Seetha Rama ; ರಾಮ-ಸೀತಾ ಮದುವೆಗೆ ಒಪ್ಪಿದ ಸಿಹಿ, ಆದರೆ ಭಾರ್ಗವಿ ಏನ್ಮಾಡ್ತಾಳೆ..?
ಸೀತಾರಾಮ ಧಾರಾವಾಹಿಯಲ್ಲಿ ಇದ್ದಕ್ಕಿದ್ದ ಹಾಗೆಯೇ ಸೂರಿ ತಾತನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದ ರಾಮ ಗೆ ಆತಂಕ ಶುರು ಆಗಿದೆ. ತನ್ನ ಮದುವೆಯ ಬಗ್ಗೆ ಹೇಗೆ ಹೇಳುವುದು. ಅದರಲ್ಲೂ ಸೀತಾಳಿಗೆ ಈಗಾಗಲೇ ಮಗು ಇದೆ. ಈ ವಿಚಾರ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಹೇಳಿದರೆ, ಏನು ಮಾಡುತ್ತಾರೋ ಎಂದು ಆತಂಕಗೊಂಡಿದ್ದಾರೆ. ಈ ವಿಚಾರದಲ್ಲಿ ರಾಮ ಈಗ ಭಾರ್ಗವಿಯ ಸಹಾಯವನ್ನು ಪಡೆದುಕೊಳ್ಳಲು ಆಲೋಚಿಸಿದ್ದಾನೆ. ಭಾರ್ಗವಿಗೆ ರಾಮ ನಡೆ ಗೊತ್ತಿದ್ದು, ಮನದಲ್ಲೇ ನಸುನಕ್ಕಿದ್ದಾಳೆ.
ಅನಾಮಿಕನಿಗಾಗಿ ಕಾದರೂ ಬರಲಿಲ್ಲ
ಸೀತಾ ಪಾರ್ಕ್ ಗೆ ಬಂದು ಅನಾಮಿಕನಿಗಾಗಿ ಕಾಯುತ್ತಿದ್ದಾಳೆ. ರಾಮ ಪಾರ್ಕ್ ಗೆ ಬಂದು ನೀವ್ಯಾಕೆ ಬಂದಿದ್ದು. ನಾನು ನೋಡಿಕೊಳ್ಳುತ್ತಿದ್ದೆ ಎನ್ನುತ್ತಾನೆ. ಸೀತಾ ನಿಮ್ಮನ್ನು ನೋಡಿ ಅವನು ಹೋಗಬಹುದು ಎಂದಾಗ ರಾಮ ಬಚ್ಚಿಟ್ಟುಕೊಳ್ಳುತ್ತಾನೆ. ಆಗ ರುದ್ರಪ್ರತಾಪ್ ಅಲ್ಲಿಗೆ ಬರುತ್ತಾನೆ. ಸೀತಾ ನಿನಗೆ ಹಳೆಯದೆಲ್ಲಾ ಮರೆತು ಹೋಗಿದೆ ಅಲ್ವಾ. ಇವತ್ತು ಎಲ್ಲವನ್ನು ನೆನಪು ಮಾಡಿಸುತ್ತೀನಿ ಎಂದು ಹೇಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಅಂಜಲಿ ಹಾಗೂ ಪ್ರಿಯಾ ಬರುತ್ತಾಳೆ. ಆಗ ರುದ್ರ ಪ್ರತಾಪ್ ಗೆ ರಾಮ ಕೂಡ ಕಾಣಿಸುತ್ತಾನೆ. ಹಾಗಾಗಿ ರುದ್ರಪ್ರತಾಪ್ ಅಲ್ಲಿಂದ ಎಸ್ಕೇಪ್ ಆಗುತ್ತಾನೆ.

