Seetha Rama ; ಅಮ್ಮನ ಸ್ಥಾನದಲ್ಲಿ ನಿಂತು ರಾಮಗೆ ಸಿಹಿ ಕೊಟ್ಟ ಸಲಹೆ ಏನು ಗೊತ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿಯಿಂದ, ರಾಮ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಮರೆತ ಹುಡುಗಿಯನ್ನು ಕಂಡ ರಾಮ್ ಗೊಂದಲದಲ್ಲಿ ಸಿಲುಕಿದ್ದಾನೆ. ಈಗಾಗಲೇ ರಾಮ ಚಾಂದಿನಿ ಮತ್ತು ಅವಳ ನೆನಪುಗಳನ್ನು ಮನಸ್ಸಿನಿಂದ ಕಿತ್ತು ಹಾಕಿದ್ದು, ತನ್ನ ಮನದ ತುಂಬೆಲ್ಲಾ ಸೀತಾಳನ್ನು ತುಂಬಿಕೊಂಡಿದ್ದಾನೆ. ತನ್ನ ಮುಂದಿನ ಜೀವನವನ್ನು ಸೀತಾ ಮತ್ತು ಸಿಹಿಯ ಜೊತೆಗೆ ಅರಾಮವಾಗಿ, ಖುಷಿ ಖುಷಿಯಿಂದ ಕಳೆಯಬೇಕು ಎನ್ನುವುದು ರಾಮ ಆಸೆಯಾಗಿದೆ.
ನಾಟಕ ಮಾಡುತ್ತಿರುವ ಚಾಂದಿನಿ
ಹೀಗಿರುವಾಗಲೇ ಚಾಂದಿನಿ ತನ್ನ ಬಾಳಲ್ಲಿ ಮತ್ತೆ ಪ್ರವೇಶ ಮಾಡಿರುವುದು ರಾಮ ಸಂಪೂರ್ಣವಾಗಿ ಕುಗ್ಗುವಂತೆ ಮಾಡಿದೆ. ಇತ್ತ ಚಾಂದಿನಿ ರಾಮ, ಮನಸ್ಸಿನಲ್ಲಿ ಮತ್ತೆ ಜಾಗ ಪಡೆಯಲೇಬೇಕು ಎಂದು ತೀರ್ಮಾನಿಸಿದ್ದು, ಭಾರ್ಗವಿ ಬಳಿ ಸಲಹೆ ಕೇಳಿದ್ದಾಳೆ. ಭಾರ್ಗವಿ ಸೀತಾಳ ಸಹಾಯದಿಂದಲೇ ರಾಮ ಮನಸ್ಸು ಸೇರಿಕೊಳ್ಳುವಂತೆ ಐಡಿಯಾ ಹೇಳಿಕೊಟ್ಟಿದ್ದು, ಈಗ ಚಾಂದಿನಿ ಸೀತಾ ಎದುರು ನಾಟಕ ಮಾಡಿದ್ದಾಳೆ. ತಾನು ರಾಮನಿಂದ ದೂರ ಇರುವುದರಿಂದಲೇ ಹೀಗೆ ಎಲ್ಲರ ಮೇಲೆ ಕೋಪ ಮಾಡಿಕೊಳ್ಳುವುದು, ನಿಷ್ಠುರವಾಗಿ ನೋಡುವುದು. ತನ್ನ ಕೈಯಲ್ಲಿ ರಾಮನನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ರಾಮಗೆ ತನ್ನ ಮೇಲಿರುವ ಕೋಪವನ್ನು ಸರಿ ಮಾಡಲು ಸಹಾಯ ಮಾಡಿ ಎಂದು ಕೇಳಿದ್ದಾಳೆ.

