Seetha Rama ; ಆಸ್ತಿ ಹೊಡೆಯಲು ಸೀತಾರಾಮನ ಮದುವೆ ಮಾಡಲು ಮುಂದಾದ ಭಾರ್ಗವಿ ...!
ಸೀತಾರಾಮ ಧಾರಾವಾಹಿಯಲ್ಲಿ ರಾಮಗೆ ಅಪಘಾತವಾಗಿರುವ ವಿಷಯ ತಿಳಿದು ಸೀತಾ ಗಾಬರಿಯಾಗಿದ್ದಾಳೆ. ರಾಮನನ್ನು ನೋಡಲು ಹೊರಟಿದ್ದಾಳೆ. ಆದರೆ, ರಾಮ ಎದುರಿಗೆ ಬಂದಿದ್ದು, ತನಗೇನು ಆಗಿಲ್ಲ. ಅಶೋಕ್ ನೀನು ಎಲ್ಲೂ ಹೋಗಬೇಡ ಅಂದ. ಹಾಗಾಗಿ ನಾನು ದುಬೈಗೆ ಹೋಗಲಿಲ್ಲ ಎಂದು ಹೇಳುತ್ತಾನೆ.ರಾಮ ಹುಷಾರಾಗಿರುವುದನ್ನು ನೋಡಿದ ಸೀತಾಳಿಗೆ ಸಮಾಧಾನವಾಗುತ್ತದೆ. ಇಬ್ಬರೂ ಖುಷಿಯಾಗಿ ಮಾತನಾಡುತ್ತಾರೆ. ಆಗ ಸೀತಾ ಪ್ಯಾರಿಸ್ ಟ್ರಿಪ್ ಬಗ್ಗೆ ಚಾಂದಿನಿ ಹೇಳಿದ್ದನ್ನು ಹೇಳುತ್ತಾಳೆ.
ಹಳೆ ಕಥೆ ಹೇಳುತ್ತಾಳಾ ಸೀತಾ..?
ಆಗ ಸೀತಾಳಿಗೆ ರಾಮ ಬೈಯುತ್ತಾನೆ. ನಾನು ಎಲ್ಲಾ ವಿಚಾರವನ್ನು ನಿನ್ನ ಬಳಿ ಹೇಳಿಕೊಳ್ಳುತ್ತೇನೆ. ಆದರೆ, ನೀನು ಚಾಂದಿನಿ ನಿನ್ನ ಬಳಿ ಟ್ರಿಪ್ ಬಗ್ಗೆ ಮಾತನಾಡಿದ್ದನ್ನು ಹೇಳೇ ಇಲ್ಲ. ಯಾವ ವಿಷಯವೇ ಆಗಲಿ ಇನ್ಮುಂದೆ ಮುಚ್ಚಿಡದೇ ನನ್ನ ಬಳಿ ಹೇಳಬೇಕು. ಚಿಕ್ಕ ವಿಷಯವಾದರೂ ಪರವಾಗಿಲ್ಲ ಎಂದು ಹೇಳುತ್ತಾನೆ. ಇಬ್ಬರೂ ಮಾತು ಮುಗಿಸಿ ಹೊರಟ ಮೇಲೆ ಸೀತಾ ತನ್ನ ಹಾಗೂ ಸಿಹಿಯ ಬಗ್ಗೆ ಹೇಳಬೇಕು ಎಂದು ತೀರ್ಮಾನಿಸುತ್ತಾಳೆ. ಹೇಳದೇ ಹೋದರೆ, ಮುಂದೆ ಸಮಸ್ಯೆ ಆಗಬಹುದು. ರಾಮ ತನ್ನ ಬಳಿ ಎಲ್ಲವನ್ನೂ ಹೇಳಿಕೊಂಡಂತೆ ತಾನೂ ಹೇಳಿಕೊಳ್ಳಬೇಕು ಎಂದು ವಾಯ್ಸ್ ಮೆಸೇಜ್ ಕಳಿಸಲು ಯತ್ನಿಸುತ್ತಾಳೆ. ಆದರೆ, ಅಷ್ಟರಲ್ಲಿ ಸಿಹಿ ಮತ್ತು ಅಜ್ಜಿ-ತಾತಾ ಬರುತ್ತಾರೆ.

