Seetha Rama ; ಸೀತಾಗೆ ತಂದ ಗುಲಾಬಿ ಹೂಗಳು ಚಾಂದಿನಿ ಕೈ ಸೇರಿದ್ದು ಹೇಗೆ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಇಂದು ರಾಮ ಮತ್ತೆ ಆಫೀಸ್ ಗೆ ಬರಲು ರೆಡಿಯಾಗಿದ್ದಾನೆ. ಅಶೋಕನಿಗೆ ರಾಮ ಇಷ್ಟು ಬೇಗ ಹುಷಾರಾಗಿದ್ದು ಖುಷಿ ಕೊಟ್ಟಿದೆ. ಇತ್ತ ಸೀತಾ ಕೂಡ ರಾಮ ನನ್ನು ಪ್ರೀತಿಯಿಂದ ಸ್ವಾಗತಿಸಲು ತನ್ನದೇ ರೀತಿಯಲ್ಲಿ ಸಜ್ಜಾಗಿದ್ದಾಳೆ. ಸೀತಾ ಮನದಲ್ಲಿ ರಾಮ ಮೇಲೆ ಪ್ರೀತಿ ಹೆಚ್ಚಾಗಿದೆ. ಸಿಹಿ ಕೂಡ ತನ್ನ ಫ್ರೆಂಡ್ ರಾಮಗಾಗಿ ಡಬ್ಬಿಯನ್ನು ಪ್ರೀತಿಯಿಂದ ತುಂಬಿ ಕಳಿಸಿದ್ದಾಳೆ. ರಾಮ ಬೇಗ ಚೇತರಿಸಿಕೊಂಡು ಆಫೀಸಿಗೆ ಹೊರಟಿದ್ದಾನೆ.

ರಾಮಗಾಗಿ ರೆಡ್ ರೋಸ್ ತಂದ ಸೀತಾ

ಅಶೋಕ, ರಾಮಗಾಗಿ ರೆಡ್ ರೋಸ್ ನ ಬೊಕ್ಕೆ ತಂದು ಕೊಟ್ಟಿದ್ದಾನೆ. ಆಫೀಸಿಗೆ ಆಮೇಲೆ ಹೋಗು. ಮೊದಲು ಸೀತಾಳನ್ನು ಪ್ರಪೋಸ್ ಮಾಡು ಎಂದು ಹೇಳಿದ್ದಾನೆ. ಸೀತಾನ ಪ್ರಪೋಸ್ ಮಾಡಿ ಬಿಟ್ಟರೆ, ರಾಮ ಚಾಂದಿನಿ ಕಡೆಗೆ ತಿರುಗಿ ನೋಡುವುದಿಲ್ಲ ಎಂಬುದು ಅಶೋಕನ ಲೆಕ್ಕಾಚಾರ.

written update on episode 11 March seetha rama serial

ಮರೆಯಲ್ಲಿ ನಿಂತು ರಾಮ, ಸೀತಾಳಿಗೆ ಹೇಗೆ ಪ್ರಪೋಸ್ ಮಾಡುತ್ತಾನೆ ಎಂದು ನೋಡುತ್ತಿರುತ್ತಾನೆ. ಇತ್ತ ಸೀತಾ ಆಫೀಸಿಗೆ ಬರುವಾಗಲೇ ರೆಡ್ ರೋಸ್ ಖರೀದಿಸುತ್ತಾಳೆ. ರಾಮಗೆ ಕೊಟ್ಟು ವೆಲ್ಕಂ ಮಾಡಬೇಕು ಎನ್ನುವುದು ಸೀತಾಳ ಆಲೋಚನೆ ಆಗಿರುತ್ತದೆ. ಸೀತಾಳನ್ನು ನೋಡುತ್ತಿದ್ದಂತೆ ರಾಮ ಪ್ರಪೋಸ್ ಮಾಡಲು ಮುಂದೆ ಬರುತ್ತಾನೆ. ಅಷ್ಟರಲ್ಲಿ ಯಡವಟ್ಟು ಆಗುತ್ತೆ.

ಚಾಂದಿನಿಯಿಂದ ದೂರ ಉಳಿದ ರಾಮ್

ಸೀತಾ ಮತ್ತು ರಾಮ ಇಬ್ಬರೂ ಎದುರಾದ ಕೂಡಲೇ ಹಿಂದಿನಿಂದ ಬಂದ ಚಾಂದಿನಿ, ರಾಮನನ್ನು ತಬ್ಬಿಕೊಳ್ಳುತ್ತಾಳೆ. ಒಂದು ಕ್ಷಣ ಇಬ್ಬರೂ ಶಾಕ್ ಆಗುತ್ತಾರೆ. ಆದರೆ, ಹಿಂದಿನಿಂದ ತನ್ನನ್ನು ತಬ್ಬಿಕೊಂಡಿದ್ದು ಚಾಂದಿನಿ ಎಂಬುದನ್ನು ಗುರುತಿಸುತ್ತಾನೆ.

