ಅಶೋಕನನ್ನು ಅಣ್ಣ ಎಂದ ರಾಮ : ರಾಮ-ಸೀತಾ ನಡುವೆ ಬರ್ತಾನಾ ರಾವಣ ?
ಸೀತಾರಾಮ ಧಾರಾವಾಹಿಯಲ್ಲಿ ಕೋತಿ ತಾನು ಕೆಡುವುದಲ್ಲದೇ, ಇಡೀ ವನವನ್ನೆಲ್ಲಾ ಕೆಡಿಸಿತು ಎನ್ನುವಂತಾಗಿದೆ ಈಗ ಭಾರ್ಗವಿ ಆಲೋಚನೆಗಳು ಮನೆಯ ವಾತಾವರಣಕ್ಕೆ ತಲೆನೋವಾಗುತ್ತಿದೆ.
ಭಾರ್ಗವಿ ತನ್ನ ಸೇಡನ್ನು ರಾಮ ಮೇಲೆ ತೀರಿಸಿಕೊಳ್ಳಲು ಪದೇ ಪದೇ ಪ್ರಯತ್ನಗಳನ್ನು ಪಡುತ್ತಲೇ ಇದ್ದಾಳೆ. ಇದಕ್ಕಾಗಿ ಮನೆಯಲ್ಲಿರುವ ಪ್ರತಿಯೊಬ್ಬರನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತಿರುತ್ತಾಳೆ.
ಅತೀ ಹೆಚ್ಚು ವಿಶ್ವನನ್ನು ಗಾಳವಾಗಿ ಬಳಸಿಕೊಳ್ಳುತ್ತಿದ್ದ ಭಾರ್ಗವಿ ಇತ್ತೀಚೆಗೆ ಸಾಧನಾಳನ್ನು ಕೂಡ ತನ್ನ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾಳೆ. ತನ್ನ ಆಲೋಚನೆಗಳನ್ನೆಲ್ಲಾ ಸಾಧನಾ ತಲೆಗೆ ತುಂಬಿ ಸಮಸ್ಯೆ ಅನ್ನು ತಂದೊಡ್ಡಿದ್ದಾಳೆ.

ಗೆಳೆಯ ಅಶೋಕನಿಗಾಗಿ ಗುಡುಗಿದ ರಾಮ
ಅಶೋಕನಿಗೆ ಕಂಪನಿಯಲ್ಲಿ ಸಿಇಒ ಹುದ್ದೆಯನ್ನ ನೀಡಿದ ರಾಮ, ಈಗ ಅವನಿಗಾಗಿ ದೊಡ್ಡ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಇದಲ್ಲವನ್ನೂ ನೋಡುತ್ತಿರುವ ಭಾರ್ಗವಿ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ. ಹೀಗಾಗಿ ಸಾಧನಾಳ ಮನದಲ್ಲಿ ವಿಷ ಬೀಜವನ್ನು ಬಿತ್ತಿದ್ದಾಳೆ.
ಸಾಧನಾ ಮನದಲ್ಲೂ ತನಗೇನು ಸಿಗುತ್ತಿಲ್ಲ ಎಂಬ ಕಿಡಿ ಹೊತ್ತಿಕೊಂಡಿದೆ. ಅಶೋಕನ ಹೊಸ ಮನೆಯಲ್ಲಿ ಹಾಲು ಉಕ್ಕಿಸಿದ ಬಳಿಕ ಎಲ್ಲರಿಗೂ ಸಾಧನಾ ಕಾಫಿ ಮಾಡುತ್ತಾಳೆ. ಆಗ, ಭಾರ್ಗವಿ ಅಂಜಲಿ ಮತ್ತು ಅಶೋಕನಿಗೆ ಕಾಫಿಯಲ್ಲಿ ಉಪ್ಪು ಬೆರೆಸುವಂತೆ ಹೇಳಿಕೊಡುತ್ತಾಳೆ.

ಸಾಧನಾ ಹಾಗೆ ಮಾಡುತ್ತಾಳೆ ಕೂಡ. ಈ ವಿಷಯ ರಾಮಗೆ ತಿಳಿದು ಸಾಧನಾ ಅತ್ತಿಗೆ ಮೇಲೆ ಕೂಗಾಡುತ್ತಾನೆ. ನಾನು ಅಶೋಕ ಒಂದೇ, ನಮ್ಮಿಬ್ಬರನ್ನೂ ಒಂದೇ ರೀತಿಯಲ್ಲಿ ನೋಡಿ. ಅವನಿಗೆ ನೋವಾದರೆ ನಾನು ಸುಮ್ಮನಿರುವುದಿಲ್ಲ. ಅಶೋಕ ನನ್ನ ಅಣ್ಣ ಎಂದು ಹೇಳಿ ಕೂಗಾಡುತ್ತಾನೆ. ಈ ಸಂದರ್ಭದಲ್ಲಿ ಭಾರ್ಗವಿ ಕೂಡ ಸಾಧನಾಳದ್ದೇ ತಪ್ಪು ಎಂಬಂತೆ ಮಾಡುತ್ತಾಳೆ. ಇದು ಸಾಧನಾಳಿಗೆ ಮುಜುಗರವನ್ನು ಉಂಟು ಮಾಡಿ ಕೊನೆಗೆ ಕ್ಷಮೆ ಕೇಳುತ್ತಾಳೆ.
ರಾಮ ಮೇಲೆ ಭರವಸೆ ಹೆಚ್ಚಿಸಿಕೊಂಡ ಸಿಹಿ
ಇತ್ತ ಸಿಹಿಗೆ ರಾಮ ಮೇಲಿನ ಪ್ರೀತಿ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಸದಾ ರಾಮ ಬಗ್ಗೆಯೇ ಯೋಚಿಸುವಂತಾಗಿದ್ದಾಳೆ. ಸೀತಾ ಶ್ರೀರಾಮಚಂದ್ರನ ಭಕ್ತೆ. ಹೀಗಾಗಿ ಆಕೆ ಆಗಾಗ ರಾಮ, ರಾಮ ಎಂದು ದೇವರ ನಾಮವನ್ನು ಹೇಳುತ್ತಲೇ ಇರುತ್ತಾಳೆ.

