Seetha Rama ; ರಾಮನನ್ನು ಸ್ವಾಗತಿಸಲು ಸಂಭ್ರಮದಿಂದ ರೆಡಿಯಾದ ಸೀತಾ ; ಆದರೆ...!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿ ಸೀತಾಳಿಗೆ ಬೇಕಂತಲೇ ಆಫೀಸಿನಲ್ಲಿ ಹೆಚ್ಚಿನ ಕೆಲಸವನ್ನು ನೀಡಿದ್ದಾಳೆ. ಸೀತಾ ಆ ಕೆಲಸವನ್ನೆಲ್ಲಾ ಮುಗಿಸಿ ತಡರಾತ್ರಿ ಮನೆಗೆ ಬಂದಿದ್ದಾಳೆ.
ಇನ್ನು ಚಾಂದಿನಿ ಭಾರ್ಗವಿ ಬಳಿ ಮಾತನಾಡಿದ್ದು, ರಾಮ ಹಾಗೂ ತನ್ನ ಪ್ರೀತಿಯ ಬಗ್ಗೆ ಬಹಳ ಕಾನ್ಫಿಡೆನ್ಸ್ ನಲ್ಲಿ ಇದ್ದಾಳೆ. ಆದರೆ, ಭಾರ್ಗವಿ ಚಾಂದಿನಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾಳೆ.
ರಾಮ ಮೊದಲಿನಂತಿಲ್ಲ. ಅವನ ನಿರ್ಧಾರಗಳು ಬಹಳಷ್ಟು ಬದಲಾಗಿದೆ. ವ್ಯಕ್ತಿಯ ಮಾತು ಹಾಗೂ ಅಭಿಪ್ರಾಯಗಳಿಂದಲೇ ತಿಳಿದುಕೊಂಡು ಮಾತನಾಡುತ್ತಾನೆ ಎಂದು ಹೇಳುತ್ತಾಳೆ.

ಫ್ರೆಂಡ್ ಮನೆಗೆ ಹೋಗಿದ್ದ ಸಿಹಿ

ಅಷ್ಟೇ ಅಲ್ಲದೇ, ಸೀತಾ ಬಗ್ಗೆ ರಾಮ ಮುಂದೆ ಆದಷ್ಟು ಹೊಗಳು. ಆಗ ನಿನ್ನನ್ನು ರಾಮ ನಂಬುತ್ತಾನೆ ಎಂದು ಸಲಹೆ ಕೂಡ ನೀಡುತ್ತಾಳೆ. ಇನ್ನು ಫ್ರೆಂಡ್ ನ ನೋಡಲು ಸಿಹಿ ಪೋಸ್ಟ್ ಮ್ಯಾನ್ ಸಹಾಯ ತೆಗೆದುಕೊಂಡಿದ್ದಾಳೆ. ಅಮ್ಮ ಕೂಡ ಅಲ್ಲೇ ಇದ್ದಾರೆ ಎಂದು ಹೇಳಿ ಶ್ರೀರಾಮ್ ಮನೆಯನ್ನು ತಲುಪಿದ್ದಾಳೆ. ಸಿಹಿಯನ್ನು ನೋಡುತ್ತಿದ್ದಂತೆಯೇ ರಾಮ ಸರಾಗವಾಗಿ ಮಾತನಾಡಿದ್ದಾನೆ. ಇದನ್ನು ನೋಡಿದ ಅಶೋಕ್ ಮತ್ತು ಅಂಜಲಿ ಶಾಕ್ ಕೂಡ ಆಗಿದ್ದಾರೆ. ರಾಮ ಸಿಹಿ ಜೊತೆಗೆ ಇಡೀ ದಿನವನ್ನು ಖುಷಿ ಖುಷಿಯಾಗಿ ಕಾಲ ಕಳೆದಿದ್ದಾನೆ. ಬಳಿಕ ಅಶೋಕನಿಗೆ ಸಿಹಿಯನ್ನು ಮನೆಗೆ ಬಿಟ್ಟು, ಸೀತಾ ಬಳಿ ತಾನೇ ಸಿಹಿನ ಶಾಲೆಯಿಂದ ಕರೆದುಕೊಂಡು ಹೋಗಿರುವುದಾಗಿ ತಿಳಿಸಲು ಹೇಳುತ್ತಾನೆ. ಇಲ್ಲದಿದ್ದರೆ, ಸೀತಾ ಕೋಪಕ್ಕೆ ಗುರಿಯಾಗಬಹುದು ಎಂಬ ಆತಂಕ ಅವನದ್ದು.

