'ರಾಮ'ನಿಗೆ 'ಸೀತಾ' ಳ 'ಸಿಹಿ'ಯಾದ ಸಂದೇಶ ; ರುದ್ರಪ್ರತಾಪ್ ಹಗೆತನ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಈಗ ರಾಮ್ ಮತ್ತು ಸೀತಾ ಮೊದಲಿನಂತೆ ಸ್ನೇಹವನ್ನು ಮುಂದುವರೆಸಿದ್ದಾರೆ. ಇದರಿಂದ ಸಿಹಿಗೆ ತುಂಬಾ ಖುಷಿಯಾಗಿದೆ. ರಾಮಗೆ ಸೀತಾ ಮತ್ತೆ ತನ್ನ ಜೊತೆಗೆ ಖುಷಿಯಾಗಿ ಮಾತನಾಡುತ್ತಿದ್ದಾಳೆ ಎಂದು ಸಂತಸವಾಗಿದೆ. ಇನ್ನೇನಿದ್ದರೂ ಸೀತಾಳಿಗೆ ತನ್ನ ಮನದ ಮಾತುಗಳನ್ನು ಹೇಳಿಕೊಂಡು ಮದುವೆಯಾಗುವುದೊಂದೆ ಬಾಕಿ ಎಂದು ಭಾವಿಸಿದ್ದಾನೆ. ಇತ್ತ ಭಾರ್ಗವಿಗೆ ಸೂರಿ ಮಾವ ಸತ್ಯ ಹೇಳಿದ್ದಾರೆ. ರಾಮ ಈಗಾಗಲೇ ಹುಡುಗಿಯನ್ನು ಹುಡುಕಿಕೊಂಡಿದ್ದು, ಮದುವೆ ಮಾಡಿಸುವುದೊಂದೆ ಬಾಕಿ ಅದು ಬೇರೆ ಯಾರೂ ಅಲ್ಲ ಸೀತಾ ಎಂದು ಹೇಳಿದ್ದಾರೆ.

ರಾಮನನ್ನು ಹೊಗಳಿದ ಸೀತಾ

ಈ ಸತ್ಯವನ್ನು ಕೇಳಿದ ಭಾರ್ಗವಿಗೆ ಶಾಕ್ ಆಗುತ್ತದೆ. ಮಾವನಿಗೂ ಈ ಸತ್ಯ ಗೊತ್ತಾಗಿರುವುದು ಗಾಬರಿಯನ್ನು ಉಂಟು ಮಾಡುತ್ತದೆ. ಇನ್ನು ಸೀತಾ, ರಾಮನನ್ನು ಹೊಗಳುತ್ತಿದ್ದು, ಈ ಬಗ್ಗೆ ಸಿಹಿ ರಾಮಗೆ ಹೇಳುತ್ತಾಳೆ. ಆದರೆ, ರಾಮ ಒಪ್ಪುವುದಿಲ್ಲ. ಆಗ ರಾಮ ಬಗ್ಗೆ ಮತ್ತೆ ಸೀತಾ ಶ್ರೀರಾಮಚಂದ್ರನಿಗೆ ಹೋಲಿಸಿ ಮಾತನಾಡುತ್ತಾಳೆ. ಅಂತಹವರ ಸ್ನೇಹ ನಮಗೆ ಸಿಕ್ಕಿರುವುದು ಪುಣ್ಯ ಎಂದು ಹೇಳುತ್ತಾಳೆ. ಈ ಮಾತನ್ನು ಸಿಹಿ ಸೈಲೆಂಟ್ ಆಗಿ ವಾಟ್ಸಪ್ ನಲ್ಲಿ ರೆಕಾರ್ಡ್ ಮಾಡಿ ರಾಮ ಗೆ ಕಳಿಸುತ್ತಾಳೆ. ಸೀತಾ ತನ್ನನ್ನು ಹೊಗಳಿದ್ದನ್ನು ಕೇಳಿದ ರಾಮಗೆ ತುಂಬಾ ಖುಷಿಯಾಗುತ್ತದೆ.

written update on episode 09 February seetha rama serial

ರಾಮ-ಸೀತಾ ಮಧ್ಯೆ ಮತ್ತೆ ಬಂದ ಕೇಡಿ

ಇನ್ನು ರಾಮ ಮತ್ತು ಸೀತಾಳಿಗೆ ಈಗ ಹೊಸ ಶತ್ರು ಒಬ್ಬರು ಹುಟ್ಟಿಕೊಂಡಿದ್ದಾರೆ. ಸಿಹಿಯನ್ನು ಕಿಡ್ನ್ಯಾಪ್ ಮಾಡಿದ್ದು, ರಾಮ ಕೈಗೆ ಚಾಕುವಿನಿಂದ ಗಾಯಗೊಳಿಸಿದ್ದು ಯಾರು ಎಂಬ ಸತ್ಯ ರಿವೀಲ್ ಆಗಿದೆ. ಅದು ಬೇರೆ ಯಾರೂ ಅಲ್ಲ, ಈ ಹಿಂದೆ ಸೀತಾಳನ್ನು ಮದುವೆಯಾಗಲು ಮುಂದಾಗಿದ್ದ ಅಡ್ವೊಕೇಟ್ ರುದ್ರ ಪ್ರತಾಪ್. ಜೈಲಿನಲ್ಲಿದ್ದುಕೊಂಡೇ ರುದ್ರ ಪ್ರತಾಪ್ ದ್ವೇಷ ಸಾಧಿಸಲು ಮುಂದಾಗಿದ್ದಾನೆ. ಸೀತಾ ಹಾಗೂ ರಾಮ ಯಾವುದೇ ಕಾರಣಕ್ಕೂ ಒಂದಾಗಬಾರದು, ತನ್ನನ್ನ ಜೈಲಿಗೆ ಕಳಿಸಿದ ಇವರಿಬ್ಬರನ್ನು ಸುಮ್ಮನೆ ಬಿಡಬಾರದು ಎಂದು ರೌಡಿಗಳನ್ನು ಕಳಿಸಿ ಹೆದರಿಸಿದ್ದಾನೆ.

