Seetha Rama ; ಸಿಹಿಗೆ ಅಮ್ಮನ ಮದುವೆಯ ಚಿಂತೆ : ತಾತನಿಗೆ ಮೊಮ್ಮಗನ ಯೋಚನೆ..!
ಈ ಸಂಬಂಧ ರಾಮಗೆ ಒಪ್ಪುತ್ತೆ. ಆದರೆ, ಆಕೆಗೆ ಈಗಾಗಲೇ ಡಿವೋರ್ಸ್ ಆಗಿದ್ದು, ಒಂದು ಮಗಿವಿದೆ ಎಂದು ಸಾಧನಾ ಹೇಳಿದ್ದನ್ನು ಕೇಳಿದ ತಾತನ ಆರೋಗ್ಯದಲ್ಲಿ ಏರುಪೇರಾಗಿದೆ.
ಅನಾಮಿಕನಿಂದ ಮತ್ತೊಂದು ಮೆಸೇಜ್
ಇತ್ತ ಸೀತಾಳಿಗೆ ಆ ನಂಬರ್ ಗೆ ಕರೆ ಮಾಡಲು ರಾಮ ಹೇಳಿದ್ದಾನೆ. ಸೀತಾ ಧೈರ್ಯ ಮಾಡಿ ಅನಾಮಿಕ ನಂಬರ್ ಗೆ ಫೋನ್ ಮಾಡಿದ್ದಾಳೆ. ಫೋನ್ ರಿಸೀವ್ ಮಾಡಿದ ಅನಾಮಿಕ ಏನೂ ಮಾತನಾಡುವುದಿಲ್ಲ. ಸೀತಾ ಮಾತ್ರ ನೀವು ಯಾರು. ಹೀಗೆಲ್ಲಾ ಮೆಸೇಜ್ ಮಾಡುವ ಬದಲು ಧೈರ್ಯವಾಗಿದ್ದರೆ, ಎದುರುಗಡೆ ಬನ್ನಿ ಎನ್ನುತ್ತಾಳೆ. ಫೋನ್ ಕಟ್ ಮಾಡಿದ ಅನಾಮಿಕ ಮೆಸೇಜ್ ಕಳಿಸುತ್ತಾನೆ. ಐ ಲೈಕ್ ಇಟ್ ಸೀತಾ. ಸಂಜೆ ಪಾರ್ಕ್ ಗೆ 5ಗಂಟೆಗೆ ಬನ್ನಿ ಎಂದು ಮೆಸೇಜ್ ಮಾಡುತ್ತಾನೆ. ಇದನ್ನು ನೋಡಿದ ರಾಮ ಸರಿ ಸೀತಾ ನಿಮ್ಮ ಜೊತೆಗೆ ನಾನು ಬರುತ್ತೇನೆ ಎಂದು ಧೈರ್ಯ ಹೇಳಿ ಮನೆಗೆ ಕಳಿಸುತ್ತಾನೆ.