Written update on episode 08 March seetha rama serial

ಚಾಂದಿನಿ ಬಗ್ಗೆ ಹೇಳಿದ ಪ್ರಿಯಾ

ಅಶೋಕ್ ಪ್ರಿಯಾಳನ್ನು ಭೇಟಿ ಮಾಡಿ ಮಾತನಾಡುತ್ತಾನೆ. ಆಗ ಪ್ರಿಯಾ ತನ್ನ ತಾಯಿ ಮದುವೆ ಮಾಡಿಸಲು ತುದಿಗಾಲಿನಲ್ಲಿ ನಿಂತಿರುವುದಾಗಿ ಹೇಳುತ್ತಾಳೆ. ಆದರೆ, ಅಶೋಕ್ ಇಲ್ಲ ರಾಮ ಬದುಕು ಸರಿ ಹೋಗುವವರೆಗೂ ತನ್ನ ಮದುವೆ ಸಾಧ್ಯವಿಲ್ಲ ಎಂದಿದ್ದು, ಪ್ರಿಯಾ ಕಾಯಲು ಸಿದ್ಧಳಾಗಿದ್ದಾಳೆ. ಇನ್ನು ಆಫೀಸಿನಲ್ಲಿ ರಾಕ್ಷಸಿ ಚಾಂದಿನಿ ಕಾಟ ಶುರುವಾಗಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಅಶೋಕ್ ಗೆ ಶಾಕ್ ಆಗುತ್ತದೆ. ಆಗ ಅಶೋಕ್ ಚಾಂದಿನಿಗೆ ಫೋನ್ ಮಾಡಿ ಬೈಯುತ್ತಾನೆ. ರಾಮ ಜೀವನದಲ್ಲಿ ಮತ್ತೆ ಪ್ರವೇಶ ಮಾಡಬೇಡ ಎಂದು ಹೇಳುತ್ತಾನೆ. ಆದರೆ, ಚಾಂದಿನಿ ಅಶೋಕನಿಗೆ ಓಪನ್ ಚಾಲೆಂಜ್ ಮಾಡಿದ್ದಾಳೆ. ರಾಮ ತನ್ನನ್ನು ದೂರ ತಳ್ಳಿದರೆ ನಾನು ಹೋಗುತ್ತೇನೆ ಎಂದಿದ್ದಾಳೆ.

ಸೀತಾಳಿಗೆ ಬುದ್ಧಿ ಹೇಳಿದ ಅಶೋಕ

ಸೂರಿ ಜೊತೆಗೆ ಮಾತನಾಡುವ ಅಶೋಕನಿಗೆ ಸೀತಾ ರಿಸೈನ್ ಮಾಡಿರುವ ವಿಚಾರ ಗೊತ್ತಾಗುತ್ತದೆ. ಹಾಗಾಗಿ ಸೀತಾಳಿಗೆ ಫೋನ್ ಮಾಡಿ ಸಿಹಿನ ಕರೆದುಕೊಂಡು ಹೋಗಿದ್ದನ್ನು ತಿಳಿಸಿ ಬಳಿಕ ರಿಸೈನ್ ಮಾಡಿ ತಪ್ಪು ಮಾಡಿದ್ದೀರಾ. ಈ ತಪ್ಪನ್ನು ತಿದ್ದಿಕೊಳ್ಳಿ. ನೀವು ಮತ್ತು ಸಿಹಿ, ರಾಮ ಬಾಳಿನಿಂದ ದೂರ ಆಗುವುದು ಸರಿಯಲ್ಲ ಎಂದು ಬುದ್ದಿ ಹೇಳಿದ್ದಾನೆ. ಆದರೆ, ಸೀತಾ ಏನು ಮಾಡುತ್ತಾಳೋ ಗೊತ್ತಿಲ್ಲ.

Written update on episode 08 March seetha rama serial

ರಾಮನನ್ನು ಸ್ವಾಗತಿಸಲು ಸೀತಾ ರೆಡಿ

ಇತ್ತ ರಾಮ ಹಾಗೂ ಸೀತಾ ಇಬ್ಬರೂ ಮೆಸೇಜ್ ಮುಖಾಂತರ ಚಾಟ್ ಮಾಡುತ್ತಿರುತ್ತಾರೆ. ರಾಮ ನಾಳೆ ತಾನು ಆಫೀಸಿಗೆ ಬರುವುದಾಗಿ ತಿಳಿಸುತ್ತಾನೆ. ಸೀತಾಳಿಗೆ ರಾಮ ಆಫೀಸಿಗೆ ಬರುತ್ತಾನೆ ಎಂಬುದನ್ನು ಕೇಳಿ ಖುಷಿಯಾಗುತ್ತದೆ. ಆಫೀಸಿಗೆ ಹೊರಡುವ ಮುನ್ನ ಸೀತಾ ಕನ್ನಡಿ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುತ್ತಾಳೆ. ಅಲ್ಲದೇ, ಸಿಹಿಗೆ ರಾಮಗಾಗಿ ಬಾಕ್ಸ್ ನೀಡಲು ಕೂಡ ಹೇಳುತ್ತಾಳೆ. ರಾಮ ನನ್ನು ಖುಷಿ ಖುಷಿಯಾಗಿ ವೆಲ್ಕಂ ಮಾಡಬೇಕು ಎಂದು ಸೀತಾ ಅಂದುಕೊಂಡಿದ್ದಾಳೆ.

More from Filmibeat

English summary
seetha feels very happy for ram. He is coming back to office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X