written update on episode 09 February seetha rama serial

ದ್ವೇ‍ಷ ಸಾಧಿಸುತ್ತಿರುವ ರುದ್ರಪ್ರತಾಪ್

ರುದ್ರಪ್ರತಾಪ್ ಬೇಕಂತಲೇ ಮತ್ತೆ ಸೀತಾಳ ಅಣ್ಣ ಹಾಗೂ ಅತ್ತಿಗೆಯನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾನೆ. ಅವರಿಗೆ ಪುನಃ ಹಣದ ಆಸೆ ತೋರಿಸಿದ್ದು, ರೌಡಿಗಳನ್ನು ಸಂಪರ್ಕಿಸಲು ಹೇಳಿದ್ದಾನೆ. ಸೀತಾ ಮತ್ತು ರಾಮ್ ವಿರುದ್ಧ ಪ್ಲಾನ್ ಮಾಡಿ ಈ ಕೆಲಸವನ್ನು ಮಾಡಿಸಿದ್ದಾನೆ. ಆದರೆ, ಈ ಕೆಲಸವನ್ನು ಮಾಡಿಸಿದ್ದು ರುದ್ರಪ್ರತಾಪ್ ಎಂಬುದು ಇನ್ನೂ ರಾಮಗೆ ಗೊತ್ತಾಗಿಲ್ಲ. ಹಾಗೊಂದು ವೇಳೆ, ಗೊತ್ತಾದರೆ, ರುದ್ರಪ್ರತಾಪ್ ನ ರಾಮ ಖಂಡಿತಾ ಉಳಿಸುವುದಿಲ್ಲ.

written update on episode 09 February seetha rama serial

ಸಾಧನಾ ಮೇಲೆ ಕೂಗಾಡಿದ ರಾಮ

ಭಾರ್ಗವಿ ಈಗಾಗಲೇ ಸಾಧನಾ ಮನದಲ್ಲಿ ಹುಳಿ ಬೀಜವನ್ನು ಬಿತ್ತಿದ್ದಾಳೆ. ಇದಕ್ಕೆ ತಕ್ಕಂತೆ ಸತ್ಯ ಕೂಡ ಅಶೋಕ್ ಮನೆಗೆ ಹೊರಡದೇ ಕುಡಿಯುತ್ತಾ ಕುಳಿತಿರುತ್ತಾನೆ. ಕೋಪಗೊಂಡ ಸಾಧನಾ, ಗಂಡನನ್ನು ಬಿಟ್ಟು, ಮನೆಯವರ ಜೊತೆಗೆ ಅಶೋಕನ ಹೊಸ ಮನೆಗೆ ಹೋಗುತ್ತಾಳೆ. ಅಲ್ಲಿ ಅಶೋಕ್ ಮತ್ತು ಅಂಜಲಿಗೆ ಮದುವೆ ಮಾಡಬೇಕು ಎಂದು ಸೂರಿ ಮಾತನಾಡುತ್ತಾರೆ. ಆಗ ಭಾರ್ಗವಿ ಮನದಲ್ಲಿ ಕುದಿಯುತ್ತಿರುವ ಕೆಂಡವನ್ನು ವಿಶ್ವ ಗಮನಿಸುತ್ತಾನೆ. ಸಾಧನಾಗೂ ಕೋಪವಿರುತ್ತದೆ. ಎಲ್ಲರಿಗೂ ಕಾಫಿ ಮಾಡಲು ಸೂರಿ ಮಾವ ಭಾರ್ಗವಿಗೆ ಹೇಳುತ್ತಾರೆ. ಭಾರ್ಗವಿ ಬೇಕಂತಲೇ ಸಾಧನಾಳಿಗೆ ಕೆಟ್ಟ ಐಡಿಯಾ ಕೊಡುತ್ತಾಳೆ. ಅದರ ಪ್ರಕಾರ, ಸಾಧನಾ ಅಶೋಕ ಮತ್ತು ಅಂಜಲಿ ಕುಡಿಯುವ ಕಾಫಿಗೆ ಉಪ್ಪನ್ನು ಹಾಕುತ್ತಾಳೆ. ಅಂಜಲಿ ಕಾಫಿ ಕುಡಿಯದಿರುವುದನ್ನು ಕಂಡು ರಾಮ್ ಗೆ ಅನುಮಾನ ಬರುತ್ತದೆ. ರಾಮ್ ಆ ಕಾಫಿಯನ್ನು ಟೇಸ್ಟ್ ಮಾಡಿ ಸಾಧನಾ ಮೇಲೆ ಕೂಗಾಡುತ್ತಾನೆ.

More from Filmibeat

English summary
Ram gets angry on sadhana for using salt for coffee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X