Seetha Raama: ಭಾರ್ಗವಿ ಬಗ್ಗೆ ರಾಮನಿಗೆ ಸತ್ಯ ಗೊತ್ತಾಯ್ತಾ: ಚರಣ್ ಡಿ ಎಲ್ಲಾ ಸತ್ಯ ಹೇಳಿಬಿಟ್ನಾ..?
ಸೀತಾ ರಾಮ ಧಾರಾವಾಹಿಯಲ್ಲಿ ಈಗ ಪ್ರತಿಯೊಬ್ಬರಿಗೂ ದೇಸಾಯಿ ಕಂಪನಿಯ ಒಡೆಯ ಅಶೋಕ್ ಅಲ್ಲ, ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ರಾಮ್ ಎಂಬ ಸತ್ಯ ಗೊತ್ತಾಗಿದೆ.
ಬಾಸ್ ಅವತಾರದಲ್ಲಿ ರಾಮ್ ಆಫಿಸಿಗೆ ಬರುತ್ತಿದ್ದಂತೆ ಎಲ್ಲರೂ ಸ್ವಾಗತ ಕೋರಿದ್ದಾರೆ. ರಾಮ್ ಎಲ್ಲರ ಜೊತೆಗೆ ನಗುನಗುತಾ ಮಾತನಾಡಿದ್ದು, ಅಶೋಕನಿಗೆ ಎಲ್ಲಾ ಜವಾಬ್ದಾರಿ ಬಿಟ್ಟುಕೊಟ್ಟಿದ್ದಾನೆ.
ಮೊದಲಿನಂತೆ ಈಗಲೂ ಎಲ್ಲಾ ಕೆಲಸವನ್ನು ಅಶೋಕನೇ ನಿಭಾಯಿಸುತ್ತಾನೆ ಎಂದು ಹೇಳಿದ್ದಾನೆ. ಕ್ಯಾಬಿನ್‌ಗೆ ಚರಣ್ ಡಿ ಅನ್ನು ಕರೆದು, ಪ್ರಶ್ನೆ ಮಾಡುತ್ತಿದ್ದಾನೆ.

ಚರಣ್ ಡಿ ಸತ್ಯ ಹೇಳುತ್ತಾನಾ..?
ಆಫಿಸಿನಲ್ಲಿ ನಡೆಯುತ್ತಿರುವ ಮೋಸಕ್ಕೆ ಯಾರು ಕಾರಣ. ನಿನ್ನ ಕೈಯಲ್ಲಿ ಯಾರು ಈ ಕೆಲಸಗಳನ್ನೆಲ್ಲಾ ಮಾಡಿಸುತ್ತಿರುವುದು ಎಂದು ಪ್ರಶ್ನೆ ಮಾಡಿದ್ದಾನೆ. ರಾಮ್ ಪ್ರಶ್ನೆಗೆ ಚರಣ್ ಏನೂ ಉತ್ತರ ಹೇಳದೇ ಸುಮ್ಮನೆ ಕುಳಿತಿದ್ದಾನೆ. ಸತ್ಯ ಬಾಯಿ ಬಿಡದಿದ್ದರೆ, ಕೆಲಸದಿಂದ ಕಿತ್ತೆಸೆಯಲಿರುವುದಾಗಿ ಹೆದರಿಸುತ್ತಾರೆ. ಟರ್ಮಿನೇಟ್ ಆಗುತ್ತೇನೆ ಎಂಬ ಭಯದಲ್ಲಿ ಚರಣ್ ಡಿ ಇದ್ದಾನೆ. ಈಗ ಭಾರ್ಗವಿ ಹೆಸರನ್ನು ಹೇಗೆ ಹೇಳುವುದು ಎಂಬುದು ಅರ್ಥವಾಗದೇ ಬೆವರುತ್ತಿದ್ದಾನೆ.
ಗೊಂದಲದಲ್ಲಿ ಚರಣ್ ಡಿ
ಸತ್ಯ ಹೇಳದೇ ಹೋದರೆ ಕೆಲಸ ಹೋಗುತ್ತೆ. ಸತ್ಯ ಹೇಳಿದರೆ, ಭಾರ್ಗವಿ ಮೇಡಂ ಏನು ಮಾಡುತ್ತಾರೋ? ಎಂಬ ಗೊಂದಲದಲ್ಲಿ ಇದ್ದಾನೆ. ಇನ್ನೇನು ಹೆಸರು ಹೇಳಬೇಕು ಎಂದು ಬಾಯಿ ತೆರೆದ ವೇಳೆಗೆ ಸರಿಯಾಗಿ ರಾಮ್‌ಗೆ ಫೋನ್ ಕಾಲ್ ಬರುತ್ತದೆ. ಅಲ್ಲಿಂದ ರಾಮ್ ಹೊರಟು ಹೋಗುತ್ತಾನೆ. ರಾಮ್ ಹಿಂದೆಯೇ ಅಶೋಕನೂ ಹೊರಡುತ್ತಾನೆ. ಭಾರ್ಗವಿ ಫೋನ್ ಮಾಡಿ ತಾತನಿಗೆ ಲೋ ಬಿಪಿ ಆಗಿ ವೈದ್ಯರು ಬಂದಿದ್ದಾರೆ ಎಂದು ಹೇಳಿರುತ್ತಾಳೆ.

