Seetha Rama ;ರಾಮ ವಿರುದ್ಧ ಭಾರ್ಗವಿ ಪ್ಲಾನ್ ತಲೆಕೆಳಗೆ ಮಾಡಿದ ಅಶೋಕ್ ..!
ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ರಾಮನಿಗಾಗಿ ಬಹು ದೊಡ್ಡ ಪ್ಲಾನ್ ಮಾಡಿದ್ದಾಳೆ. ಚಾಂದಿನಿ ಬಳಿ ಒಂದು ಪ್ಲಾನ್ ಹೇಳಿ, ತಾನೊಂದು ಪ್ಲಾನ್ ಜಾರಿಗೆ ತಂದಿದ್ದಾಳೆ. ಪ್ಯಾರಿಸ್ ಗೆ ರಾಮ ಹೋಗಬಹುದು ಎಂದುಕೊಂಡಿದ್ದರೆ, ದುಬೈಯಿಂದ ಫೋನ್ ಕರೆ ಬಂದಿದೆ. ರಾಮ ಇದ್ದಕ್ಕಿದ್ದ ಹಾಗೆಯೇ ಹೊರಟಿರುವುದು ಕೂಡ ಸೀತಾಳಿಗೆ ಆತಂಕವನ್ನು ಸೃಷ್ಠಿಸಿದೆ. ಇದೇ ಆತಂಕದಲ್ಲೇ ಸೀತಾ ಇದ್ದು, ಪೂಜೆ ಮುಗಿದ ಬಳಿಕ ರಾಮ ಮನೆಯಿಂದ ಹೊರಟು ಬಂದಿದ್ದಾಳೆ. ಅಶೋಕ್ ಪೂಜೆಗೆ ಬಾರದಿದ್ದಕ್ಕೆ ಸೂರಿ ತಾತ ಕೂಡ ಬೇಸರ ಪಟ್ಟುಕೊಳ್ಳುತ್ತಾರೆ.
ರಾಮನಿಗೆ ಅಪಘಾತವಾಗಿದೆ
ಪ್ರಿಯಾ ಮನೆಯವರು ಹಾಗೂ ಸೂರಿ ಮನೆಯವರೆಲ್ಲಾ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಇದೇ ವೇಳೆಗೆ ಲ್ಯಾಂಡ್ ಲೈನ್ ಗೆ ಫೋನ್ ಕಾಲ್ ಬರುತ್ತದೆ. ಅದನ್ನು ಭಾರ್ಗವಿ ರಿಸೀವ್ ಮಾಡುತ್ತಾಳೆ. ಫೋನ್ ನಲ್ಲಿ ಮಾತನಾಡುತ್ತಾ ಶಾಕ್ ಆಗುವ ಭಾರ್ಗವಿ ಫೋನ್ ಇಟ್ಟ ಮೇಲೆ ರಾಮ ಕಾರಿಗೆ ಅಪಘಾತವಾಗಿದೆ. ಏರ್ ಪೋರ್ಟ್ ಬಳಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳುತ್ತಿದ್ದ ಹಾಗೆಯೇ ಎಲ್ಲರೂ ಶಾಕ್ ಆಗುತ್ತಾರೆ. ಇತ್ತೀಚೆಗಷ್ಟೇ ರಾಮ ಒಂದು ಅಪಘಾತದಿಂದ ಚೇತರಿಸಿಕೊಂಡಿದ್ದ. ಈಗ ಮತ್ತೊಂದು ಅಪಘಾತನಾ ಎಂದು ಶಾಕ್ ಆಗುತ್ತಾರೆ. ಎಲ್ಲರೂ ಗಾಬರಿಯಲ್ಲಿ ಏನು ಮಾಡಬೇಕು ಎಂಬುದನ್ನು ಅರಿಯದೇ ಒದ್ದಾಡುತ್ತಿರುತ್ತಾರೆ.

