Seetha Raama: ಸುಳ್ಳು ಹೇಳಿದ್ದಕ್ಕೆ ಬೆಸ್ಟ್ ಫ್ರೆಂಡ್ ಮೇಲೆ ಕೋಪ ಮಾಡಿಕೊಂಡಿರುವ ಸೀತಾ

By ಪ್ರಿಯಾ ದೊರೆ

ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿ, ರಾಮ್‌ಗೆ ಬಂದ ಬಿಸಿನೆಸ್ ಐಕಾನ್ ಅವಾರ್ಡ್ ವಿಚಾರವನ್ನು ಮುಂದಿಟ್ಟುಕೊಂಡು ಮಸಲತ್ತು ಮಾಡಿದ್ದಾಳೆ.

ಅವಾರ್ಡ್ ಬಂದಿದ್ದನ್ನು ಸಂಭ್ರಮಿಸುವ ಹೆಸರಲ್ಲಿ ರಾಮ್ ಮತ್ತು ಸೀತಾ ಮಧ್ಯೆ ಇರುವ ಸುಳ್ಳನ್ನು ಜಗಜ್ಜಾಹೀರು ಮಾಡಲು ಭಾರ್ಗವಿ ಮುಂದಾಗಿದ್ದಾಳೆ.

Written update on episode 08th January seetha raama serial

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಭಾರ್ಗವಿ ಹೊಡೆದಿದ್ದಾಳೆ. ಈ ಸುದ್ದಿ ಜಗಜ್ಜಾಹೀರು ಮಾಡಿ ತನ್ನ ಕೆಲಸವನ್ನು ಬಹಳ ಸುಲಭವಾಗಿ ಸಾಧಿಸಿಕೊಳ್ಳುತ್ತಿದ್ದಾಳೆ.

ಸುದ್ದಿ ನೋಡಿ ಖುಷಿಪಟ್ಟ ಸಿಹಿ

ಕ್ಯಾರೆಟ್ ಹಲ್ವಾ ಮಾಡಲೆಂದು ಸೀತಾ ತುಪ್ಪ ತರಲು ಅಂಗಡಿಗೆ ಬಂದಿದ್ದಾಳೆ. ಇದೇ ವೇಳೆಯಲ್ಲಿ ರಾಮ್‌ಗೆ ಅವಾರ್ಡ್ ಬಂದ ವಿಚಾರ ಟಿವಿ ನೋಡಿ ತಿಳಿದುಕೊಳ್ಳುತ್ತಾಳೆ. ಸೀತಾಳಿಗೆ ಅಷ್ಟು ದೊಡ್ಡ ವ್ಯಕ್ತಿ ತಮ್ಮ ಜೊತೆಗೆ ಇದ್ದ ಎಂಬ ಖುಷಿಗಿಂತಲೂ, ಸುಳ್ಳು ಹೇಳಿದ್ದಕ್ಕೆ ಕೋಪ ಬಂದಿರುತ್ತದೆ. ಇನ್ನು ಮನೆಯಲ್ಲೀ ಅಜ್ಜಿ-ತಾತ, ಪ್ರಿಯಾ ಹಾಗೂ ಸಿಹಿ ಈ ಸುದ್ದಿಯನ್ನು ನೋಡುತ್ತಾರೆ. ಎಲ್ಲರಿಗೂ ಬಹಳ ದೊಡ್ಡ ಶಾಕ್ ಆಗುತ್ತದೆ. ಆದರೆ, ಸಿಹಿಗೆ ತನ್ನ ಫ್ರೆಂಡ್ ಅವಾರ್ಡ್ ಪಡೆದಿದ್ದಾರೆ ಎಂಬುದಷ್ಟೇ ಅರ್ಥವಾಗುತ್ತದೆ. ಹೀಗಾಗಿ ಅವಳ ಬಹಳ ಖುಷಿ ಪಡುತ್ತಾಳೆ. ಇದೇ ವೇಳೆಗೆ ರಾಮ್ ಕೂಡ ಮನೆಗೆ ಬರುತ್ತಾನೆ. ಸಿಹಿ ಖುಷಿಯಿಂದ ರಾಮ್‌ನನ್ನು ತಬ್ಬಿಕೊಂಡು ವಿಶ್ ಮಾಡುತ್ತಾಳೆ.

