Seetha Rama ; ಸೀತಾ ತನ್ನ ಮನೆಯ ಸೊಸೆ ಎಂದ ಭಾರ್ಗವಿ : ಸಿಹಿ ವಿಚಾರವನ್ನು ಮುಚ್ಚಿಟ್ಟ ಚಿಕ್ಕಿ..!
ಸೀತಾರಾಮ ಧಾರಾವಾಹಿಯಲ್ಲಿ ಸೂರಿ ತಾತನಿಗೆ ಸಿಹಿ ಹತ್ತಿರವಾಗಿದ್ದಾಳೆ. ಸೂರಿ ತಾತನಿಗೆ ಸನ್ ಎಂದು ಶಾರ್ಟ್ ಆಗಿ ಹೆಸರಿಟ್ಟಿದ್ದಾಳೆ. ಸೂರಿ ತಾತನೊಂದಿಗೆ ಆಟವಾಡಿದ್ದಾಳೆ. ಸಿಹಿನ ಕಂಡು ಸೂರಿ ತಾತನಿಗೂ ಖುಷಿಯಾಗಿದೆ. ಇಷ್ಟು ಚಿಕ್ಕ ವಯಸ್ಸಿಗೆ ಈ ಮಗುವಿಗೆ ಎಷ್ಟು ಒಳ್ಳೆಯ ಗುಣಗಳಿವೆ ಎಂದು ಖುಷಿ ಪಟ್ಟಿದ್ದಾರೆ.
ಸಿಹಿ ಮತ್ತು ಸೂರಿ ತಾತ ಆಟವಾಡಿರುವುದನ್ನು ನೋಡಿದ ಸೀತಾ ಹಾಗೂ ರಾಮನಿಗೂ ಖುಷಿಯಾಗಿದೆ. ಇನ್ನು ಸಿಹಿ ಈಗಾಗಲೇ ರಾಮ ಮತ್ತು ಸೀತಾ ಮದುವೆಗೆ ಒಪ್ಪಿಗೆಯನ್ನೂ ಕೊಟ್ಟಿದ್ದಾಳೆ.
ಅದ್ಧೂರಿಯಾಗಿ ನಡೆದ ಅಶೋಕ್-ಪ್ರಿಯಾ ಮದುವೆ
ಅಶೋಕ್ ಹಾಗೂ ಪ್ರಿಯಾ ಮದುವೆ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆದಿದೆ. ಭಾರ್ಗವಿ ಮತ್ತು ವಿಶ್ವ ಧಾರೆ ಎರದುಕೊಡುವ ಬದಲು, ಸತ್ಯ ಮತ್ತು ಸಾಧನಾ ಅಶೋಕನ ತಂದೆ ತಾಯಿ ಸ್ಥಾನದಲ್ಲಿ ನಿಂತಿದ್ದಾರೆ. ಪ್ರಿಯಾಳಿಗೆ ಮೂರ್ತಿ ತಾತ ಮತ್ತು ಶಾಂತಜ್ಜಿ ಧಾರೆ ಎರೆದು ಕೊಟ್ಟಿದ್ದಾರೆ. ಮದುವೆ ಮನೆಯಲ್ಲಿ ಸೀತಾ ಮತ್ತು ರಾಮ ಇನ್ನಷ್ಟು ಹತ್ತಿರವಾಗಿದ್ದು, ಇಬ್ಬರೂ ತಮ್ಮ ಮದುವೆಯ ಕನಸು ಕಂಡಿದ್ದಾರೆ. ಭಾರ್ಗವಿ ಸೀತಾ ಹಾಗೂ ರಾಮನನ್ನು ಗಮನಿಸುತ್ತಿದ್ದರೂ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾಳೆ. ಚಾಂದಿನಿ ಮಾತ್ರ ಬೇಕಂತಲೇ ಸೀತಾಳಿಗೆ ನೋವಾಗುವಂತೆ ಆಗಾಗ ಮಾತನಾಡಿದ್ದಾಳೆ. ಆದರೆ ಚಾಂದಿನಿ ಏನೇ ಹೇಳಿದರೂ ಅದರಿಂದ ಸೀತಾಳಿಗೆ ಒಳ್ಳೆಯದೇ ಆಗಿದೆ.

