Seetha Raama: ಸೀತಾಳನ್ನು ಮದುವೆಗೆ ಒಪ್ಪಿಸಿದ ರಾಮ : ಸಿಹಿಗೆ ಲಾಯರ್ ತಂದೆಯಾಗುತ್ತಾನಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮ್, ಸೀತಾಳನ್ನು ಲಾಯರ್‌ಗೆ ಬಿಟ್ಟು ಕೊಡಲು ತಯಾರಾಗಿದ್ದಾನೆ. ತಾನೊಬ್ಬ ದೊಡ್ಡ ತ್ಯಾಗಮಯಿ ಅಂದುಕೊಂಡಿದ್ದು ಸೀತಾ ಬಳಿ ಮದುವೆಯ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗಿದ್ದಾನೆ.

ಸೀತಾ ಇತ್ತೀಚೆಗೆ ಬಹಳ ಬ್ಯುಸಿಯಾಗಿದ್ದಾಳೆ. ಆಫೀಸ್ ಕೆಲಸ ಮುಗಿಸಿದ ಬಳಿಕ ರಾಮ್ ಫೋನ್ ಕಾಲ್‌ಗೆ ರೆಸ್ಪಾನ್ಸ್ ಮಾಡಲು ಕೂಡ ಅವಳಿಗೆ ಸಮಯವಿಲ್ಲ.

Written update on episode 07th December seetha raama serial

ಸಿಹಿ ಹಾಗೂ ತನ್ನನ್ನು ತಾನು ನೋಡಿಕೊಳ್ಳಲು ಸಂಬಳ ಸಾಲುತ್ತಿಲ್ಲ. ಹಾಗಾಗಿ ಸಿಹಿ ಇನ್ಮುಂದೆ ಪಾರ್ಟ್ ಟೈಂ ಕೆಲಸಕ್ಕೆ ಹೋಗಲು ತೀರ್ಮಾನಿಸಿದ್ದಾಳೆ.

ಪಾರ್ಟ್ ಟೈಂ ಕೆಲಸಕ್ಕೆ ಸೇರಿದ ಸೀತಾ

ಈಗ ಪಾರ್ಟ್ ಟೈಂ ಕೆಲಸ ಹುಡುಕುತ್ತಿರುವ ಸೀತಾಳಿಗೆ ಆಶ್ಚರ್ಯವೆಂಬಂತೆ ಲಾಯರ್ ರುದ್ರಪ್ರತಾಪ್ ಆಫಿಸಿನಲ್ಲೇ ಕೆಲಸ ಸಿಕ್ಕಿದೆ. ಲಾಯರ್ ಪ್ಲಾನ್ ಮಾಡಿ ತನ್ನ ಆಫೀಸಿನಲ್ಲಿ ಸೀತಾ ಕೆಲಸಕ್ಕೆ ಬರುವಂತೆ ಮಾಡಿಕೊಂಡಿದ್ದಾನೆ. ಸೀತಾಳಿಗೆ ಸಂದರ್ಶನ ಮಾಡದೆಯೇ ಕೆಲಸ ಕೊಟ್ಟಿದ್ದು, ಮೊದಲ ದಿನ ಹೂ ಗುಚ್ಛ ನೀಡಿ, ಕೇಕ್ ಕಟ್ ಮಾಡಿಸಿ ಸ್ವಾಗತ ಕೋರಿದ್ದಾನೆ. ಇದು ಸೀತಾಳಿಗೆ ಮುಜುಗರ ಉಂಟು ಮಾಡಿದೆ. ಆದರೆ, ಲಾಯರ್ ಮನಸ್ಥಿತಿ ಇನ್ನೂ ಅರ್ಥವಾಗಿಲ್ಲ. ಹಾಗಿದ್ದರೂ ಸೀತಾಳಿಗೆ ಬೇರೆ ದಾರಿ ಇಲ್ಲದೇ, ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಕೆಲಸದ ಬ್ಯುಸಿಯಲ್ಲಿ ರಾಮ್‌ಗೆ ಈ ವಿಚಾರ ಹೇಳುವುದನ್ನೇ ಮರೆತಿದ್ದಾಳೆ.

ಸೀತಾ ಬಗ್ಗೆ ಆತಂಕ ಹೆಚ್ಚಿಸಿಕೊಂಡ ರಾಮ್

ಇತ್ತ ರಾಮ್ ಪದೇ ಪದೇ ಸೀತಾಳನ್ನು ಲಾಯರ್ ಜೊತೆಗೆ ಕಾರಿನಲ್ಲಿ ಓಡಾಡುವುದನ್ನು ಗಮನಿಸಿದ್ದಾನೆ. ಸೀತಾ ಕೂಡ ಲಾಯರ್ ಅನ್ನು ಮದುವೆಯಾಗುವುದು ಸರಿ ಎಂದು ಅನಿಸಿದೆ. ಜೊತೆಗೆ ಸಿಹಿಗೂ ಒಬ್ಬ ತಂದೆಯ ಅವಶ್ಯಕತೆ ಇದೆ ಎಂಬುದನ್ನು ಶಾಂತಮ್ಮ ಅವರ ಮಾತಿನಿಂದ ಅರ್ಥ ಮಾಡಿಕೊಂಡಿದ್ದಾನೆ. ಈಗ ತನ್ನ ಪ್ರೀತಿಯನ್ನು ಹೇಳಿಕೊಂಡು ತಾನು ಈ ಆಫಿಸ್ ಬಾಸ್ ಎಂಬ ಸತ್ಯ ಹೇಳಿದರೆ, ಸೀತಾ ತನ್ನನ್ನು ಒಪ್ಪುತ್ತಾಳೋ, ಇಲ್ಲವೋ ಎಂಬ ಆತಂಕದಲ್ಲಿ ಲಾಯರ್ ಜೊತೆಗೆ ಸೀತಾ ಮದುವೆ ಮಾಡಲು ಮುಂದಾಗಿದ್ದಾನೆ.

