Can I Be Yours ಎಂದು ಸೀತಾಳಿಗೆ ಪ್ರಪೋಸ್ ಮಾಡಿದ ರಾಮ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ , ಗೆಳೆಯ ರಾಮ್ ಬದುಕು ಹಸನಾಗಿರಬೇಕು ಎಂದು ತನ್ನ ಕೈಲಾದಷ್ಟು ಒಳ್ಳೆಯದನ್ನೇ ಮಾಡುತ್ತಿದ್ದಾನೆ. ರಾಮ್ ಬದುಕು ಈಗ ಮುಖ್ಯವಾದ ಘಟ್ಟದಲ್ಲಿದ್ದು, ಸೀತಾಳಿಗೆ ರಾಮ ಪ್ರಪೋಸ್‌ ಮಾಡಿದರೆ, ಇಬ್ಬರೂ ಸುಖವಾಗಿ ಬಾಳಬಹುದು. ರಾಮ ಬಗ್ಗೆ ಕಾಳಜಿ ಮಾಡುವವರೂ ಒಬ್ಬರು ಬರುತ್ತಾರೆ ಎಂಬುದು ಅಶೋಕನ ಆಸೆ. ಇದಕ್ಕೋಸ್ಕರವೇ ಅಶೋಕ್ ,ರಾಮ ಪ್ರೀತಿಗೆ ಸಪೋರ್ಟ್ ಮಾಡುತ್ತಿದ್ದು, ಈಗ ಮನದಾಳದ ಮಾತುಗಳನ್ನು ಹೇಳಿಕೊಳ್ಳಲಿ ಎಂದು ಇಬ್ಬರನ್ನು ಏಕಾಂತದಲ್ಲಿ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ.

ಫಾಲೋ ಮಾಡಿಕೊಂಡು ಬಂದ ಆಗಂತುಕರು

ಆದರೆ, ರಾಮ ಸೀತಾಳಿಗೆ ತನ್ನ ಮನದ ಮಾತುಗಳನ್ನು ಹೇಳುವ ಮುನ್ನವೇ ಗಂಢಾಂತರವೊಂದು ಎದುರಾಗಿದೆ. ರಾಮನನ್ನು ಅಪರಿಚಿತ ವ್ಯಕ್ತಿ ಫಾಲೋ ಮಾಡುತ್ತಿದ್ದಾನೆ. ಇದನ್ನು ಗಮನಿಸಿದ ರಾಮ, ಸೀತಾಳನ್ನು ಹೋಟೆಲ್ ನಿಂದ ಕರೆದುಕೊಂಡು ಹೊರಟಿದ್ದಾನೆ. ಇಬ್ಬರೂ ಹೋಗುತ್ತಿರುವ ಕಾರನ್ನು ಮತ್ತೊಂದು ವಾಹನ ಫಾಲೋ ಮಾಡುತ್ತಿದೆ. ಇದನ್ನು ನೋಡಿದ ರಾಮಗೆ ಆತಂಕ ಹೆಚ್ಚಾಗಿದೆ. ಅವರ ದಾರಿ ತಪ್ಪಿಸಲು ರಾಮ ಕಾರಿನಿಂದ ಸೀತಾಳನ್ನು ಇಳಿಸಿ ಬೇರೆಡೆ ಬಚ್ಚಿಟ್ಟುಕೊಳ್ಳುತ್ತಾನೆ. ಆಗಂತುಕರು ರಾಮ ಹಾಗೂ ಸೀತಾ ಇಳಿದಿದ್ದನ್ನು ಗಮನಿಸದೆಯೇ ಕಾರನ್ನು ಫಾಲೋ ಮಾಡಿಕೊಂಡು ಮುಂದೆ ಸಾಗಿದ್ದಾರೆ. ಸದ್ಯ ರಾಮ ಮತ್ತು ಸೀತಾ ಅಪಾಯದಿಂದ ಪಾರಾಗಿದ್ದಾರೆ.

Written update on episode 15 February seetha rama serial

ರಾಮ ಪ್ರಪೋಸ್ ಮಾಡೇ ಬಿಟ್ಟ..!!

