Seetha Rama ; ವಿಲ್ ಬಗ್ಗೆ ಹೇಳಿದ ಲಾಯರ್: ಸತ್ಯ ತಿಳಿದು ಸಂಕಟ ಪಟ್ಟ ಭಾರ್ಗವಿ..!
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಚಾಂದಿನಿಗೆ ಫೋನ್ ಮಾಡಿ ರಾಮ ಫಾರಿನ್ ಟ್ರಿಪ್ ಬಗ್ಗೆ ವಿಚಾರಿಸುತ್ತಾಳೆ. ಇದನ್ನು ಕೇಳಿದ ವಿಶ್ವನಿಗೆ ಅನುಮಾನ ಮೂಡುತ್ತದೆ. ಚಾಂದಿನಿ ಅಂತೂ ರಾಮ ಜೊತೆಗೆ ಟ್ರಿಪ್ ಹೋಗಬಹುದು ಎಂದು ಫುಲ್ ಖುಷಿಯಾಗಿದ್ದಾಳೆ. ಆದರೆ ವಿಶ್ವನಿಗೆ ಚಾಂದಿನಿ ಯಾವ ಪ್ಲಾನ್ ಮಾಡಿದ್ದಾಳೆ ಎಂಬುದು ಗೊತ್ತಾಗದೇ ಒದ್ದಾಡುತ್ತಿದ್ದಾನೆ. ಆದರೆ ಭಾರ್ಗವಿಗೆ ವಾಣಿ ವಿಲ್ ನಲ್ಲಿ ಏನು ಬರೆದಿದ್ದಾಳೆ. ರಾಮಗೆ ಸೇರುವ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಈ ಫಾರಿನ್ ಟೂರ್ ಪ್ಲಾನ್ ಮಾಡಿದ್ದಾಳೆ.
ವಿಲ್ ಬಗ್ಗೆ ಹೇಳಿದ ಲಾಯರ್
ಇನ್ನು ಪೂಜೆಯ ಸಂಬಂಧ ಮನೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಶೋಕ್ ಮತ್ತು ಪ್ರಿಯಾಳನ್ನು ಕೂಡ ರಾಮ ಇನ್ವೈಟ್ ಮಾಡಿದ್ದಾನೆ. ಪೂಜೆ ಇರುವಾಗಲೇ ಮನೆಗೆ ಲಾಯರ್ ಬಂದಿದ್ದಾರೆ. ಭಾರ್ಗವಿ ಲಾಯರ್ ನ ಮಾತನಾಡಿಸಿದ್ದು, ತಾತನ ರೂಮ್ ಗೆ ಕಳಿಸಿದ್ದಾಳೆ. ತಾತನ ರೂಮ್ ಗೆ ರಾಮ ಕೂಡ ಬಂದಿದ್ದು, ಇದೇ ಸಂದರ್ಭದಲ್ಲಿ ತಾತ ಅನಿವಾರ್ಯವಾಗಿ ಹೊರಗೆ ಎದ್ದು ಬರಬೇಕಾಗುತ್ತದೆ. ಆಗ ರಾಮ ಗೆ ವಿಲ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಿ ಎಂದು ಲಾಯರ್ ಗೆ ಹೇಳಿ ಬರುತ್ತಾರೆ. ಲಾಯರ್ ಬೇರೆ ಯಾರೂ ಕದ್ದು ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ವಿಲ್ ನಲ್ಲಿ ಇರುವ ಸತ್ಯವನ್ನು ಹೇಳುತ್ತಾರೆ. ವಾಣಿ ತನ್ನ ಪಾಲಿಗೆ ಬಂದಿರುವ ಆಸ್ತಿಯನ್ನು ತನ್ನ ಮಗ ರಾಮ ಗೆ ಮಾತ್ರ ಸೇರುವಂತೆ ಮಾಡಿದ್ದು, ಅದನ್ನು ರಾಮ ಬೇರೆಯವರ ಹೆಸರಿಗೆ ಸೇರಿಸದಂತೆ ವಿಲ್ ಬರೆದಿದ್ದಾರೆ ಎನ್ನುತ್ತಾರೆ.

