Seetha Raama: ಸ್ನೇಹ ಮುರಿದುಕೊಂಡ ಸೀತಾ: ನಿರಾಸೆಯಲ್ಲಿ ಬೇಯುತ್ತಿರುವ ರಾಮ

By ಪ್ರಿಯಾ ದೊರೆ

ಸೀತಾ ರಾಮ ಧಾರಾವಾಹಿಯಲ್ಲಿ ತನ್ನ ಗೆಳೆಯನ ಬಗ್ಗೆ ಸತ್ಯ ಅರಿತ ಸೀತಾ ಶಾಕ್‌ನಲ್ಲಿದ್ದಾಳೆ. ಅಷ್ಟೇ ಅಲ್ಲದೇ, ಸುಳ್ಳು ಹೇಳಿದ್ದಕ್ಕೆ ಬಹಳ ಕೋಪ ಮಾಡಿಕೊಂಡಿದ್ದಾಳೆ.

ಸುಳ್ಳು ಹೇಳಿ ಇಷ್ಟು ದಿನ ಜೊತೆಗಿದ್ದ ರಾಮ್‌ಗೂ ಮೋಸ ಮಾಡಿ ಮದುವೆಯಾಗಲು ಮುಂದಾಗಿದ್ದ ರುದ್ರಪ್ರತಾಪ್‌ಗೂ ವ್ಯತ್ಯಾಸವಿಲ್ಲ ಎಂಬಂತೆ ನಡೆದುಕೊಂಡಿದ್ದಾಳೆ.

Written update on episode 09th January seetha raama serial

ರಾಮ್ ಎದುರಿಗೆ ಸೀತಾ ನಿಷ್ಠುರವಾಗಿ ನಡೆದುಕೊಂಡರೂ ಕೂಡ ಮನದಒಳಗೊಳಗೆ ಕೊರಗುತ್ತಿದ್ದಾಳೆ. ಒಬ್ಬಳೇ ಸಂಕಟವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಅಳುತ್ತಿದ್ದಾಳೆ.

ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೀತಾ

ರಾಮ್ ಎದುರಿಗೆ ಮಾತ್ರ ಗಟ್ಟಿಯಾಗಿ ಮಾತನಾಡುತ್ತಾ, ಸ್ನೇಹವನ್ನು ವಿರೋಧಿಸುತ್ತಿರುವ ಸೀತಾ ನೋವಿನಲ್ಲೇ ಅಮ್ಮ-ಅಪ್ಪನ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದಾಳೆ. ಕೇಕ್ ಕಟ್ ಮಾಡಿಸಿ ಎಲ್ಲರಿಗೂ ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಹಾಗೂ ಕ್ಯಾರೆಟ್ ಹಲ್ವಾ ಮಾಡಿ ಬಡಿಸಿದ್ದಾಳೆ. ಸೀತಾ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಕ್ಕೆ ಅಪ್ಪ-ಅಮ್ಮ ಖುಷಿ ಪಡುತ್ತಾರೆ. ಸೀತಾ ಎಲ್ಲರಿಗೂ ಊಟ ಬಡಿಸುವಾಗ ರಾಮ್ ಕೂಡ ತಟ್ಟೆ ಹಿಡಿದು ನಿಲ್ಲುತ್ತಾನೆ. ಆದರೆ ಸೀತಾ, ರಾಮ್‌ಗಾಗಿ ಚೇರ್ ತಂದಿಟ್ಟು, ಹೆಚ್ಚಿನ ಗೌರವ ಕೊಟ್ಟು ಊಟ ಬಡಿಸುತ್ತಾಳೆ. ಇದು ರಾಮ್‌ಗೆ ಮುಜುಗರದ ಜೊತೆಗೆ, ಸೀತಾಳ ನಡವಳಿಕೆ ಬಹಳ ಬೇಸರ ತರುತ್ತದೆ. ಹೀಗಾಗಿ ರಾಮ್ ಸರಿಯಾಗಿ ಊಟ ಮಾಡುವುದಿಲ್ಲ.

ಮತ್ತೆ ಬರಬೇಡಿ ಎಂದ ಸೀತಾ

ರಾಮ್, ಸೀತಾಳನ್ನು ಕನ್ವಿನ್ಸ್ ಮಾಡಲು ಬಹಳ ಪ್ರಯತ್ನ ಪಡುತ್ತಾನೆ. ಆದರೆ ಆಕೆ ಮಾತು ತಯಾರಿರುವುದಿಲ್ಲ. ಆಫಿಸ್‌ನಲ್ಲಿ ಫ್ರಾಡ್ ನಡೆಯುತ್ತಿತ್ತು. ಅದಕ್ಕೋಸ್ಕರ ಎಲ್ಲರಿಗೂ ಸುಳ್ಳು ಹೇಳಿ, ಎಂಪ್ಲಾಯ್ ರೀತಿ ಇರುತ್ತಿದ್ದೆ ಎಂದು ರಾಮ್ ಹೇಳಿದರೂ ಸೀತಾ ಕೇಳುವುದಿಲ್ಲ. ನೀವು ಏನೇ ಕಾರಣ ಕೊಟ್ಟರೂ ಅದು ನನಗೆ ಸರಿ ಅನಿಸೋದಿಲ್ಲ. ದಯವಿಟ್ಟು ಹೊರಡಿ. ಮತ್ತೆ ಬರೋದಕ್ಕೆ ಹೋಗಬೇಡಿ. ಬಾಸ್ ಎಂಪ್ಲಾಯ್ ಮನೆಗೆ ಬರುವುದು, ಸಲುಗೆಯಿಂದ ಇರುವುದು ಸಮಾಜದಲ್ಲಿ ಅಷ್ಟು ಒಳ್ಳೆಯದಲ್ಲ. ನಿಮ್ಮ ಪಾಡಿಗೆ ನೀವು ಇರಿ. ಇಲ್ಲಿಗೆ ಬರೋದರಿಂದ ನನಗೂ ತೊಂದರೆಯಾಗುತ್ತೆ ಎಂದು ಹೇಳುತ್ತಾಳೆ. ರಾಮ್‌ಗೆ ಸೀತಾ ಮಾತುಗಳು ತುಂಬಾ ಬೇಸರ ಉಂಟು ಮಾಡುತ್ತದೆ.