ಇದನ್ನು ಗಮನಿಸುವ ಸಿಹಿ ಸೀತಮ್ಮನಿಗೆ ನೀನು ನನ್ನ ಫ್ರೆಂಡ್ ರಾಮನನ್ನು ಅದೆಷ್ಟು ಸಲ ನೆನಪಿಸಿಕೊಳ್ಳುತ್ತೀಯಮ್ಮ ಎಂದು ತಮಾಷೆ ಮಾಡುತ್ತಾಳೆ. ಅಲ್ಲದೇ, ರಾಮನನ್ನು ರಾಜನಿಗೂ ಸೀತಾಳನ್ನು ರಾಣಿಗೂ ಹೋಲಿಸಿ ಮಾತನಾಡುತ್ತಾಳೆ. ಇದೆಲ್ಲವೂ ಸೀತಾ-ರಾಮ ಒಂದಾಗಲು ಸೇತುವೆ ಆಗುವುದರಲ್ಲಿ ಅನುಮಾನವಿಲ್ಲ.
ರುದ್ರಪ್ರತಾಪ್ ಗೆ ಬೇಲ್ ಕೊಡಿಸಿದ ಭಾರ್ಗವಿ
ಈಗ ಭಾರ್ಗವಿಗೆ ಸೀತಾ ಮತ್ತು ರಾಮ ಪ್ರೀತಿಸುತ್ತಿದ್ದಾರೆ ಎಂಬ ಸತ್ಯದ ಅರಿವಾಗಿದೆ. ಯಾವುದೇ ಕಾರಣಕ್ಕೂ ಇವರಿಬ್ಬರನ್ನು ಒಂದಾಗಲು ಬಿಡಬಾರದು ಎಂದುಕೊಂಡಿರುವ ಭಾರ್ಗವಿ ಹೊಸ ಪ್ಲಾನ್ ಮಾಡಿದ್ದಾಳೆ. ಪ್ರೇಮಿಗಳ ದಿನದೊಳಗೆ ಸೀತಾ ಬಾಳಲ್ಲಿ ಮತ್ತೊಂದು ಬಿರುಗಾಳಿಯನ್ನು ಎಬ್ಬಿಸಲು ತಯಾರಿ ನಡೆಸಿದ್ದಾಳೆ. ಸೀತಾಳ ವೈರಿಯಾಗಿರುವ ರುದ್ರಪ್ರತಾಪ್ ನನ್ನು ಜೈಲಿನಿಂದ ಬೇಲ್ ಮೇಲೆ ಬಿಡಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ.
ರಾಮ-ಸೀತಾ ನಡುವೆ ಬರುತ್ತಾನಾ ರಾವಣ..?
ಸೀತಾಳ ಮೇಲೆ ದ್ವೇಷ ಹೊಂದಿದಂತೆಯೇ ರಾಮ ಮೇಲೂ ಕೋಪ ಹೊಂದಿರುವ ರುದ್ರಪ್ರತಾಪ್ ಬೇಲ್ ಮೇಲೆ ಹೊರಗೆ ಬರಲಾಗದೇ ಒದ್ದಾಡುತ್ತಿದ್ದ. ಈಗ ಚರಣ್ ಡಿ ಫೋನ್ ಮಾಡಿ ಬೇಲ್ ಕೊಡಿಸುವ ಮಾತನಾಡಿದ್ದಾನೆ. ಅದರ ಬದಲು ತಾನು ಹೇಳಿದ ಕೆಲಸವನ್ನು ಮಾಡಬೇಕು ಎಂದಿದ್ದಾನೆ. ಈಗ ರುದ್ರಪ್ರತಾಪ್ ಮನದ ದ್ವೇಷಕ್ಕೆ ರೆಕ್ಕೆಗಳು ಮೂಡುತ್ತಿದ್ದು, ರಾಮ ಸೀತಾ ನಡುವೆ ರಾವಣನ ಎಂಟ್ರಿ ಆಗುವುದು ಪಕ್ಕಾ ಆಗಿದೆ.


Click it and Unblock the Notifications