ಕದ್ದು ಕೇಳಿಸಿಕೊಂಡ ಭಾರ್ಗವಿ
ಅಷ್ಟೇ ಅಲ್ಲದೇ, ಆ ವಿಲ್ ಪ್ರಕಾರ ರಾಮ ಮದುವೆಯಾಗುವ ಹೆಂಡತಿಗೆ ಆಸ್ತಿಯ ಮೇಲಿನ ಹಕ್ಕನ್ನು ನೀಡುವುದು ಸಂಪೂರ್ಣವಾಗಿ ರಾಮಗೆ ಬಿಟ್ಟ ಸ್ವಾತಂತ್ರ. ಇನ್ನು ರಾಮ ಯಾವುದೇ ಕಾರಣಕ್ಕೂ ತನಗೆ ಸೇರಿದ ಆಸ್ತಿಯನ್ನು ತನ್ನ ಮನೆಯ ಇತರರಿಗೆ ನೀಡುವ ಹಕ್ಕು ಇರುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೇ, ವಾಣಿಗೆ ಮನೆಯವರಿಂದಲೇ ತನ್ನ ಜೀವಕ್ಕೆ ಅಪಾಯವಿದೆ ಎಂಬ ಭಯವಿತ್ತು. ಹಾಗಾಗಿ ಈ ವಿಲ್ ಬರೆಸಿದ್ದು ಎಂದು ಲಾಯರ್ ಹೇಳುತ್ತಾರೆ. ಇದೆಲ್ಲವೂ ರಾಮ ಗೆ ಗೊಂದಲವನ್ನು ಉಂಟು ಮಾಡುತ್ತದೆ. ಇತ್ತ ಬಾಗಿಲಲ್ಲಿ ನಿಂತು ಭಾರ್ಗವಿ ಲಾಯರ್ ಮಾತುಗಳನ್ನು ಕೇಳಿಸಿಕೊಂಡು ಕಣ್ಣೀರು ಹಾಕುತ್ತಾಳೆ. ವಾಣಿ ಮೇಲೆ ಇನ್ನಷ್ಟು ದ್ವೇಷ ಕಾರುತ್ತಾಳೆ.
ದೇಸಾಯಿ ಮನೆಗೆ ಬಂದ ಸೀತಾ
ಮನೆಗೆ ಪೂಜೆಗೆಂದು ಸೀತಾ, ಸಿಹಿ ಹಾಗೂ ಅವರ ಅತ್ತಿಗೆ ಸುಲೋಚನ ಮತ್ತು ಅಣ್ಣ ಸುದೇಶ್ ಕೂಡ ಆಗಮಿಸುತ್ತಾರೆ. ಮನೆಯನ್ನು ನೋಡಿ ಸುಲೋಚನಾ ಆಶ್ಚರ್ಯ ಪಡುತ್ತಾಳೆ. ಮನೆಯೊಳಗೆ ಹೋದ ಮೇಲೆ ವಿಶ್ವ ವೆಲ್ಕಂ ಮಾಡುತ್ತಾನೆ. ಸೀತಾ ತನ್ನ ಮನೆಯವರನ್ನು ಎಲ್ಲರಿಗೂ ಪರಿಚಯ ಮಾಡಿಸುತ್ತಾಳೆ. ಆದರೆ, ಸಿಹಿ ಮಾತ್ರ ಮನೆಯೊಳಗೆ ಬಾರದೇ ಹೊರಗೇ ನಿಂತಿರುತ್ತಾಳೆ. ತಾತನ ಮೇಲಿನ ಕೋಪ ಇನ್ನೂ ಕಮ್ಮಿ ಆಗಿಲ್ವಾ ಎಂಬುದು ಗೊತ್ತಿಲ್ಲ.

ದುಬೈಗೆ ಹೊರಟ ಶ್ರೀರಾಮ
ರಾಮನಿಗೆ ಆಫೀಸ್‌ನಿಂದ ಕಾಲ್ ಬರುತ್ತದೆ. ಟ್ಯಾಕ್ಸ್ ಸಂಬಂಧ ದುಬೈ ನಲ್ಲಿರುವ ಆಫಿಸಿಗೆ ನಾನು ತಕ್ಷಣ ಹೊರಡಬೇಕು ಎಂದು ಹೊರಡುತ್ತಾನೆ. ಆದರೆ, ಮನೆಯವರಿಗೆ ಯಾರಿಗೂ ರಾಮ್ ಹೋಗುವುದು ಇಷ್ಟವಿರುವುದಿಲ್ಲ. ಆದರೆ, ರಾಮ ತಾನೂ ಹೋಗಲೇ ಬೇಕು ಎಂದು ಹೊರಟಿದ್ದಾನೆ. ಭಾರ್ಗವಿ ತನ್ನ ಪ್ಲಾನ್ ನ ರಾಮ ಹೊರಟ ಬಳಿಕ ಚಾಲ್ತಿಗೆ ತರುತ್ತಾಳಾ ಎಂದು ಕಾದು ನೋಡಬೇಕಿದೆ.


Click it and Unblock the Notifications











