Seetha Raama: ಫ್ರೆಂಡ್ ರಾಮ್‌ಗಾಗಿ ಮಿಡಿಯುತ್ತಿರುವ ಸಿಹಿಯ ಪುಟ್ಟ ಮನಸ್ಸು
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಹೇಳಿದ ಸುಳ್ಳೊಂದು ದೊಡ್ಡ ಟ್ವಿಸ್ಟ್ ತಂದಿದೆ. ಸೀತಾಳಿಗೆ ತನ್ನ ಬಾಳಲ್ಲಿ ಮತ್ಯಾವತ್ತೂ ರಾಮ್‌ಗೆ ಜಾಗ ಕೊಡಬಾರದು ಎಂಬಂತೆ ನಡೆದುಕೊಂಡಿದ್ದಾಳೆ.
ಇತ್ತ ಪ್ರಿಯಾ ಪರಿಸ್ಥಿತಿಯೂ ಇದೇ ಆಗಿದೆ. ಅಶೋಕ್ ದೇಸಾಯಿ ಕಂಪನಿಯ ಬಾಸ್ ಅಲ್ಲ ಎಂಬ ಸತ್ಯವನ್ನು ತಿಳಿದು ಶಾಕ್ ಆಗಿದ್ದಾಳೆ. ತನ್ನ ಕನಸೆಲ್ಲಾ ನುಚ್ಚುನೂರಾಯ್ತು ಎಂದು ಬೇಸರಗೊಂಡಿದ್ದಾಳೆ.
ಅಶೋಕ್ ಕೂಡ ಪ್ರಿಯಾ ಬೇಸರ ಮಾಡಿಕೊಂಡಿರುವುದಕ್ಕೆ ನೊಂದುಕೊಂಡಿದ್ದಾನೆ. ಆದರೆ ರಾಮ್ ಮತ್ತು ಅಶೋಕ್ ಇಬ್ಬರೂ ಸುಳ್ಳು ಹೇಳುವುದಕ್ಕೆ ಬಲವಾದ ಕಾರಣವಿತ್ತು.

ಒಂದಾಗುತ್ತಾರಾ ಪ್ರಿಯಾ-ಅಶೋಕ್..?
ಸತ್ಯ ತಿಳಿದು ಬೇಸರಗೊಂಡಿದ್ದ ಪ್ರಿಯಾ ಸ್ಟ್ರೆಸ್‌ನಲ್ಲಿ ಪ್ಲೇಟ್ ಮೇಲೆ ಪ್ಲೇಟ್ ಪಾನಿಪುರಿ ತಿಂದಿದ್ದಳು. ಇದರಿಂದ ಸಮಸ್ಯೆಯಾಗಿ ಆಫಿಸಿಗೆ ಬಂದಿರಲಿಲ್ಲ. ದಾರಿಯಲ್ಲಿ ಸಿಕ್ಕ ಪ್ರಿಯಾಳನ್ನು ಅಶೋಕ್ ಮಾತನಾಡಿಸಿದ್ದು, ವಿಚಾರಿಸಿಕೊಂಡಿದ್ದಾನೆ. ಪ್ರಿಯಾಳಿಗೆ ಸ್ಟ್ರೆಸ್ ಈಟಿಂಗ್ ಖಾಯಿಲೆ ಇದ್ದು, ಇದರಿಂದ ಈಗ ಹೊಟ್ಟೆ ನೋವು ಬಂದಿದೆ. ಹಾಗಾಗಿ ಆಫಿಸಿಗೆ ಬಂದಿಲ್ಲ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಅಶೋಕನಿಗೆ ಬೇಸರವಾಗುತ್ತದೆ. ನನ್ನಿಂದಲೇ ನಿಮಗೆ ಹೀಗಾಯ್ತು ಎಂದು ಹೇಳಿ ಕಾಳಜಿ ತೋರಿದ್ದಾನೆ. ತಾನೇ ರಸ ಮಾಡಿಕೊಂಡು ಬಂದು ಕೊಡುತ್ತಾನೆ. ಇಬ್ಬರೂ ಸ್ವಲ್ಪ ಕೂಲ್ ಆಗಿದ್ದು, ಮುಂದೆ ಇಬ್ಬರ ಮನದಲ್ಲಿ ಒಲವು ಮೂಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
ಸಿಹಿಯನ್ನು ನೋಡಲು ಬಂದ ರಾಮ
ಫ್ರೆಂಡ್ ರಾಮ್ ಬಾರದೇ ಹೋಗಿದ್ದಕ್ಕೆ ಸಿಹಿಗೆ ನಿತ್ಯ ಕಾಯುವುದೇ ಕೆಲಸವಾಗಿದೆ. ಫ್ರೆಂಡ್ ಜಪ ಮಾಡುತ್ತಿರುವ ಸಿಹಿಗೆ ಸ್ನೇಹಿತರೆಲ್ಲಾ ಹೀಯಾಳಿಸುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ರಾಮ್ ವಠಾರಕ್ಕೆ ಆಗಮಿಸಿದ್ದಾನೆ. ರಾಮ್‌ನನ್ನು ನೋಡಿದ ಸಿಹಿ ಫುಲ್ ಖುಷಿಯಾಗಿದ್ದಾಳೆ. ರಾಮ್‌ಗೂ ಸಿಹಿಯನ್ನು ನೋಡಿ ಖುಷಿಯಾಗಿದೆ. ರಾಮ್ ಸಿಹಿಯನ್ನು ಎತ್ತಿಕೊಂಡು ಮುದ್ದಾಡಿದ್ದಾನೆ. ಇದೇ ಸಂದರ್ಭದಲ್ಲಿ ಸೀತಾ ಬಂದಿದ್ದು, ಮತ್ತೆ ರಾಮ್‌ಗೆ ಬೈಯುತ್ತಾಳೆ. ನೀವು ಮತ್ತೆ ಬಂದು ನನಗೆ ತೊಂದರೆ ಕೊಡಬೇಡಿ ಎಂದು ನಿಷ್ಠೂರವಾಗಿ ಮಾತನಾಡುತ್ತಾಳೆ. ರಾಮ್‌ಗೆ ಸೀತಾ ಮಾತುಗಳು ಬಹಳ ಹರ್ಟ್ ಮಾಡುತ್ತದೆ. ಸೀತಾಳಿಗೆ ಡಬ್ಬಿ ವಾಪಸ್ ಕೊಟ್ಟು, ಸಿಹಿ ಚಿಕ್ಕವಳು ಅವಳಿಗೆ ನೋವು ಮಾಡೋದು ಬೇಡ ಎನ್ನುತ್ತಾನೆ. ಅದಕ್ಕೆ ಸೀತಾ, ಸಿಹಿಗೆ ದಿನ ಕಳೆಯುತ್ತಾ ಎಲ್ಲಾ ಅರ್ಥವಾಗುತ್ತೆ ಎಂದು ಹೇಳಿ ಕಳಿಸುತ್ತಾಳೆ.