ಮೂರು ವರ್ಷ ಕಳೆದರೂ ರಾಮ ಚಾಂದಿನಿ ಸ್ಪರ್ಷವನ್ನು ಕೊಂಚವೂ ಅನುಮಾನಿಸದೇ, ಸುಲಭವಾಗಿ ಗೆಸ್ ಮಾಡುತ್ತಾನೆ. ಚಾಂದಿನಿ ಎಂದು ಹೇಳಿದ ಕೂಡಲೇ ಖುಷಿಯಾಗುವ ಚಾಂದಿನಿ ರಾಮ ನಿನಗೆ ನಾನೇ ಅಂತ ಗೊತ್ತಾಯ್ತಾ ಎಂದು ಕೇಳುತ್ತಾಳೆ.

written update on episode 11 March seetha rama serial

ರಾಮ ಕೈಯಲ್ಲಿದ್ದ ರೋಸ್ ಬೊಕ್ಕೆಯನ್ನು ತನಗೇ ಎಂದು ತಿಳಿದು ತೆಗೆದುಕೊಳ್ಳುತ್ತಾಳೆ. ಸೀತಾ ಚಾಂದಿನಿಯನ್ನು ರಾಮ ಲವರ್ ಎಂದು ಗೆಸ್ ಮಾಡುತ್ತಾಳೆ. ನೀವು ಹೇಳುತ್ತಿದ್ದದ್ದು ಇದೇ ಹುಡುಗಿ ಬಗ್ಗೆನಾ ಎಂದು ಕೇಳುತ್ತಾಳೆ. ಆಗ ಚಾಂದಿನಿಗೆ ಇನ್ನಷ್ಟು ಖುಷಿಯಾಗುತ್ತದೆ.

ನನ್ನ ಬಗ್ಗೆ ರಾಮ ಹೇಳಿಕೊಂಡಿದ್ದಾನೆ ಎಂದು ಸಂತಸ ಪಡುತ್ತಾಳೆ. ಸೀತಾ ಹೊರಟ ಮೇಲೆ ರಾಮ, ಚಾಂದಿನಿ ಅನ್ನು ದೂರ ಉಳಿಯುವಂತೆ ಹೇಳುತ್ತಾನೆ. ನಿನಗೆ ನನ್ನ ಮನದಲ್ಲಿ ಜಾಗವಿಲ್ಲ. ಹೊರಟು ಹೋಗು ಎನ್ನುತ್ತಾನೆ.

ಅಂಜಲಿಗೆ ಗಾಳ ಹಾಕುತ್ತಿರುವ ರಾಮು

ಇತ್ತ ರುದ್ರಪ್ರತಾಪ್ ಅಲಿಯಾಸ್ ರಾಮ, ಅಂಜಲಿಗೆ ಗಾಳ ಹಾಕುತ್ತಿದ್ದಾನೆ. ಟ್ರೀಟ್ ಮೆಂಟ್ ಹೆಸರಲ್ಲಿ ಆಸ್ಪತ್ರೆಗೆ ಬರುತ್ತಿದ್ದು, ಅಂಜಲಿ ಕೈನಲ್ಲೇ ಮಸಾಜ್ ಮಾಡಿಸಿಕೊಳ್ಳುತ್ತಾನೆ. ಬಹಳ ಒಳ್ಳೆಯವನಂತೆ ಮಾತನಾಡುತ್ತಾ ರಾಮ ಬಗ್ಗೆ ಮಾಹಿತಿ ಪಡೆಯುತ್ತಾನೆ.

written update on episode 11 March seetha rama serial

ರಾಮ ಸೀತಾಳನ್ನು ಪ್ರಪೋಸ್ ಮಾಡುವ ವಿಚಾರ ತಿಳಿದು ಯಾವುದೇ ಕಾರಣಕ್ಕೂ ಸೀತಾಳನ್ನು ಬಿಟ್ಟು ಕೊಡುವುದಿಲ್ಲ ಎಂದು ಮನದಲ್ಲೇ ಮಾತನಾಡಿಕೊಳ್ಳುತ್ತಾನೆ. ಆದರೆ ರುದ್ರಪ್ರತಾಪ್ ಬಗ್ಗೆ ಸತ್ಯ ಅರಿಯದ ಅಂಜಲಿ ಮುಂದೆ ಸಮಸ್ಯೆ ಎದುರಿಸುವುದಂತೂ ಪಕ್ಕಾ ಆಗಿದೆ.

ತಲೆ ಕೆಡಿಸಿಕೊಂಡಿರುವ ಚಾಂದಿನಿ

ರಾಮ ದೂರ ತಳ್ಳಿದ್ದನ್ನು ಸಹಿಸಿಕೊಳ್ಳದ ಚಾಂದಿನಿ ಭಾರ್ಗವಿಗೆ ಫೋನ್ ಮಾಡಿದ್ದಾಳೆ. ರಾಮಗೆ ನನ್ನ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ನನ್ನನ್ನು ದೂರ ಹೋಗು ಎಂದ. ನೀವು ನೋಡಿದರೆ, ರಾಮ ನನ್ನ ನೆನಪಿನಲ್ಲೇ ಇದ್ದಾನೆ ಎನ್ನುತ್ತೀರಾ ಈಗ ಏನು ಮಾಡಲಿ ಎಂದು ಕೇಳುತ್ತಾನೆ. ಅದಕ್ಕೆ ಭಾರ್ಗವಿ ಅಶೋಕ್ ಬೇಕಂತಲೇ ರಾಮ ತಲೆಯಿಂದ ನಿನ್ನನ್ನು ತೆಗೆದು ಹಾಕಲು ಯತ್ನಿಸುತ್ತಾನೆ. ಆದರೆ, ನೀನು ರಾಮ್ ನನ್ನು ಬಿಟ್ಟು ಕೊಡಬೇಡ ಎಂದು ಹೇಳಿಕೊಡುತ್ತಾಳೆ.

More from Filmibeat

English summary
ram gets roses to propose seethe. But chandini destroys
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X