Written update on episode 07th December seetha raama serial

ಅಪ್ಪನನ್ನು ಹುಡುಕೋಣ ಎಂದ ಸಿಹಿ

ಶಾಂತಮ್ಮ, ಸಿಹಿಗೆ ಅಮ್ಮ ಸೀತಾ ಸುಖವಾಗಿರಬೇಕು. ನಿನ್ನ ಜೊತೆಗೆ ಹೆಚ್ಚು ಕಾಲ ಕಳೆಯಬೇಕು ಎಂದರೆ, ನಿನಗೊಬ್ಬ ಅಪ್ಪ ಇರಬೇಕು. ನೀನು ಮನಸ್ಸು ಮಾಡಿದರೆ, ಸೀತಮ್ಮನನ್ನು ಒಪ್ಪಿಸಿ, ನೀನು ಇಷ್ಟಪಟ್ಟವರೇ ಅಪ್ಪ ಆಗುತ್ತಾರೆ ಎಂದು ಬುದ್ಧಿ ಹೇಳಿದ್ದಾರೆ.

ಸಿಹಿ ಆಸೆ ಈಡೇರಿಸಲು ಮುಂದಾದ ರಾಮ್

ಸೀತಮ್ಮನ ಬಗ್ಗೆ ಒಳ್ಳೆಯದನ್ನು ಬಯಸುವ ಸಿಹಿ ಈಗ ಫ್ರೆಂಡ್ ಬಳಿ ತನ್ನ ಆಸೆ ಹೇಳಿಕೊಂಡಿದ್ದಾಳೆ. ನನಗೆ ಅಪ್ಪನನ್ನು ಹುಡುಕಲು ಸಹಾಯ ಮಾಡು ಎಂದು ಕೇಳಿದ್ದಾಳೆ. ಸಿಹಿಯ ಮಾತುಗಳಿಗೆ ಮರುಗಿದ ರಾಮ್ ಈಗ ಸೀತಾಳನ್ನು ಮದುವೆಗೆ ಒಪ್ಪಿಸಲು ಮುಂದಾಗಿದ್ದಾನೆ.

ಲಾಯರ್ ಅನ್ನು ಮದುವೆಯಾಗಲು ಸೀತಾ ರೆಡಿ

ಸೀತಾಳ ಮೇಲೆ ಮ್ಯಾನೇಜರ್ ಚರಣ್ ರೇಗಿದ್ದಕ್ಕೆ ರಾಮ್ ಕೋಪ ಮಾಡಿಕೊಂಡಿದ್ದು, ಸೀತಾ ಪರವಾಗಿ ಮಾತನಾಡಿದ್ದಾನೆ. ಬಳಿಕ ಸೀತಾ ಬಳಿ ಮಾತನಾಡಿದ್ದಾನೆ. ಸೀತಾ ನೀವು ನನಗೆ ಗುಡ್ ಫ್ರೆಂಡ್. ನಾನು ಪಾರ್ಟ್ ಟೈಂ ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದ್ದು, ರಾಮ್ ಕೋಪ ಮಾಡಿಕೊಂಡಿದ್ದಾನೆ. ನಿಮ್ಮ ಅವಶ್ಯಕತೆ ಸಿಹಿಗೆ ಬಹಳ ಇದೆ. ನಿಮಗೂ ಒಬ್ಬ ಸಂಗಾತಿ ಬೇಕಾಗಿದ್ದಾನೆ. ನೀವು ಲಾಯರ್ ಅನ್ನು ಮದುವೆಯಾಗುವುದು ಸರಿ, ಮದುವೆಯಾಗಿ ಎಂದು ಬುದ್ಧಿ ಹೇಳಿದ್ದಾನೆ.

ರಾಮ್ ಮೇಲೆ ಸೀತಾ ಗರಂ

ಸೀತಾ ಕೋಪ ಮಾಡಿಕೊಂಡಿದ್ದು, ರಾಮ್ ಮೇಲಿನ ಸಿಟ್ಟಿಗೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾಳೆ. ಆದರೆ, ಸಿಹಿ ಅನ್ನು ಮೊದಲು ಒಪ್ಪಿಸಿ ಎಂದು ಹೇಳಿದ್ದಾಳೆ. ಈಗ ರಾಮ್ ಸಿಹಿಯನ್ನು ಈ ಮದುವೆಗೆ ಒಪ್ಪಿಸುತ್ತಾನಾ..? ಇಲ್ಲವೇ ತಾನೇ ಮದುವೆಯಾಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
seetharaama Kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X