Shrirastu Shubhamasthu: ದೀಪಿಕಾ ಜೊತೆಗೆ ಮದುವೆ ಮಾಡಿಸುವುದಾಗಿ ಅಭಿಗೆ ಮಾತು ಕೊಟ್ಟ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಎಲ್ಲರದ್ದು ಒಂದು ದಾರಿಯಾದರೆ, ಸಂಧ್ಯಾಳದ್ದೇ ಬೇರೆ ದಾರಿ. ಯಾರು ಏನಾದರೂ ಮಾಡಿಕೊಳ್ಳಲಿ ತನಗೆ ಹಣ ಸಿಕ್ಕರೆ ಸಾಕು ಎಂಬ ದುರ್ಬುದ್ಧಿ.
ಸದಾ ತನ್ನ ಬಗ್ಗೆ ಹಾಗೂ ತನ್ನ ಸಂಸಾರದ ಬಗ್ಗೆಯೇ ಯೋಚಿಸುವ ಸಂಧ್ಯಾ ಈಗಾಗಲೇ ಅಮ್ಮ ಹಾಗೂ ತಾತನಿಂದ ಸರಿ ಸುಮಾರು 13 ಲಕ್ಷ ರೂ.ಗೂ ಅಧಿಕ ಹಣವನ್ನು ತನ್ನದಾಗಿಸಿಕೊಳ್ಳಲು ಹೋಗಿ ನಂದಿನಿಗೆ ಲಾಭ ಮಾಡಿಕೊಟ್ಟಿದ್ದಾಳೆ.

ಈಗ ಮತ್ತೆ ಆ ನಂದಿನಿಯ ಮಾತನ್ನು ಕೇಳಿ ಇನ್ನಷ್ಟು ಹಣವನ್ನು ಪಡೆಯಲು ಮುಂದಾಗಿದ್ದಾಳೆ. ಈಗಾಗಲೇ ಅಭಿ ಬಳಿ ಒಂದು ಲಕ್ಷ ಹಣ ಪಡೆದಿದ್ದು, ಈಗ ಮಾಧವ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ಮಗಳಿಗೆ ವಾರ್ನಿಂಗ್ ಕೊಟ್ಟ ತುಳಸಿ
ತಾನು ಗರ್ಭಿಣಿಯಾಗಿದ್ದು, ತನ್ನ ಮಗುವಿನ ಆರೈಕೆಗೆ ಹಣದ ಸಹಾಯವನ್ನು ಬೇಡುವುದಲ್ಲದೇ, ಸಾಲ ತೀರಿಸಬೇಕಿದೆ ಎಂದು ಸುಳ್ಳು ಹೇಳಿ 3 ಲಕ್ಷ ಹಣವನ್ನು ಮಾಧವ್ ಬಳಿ ಕೇಳಿದ್ದಾಳೆ. ಜೊತೆಗೆ ತನ್ನ ಪತಿ ಪ್ರಸಾದ್‌ಗಾಗಿ ಕೆಲಸವೊಂದು ಬೇಕಿದೆ, ಇಲ್ಲದಿದ್ದರೆ, ಬಿಸಿನೆಸ್‌ಗೆ ಹಣ ಕೊಡಿ ಎಂದು ಮಾಧವ್ ಬಳಿ ಕೇಳಿದ್ದಾಳೆ. ಮಾಧವ್ ಹಣ ಹೊಂದಿಸಿ ತೆಗೆದುಕೊಂಡು ಹೋಗುವಾಗ ಮನೆಯವರಿಗೆಲ್ಲಾ ವಿಷಯ ಗೊತ್ತಾಗಿದೆ. ತುಳಸಿ ಸಂಧ್ಯಾಳಿಗೆ ತಕ್ಷಣವೇ ಫೋನ್ ಮಾಡಿ, ಈ ಮನೆಯಿಂದ ಯಾವುದೇ ರೀತಿಯ ಸಹಾಯ ನಿರೀಕ್ಷಿಸಬೇಡ ಎಂದು ವಾರ್ನಿಂಗ್ ಕೊಟ್ಟಿದ್ದಾಳೆ. ಮಾಧವ್‌ಗೂ ಕೂಡ ಸಂಧ್ಯಾಳಿಗೆ ಸಹಾಯ ಮಾಡಬಾರದು ಎಂದು ಖಡಕ್ ಆಗಿ ಹೇಳಿದ್ದಾಳೆ. ಈ ಮಾತಿನಿಂದ ಸಂಧ್ಯಾಳಿಗೆ ಬೇಸರವಾಗಿದೆ.
ಸಂಧ್ಯಾಳಿಗೆ ಬೈದು ಬುದ್ಧಿ ಹೇಳಿದ ಮನೆಯವರು
ಅಮ್ಮನಿಗೆ ತನ್ನ ಮೇಲೆ ಕರುಣೆ ಇಲ್ಲ. ನನ್ನ ಗಂಡ ಉದ್ಧಾರ ಆಗುವುದು ಇಷ್ಟವಿಲ್ಲ ಎಂದು ಸಂಧ್ಯಾ ಗೊಣಗುತ್ತಿರುವಾಗ ಮನೆಯವರೆಲ್ಲರೂ ಬೈದಿದ್ದಾರೆ. ಅಲ್ಲದೇ, ಪ್ರಸಾದ್ ಕೂಡ ನನ್ನ ಹೆಸರಿನಲ್ಲಿ ನೀನು ಯಾರ ಬಳಿಯೂ ಸಹಾಯ ಕೇಳುವ ಅಗತ್ಯವಿಲ್ಲ ಎಂದು ಗದರಿದ್ದಾನೆ. ಸಮರ್ಥ್ ಇನ್ಯಾವತ್ತು ಆ ಮನೆಯ ಹಣಕ್ಕೆ ಆಸೆ ಪಡಬಾರದು. ಗರ್ಭಿಣಿ ಎಂದ ಮಾತ್ರಕ್ಕೆ ನಿನ್ನಿಷ್ಟದಂತೆ ನಡೆದುಕೊಳ್ಳಬಾರದು ಎಂದು ಬುದ್ಧಿ ಹೇಳಿದ್ದಾನೆ.
ಮನೆ ಬಿಟ್ಟು ಹೊರಟ ಅಭಿ
ಇತ್ತ ಅಭಿ, ತುಳಸಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮಾಧವ್ ಹೊಡೆಯುತ್ತಾನೆ. ಇದರಿಂದ ಬೇಸರ ಮಾಡಿಕೊಂಡ ಅಭಿ ಈ ಮನೆಯಲ್ಲಿ ತನಗೆ ಬೆಲೆಯೇ ಇಲ್ಲ ಎಂದು ಕೋಪ ಮಾಡಿಕೊಂಡು ಮನೆ ಬಿಟ್ಟು ಹೊರಡಲು ಮುಂದಾಗಿದ್ದಾನೆ. ಅಭಿ ಅನ್ನು ಅವಿ ಹಾಗೂ ಶಾರ್ವರಿ ಮಾತನಾಡಿಸಿ ಸಮಾಧಾನ ಮಾಡಿದ್ದಾರೆ. ಶಾರ್ವರಿ ಯಾರದೋ ವಿಚಾರಕ್ಕೆ ನೀನು ನಿನ್ನ ಮನೆ ಬಿಟ್ಟು ಹೋಗುವುದು ಸರಿಯಲ್ಲ ಎಂದು ಪರೋಕ್ಷವಾಗಿ ತುಳಸಿಗೆ ಹೇಳಿದ್ದಾಳೆ.

