Seetha Rama ; ಕೊನೆಗೂ ಮನದ ಮಾತುಗಳನ್ನಾಡಿದ ರಾಮ : ಐ ಲವ್ ಯೂ ಸೀತಾ ಎಂದ ರಾಮ..!
ಸೀತಾರಾಮ ಧಾರಾವಾಹಿಯಲ್ಲಿ ರಾಮಗೆ ತಾಯಿ ಸ್ಥಾನವನ್ನು ಸಿಹಿ ತುಂಬಿದ್ದಾಳೆ. ಸಂಕಟದಲ್ಲಿ ಸಿಲುಕಿ ಗೊಂದಲ್ಲಿರುವ ರಾಮ ಸಹಾಯಕ್ಕೆ ಸಿಹಿ ಮುಂದಾಗಿದ್ದಾಳೆ. ಮನೆಯಲ್ಲಿ ಎಲ್ಲರು ಇದ್ದರೂ ಕೂಡ ರಾಮ್ ಒಂಟಿಯಾಗೇ ಇದ್ದ. ಚಾಂದಿನಿ ಬಿಟ್ಟು ಹೋದ ಕೂಡಲೇ ಒಬ್ಬಂಟಿಗನಾಗಿ ಮಲೇಷಿಯಾದಲ್ಲಿ ನೆಲೆಸಿಬಿಟ್ಟ. ಆದರೆ, ವಾಪಸ್ ಬೆಂಗಳೂರಿಗೆ ಬಂದು ಸೀತಾಳ ಮತ್ತು ಸಿಹಿಯನ್ನು ಭೇಟಿಯಾದ ರಾಮ ಬದುಕಿನಲ್ಲಿ ಸಂಪೂರ್ಣವಾದ ಬದಲಾವಣೆಗಳಾಗಿದ್ದವು.
ಸೀತಾ ಮಾತು ಕೇಳಿದ ರಾಮ ಗೆ ಬೇಸರ
ಸೀತಾ ಇಲ್ಲದೇ, ತಾನು ಇರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತಿಳಿದ ರಾಮ, ಈಗ ಸೀತಾಳನ್ನು ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಚಾಂದಿನಿ ಎಂಟ್ರಿಕೊಟ್ಟು ರಾಮ ಮನಸನ್ನು ಕಲಕಿದ್ದಾಳೆ. ಹೀಗಾಗಿ ರಾಮ ಮತ್ತೆ ಒಂಟಿತನವನ್ನು ಅನುಭವಿಸಿದ್ದು, ರಾಮ ಮನಸ್ಸನ್ನು ಸಿಹಿ ತಿಳಿಗೊಳಿಸಿದ್ದಾಳೆ. ಸಿಹಿ ಮಾತನ್ನು ಕೇಳಿ ದೇವಸ್ಥಾನಕ್ಕೆ ತೆರಳಿದ ರಾಮ ಕಣ್ಣಿಗೆ ಸೀತಾ ಬಿದ್ದಿದ್ದಾಳೆ.

ರಾಮ ನನ್ನಿಂದ ದೂರವೇ ಇರಲಿ ಎಂದು ಸೀತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಳೆ. ಆದರೆ, ಸೀತಾ ನನಗೆ ಸಿಗಲಿ ಎಂದು ದೇವರ ಬಳಿ ರಾಮ ಬೇಡಿಕೊಂಡಿದ್ದಾನೆ. ದೇವರ ಮುಂದೆ ನಿಂತಾಗಲೇ ಸೀತಾ ಕಾಣಿಸಿರುವುದು ರಾಮಗೆ ಖುಷಿ ಕೊಟ್ಟಿದೆ. ಸೀತಾ ರಾಮ ಹೆಸರಲ್ಲಿ ಅಭಿಷೇಕ ಮಾಡಿಸಿದ್ದಾಳೆ. ಆದರೆ, ಸೀತಾ ರಾಮನನ್ನು ಒಬ್ಬರೇ ಬಂದಿದ್ದೀರಾ ಎಂದು ಕೇಳಿದ್ದು ಬೇಸರವನ್ನುಂಟು ಮಾಡಿದೆ.
ಸೂರಿ ಬಳಿ ಚರ್ಚಿಸಿದ ಅಶೋಕ
ಅಶೋಕನಿಗೆ ಪ್ರಿಯಾ ಸಲಹೆ ಕೊಟ್ಟಿದ್ದಾಳೆ. ರಾಮ ಮತ್ತು ಚಾಂದಿನಿ ಬಗ್ಗೆ ಸೂರಿ ತಾತನ ಬಳಿ ಹೇಳಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಹೇಳಿಕೊಟ್ಟಿದ್ದಾಳೆ. ಪ್ರಿಯಾ ಮಾತನ್ನು ಕೇಳಿ ಅಶೋಕ, ಸೂರಿ ಬಳಿ ಹೋಗಿದ್ದಾನೆ. ಅಲ್ಲಿ ಸತ್ಯಜಿತ್ ಸಾಧನಾಳ ಬಳಿ ಅಶೋಕನಿಗೆ ಕಾಫಿ, ಟೀ ಏನಾದರೂ ಕೇಳಿ ಕೊಡು ಎಂದಿದ್ದಾನೆ. ಭಾರ್ಗವಿ ಪ್ರಭಾವದಿಂದ ಅಶೋಕ ಗೆ ನಾವು ಕೊಡುವುದು ಇಷ್ಟವಾಗುತ್ತದೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾಳೆ.