ಸೀತಾ ಮನದಲ್ಲಿ ಪ್ರೀತಿ ಚಿಲುಮೆ
ಎಲ್ಲರನ್ನೂ ಸುಲಭವಾಗಿ ನಂಬುವ ಸೀತಾ ಈಗ ಚಾಂದಿನಿ ಆಡಿದ ಮಾತುಗಳನ್ನು ಬಲವಾಗಿ ನಂಬಿದ್ದಾಳೆ. ಚಾಂದಿನಿ ಮೇಲೆ ಕರುಣೆ ಮೂಡಿದ್ದು, ತನ್ನ ಬಗ್ಗೆ ತಾನೇ ಯೋಚಿಸಿದ್ದಾಳೆ. ತಾನೇಕೆ ರಾಮಗಾಗಿ ಗುಲಾಬಿ ಹೂವನ್ನು ತಂದೆ. ನಾನು ರಾಮ ಬಗ್ಗೆ ಯಾಕಿಷ್ಟು ಯೋಚಿಸುತ್ತಿದ್ದೀನಿ ಎಂದು ಆಲೋಚಿಸಿದ್ದಾಳೆ. ಚಾಂದಿನಿ ಮತ್ತು ರಾಮ ಒಂದಾಗಲಿ ಎಂದು ಬಯಸಿದ್ದಾಳೆ. ಮನಸ್ಸಿನಲ್ಲಿ ಗೊಂದಲವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಸೀತಾ ಆಫೀಸಿನಿಂದ ನೇರವಾಗಿ ದೇವಸ್ಥಾನಕ್ಕೆ ತೆರಳಿದ್ದಾಳೆ.

ರಾಮಗೆ ಸಲಹೆ ಕೊಟ್ಟ ಸಿಹಿ
ಇತ್ತ ಚಾಂದಿನಿಯ ಆಗಮನದಿಂದ ಶಾಕ್ ಆಗಿ ರಾಮ, ಒಬ್ಬಂಟಿಯಾಗಿ ಯೋಚಿಸುತ್ತಿದ್ದಾನೆ. ತನ್ನ ತಾಯಿಯನ್ನು ನೆನೆದು, ಈಗೇನು ಮಾಡಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ. ಅಮ್ಮ ನಿಮ್ಮ ಮಡಿಲಲ್ಲಿ ಮಲಗಬೇಕು. ಈಗ ನಾನೇನು ಮಾಡಲಿ ಎಂದು ತನ್ನ ಮನದ ಗೊಂದಲಗಳನ್ನು ಹೇಳಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ರಾಮಗೆ ಸಿಹಿ ಫೋನ್ ಮಾಡಿ ಆರೋಗ್ಯ ವಿಚಾರಿಸಿಕೊಂಡಿದ್ದಾಳೆ. ರಾಮ ತನ್ನ ಗೊಂದಲವನ್ನು ಹೇಳಿಕೊಂಡಿದ್ದು, ಇದಕ್ಕೆ ಸಿಹಿ ಸಲಹೆಯನ್ನು ಕೂಡ ನೀಡಿದ್ದಾಳೆ. ಅಲ್ಲದೇ, ದೇವಸ್ಥಾನಕ್ಕೆ ಹೋಗು, ಅಲ್ಲಿ ದೇವರ ಜೊತೆಗೆ ಅಮ್ಮನೂ ಇರುತ್ತಾಳೆ. ನಿನಗೆ ಎಲ್ಲಾ ಒಳ್ಳೆಯದೇ ಆಗುತ್ತೆ ಎಂದು ಹೇಳಿದ್ದಾಳೆ.

ಮನದ ಮಾತುಗಳನ್ನು ಹೇಳುತ್ತಾನಾ ರಾಮ..?
ಇನ್ನು ಅಶೊಕ್ ಮತ್ತು ಪ್ರಿಯಾ ಈಗ ಸೀತಾ, ರಾಮನನ್ನು ಒಂದು ಮಾಡಲು ಮುಂದಾಗಿದ್ದಾಳೆ. ಸಿಹಿ ಮಾತು ಕೇಳಿದ ರಾಮ, ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿ ಸೀತಾ ಕೂಡ ಇದ್ದಾಳೆ. ಪ್ರೋಮೋದಲ್ಲಿ ಇಬ್ಬರು ಎದುರಾದಾಗ ರಾಮ ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ. ನಿಮ್ಮನ್ನು ಪ್ರೀತಿಸುತ್ತಿದ್ದೀನಿ. ಐ ಲವ್ ಯೂ ಸೀತಾ ಎನ್ನುತ್ತಾನೆ. ರಾಮ ಮಾತನ್ನು ಕೇಳಿದ ಸೀತಾ ಶಾಕ್ ಆಗಿದ್ದು, ರಾಮ ತುಂಬಾ ಕ್ಯಾಶ್ಯುವಲ್ ಆಗಿ ಪ್ರಪೋಸ್ ಮಾಡುತ್ತಾನೆ. ಆದರೆ ಸೀತಾ ರಾಮ ನನ್ನು ಒಪ್ಪಿಕೊಳ್ಳುತ್ತಾಳಾ..? ಇಲ್ಲ ಇನ್ನಷ್ಟು ದಿನ ದೂರವಿಡುತ್ತಾಳಾ ಎಂಬುದನ್ನು ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