ಫ್ರೆಂಡ್‌ಗಾಗಿ ಕೊರಗುತ್ತಿರುವ ಸಿಹಿ
ಫ್ರೆಂಡ್, ಸೀತಮ್ಮನ ಮಾತಿನಿಂದ ಬೇಸರಗೊಂಡು ಹೋಗಿದ್ದಕ್ಕೆ ಸಿಹಿ ಬೇಸರಗೊಳ್ಳುತ್ತಾಳೆ. ಆಟವಾಡಲೂ ಹೋಗದೇ, ತಾನೊಬ್ಬಳೇ ಫ್ರೆಂಡ್, ಫ್ರೆಂಡ್ ಎಂದು ಕಿಟಿಕಿ ಬಳಿ ಕಾಯುತ್ತಾ ಅಳುತ್ತಿರುತ್ತಾಳೆ. ಸೀತಾ ಬೈಯುತ್ತಲೇ ಇರುತ್ತಾಳೆ. ರಾಮ್ ಇನ್ಮುಂದೆ ಬರುವುದಿಲ್ಲ. ನಿನ್ ಫ್ರೆಂಡ್ ಆಗಿ ಇರುವುದಿಲ್ಲ ಎಂದು ಬುದ್ಧಿ ಹೇಳುತ್ತಾಳೆ. ಆದರೆ ಸಿಹಿ, ಸೀತಾ ಮಾತನ್ನು ಕೇಳುವುದೇ ಇಲ್ಲ. ಫ್ರೆಂಡ್ ಗಾಗಿ ಕಾಯುತ್ತಾ ಕಿಟಕಿ ಕಂಬಿಯ ಮೇಲೆ ಒರಗಿ ಮಲಗಿ ಬಿಟ್ಟಿರುತ್ತಾಳೆ. ಸೀತಾ ಅವಳನ್ನು ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸುತ್ತಾಳೆ. ನಿದಿರೆಯಲ್ಲೂ ಸಿಹಿ ಫ್ರೆಂಡ್ ಅನ್ನೇ ಕನವರಿಸುತ್ತಿರುತ್ತಾಳೆ. ಇದು ಸೀತಾಳಿಗೂ ಬೇಸರವಾಗುತ್ತಿರುತ್ತದೆ.
ಸೀತಾಳನ್ನು ಕ್ಷಮೆ ಕೇಳಿದ ರಾಮ್
ರಾಮ್, ಸೀತಾಳಿಗೆ ಕೊಟ್ಟ ಡಬ್ಬಿಯಲ್ಲಿ ಚೀಟಿ ಒಂದನ್ನು ಇಟ್ಟಿರುತ್ತಾನೆ. ಆ ಚೀಟಿಯಲ್ಲಿ ಸೀತಾ ಕ್ಷಮಿಸು, ಮತ್ತೆ ನಿನ್ನ ಫ್ರೆಂಡ್ ಆಗಿರಬಹುದಾ..? ಏನೇನಾಯ್ತು ಎಂದು ಹೇಳಲು ಒಂದು ಅವಕಾಶ ಮಾಡಿ ಕೊಡಿ ಎಂದು ಕೇಳಿರುತ್ತಾನೆ. ಇದನ್ನು ನೋಡಿದ ಸೀತಾಳಿಗೂ ಬೇಸರವಾಗುತ್ತದೆ. ಆದರೂ ಕೂಡ, ಬಾಸ್ ಜೊತೆಗೆ ನೌಕರನೊಬ್ಬ ಸಲುಗೆಯಿಂದ ಇರುವುದು ಒಳ್ಳೆಯದಲ್ಲ ಎಂಬುದನ್ನು ಹೇಗೆ ಅರ್ಥ ಮಾಡಿಸುವುದು ಎಂದು ತನಗೆ ತಾನೇ ಮಾತನಾಡಿಕೊಳ್ಳುತ್ತಾಳೆ.


Click it and Unblock the Notifications