ಇಬ್ಬರೂ ಒಂದೆಡೆ ಬಚ್ಚಿಟ್ಟುಕೊಂಡು ಕುಳಿತಿರುತ್ತಾರೆ. ಇಬ್ಬರು ಸಹಜವಾಗಿ ಮಾತನಾಡುತ್ತಾ, ಪೊಲೀಸರಿಗಾಗಿ ಕಾಯುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಆತಂಕದಿಂದ ಸಿಹಿ ಫೋನ್ ಮಾಡುತ್ತಾಳೆ. ಸೀತಾ ತನಗೆ ಕೆಲಸವಿದ್ದು, ಬರುವುದು ತಡವಾಗುತ್ತದೆ. ತನ್ನ ಜೊತೆಗೆ ರಾಮ ಕೂಡ ಇದ್ದಾರೆ ಎಂದು ಹೇಳುತ್ತಾಳೆ. ಆಗ ಸಿಹಿಗೆ ಧೈರ್ಯ ಬರುತ್ತದೆ. ನನ್ ಫ್ರೆಂಡ್ ಜೊತೆಗೆ ಇದೀಯಾ ಅಂದ ಮೇಲೆ ನನಗೇನು ಭಯವಿಲ್ಲ. ನೀನು ಅರಾಮಾಗಿ ಬಾ ಸೀತಮ್ಮ ಎಂದು ಹೇಳಿ ಫೋನ್ ಇಡುತ್ತಾಳೆ. ಆಗ ರಾಮ ಸೀತಾಳನ್ನು ಪ್ರಪೋಸ್ ಮಾಡುತ್ತಾನೆ. ಸೀತಾ ಕ್ಯಾನ್ ಐ ಬಿ ಯೂರ್ಸ್ ಎಂದು ಕೇಳುತ್ತಾನೆ. ಕೂಡಲೇ ಶಾಕ್ ಆದ ಸೀತಾ ಅವಳೂ ಕೂಡ ಅದೇ ಮಾತನ್ನು ಹೇಳುತ್ತಾಳೆ. ಅಲ್ಲೊಂದು ಪೋಸ್ಟರ್ ತೋರಿಸಿ, ಡೈಮಂಡ್ ಜಾಹೀರಾತು ಹೇಗೆ ಕೊಟ್ಟಿದ್ದಾರೆ ಅಲ್ವಾ ಎಂದು ತೋರಿಸುತ್ತಾಳೆ. ರಾಮ್ ಸುಮ್ಮನಾಗುತ್ತಾನೆ.

ಅಶೋಕ್ ಗಾಗಿ ಕಾಯುತ್ತಿರುವ ಪ್ರಿಯಾ

ಇತ್ತ ಪ್ರಿಯಾ, ಅಶೋಕ್ ಬರುತ್ತಾನೆ ತನಗೆ ಪ್ರಪೋಸ್ ಮಾಡುತ್ತಾನೆ ಎಂದು ರೆಡಿಯಾಗಿ ಪಾರ್ಕ್ ಗೆ ಬಂದಿದ್ದಾಳೆ. ಪ್ರಿಯಾ ಬ್ಯಾಟರಿ ಬೇರೆ ಲೋ ಆಗಿದ್ದು, ಅಶೋಕ್ ಗೆ ತಾನಿರುವ ಜಾಗದ ಬಗ್ಗೆ ತಿಳಿಸಿ ಮೆಸೇಜ್ ಮಾಡಿದ್ದಾಳೆ. ಅವಳ ಫೋನ್ ಸ್ವಿಚ್ ಆಫ್ ಆದ ಕಾರಣ ಪ್ರಿಯಾಳಿಗೂ ಕಾದು ಕಾದು ಸಾಕಾಗಿದೆ. ಹಾಗಾಗಿ ಅಶೊಕ್ ಮೇಲೆ ಕೋಪ ಮಾಡಿಕೊಂಡು ಅಲ್ಲಿಂದ ಹೊರಡುತ್ತಾಳೆ. ಗಾಡಿ ಕೂಡ ಸ್ಟಾರ್ಟ್ ಆಗದ ಕಾರಣ ಪ್ರಿಯಾ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಾಳೆ.

Written update on episode 15 February seetha rama serial

ಪ್ರಿಯಾಳನ್ನು ಹುಡುಕಿಕೊಂಡು ಬಂದ ಅಶೋಕ

ಇನ್ನು ಅಶೋಕ್ ಪೊಲೀಸರನ್ನು ಕರೆದುಕೊಂಡು ರಾಮ್ ಇರುವ ಸ್ಥಳಕ್ಕೆ ಹೋಗುತ್ತಾನೆ. ರಾಮ್ ಮತ್ತು ಸೀತಾ ಇಬ್ಬರೂ ಸೇಫ್ ಆಗಿರುವುದನ್ನು ಕನ್ಫರ್ಮಾ ಮಾಡಿಕೊಂಡ ಅಶೋಕ್ ಅಲ್ಲಿಂದ ಸೀದಾ ಪ್ರಿಯಾಳನ್ನು ಭೇಟಿಯಾಗಲು ಹೋಗುತ್ತಾನೆ. ಆದರೆ, ಅಶೋಕ್ ಪ್ರಿಯಾ ಹೇಳಿದ ಸ್ಥಳಕ್ಕೆ ಹೋಗುವ ವೇಳೆಗಾಗಲೇ ಪ್ರಿಯಾ ಅಲ್ಲಿರುವುದಿಲ್ಲ. ಫೋನ್ ಟ್ರೈ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಈಗ ಅಶೋಕ್ ಮತ್ತು ಪ್ರಿಯಾಳ ವ್ಯಾಲೆಟೈನ್ಸ್ ಡೇ ಹೀಗೆ ಮುಕ್ತಾಯಗೊಳ್ಳುತ್ತಾ ಇಲ್ಲ ವಿಶೇಷವಾಗಿರುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Even after ram proposes seethe saying can I be yours she don’t understands
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X