ಅಭಿಗೆ ಮಾತು ಕೊಟ್ಟ ತುಳಸಿ
ಮನೆ ಬಿಟ್ಟು ಹೊರಟ ಅಭಿ ಅನ್ನು ತುಳಸಿ ಮತ್ತು ಮಾಧವ್ ತಡೆಯುತ್ತಾರೆ. ಆಗ ಅಭಿ ನಿಮ್ಮಿಂದಾಗಿ ನನ್ನ ಮದುವೆ ನಿಂತು ಹೋಗಿದೆ. ನನಗೆ ಅನ್ಯಾಯವಾಗಿದೆ. ಹಾಗಿರುವಾಗ ನಾನು ಈ ಮನೆಯಲ್ಲಿ ಯಾಕಿರಬೇಕು ಎಂದು ಪ್ರಶ್ನಿಸುತ್ತಾನೆ. ಆಗ ತುಳಸಿ ನಿನ್ನ ಮದುವೆಯನ್ನು ಮಾಡಿಸುವುದು ನಮ್ಮ ಜವಾಬ್ದಾರಿ. ದೀಪಿಕಾ ಜೊತೆಗೆ ನಿನ್ನ ಮದುವೆ ಮಾಡಿಸುತ್ತೇನೆ ಎಂದು ಮಾತು ಕೊಡುತ್ತಾಳೆ. ಇದನ್ನು ಕೇಳಿದ ಅಭಿಗೆ ಖುಷಿಯಾಗುತ್ತದೆ. ಆದರೆ ಪೂರ್ಣಿಮಾ ಮತ್ತು ಅವಿ ನೀವು ಅಭಿಗೆ ಮಾತು ಕೊಡಬಾರದಿತ್ತು. ಅವರಿಬ್ಬರ ಮದುವೆ ಮಾಡಿಸುವುದು ಬಹಳ ಕಷ್ಟ ಎಂದು ಹೇಳುತ್ತಾರೆ.


Click it and Unblock the Notifications