ಸೀತಾಳನ್ನೇ ಸೊಸೆ ಎಂದು ಒಪ್ಪಿದ ಭಾರ್ಗವಿ
ಅಶೋಕ್ ಹಾಗೂ ಪ್ರಿಯಾ ಮದುವೆ ಮುಗಿದ ಬಳಿಕ ಸೂರಿ ತಾತ ತನ್ನ ಮೊಮ್ಮಗ ರಾಮ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಮ ಮದುವೆ ಮಾಡಿಕೊಳ್ಳಲು ನಿನ್ನ ಹುಡುಗಿಯನ್ನು ನೀನೇ ಆಯ್ಕೆ ಮಾಡಿಕೊಳ್ಳು ಎಂದು ಇಷ್ಟು ದಿನ ಕಾಲಾವಕಾಶ ಮಾಡಿ ಕೊಟ್ಟಿದ್ದೆ. ಆದರೆ ರಾಮ ಯಾವ ಹುಡುಗಿಯನ್ನು ನನ್ನ ಮುಂದೆ ಕರೆದುಕೊಂಡು ಬರಲಿಲ್ಲ. ಈಗ ಅವನು ಯಾರನ್ನು ಮದುವೆಯಾಗಬೇಕು ಎಂದು ನಾನೇ ನಿರ್ಧಾರ ಮಾಡುತ್ತೇನೆ ಎಂದು ಹೇಳುತ್ತಾರೆ. ಆಗ ಅಪ್ಪು ಮದುವೆಯಾಗುವ ಹುಡುಗಿಯನ್ನು ನಾನು ತೋರಿಸುತ್ತೇನೆ ಎಂದು ಭಾರ್ಗವಿ ಹೇಳುತ್ತಾಳೆ. ಚಾಂದಿನಿಯನ್ನು ತೋರಿಸಬಹುದು ಎಂದ ಗೆಸ್ ಮಾಡಿದ್ದ ವೀಕ್ಷಕರಿಗೆ ಶಾಕ್ ಕೂಡ ಆಗುತ್ತದೆ. ಸೀತಾಳನ್ನು ಕರೆದುಕೊಂಡು ಬಂದು ರಾಮ ಪಕ್ಕ ನಿಲ್ಲಿಸುತ್ತಾಳೆ.
ಚಾಂದಿನಿಗೆ ಗೇಟ್ ಪಾಸ್ ಕೊಟ್ಟ ಭಾರ್ಗವಿ
ನನ್ನ ಅಪ್ಪು ಮನಸ್ಸಲ್ಲಿ ಏನಿದೆ ಎಂದು ನನಗೆ ಗೊತ್ತಾಗುತ್ತೆ. ಸೀತಾಳನ್ನು ರಾಮ ತುಂಬಾ ಇಷ್ಟಪಡುತ್ತಾನೆ ಎಂದ ಮೇಲೆ ನೀನು ನನ್ನ ಮುದ್ದಿನ ಸೊಸೆ ಎಂದು ಭಾರ್ಗವಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಮನೆಯವರಿಗೆಲ್ಲಾ ಖುಷಿಯೂ ಆಗುತ್ತದೆ. ತಾತ ಕೂಡ ಸೀತಾಳನ್ನು ಒಪ್ಪಿಕೊಳ್ಳುತ್ತಾರೆ. ಇತ್ತ ಚಾಂದಿನಿಯನ್ನು ಮದುವೆ ಮನೆಯಿಂದಲೇ ಆಚೆ ಹಾಕಲಾಗುತ್ತದೆ. ಇದು ಚಾಂದಿನಿಗೆ ಕೋಪ ತರಿಸುತ್ತದೆ. ನಾನು ಏನು ಎಂದು ತೋರಿಸುತ್ತೇನೆ ಎನ್ನುತ್ತಾ ಚಾಂದಿನಿ ಅಲ್ಲಿಂದ ಹೊರಟು ಬಿಡುತ್ತಾಳೆ.

ಸೀತಾ ಜೊತೆಗೆ ಮಾತನಾಡಿದ ಭಾರ್ಗವಿ
ಇನ್ನು ಮನೆಯವರೆಲ್ಲರೂ ಸೀತಾಳಿಗೆ ವಿಶ್ ಮಾಡುತ್ತಾರೆ. ಆದರೆ, ಅಶೋಕ್ ಮಾತ್ರ ಶಾಕ್ ನಲ್ಲಿ ಇರುತ್ತಾನೆ. ಭಾರ್ಗವಿ ಅಷ್ಟು ಸುಲಭವಾಗಿ ಹೇಗೆ ಸೀತಾಳನ್ನು ಒಪ್ಪಿಕೊಂಡಳು ಎಂದು ಭಯಪಡುತ್ತಾನೆ. ಇನ್ನು ಸಿಹಿ ಬಗ್ಗೆ ತಾತನ ಬಳಿ ಸೀತಾ ಹೇಳಲು ಹೊರಟಾಗ ಭಾರ್ಗವಿಯೇ ತಡೆಯುತ್ತಾಳೆ. ರಾಮಗಂತೂ ಈ ಸಂಭ್ರಮ ಹೆಚ್ಚಾಗಿದೆ. ಇನ್ನು ಸೀತಾ ಬಳಿ ಭಾರ್ಗವಿ ಸಪರೇಟ್ ಆಗಿ ಮಾತನಾಡಲು ಆಗಮಿಸಿದ್ದಾಳೆ. ಸೀತಾಳಿಗೆ ನೋವಾಗುವಂತೆ ನಡೆದುಕೊಳ್ಳುತ್ತಾಳಾ ಎಂಬುದು ಗೊತ್ತಿಲ್ಲ.


Click it and Unblock the Notifications