Written update on episode 09th January seetha raama serial

ಕ್ಯಾರೆಟ್ ಹಲ್ವಾ ಕೊಟ್ಟ ಸಿಹಿ

ರಾಮ್ ಅಲ್ಲಿಂದ ಹೊರಟಾಗ ಸಿಹಿ ತಡೆದು, ರಾಮ್‌ಗೆ ಕ್ಯಾರೆಟ್ ಹಲ್ವಾ ಅನ್ನು ಬಾಕ್ಸ್‌ನಲ್ಲಿ ತಂದು ಕೊಡುತ್ತಾಳೆ. ಸೀತಾ ಕೋಪ ಮಾಡಿಕೊಂಡಿರುವುದಕ್ಕೆ ರಾಮ್ ಊಟ ಮಾಡಿಲ್ಲ ಎಂಬುದನ್ನು ಅರಿತಿರುವ ಸಿಹಿ, ಮತ್ತೆ ಬರೋದಕ್ಕೆ ಹೇಳುತ್ತಾಳೆ. ಆದರೆ, ರಾಮ್ ಮತ್ತೆ ಬರುತ್ತಾನೋ ಇಲ್ಲವೋ ಗೊತ್ತಿಲ್ಲ. ರಾತ್ರಿಯಾದ ಮೇಲೆ ಸಿಹಿ, ಸೀತಾ ಬಳಿ ಫೋನ್ ಕೇಳುತ್ತಾಳೆ. ರಾಮ್ ಜೊತೆಗೆ ಮಾತನಾಡಲು ಬಯಸುತ್ತಾಳೆ. ಆದರೆ ಸೀತಾ ಇನ್ಮುಂದೆ ರಾಮ್ ಫ್ರೆಂಡ್ ಅಲ್ಲ, ಅವರು ಕಂಪನಿಯ ಬಾಸ್ ಎಂದು ಹೇಳಿ, ಇನ್ಯಾವತ್ತು ರಾಮ್ ಜೊತೆಗೆ ಮಾತನಾಡಬಾರದು ಎಂದು ಬುದ್ಧಿ ಹೇಳುತ್ತಾಳೆ. ಆದರೆ, ಸಿಹಿಗೆ ಫ್ರೆಂಡ್ ಅನ್ನು ಬಿಟ್ಟಿರೋದಕ್ಕೆ ಆಗದೇ, ತಾನೂ ಊಟ ಮಾಡದೇ ಬಾಗಿಲಲ್ಲಿ ನಿಂತು ಫ್ರೆಂಡ್ ಬಗ್ಗೆ ಯೋಚಿಸುತ್ತಿರುತ್ತಾಳೆ.

ಮನೆಗೆ ಬಂದು ರಾಮ್ ಕೂಗಾಟ

ರಾಮ್ ವಠಾರದಿಂದ ಹೊರಟು ಬಹಳ ಕೋಪದಲ್ಲಿ ಮನೆಗೆ ಬರುತ್ತಾನೆ. ಮನೆಯಲ್ಲಿ ಎಲ್ಲರೂ ರಾಮ್ ಟಿವಿಯಲ್ಲಿ ಬರುತ್ತಿರುವುದನ್ನು ಸಂತೋಷದಿಂದ ಹೊಗಳಿದರೆ, ರಾಮ್ ಎಲ್ಲರ ಮೇಲೆ ಕೂಗಾಡುತ್ತಾನೆ. ನನ್ನ ಫೋಟೋಗಳನ್ನು ಮೀಡಿಯಾಗೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಾನೆ. ಆಗ ಭಾರ್ಗವಿ ತಾನೇ ಎಂದು ಸತ್ಯ ಒಪ್ಪಿಕೊಳ್ಳುತ್ತಾಳೆ.

ಭಾರ್ಗವಿ ಕಣ್ಣೀರು

ನನ್ನ ಪರ್ಮಿಷನ್ ಇಲ್ಲದೇ ಹೀಗೆ ಯಾಕೆ ಮಾಡಿದ್ದು ಎಂದು ರಾಮ್, ಭಾರ್ಗವಿಯನ್ನು ಪ್ರಶ್ನಿಸುತ್ತಾನೆ. ಭಾರ್ಗವಿ ಕಣ್ಣಿರು ಹಾಕುತ್ತಾ ಇದು ನನ್ನ ಸಂಭ್ರಮ. ನನ್ನ ಮಗನ ಸಾಧನೆ ಇದು ಎಂದು ಒಣ ಕಣ್ಣೀರು ಹಾಕಿದಾಗ ರಾಮ್ ವಿಧಿ ಇಲ್ಲದೇ ಸುಮ್ಮನೆ ಹೊರಟು ಹೋಗುತ್ತಾನೆ. ಅಶೋಕನ ಬಳಿ ಸೀತಾ ಬಗ್ಗೆ ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ.

More from Filmibeat

English summary
Seetha Raama Kannada serial today update. Seetha breaks friendship with ram and she is feeling sad;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X