ಸೀತಾಳನ್ನು ಒಪ್ಪಿಕೊಂಡ ಭಾರ್ಗವಿ
ಇತ್ತ ಭಾರ್ಗವಿ ಒಡವೆಗಳನ್ನು ಎತ್ತಿಟ್ಟು ಮಾವನ ಜೊತೆ ಮಾತನಾಡುತ್ತಿರುತ್ತಾಳೆ. ಸೂರಿಗೆ ಸಿಹಿ ತುಂಬಾ ಇಷ್ಟವಾಗಿರುತ್ತಾಳೆ. ಬಳಿಕ ರೂಮಿಗೆ ಬರುವ ಭಾರ್ಗವಿ ಸೀತಾ ಮದುವೆ ಆಗುತ್ತಿರುವುದಕ್ಕೆ ಸಂಕಟ ಪಡುತ್ತಾಳೆ. ನಂತರ ಸೀತಾ ಮತ್ತು ರಾಮ್ ಮದುವೆಯನ್ನು ಮಾಡುತ್ತೇನೆ ಎಂದು ಹೇಳುತ್ತಾಳೆ. ಭಾರ್ಗವಿ ಮಾತುಗಳು ವಿಶ್ವನಿಗೆ ಗೊಂದಲವನ್ನುಂಟು ಮಾಡುತ್ತದೆ. ರಾಮ ಆಸ್ತಿಯನ್ನು ಹೆಂಡತಿಗೆ ಬಿಟ್ಟು ಬೇರೆ ಯಾರಿಗೂ ಬರೆಯುವಂತಿಲ್ಲ. ಅದೇ ಸೀತಾ ಮುಗ್ಧೆ ಅವಳ ಹೆಸರಿನ ಆಸ್ತಿಯನ್ನು ನನ್ನ ಹೆಸರಿಗೆ ಮಾಡಿಕೊಳ್ಳಬಹುದು. ರಾಮ್ ಸೀತಾಳಿಗೆ ಆಸ್ತಿಯನ್ನು ಬರೆಯಲಿ, ಅದನ್ನೆಲ್ಲಾ ನಾನು ತೆಗೆದುಕೊಳ್ಳುತ್ತೇನೆ. ಸೀತಾ ಸತ್ಯವಂತೆ ಹರಿಶ್ಚಂದ್ರನ ತುಂಡು ಎಂದು ಮಾತನಾಡುತ್ತಾಳೆ. ಆಗ ವಿಶ್ವನಿಗೆ ಭಾರ್ಗವಿ ಪ್ಲಾನ್ ಸಕ್ಸಸ್ ಆಗಬಹುದು ಎಂದು ಅನಿಸುತ್ತದೆ.
ಚಾಂದಿನಿಗಾಗಿ ಅಶೋಕ್ ಹುಡುಕಾಟ
ಇನ್ನು ಅಶೋಕ್ ಗೆ ಏನೂ ಆಗದೇ ವಾಪಸ್ ಮನೆಗೆ ಬಂದಿದ್ದಕ್ಕೆ ಪ್ರಿಯಾ ಖುಷಿ ಪಡುತ್ತಾಳೆ. ಅಶೋಕ್ ಚಾಂದಿನಿ ಫೋನ್ ಸ್ವಿಚ್ ಆಫ್ ಆಗಿರುವುದಕ್ಕೆ ಆತಂಕಗೊಂಡಿದ್ದು, ಇದೆಲ್ಲವೂ ಭಾರ್ಗವಿಯ ಕೆಲಸವೇ ಎಂದು ಹೇಳುತ್ತಾನೆ. ಇದೇ ವಿಚಾರದ ಬಗ್ಗೆ ರಾಮ್ ಬಳಿ ಮಾತನಾಡಬೇಕು. ಮೊದಲು ಚಾಂದಿನಿಯನ್ನು ಹಿಡಿದು, ನಂತರ ಭಾರ್ಗವಿ ಆಟಕ್ಕೆ ಬ್ರೇಕ್ ಹಾಕಬೇಕು ಎನ್ನುತ್ತಾನೆ. ಪ್ರಿಯಾ ಎಲ್ಲಾ ಸತ್ಯವನ್ನು ರಾಮ್ ಗೆ ಹೇಳಿಬಿಡಿ ಆಗ ಸಮಸ್ಯೆ ಬೇಗ ಸರಿ ಹೋಗುತ್ತೆ ಎಂದು ಹೇಳುತ್ತಾಳೆ. ಅಶೋಕ್ ರಾಮ್ ಬಳಿ ಚಾಂದಿನಿ ಬಗ್ಗೆ ಹೇಳಲು ಫೋನ್ ಮಾಡುತ್ತಾನೆ.

ಸೀತಾ ಮನೆಗೆ ರಾಮ ಕುಟುಂಬ
ಭಾರ್ಗವಿ ಬೆಳಗ್ಗೆಯೇ ಸೀತಾ ಮನೆಗೆ ಹೆಣ್ಣು ಕೇಳುವ ಶಾಸ್ತ್ರಕ್ಕೆ ಹೋಗಬೇಕು ಎಂದು ಮನೆಯವರಿಗೆಲ್ಲಾ ಹೇಳುತ್ತಾಳೆ. ರಾಮಗೆ ಸಾಧನಾ ವಿಷಯ ಮುಟ್ಟಿಸುತ್ತಾಳೆ. ರಾಮ ಗೆ ಖುಷಿಯಾಗುತ್ತದೆ. ಸಿಹಿಗೆ ಹೇಳಿದ್ದಕ್ಕೆ ಸೂರಿ ತಾತ ಸಿಹಿ ಮನೆಗೆ ಬರುತ್ತಾರೆ ಎಂದು ಸಂಭ್ರಮ ಪಡುತ್ತಾಳೆ. ಸೀತಾ ಕೂಡ ವಿಷಯ ಕೇಳಿ ಖುಷಿಪಟ್ಟಿದ್ದು, ಅಶೋಕ್ ಮತ್ತು ಪ್ರಿಯಾ ಅವರನ್ನು ಕೂಡ ರಾಮ ಕರೆಯುತ್ತಾನೆ. ಒಟ್ನಲ್ಲಿ ಸೀತಾ ರಾಮನ ಮದುವೆ ಮಾಡಲು ಭಾರ್ಗವಿಯೇ ಮುಂದಾಗಿದ್ದು, ಮದುವೆ ಆಗುವುದು ಪಕ್ಕಾ ಆಗಿದೆ.


Click it and Unblock the Notifications