ಇದೆಲ್ಲಾ ಭಾರ್ಗವಿ ಟ್ರೈನಿಂಗ್ ಎಂದು ಸತ್ಯನಿಗೆ ವಿಶ್ವ ತಿಳಿಸಿದ್ದಾನೆ. ಇನ್ನು ಅಶೋಕಗೆ ಮುಜುಗರವಾದರೂ ತೋರಿಸದೇ ಸೀದಾ ಸೂರಿ ಬಳಿ ಹೋಗಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಆದರೆ ರಾಮ ಮದುವೆ ಏನೋ ಆಗಲೇಬೇಕು ಆದರೆ, ಸೀತಾಳಿಗೆ ರಾಮ ಮೇಲೆ ಮನಸಿಲ್ಲ. ಈ ಬಗ್ಗೆ ಬೆಳಗ್ಗೆ ನಿರ್ಧಾರ ಮಾಡೋಣ ಮನೆಗೆ ಬಂದುಬಿಡು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಕೊನೆಗೂ ರಾಮ್ ಪ್ರಪೋಸ್ ಮಾಡೇಬಿಟ್ಟ
ಇನ್ನು ಸೀತಾ ನಿಮ್ಮ ತಾಯಿಗೆ ಏನಾಗಿತ್ತು ಎಂದು ಪ್ರಶ್ನಿಸುತ್ತಾಳೆ. ಉತ್ತರ ಕೊಡುವ ಮೊದಲೇ ನಾನು ಹೊರಡುತ್ತೇನೆ ಎಂದು ಹೇಳುತ್ತಾಳೆ. ಇದು ರಾಮ್ ಗೆ ಕೋಪ ಬರುವಂತೆ ಮಾಡುತ್ತದೆ. ರಾಮ್ ಸೀತಾ ಮೇಲೆ ತನ್ನ ಕೋಪವನ್ನು ತೋರಿಸಿಕೊಂಡಿದ್ದಾನೆ. ನಿಮ್ಮಷ್ಟಕ್ಕೆ ನೀವೇ ನನ್ನ ಬಗ್ಗೆ ಎಲ್ಲಾ ಅಂದುಕೊಂಡು ಬಿಡಿ. ಚಾಮದಿನಿ ಜೊತೆಗೆ ಬಂದಿದ್ದೀನಿ ಎಂಬುದು ನಿಮ್ಮ ಅಭಿಪ್ರಾಯ.

ನಾನು ಯಾವಾಗಲೇ ನಿಮ್ಮ ಜೊತೆಗೆ ಸಮಯ ಕಳೆಯಬೇಕು ಎಂದರೂ ನೀವೇ ದೂರ ಆಗುತ್ತಿದ್ದೀರಾ. ನಿಮ್ಮಷ್ಟಕ್ಕೆ ನೀವೇ ನನಗೆ ತೊಂದರೆ ಆಗುತ್ತದೆ ಎಂದು ಭಾವಿಸುತ್ತೀರಾ. ನನ್ನ ಬಗ್ಗೆ ನನಗಿಂತಲೂ ನಿಮಗೆ ಎಲ್ಲವೂ ಚೆನ್ನಾಗಿ ಅರ್ಥವಾಗುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೀನಿ. ಇದು ಯಾಕೆ ನಿಮಗೆ ಅರ್ಥವಾಗುವುದಿಲ್ಲ. ಐ ಲವ್ ಯೂ ಸೀತಾ. ಬಟ್ ನಿಮಗೆ ನನ್ನ ಸ್ನೇಹವೇ ಕಷ್ಟವಾಗಿದೆ ಎಂದು ಒಂದೇ ಉಸಿರಿನಲ್ಲಿ ಏನೇನೋ ಮಾತನಾಡುತ್ತಾನೆ.
ವಾಣಿ ಸಾವಿಗೂ ಭಾರ್ಗವಿಗೂ ಸಂಬಂಧವಿದೆಯಾ..?
ಪ್ರಪೋಸ್ ಮಾಡಿದ ಕೂಡಲೇ ಸೀತಾಳಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ದಂಗಾಗಿ ನಿಲ್ಲುವ ಸೀತಾ ಮುಂದೆ ಬಡಬಡಾಯಿಸಿಕೊಂಡು ರಾಮ್ ಹೊರಟು ಬರುತ್ತಾನೆ. ಸೀತಾ ಸ್ನೇಹ ಕೂಡ ಇನ್ಮುಂದೆ ತನಗೆ ಸಿಗುವುದಿಲ್ಲ ಎಂದು ರಾಮ್ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾನೆ. ಮನೆಗೆ ಹೋದವನೇ ತನ್ನ ತಾಯಿ ಸಾವಿಗೆ ಕಾರಣವೇನು ಎಂದು ಭಾರ್ಗವಿ ಬಳಿ ಕೇಳುತ್ತಾನೆ. ಈ ಪ್ರಶ್ನೆ ಕೇಳಿದ ಕೂಡಲೇ ಭಾರ್ಗವಿ ಶಾಕ್ ಆಗಿದ್ದು, ಭಾರ್ಗವಿಗೂ ವಾಣಿ ಸಾವಿಗೂ ಸಂಬಂಧವಿದೆಯಾ ಎಂಬ ಅನುಮಾನ ಮೂಡಿದೆ.


Click it and Unblock the Notifications