ಸೀತಾಳನ್ನು ಮಾತನಾಡಿಸುತ್ತಾನಾ ರಾಮ್
ರಾಮ್ ಗಾಬರಿಯಾಗಿ ಮನೆಗೆ ಹೋಗುತ್ತಾನೆ. ಭಾರ್ಗವಿ ಗಾಬರಿಯ ಧ್ವನಿಯಲ್ಲೇ ನಡೆದ ಘಟನೆಯನ್ನು ರಾಮ್‌ಗೆ ತಿಳಿಸುತ್ತಾಳೆ. ರಾಮ್ ಮತ್ತು ಅಶೋಕ ಇಬ್ಬರೂ ಕೂಡ ಸೂರಿ ತಾತನನ್ನು ನೋಡಲು ಹೋಗುತ್ತಾರೆ. ಅಶೋಕನಿಗೆ ಈ ಫೋನ್ ಬೇಕಂತಲೇ ಭಾರ್ಗವಿ ಮಾಡಿಸಿದ್ದು ಎಂಬ ಸತ್ಯ ಗೊತ್ತಿರುತ್ತದೆ. ಇನ್ನು ಭಾರ್ಗವಿ, ಚರಣ್‌ಗೆ ಕರೆ ಮಾಡಿ ಏನು ನಡೆಯಿತು ಎಂದು ವಿಚಾರಿಸುತ್ತಾಳೆ. ಇನ್ನು ಸೂರಿ ತಾತ ರಾಮ್‌ಗೆ ಸೀತಾ ಬಳಿ ಮಾತನಾಡಿ ಸಮಸ್ಯೆ ಬಗೆ ಹರಿಸಿಕೋ. ನಾನು ನಿನ್ನ ಮದುವೆ ನೋಡಬೇಕು ಎನ್ನುತ್ತಾರೆ. ಆದರೆ, ಸೀತಾ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಅನಿಸುತ್ತೆ ಎಂದು ಅಶೋಕನ ಬಳಿ ಚರ್ಚೆ ಮಾಡುತ್ತಿರುತ್ತಾನೆ.
ಜೊತೆಗಾರರು ಕೇಳಿದ ಪ್ರಶ್ನೆಗಳು
ಇನ್ನು ಸೀತಾಳನ್ನು ಆಫಿಸಿನಲ್ಲಿ ಸಹ ಸಿಬ್ಬಂದಿ ಮಾತನಾಡಿಸುತ್ತಾರೆ. ರಾಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಮಾಡುತ್ತಾರೆ. ಇದೆಲ್ಲವೂ ಸೀತಾಳಿಗೆ ಇರಿಟೇಟ್ ಆಗುವಂತೆ ಮಾಡುತ್ತದೆ. ಕೊನೆಗೆ ಸೀತಾ ನಿಮಗೆ ತಿಳಿದ ಹಾಗೆ ನನಗೂ ನಿನ್ನೆ ಟಿವಿ ನೋಡಿದ ಮೇಲೆ ರಾಮ್ ಸರ್ ಬಗ್ಗೆ ಗೊತ್ತಾಗಿದ್ದು. ಅದು ಬಿಟ್ಟು ಬೇರೇನೂ ಇಲ್ಲ ಎನ್ನುತ್ತಾಳೆ. ಆದರೆ, ಬೇರೆಯವರ ತಲೆಯಲ್ಲಿ ಸೀತಾಳಿಗೆ ಎಲ್ಲವೂ ಮೊದಲೇ ಗೊತ್ತಿತ್ತು ಎಂಬ ಭಾವನೆ ಇದೆ.
ಸಿಹಿಗೆ ಬುದ್ಧಿ ಹೇಳಿದ ಸೀತಾ
ಎಲ್ಲರ ಪ್ರಶ್ನೆಗಳಿಂದ ಬೇಸರಗೊಂಡ ಸೀತಾ, ಚರಣ್ ಡಿ ಕ್ಯಾಬಿನ್‌ಗೆ ಹೋಗುತ್ತಾಳೆ. ಸ್ವಲ್ಪ ಕೆಲಸವಿದೆ ಮನೆಗೆ ಹೋಗಬೇಕಿತ್ತು ಎಂದು ಕೇಳುತ್ತಾಳೆ. ಚರಣ್ ಡಿ, ಸೀತಾಳನ್ನು ಮೇಡಂ ಎಂದು ಗೌರವ ಕೊಟ್ಟು ಮಾತನಾಡಿಸುತ್ತಾನೆ. ರಾಮ್ ಫ್ರೆಂಡ್ ಸೀತಾ ಎಂಬ ಕಾರಣಕ್ಕೇ ಏನೂ ಮಾತನಾಡದೇ ಹಾಫ್ ಡೇ ರಜೆ ತೆಗೆದುಕೊಳ್ಳಲು ಪರ್ಮಿಷನ್ ಕೊಡುತ್ತಾನೆ. ಸೀತಾಳಿಗೆ ಚರಣ್ ಮಾತನಾಡಿಸಿದ ರೀತಿ ಮುಜುಗರ ಉಂಟು ಮಾಡುತ್ತದೆ. ಇನ್ನು ಸಿಹಿ, ಸೀತಾಳನ್ನು ಫ್ರೆಂಡ್ ಬಗ್ಗೆ ವಿಚಾರಿಸುತ್ತಾಳೆ. ಆಗ ಸೀತಾ ಇನ್ಮುಂದೆ ಅವರು ಬರೋದಿಲ್ಲ. ನಿನ್ನ ಫ್ರೆಂಡ್ ಇಲ್ಲದೇ ಬದುಕುವುದಕ್ಕೆ ಅಭ್ಯಾಸ ಮಾಡಿಕೊಳ್ಳುವುದು ನಿನಗೆ ಒಳ್ಳೆಯದು ಎಂದು ಬುದ್ಧಿ ಹೇಳುತ್ತಾಳೆ.


Click it and Unblock the Notifications











