Seetha Rama ; ಸತ್ಯಳ ಮನ ಗೆದ್ದ ಸಿಹಿ ಪುಟಾಣಿ : ರುದ್ರಪ್ರತಾಪ್ ಸುಳ್ಳಿನ ಸುಳಿಯಲ್ಲಿ ಸಿಕ್ಕಿಬಿದ್ದ ಅಂಜಲಿ..!
ಸೀತಾರಾಮ ಧಾರಾವಾಹಿಯಲ್ಲಿ ರಾಮ ಮನೆಯಲ್ಲಿ ಪೂಜೆ ಇದ್ದರೂ ಕೆಲಸವೇ ಮುಖ್ಯ ಎಂದು ಹೇಳಿ ದುಬೈಗೆ ಹೋಗಿದ್ದಾನೆ. ಇದು ಸೀತಾಳಿಗೆ ಆತಂಕವನ್ನು ತರಿಸಿದೆ. ಚಾಂದಿನಿ ಎರಡು ದಿನಗಳ ಹಿಂದೆ, ನಾನು ಮತ್ತೆ ರಾಮ ಪ್ಯಾರಿಸ್ ಗೆ ಹೋಗುತ್ತಿದ್ದೇವೆ. ಬಿಸಿನೆಸ್ ಟ್ರಿಪ್ ಹೆಸರಲ್ಲಿ ಮಜಾ ಮಾಡುತ್ತೇವೆ. ನಿನಗೆ ನಂಬಿಕೆ ಇಲ್ಲದಿದ್ದರೆ ಕಾದು ನೋಡು ಎಂದಿದ್ದಳು. ಈಗ ರಾಮ ದುಬೈಗೆ ಹೊರಟಿರುವುದನ್ನು ಕೇಳಿ ಚಾಂದಿನಿ ಪ್ಲಾನ್ ಇರಬೇಕು. ಬೇಕಂತಲೇ ಏನೋ ಮಸಲತ್ತು ಮಾಡಿರಬೇಕು ಸೀತಾ ಎಂದುಕೊಳ್ಳುತ್ತಾಳೆ.
ಭಾರ್ಗವಿ ಬಳಿ ಸೀತಾ ಮಾತು
ಹೀಗಾಗಿ ಸೀತಾ ಭಾರ್ಗವಿಯನ್ನು ಸೈಡ್ ಗೆ ಕರೆದುಕೊಂಡು ಹೋಗಿ ಮಾತನಾಡುತ್ತಾಳೆ. ಚಾಂದಿನಿ ಹೀಗೆಲ್ಲಾ ಹೇಳಿದ್ದಳು. ಅವಳು ಹೇಳಿದ್ದು ಪ್ಯಾರಿಸ್, ಆದರೆ, ರಾಮ ದುಬೈಗೆ ಹೋಗುತ್ತಿದ್ದಾನೆ. ಈಗ ಏನು ಮಾಡುವುದು ಎಂದು ಆತಂಕದಿಂದ ಕೇಳುತ್ತಾಳೆ. ಭಾರ್ಗವಿ ಹಾಗೆಲ್ಲಾ ಏನೂ ಆಗುವುದಿಲ್ಲ. ರಾಮ ಗೆ ಅಪಾಯವಾಗದಂತೆ ನೋಡಿಕೊಳ್ಳಲು ಸಾಕಷ್ಟು ಜನ ಇದ್ದಾರೆ. ಅಶೋಕ್ ಕೂಡ ರಾಮಗೆ ಏನು ಆಗದಂತೆ ಕಾಪಾಡುತ್ತಾನೆ ಎಂದು ಹೇಳಿ ಸಮಾಧಾನ ಮಾಡುತ್ತಾಳೆ. ಪೂಜೆಯೆಲ್ಲಾ ಮುಗಿದ ಬಳಿಕ ಪ್ರಿಯಾ ಮತ್ತು ಅವರ ತಾಯಿ ಪ್ರೇಮಾ ಬರುತ್ತಾರೆ. ಅಶೋಕ್ ಜೊತೆಗೆ ಬಾರದಿದ್ದಕ್ಕೆ ಪ್ರೇಮಾ ಬೇಸರ ಮಾಡಿಕೊಂಡಿರುತ್ತಾಳೆ. ಅಶೋಕ್ ಮೂರು ಹೊತ್ತು ಕೆಲಸ ಕೆಲಸ ಅನ್ನುತ್ತಲೇ ಇರುತ್ತಾನೆ ಎಂದು ಹೇಳುತ್ತಾಳೆ. ಅದಕ್ಕೆ ಸೂರಿ ತಾತ ಮದುವೆಗೆ ಮುಂಚೆಯಿಂದಲೂ ಹೀಗೆಯೇ, ಈಗಲೂ ಬದಲಾಗಲಿಲ್ವಾ ಎಂದು ಕಾಮಿಡಿ ಮಾಡಿಕೊಂಡು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ.