ವಾರ್ನಿಂಗ್ ಕೊಟ್ಟ ಚಾಂದಿನಿ
ಇನ್ನು ಭಾರ್ಗವಿಗೆ ಚಾಂದಿನಿ ವಾರ್ನಿಂಗ್ ಕೊಟ್ಟಿದ್ದಾಳೆ. ಅಶೋಕ್ ಮದುವೆಯ ದಿನವೇ ನನ್ನ ಮತ್ತು ರಾಮ ಮದುವೆ ಬಗ್ಗೆ ಅನೌನ್ಸ್ ಆಗುತ್ತೆ ಅಲ್ವಾ ಎಂದು ಕೇಳುತ್ತಾಳೆ. ಆಗ ಭಾರ್ಗವಿ, ನಿನ್ನ ಹಣೆಯಲ್ಲಿ ಬರೆದಿದ್ದರೆ, ಕಂಕಣ ಬಲವಿದ್ದರೆ ನೋಡೋಣ ಎಂದು ಉಡಾಫೆಯಾಗಿ ಉತ್ತರಿಸುತ್ತಾಳೆ. ಇದರಿಂದ ರೊಚ್ಚಿಗೆದ್ದ ಚಾಂದಿನಿ, ಅಶೋಕ್ ಮದುವೆಯ ದಿನ ನನ್ನ ಹಾಗೂ ರಾಮ ಮದುವೆ ಬಗ್ಗೆ ಎಲ್ಲರ ಮುಂದೆ ನೀವೇ ಹೇಳಬೇಕು. ಇಲ್ಲದೇ ಹೋದರೆ, ನೀವು ನನ್ನನ್ನು ರಾಮ ಹಿಂದೆ ಬೀಳಲು ಹೇಳಿದ್ದು, ಪ್ರೀತಿಸುವಂತೆ ನಟಿಸುವಂತೆ ಮಾಡಿದ್ದು, ಬಿಟ್ಟು ಹೋಗಲು ಹೇಳಿದ್ದು ಎಲ್ಲಾ ಸತ್ಯವನ್ನು ನಾನು ರಾಮಗೆ ಹೇಳುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾಳೆ. ಆದರೆ, ಚಾಂದಿನಿ ಮಾತುಗಳನ್ನು ಕೇಳಿದ ಭಾರ್ಗವಿ ನಕ್ಕಿದ್ದಾಳೆ.
ತಾತನಿಗೆ ಮಾತು ಕೊಟ್ಟ ರಾಮ
ಇನ್ನು ಮನೆಗೆ ಬಂದ ರಾಮಗೆ ತಾತ ಆರೋಗ್ಯ ಸಮಸ್ಯೆ ಆಗಿರುವುದನ್ನು ತಿಳಿದು ಶಾಕ್ ಆಗಿದ್ದಾನೆ. ಅದರಲ್ಲೂ ಎರಡನೇ ಸಂಬಂಧ ಬಂದಿದ್ದಕ್ಕೆ ತಾತ ಬೇಸರ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಕೇಳಿದ ರಾಮಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಅಲ್ಲದೇ ಸೂರಿ ತಾತ ರಾಮಗೆ ಇಂತಹ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮಾತು ಕೊಡು ಎಂದಿದ್ದಾರೆ. ಏನು ಮಾಡುವುದು ಎಂಬುದು ಗೊತ್ತಾಗದೇ ರಾಮ ತಾತನಿಗೆ ಮಾತನ್ನು ಕೂಡ ನೀಡಿದ್ದಾನೆ.

ಸಿಹಿಗೆ ಸೀತಮ್ಮನ ಮದುವೆ ಯೋಚನೆ
ಪುಟಾಣಿ ಸಿಹಿಗೆ ಈಗ ದೊಡ್ಡ ತಲೆ ಬಿಸಿಯಾಗಿದೆ. ಸೀತಮ್ಮ ಮತ್ತು ರಾಮ ಬಗ್ಗೆ ಯೋಚಿಸಲು ಶುರು ಮಾಡಿದ್ದಾಳೆ. ಸೀತಮ್ಮ ಮತ್ತು ರಾಮ ಮದುವೆಯಾದರೆ ಹೇಗಿರುತ್ತೆ. ಇದು ಸರಿನಾ..? ತಪ್ಪಾ..? ಎಂದು ಗಾಢವಾಗಿ ಯೋಚಿಸುತ್ತಿದ್ದಾಳೆ. ಅಲ್ಲದೇ, ಗೆಳೆಯರ ಬಳಿಯೂ ಕೇಳಿದ್ದಾಳೆ. ರಾಮ ಮತ್ತು ಸೀತಾ ಒಟ್ಟಿಗೆ ಇದ್ದರೆ ಹೇಗೆ..? ರಾಮ ಬೇರೆ ಮದುವೆಯಾದರೆ ಹೇಗಿರುತ್ತೆ ಎಂದು ಆಲೋಚಿಸುತ್ತಿದ್ದಾಳೆ. ಸೀತಮ್ಮ ಹಾಗೂ ರಾಮ ಮದುವೆಗೆ ಸಿಹಿ ಒಪ್ಪಿದರೂ ಈಗ ಸೂರಿ ತಾತ ಒಪ್ಪುತ್ತಾರಾ ಎಂಬ ಅನುಮಾನ ಶುರುವಾಗಿದೆ.


Click it and Unblock the Notifications