ಗೊಂದಲ ಸೃಷ್ಟಿಸಿದ ಪ್ರಿಯಾ ಹೇಳಿಕೆ
ಇದೇ ಸಂದರ್ಭದಲ್ಲಿ ಸತ್ಯ ಬಂದು ರಾಮಗೆ ಏನೂ ಆಗುವುದಿಲ್ಲ. ಅವನಿಗೆ ಯಾರೂ ಏನೂ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಅಷ್ಟರಲ್ಲಿ ಪ್ರಿಯಾ ಅಳಲು ಶುರು ಮಾಡುತ್ತಾಳೆ. ಆಕ್ಸಿಡೆಂಟ್ ಆಗಿರುವುದು ರಾಮಗೆ ಅಲ್ಲ ಅಶೋಕ್ ಗೆ ಎಂದು ಹೇಳುತ್ತಾಳೆ. ಎಲ್ಲರಿಗೂ ಒಂದು ಕ್ಷಣ ಗೊಂದಲ ಉಂಟಾಗುತ್ತದೆ. ಆಗ ಪ್ರಿಯಾ ಅಶೋಕ್ ಬೆಳಗ್ಗೆ ರಾಮ ಬದಲು ತಾನು ಹೋಗುವುದಾಗಿಯೂ, ರಾಮಗೆ ಅಪಾಯ ಇರುವುದಾಗಿಯೂ ಹೇಳಿ ಹೊರಟ. ರಾಮ ಎಲ್ಲೂ ಹೋಗಿಲ್ಲ. ಅಶೋಕ್ ಹೋಗಿದ್ದಾನೆ ಎಂದು ಗಾಬರಿಯಾಗುತ್ತಾಳೆ. ಮದುವೆಯಾಗಿ ಕೆಲವೇ ದಿನಗಾಳಾಗಿವೆ, ಈಗ ಇದೆಲ್ಲಾ ಏನೂ ಎಂದು ಎಲ್ಲರೂ ಆತಂಕ ಪಡುತ್ತಾರೆ.
ಆರ್ ಪಿ ಬಲೆಯಲ್ಲಿ ಬಿದ್ದ ಅಂಜಲಿ
ಇತ್ತ ಅಂಜಲಿ ರುದ್ರಪ್ರತಾಪ್ ನ ಮೋಸದ ಬಲೆಯಲ್ಲಿ ಬಿದ್ದಿದ್ದಾಳೆ. ಅವನು ಹೇಳುತ್ತಿರುವ ಸುಳ್ಳನ್ನು ನಂಬುತ್ತಲೇ ಹೋಗುತ್ತಿದ್ದಾಳೆ. ಎಲ್ಲೂ ಕೂಡ ತನ್ನ ಮೇಲೆ ಅನುಮಾನ ಬಾರದಂತೆ ರುದ್ರ ಪ್ರತಾಪ್ ನೋಡಿಕೊಂಡಿದ್ದಾನೆ. ವೈದ್ಯ ಆದರೂ ಕೂಡ ಅಂಜಲಿ ದಡ್ಡಿಯಂತೆ ನಡೆದುಕೊಂಡಿದ್ದಾಳೆ. ರುದ್ರಪ್ರತಾಪ್ ಪ್ರಪೋಸ್ ಮಾಡಿದ್ದಕ್ಕೂ ಒಪ್ಪಿಕೊಂಡು, ಮತ್ತೆ ಭೇಟಿಯಾಗುವುದು ಹೇಗೆ ಎಂದು ಕೇಳಿದ್ದಾಳೆ. ಅದಕ್ಕೆ ರುದ್ರಪ್ರತಾಪ್ ಇದೇ ಜಾಗದಲ್ಲಿ ಭೇಟಿಯಾಗೋಣ. ಆರ್ ಪಿ ತಲೆ ನೋವು ಕಡಿಮೆಯಾದ ಬಳಿಕ ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡಿದ್ದಾನೆ. ಅಂಜಲಿ ಆರ್ ಪಿ ಮಾತನ್ನು ನಂಬಿಕೊಂಡು ಅಲ್ಲಿಂದ ಹೊರಟಿದ್ದಾಳೆ.

ಭಾರ್ಗವಿ ಪ್ಲಾನ್ ತಲೆಕೆಳಗೆ ಮಾಡಿದ ಅಶೋಕ್
ಮನೆಯಲ್ಲಿ ಎಲ್ಲರೂ ಗಾಬರಿಯಾಗಿರುವಾಗಲೇ ಅಶೋಕ್ ಮನೆಗೆ ಬರುತ್ತಾನೆ. ರಾಮ್ ಗೆ ಅಪಾಯವಿದೆ ಎಂದು ತಿಳಿದು ಚಾಮದಿನಿ ಜೊತೆಗೆ ಏರ್ ಪೋರ್ಟ್ ಗೆ ನಾನು ಹೊರಟೆ. ಅಲ್ಲದೇ, ಎಮರ್ಜನ್ಸಿ ಕಾಲ್ ಕೂಡ ಫೇಕ್. ಏರ್ ಪೋರ್ಟ್ ಬಳಿ ಸಣ್ಣ ಅಪಘಾತವಾಯ್ತು. ದೇಸಾಯಿ ಮನೆಯ ಕಾರನ್ನು ನೋಡಿದ ಜನ ರಾಮ್ ಗೆ ಆಪಘಾತವಾಗಿದೆ ಎಂದುಕೊಂಡರು. ಚಾಂದಿನಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾಳೆ. ಅವಳನ್ನು ಹಿಡಿದರೆ, ರಾಮ್ ವಿರುದ್ಧ ಪ್ಲಾನ್ಮಾಡಿದವರು ಯಾರು ಎಂದು ಗೊತ್ತಾಗುತ್ತದೆ ಏಂದು ಹೇಳುತ್ತಾನೆ.


Click it and Unblock the Notifications