ಚಿಕ್ಕಪ್ಪನ ಮನ ಗೆದ್ದ ಸಿಹಿ
ಸೀತಾ ಮತ್ತು ರಾಮ್ ಮದುವೆ ನಡೆಯುತ್ತದೆ ಎಂಬುದು ತಿಳಿದಾಗಿನಿಂದ ಸಿಹಿ ಖುಷಿಯಾಗಿರುತ್ತಾಳೆ. ಪ್ರಸಾದವನ್ನು ತೆಗೆದುಕೊಂಡು ಭಾರ್ಗವಿ ಮಗನಿಗೆ ಕೊಡಲು ಮನೆಯ ಮೇಲೆ ಹೋಗುತ್ತಾಳೆ. ಅಲ್ಲಿ ಸತ್ಯ ಕುಡಿದು ಮಲಗಿರುವುದನ್ನು ನೋಡುತ್ತಾಳೆ. ಅವರಿಗೆ ಪ್ರಸಾದ್ ಕೊಡಲು ಮುಂದಾಗುತ್ತಾಳೆ. ಆಗ ಸತ್ಯ ನೀನು ತಿನ್ನು ಮಗು ಎಂದಿದ್ದಕ್ಕೆ, ತನಗೆ ಶುಗರ್ ಖಾಯಿಲೆ ಇದ್ದು, ನಿತ್ಯ ಇನ್ಸುಲಿನ್ ತೆಗೆದುಕೊಳ್ಳುವ ಬಗ್ಗೆ ಹೇಳುತ್ತಾಳೆ. ಇದೆಲ್ಲಾ ಕೇಳಿ ಸತ್ಯನಿಗೆ ನೋವಾಗುತ್ತದೆ. ಸಿಹಿ ಬಗ್ಗೆ ಅತೀಯಾದ ಪ್ರೇಮವನ್ನು ಹೊಂದುತ್ತಾನೆ. ಸೀತಾಳ ಬಳಿ ಆದಷ್ಟು ಬೇಗ ಈ ಮನೆಗೆ ಬಂದು ನಮ್ಮನ್ನೆಲ್ಲಾ ಬೆಳಗು ಎಂದು ಆಶೀರ್ವಾದ ಮಾಡುತ್ತಾರೆ.

ಆರ್ ಪಿಯನ್ನು ಅಪ್ಪಿಕೊಂಡ ಅಂಜಲಿ
ರುದ್ರಪ್ರತಾಪ್ ಕಾಣದೇ ಇರುವುದಕ್ಕೆ ಅಂಜಲಿ ಎಲ್ಲಾ ಕಡೆಯಲ್ಲೂ ಹುಡುಕಾಡುತ್ತಿರುತ್ತಾಳೆ. ದಾರಿಯಲ್ಲಿ ರಾಮು ಎಲ್ಲಿಗೆ ಹೋದರೋ ಗಾಬರಿಯಲ್ಲಿ ಹೋಗುವಾಗ ರುದ್ರಪ್ರತಾಪ್ ಕಾಣಿಸಿಕೊಳ್ಳುತ್ತಾನೆ. ತಕ್ಷಣ ಅಂಜಲಿ ಅವನನ್ನು ತಬ್ಬಿಕೊಂಡು ನೂರೆಂಟು ಪ್ರಶ್ನೆ ಮಾಡುತ್ತಾಳೆ. ಇದು ರುದ್ರಪ್ರತಾಪ್ ಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಸುಮ್ಮನಿರದೇ ತಾನೂ ಕೂಡ ಅಂಜಲಿಗೆ ಪ್ರಪೋಸ್ ಮಾಡಿಯೇ ಬಿಡುತ್ತಾನೆ. ಅಂಜಲಿಯೂ ಕೂಡ ರುದ್ರಪ್ರತಾಪ್ ನಿಜ ಮುಖ ಅರಿಯದೇ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ.

ರುದ್ರಪ್ರತಾಪ್ ಬಗ್ಗೆ ಕಥೆ ಹೇಳಿದ ರಾಮು
ರುದ್ರಪ್ರತಾಪ್ ಎಂಬ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಆದರೆ, ಆ ವ್ಯಕ್ತಿ ನೋಡಲು ತನ್ನಂತೆಯೇ ಇದ್ದು ಸಮಸ್ಯೆ ಆಗಿದೆ, ನನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಅದಕ್ಕೆ ಬೇರೆ ದಾರಿ ಕಾಣದೇ ತಪ್ಪಿಸಿಕೊಂಡು ಓಡಾಡುತ್ತಿದ್ದೀನಿ ಎಂದು ಅಂಜಲಿ ಬಳಿ ಸುಳ್ಳು ಹೇಳುತ್ತಾಳೆ. ದಡ್ಡಿಯಂತೆ ಅಂಜಲಿ ಆತ ಹೇಳುವ ಮಾತುಗಳನ್ನು ನಂಬುತ್ತಿದ್ದಾಳೆ.


Click it and Unblock the Notifications











