಹೋಗಿ ಪೂಜೆಗೆ ಇಡುವಂತೆ ಹೇಳುತ್ತಾನೆ. ಭಾರ್ಗವಿ ಕಂಠಿ ಹಾರವನ್ನು ನೋಡಿ ಕಣ್ಣೀರು ಹಾಕುತ್ತಾಳೆ. ಇದು ನನಗೆ ದಕ್ಕ ಬೇಕಾದ ಒಡವೆ ಆದರೆ, ವಾಣಿ ಬಂದು ಕಿತ್ತುಕೊಂಡಳು. ಈಗ ಸೀತಾಳಿಗೆ ಇದನ್ನು ನಾನು ಕೊಡಬೇಕಂತೆ ಎಂದು ವಿಶ್ವನ ಬಳಿ ಹೇಳುತ್ತಾ ಅಳುತ್ತಾಳೆ. ಇದನ್ನು ನಾನೇ ದಕ್ಕಿಸಿಕೊಳ್ಳುತ್ತೇನೆ. ಯಾರನ್ನೂ ನಂಬುವುದಿಲ್ಲ. ನನಗೆ ಬೇಕಾದ್ದನ್ನೆಲ್ಲಾ ನಾನೇ ಪಡೆದುಕೊಳ್ಳುತ್ತೇನೆ ಎಂದು ಕಿರುಚಾಡುತ್ತಾಳೆ. ಸೀತಾ ರಾಮನ ಮದುವೆಗೆ ಇನ್ನೂ ಏನೇನು ಸಂಕಷ್ಟಗಳು ಎದುರಾಗುತ್ತದೋ ಕಾದು ನೋಡಬೇಕಿದೆ.


Click it and Unblock the Notifications