ಅಶೋಕ್‌ಗೆ ಕಾಲ್ ಮಾಡಿದ ಪ್ರಿಯಾ

ಅಜ್ಜಿ, ತಾತ ಮತ್ತು ಪ್ರಿಯಾ ಮಾತ್ರ ಶಾಕ್ ಆಗುತ್ತಾರೆ. ಗೌರವ ಕೊಟ್ಟು ಮಾತನಾಡಿಸಲು ಯತ್ನಿಸುತ್ತಾರೆ. ರಾಮ್ ತಾನು ಆಫಿಸಿನಲ್ಲಿ ನಡೆಯುತ್ತಿದ್ದ ಕೆಲ ಅನಾಚಾರಗಳನ್ನು ಬಯಲಿಗೆಳೆಯಲು ಈ ಸುಳ್ಳು ಹೇಳಬೇಕಾಯ್ತು. ನನ್ನ ಜೊತೆಗೆ ಇನ್ನು ಮುಂದೆಯೂ ಸಲುಗೆಯಿಂದ ಇರಿ ಎಂದು ಹೇಳುತ್ತಾನೆ. ರಾಮ್ ಮಾತನ್ನು ತಾತ ಮತ್ತು ಅಜ್ಜಿ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಆದರೆ, ಪ್ರಿಯಾ ಒಪ್ಪಲು ಕಷ್ಟಪಡುತ್ತಾಳೆ. ಯಾಕೆಂದರೆ, ಅಶೋಕ್ ದೊಡ್ಡ ಶ್ರೀಮಂತ ಎಂದು ನಂಬಿದ್ದ ಪ್ರಿಯಾ ಪ್ರೀತಿ ಕೂಡ ಮಾಡುತ್ತಿದ್ದಳು. ಈಗ ಅಶೋಕ್ ಬಾಸ್ ಅಲ್ಲ ಎಂಬುದನ್ನು ನಂಬುವುದಕ್ಕೆ ಕಷ್ಟವಾಗುತ್ತಿತ್ತು. ಹೀಗಾಗಿ ಅಶೋಕ್‌ಗೆ ಫೋನ್ ಮಾಡಿ ವಿಚಾರಿಸಿದಾಗ, ಅಶೋಕ್ ಟಿವಿಯಲ್ಲಿ ಬಂದಿದ್ದೆಲ್ಲಾ ಸತ್ಯ ಎಂದು ಹೇಳುತ್ತಾನೆ.

Written update on episode 08th January seetha raama serial

ರಾಮ್ ಮಾತು ಕೇಳದ ಸೀತಾ

ಸಿಹಿ ಮತ್ತು ರಾಮ್ ಸೇರಿಕೊಂಡು ಕ್ಯಾರೆಟ್ ಹಲ್ವಾ ಮಾಡಲು ಕ್ಯಾರೆಟ್ ಅನ್ನು ತುರಿಯುತ್ತಿರುತ್ತಾರೆ. ಆಗ ಮನೆಗೆ ಬರುವ ಸೀತಾ ಶಾಕ್‌ನಲ್ಲೇ ಇರುತ್ತಾಳೆ. ರಾಮ್ ತನ್ನನ್ನು ಮತ್ತೆ ಹೊಸದಾಗಿ ಪರಿಚಯಿಸಿಕೊಳ್ಳುತ್ತಾನೆ. ಆದರೆ ಸೀತಾ, ರಾಮ್‌ನನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಹಾಗಾಗಿ ರಾಮ್ ಮಾತನ್ನು ಕೂಡ ಪೂರ್ತಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಬದಲಿಗೆ ಸುಳ್ಳು ಹೇಳಿದ್ದಕ್ಕೆ ಕೋಪ ಮಾಡಿಕೊಂಡು ಮನೆಯಿಂದ ಹೊರಟು ಬಿಡಿ ಎಂದು ಹೇಳುತ್ತಾಳೆ. ರಾಮ್‌ಗೆ ಸೀತಾಳನ್ನು ಸಮಾಧಾನ ಮಾಡುವುದು ಹೇಗೆ ಎಂಬುದೇ ಅರ್ಥವಾಗುವುದಿಲ್ಲ.

ರಾಮ್ ಮೇಲೆ ಮುನಿಸಿಕೊಂಡ ಸೀತಾ

ಸಿಹಿಯನ್ನು ಕೂಡ ಸೀತಾ ಕೋಪದಲ್ಲಿ ಬೈದು ರೂಮಿಗೆ ಕಳಿಸುತ್ತಾಳೆ. ಸುಳ್ಳು ಹೇಳಿದ್ದಕ್ಕೆ ಸಮಜಾಯಿಷಿ ಕೊಡಬೇಡಿ. ಒಂದು ಸುಳ್ಳನ್ನು ಮುಚ್ಚಿಡಲು ನೀವು ಬಹಳ ಸುಳ್ಳುಗಳನ್ನು ಹೇಳಿದ್ದೀರಾ. ನಿಮ್ಮ ಯಾವ ಕಾರಣಗಳೂ ನನಗೆ ಬೇಕಿಲ್ಲ ಎಂದು ಹೇಳುತ್ತಾಳೆ. ಸೀತಾ, ರಾಮ್ ಹೇಳಿದ ಸುಳ್ಳಿನಿಂದ ಬಹಳ ಕೋಪ ಮಾಡಿಕೊಂಡಿದ್ದು, ಮತ್ಯಾವತ್ತೂ ರಾಮ್ ಸ್ನೇಹ ಬೆಳೆಸಬಾರದು ಎಂಬಂತೆ ಮಾತು ಮಾತಿಗೂ ಮುನಿಸು ತೋರುತ್ತಾ ಸರ್, ಸರ್ ಎಂದು ಕರೆಯುತ್ತಿದ್ದಾಳೆ. ರಾಮ್ ಗೆ ಸೀತಾಳನ್ನು ಸಮಾಧಾನ ಮಾಡುವುದು ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ.

More from Filmibeat

English summary
Seetha raam kannada serial today update. Bhargavi plan succeed Seetha-raam friendship breaks;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X