ಸೀತಮ್ಮನ ಮದುವೆಗೆ ಒಪ್ಪಿದ ಸಿಹಿ
ಇನ್ನು ಸಿಹಿಗೆ ರಾಮ ಇಲ್ಲದೇ ಸೀತೆ ಚೆನ್ನಾಗಿರೊಲ್ಲ. ಸೀತೆ ಇರದೇ ರಾಮನನ್ನು ನೋಡೋಕೆ ಆಗಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಮದುವೆಗೆ ರೆಡಿಯಾಗುತ್ತಿರುವ ಅಜ್ಜಿ ತಾತನನ್ನು ನೋಡುತ್ತಾಳೆ. ತಾತ ಅಜ್ಜಿಗೆ ಹೂವನ್ನು ಮುಡಿಸುತ್ತಿರುವುದನ್ನು ನೋಡಿ ಖುಷಿ ಪಡುತ್ತಾಳೆ. ಮದುವೆ ಮನೆಗೆ ಹೊರಡುವಾಗ ಸೀತಾಳಿಗೂ ಹೂವು ಮುಡಿಯಲು ಹೇಳುವ ಸಿಹಿ, ನನಗೆ ಅಪ್ಪನಿಲ್ಲದಿದ್ದರೂ ಪರವಾಗಿಲ್ಲ. ಆದರೆ ನಿನಗೆ ಹೂವು ಮುಡಿಸೋಕೆ, ಸೀರೆ ನೆರಿಗೆ ಹಿಡಿಯೋಕೆ ಗಂಡ ಬೇಕು ಎಂದು ಹೇಳುತ್ತಾಳೆ. ಈ ಮಾತು ಸೀತಾಳನ್ನು ಗೊಂದಲಕ್ಕೀಡು ಮಾಡುತ್ತೆ. ಆದರೆ, ರಾಮ ನನ್ನು ಸಿಹಿ ಒಪ್ಪಿಕೊಂಡಿದ್ದಾಳೆ ಎಂಬುದಂತೂ ಪಕ್ಕಾ ಆಗಿದೆ.
ಸೂರಿಗಾಗಿ ಮನೆಯಲ್ಲೇ ಉಳಿದ ಸಾಧನಾ
ಇನ್ನು ಸೂರಿ ತಾತನಿಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ಸೂರಿ ತಾತ ಇಂದು ಮೆಹಂದಿ ಹಾಗೂ ಹಳದಿ ಶಾಸ್ತ್ರಕ್ಕೆ ನಾನು ಬರುವುದಿಲ್ಲ. ನೀವೆಲ್ಲಾ ಮದುವೆಗೆ ಹೋಗಿ ಬನ್ನಿ ಎಂದು ಹೇಳುತ್ತಾರೆ. ಸತ್ಯ ತಾನು ಇರುವುದಾಗಿ ಹೇಳುತ್ತಾನೆ. ಆದರೆ, ಬೇಕಂತಲೇ ಭಾರ್ಗವಿ ತಾನು ಇರುವುದಾಗಿ ನಾಟಕ ಮಾಡುತ್ತಾಳೆ. ಆದರೆ, ರಾಮ ನೀವ್ಯಾರೂ ಬೇಡ. ಸಾಧನಾ ಚಿಕ್ಕಿ ತಾತನಿಗೋಸ್ಕರ ನೀವಿರಿ. ತಾತನನ್ನು ನೋಡಿಕೊಳ್ಳಿ ಎಂದು ಹೇಳುತ್ತಾನೆ. ಸಾಧನಾಳಿಗೆ ಇಷ್ಟವಿಲ್ಲದಿದ್ದರೂ ಕೂಡ ಒಪ್ಪಿಕೊಳ್ಳುತ್ತಾರೆ. ಸಾಧನಾ ಸತ್ಯ ಬಳಿ ತನ್ನ ಬೇಸರ ಹೊರಹಾಕುತ್ತಾಳೆ

ಅಶೋಕ್-ಪ್ರಿಯಾ ಮದುವೆ
ಇನ್ನು ಮದುವೆ ಮನೆಗೆ ಎಲ್ಲರೂ ಆಗಮಿಸಿದ್ದಾರೆ. ಅಶೋಕ್ ಗಿಂತಲೂ ಪ್ರಿಯಾಳಿಗೆ ತನ್ನ ಮದುವೆಯ ಖುಷಿ ಹೆಚ್ಚಾಗಿದೆ. ಅಂಜಲಿ ಕೂಡ ಮೆಹಂದಿ ಶಾಸ್ತ್ರ ಹಾಗೂ ಹಳದಿ ಶಾಸ್ತ್ರಕ್ಕೆ ಅತ್ತಿಗೆ ಜೊತೆ ನಿಂತಿದ್ದಾಳೆ. ಭಾರ್ಗವಿ ಮದುವೆ ಮನೆಗೆ ಕಾಟಾಚಾರಕ್ಕೆಂದು ಬಂದಿದ್ದು, ರಾಮ ಹಾಗೂ ಸೀತಾ ಆಡುತ್ತಿರುವ ಆಟವನ್ನು ನೋಡುತ್ತಿದ್ದಾಳೆ. ಸೂರಿ ತಾತನ ಬಗ್ಗೆ ತನ್ನ ಆತಂಕವನ್ನು ರಾಮ ಹೇಳಿಕೊಂಡಿದ್ದಾನೆ. ಸಿಹಿ ಬಗ್ಗೆ ಮನೆಯಲ್ಲಿ ಹೇಗೆ ಹೇಳುವುದೋ ಗೊತ್ತಿಲ್ಲ. ಅದರಲ್ಲೂ ನಾಳೆ ಅಶೋಕ್ ಮದುವೆ ನಡೆದ ಬಳಿಕ ಎಲ್ಲರ ಎದುರು ನಮ್ಮಿಬ್ಬರ ಪ್ರೀತಿ ಬಗ್ಗೆ ಹೇಳಬೇಕು ಎಂದು ಹೇಳುತ್ತಾನೆ.


Click it and Unblock the Notifications











