Seetha Rama ; ರಾಮ ಮೇಲೆ ಪ್ರೀತಿ ಹೆಚ್ಚಿಸಿಕೊಂಡ ಸೀತಾ : ಮೊಮ್ಮಗನ ಮದುವೆ ಬಗ್ಗೆ ಶಾಕಿಂಗ್ ಸುದ್ದಿ ಹೇಳಿದ ಸೂರಿ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮ, ಸೀತಾಳಿಗೆ ತನ್ನ ಮನದ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳಿ ಹೊರಟು ಬಿಟ್ಟ. ಸೀತಾ ಕೂಡ ಗೊಂದಲದಲ್ಲಿ ಸಿಲುಕಿದ್ದಾಳೆ. ಸಿಹಿ ನಾಟಕಕ್ಕೆ ತಯಾರಾಗಿದ್ದು, ತನ್ನ ಫ್ರೆಂಡ್ ರಾಮ ಬರುತ್ತಾರೆ ಎಂದು ಕಾದಿದ್ದಾಳೆ. ಆದರೆ, ರಾಮ ಮನಸ್ಸು ಕೆಡಿಸಿಕೊಂಡಿದ್ದು, ಸಿಹಿ ನಾಟಕವನ್ನು ನೋಡಲು ಬರುವುದಿಲ್ಲ. ಮಾರ್ಕಾಂಡೇಯನ ಕಥೆ ಆಧರಿತ ನಾಟಕದಲ್ಲಿ ಸಿಹಿ ಅದ್ಭುತವಾಗಿ ನಟಿಸಿದ್ದು. ಎಲ್ಲೂ ತೊದಲದೇ ಡೈಲಾಗ್ ಗಳನ್ನು ಹೇಳುತ್ತಿರುತ್ತಾಳೆ. ಸಿಹಿ ಅಭಿನಯಕ್ಕೆ ಸೀತಾ ಫಿದಾ ಆಗಿರುತ್ತಾಳೆ.

ಬ್ಯಾಡ್ ಅಂಕಲ್ ನ ನೋಡಿ ಹೆದರಿದ ಸಿಹಿ

ಆದರೆ, ಸೀತಾ ಹಾಗೂ ರಾಮನನ್ನು ಯಾವುದೇ ಕಾರಣಕ್ಕೂ ಒಂದಾಗಲು ಬಿಡಬಾರದು. ತಾನೇ ಸೀತಾಳನ್ನು ಮದುವೆಯಾಗಬೇಕು ಎಂದು ಜೈಲಿನಿಂದ ಹೊರಗೆ ಬಂದಿರುವ ರುದ್ರಪ್ರತಾಪ್ ಮತ್ತೆ ವಠಾರಕ್ಕೆ ಆಗಮಿಸಿದ್ದಾನೆ. ಆದರೆ. ಯಾರ ಕಣ್ಣಿಗೂ ಕಾಣಿಸಿಕೊಳ್ಳದ ರುದ್ರಪ್ರತಾಪ್, ಯಮನ ವೇಷದಲ್ಲಿ ಸಿಹಿ ಎದುರಿಗೆ ಬಂದು ಹೆದರಿಸುತ್ತಾನೆ. ಡೈಲಾಗ್ ಹೇಳುವಾಗ ಬ್ಯಾಡ್ ಅಂಕಲ್ ನ ನೋಡಿದ ಸಿಹಿ ಅರ್ಧಕ್ಕೆ ನಾಟಕವನ್ನು ನಿಲ್ಲಿಸಿ ಸೀತಾ ಬಳಿ ಓಡಿ ಬರುತ್ತಾಳೆ. ಬ್ಯಾಡ್ ಅಂಕಲ್ ಬಂದಿದ್ದಾರೆ ಎಂದು ಇಡೀ ರಾತ್ರಿ ಹದರಿಕೊಂಡಿರುತ್ತಾಳೆ. ಆದರೆ. ಯಾರ ಕಣ್ಣಿಗೂ ರುದ್ರಪ್ರತಾಪ್ ಕಾಣದ ಕಾರಣ, ಸಿಹಿ ಯಮನ ಪಾತ್ರವನ್ನು ಕಂಡು ಹೆದರಿರಬೇಕು ಎಂದು ಅಂದುಕೊಳ್ಳುತ್ತಾರೆ.

written update on episode 15 March seetha rama serial

ರಾಮ ಮೇಲೆ ಪ್ರೀತಿ ಹೆಚ್ಚಿಸಿಕೊಂಡ ಸೀತಾ

ಸೀತಾ, ರಾಮಗೆ ಸಿಹಿಯ ನಾಟಕದ ವೀಡಿಯೋ ಕಳಿಸುತ್ತಾಳೆ. ಆದರೆ, ರಾಮ, ಸೀತಾಳಿಗೆ ರಿಪ್ಲೈ ಮಾಡುವುದಿಲ್ಲ. ಬೆಳಗೆದ್ದು, ರಾಮ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತಾ, ಸೀತಾ ತನಗೂ ರಾಮ ಬೇಕು. ರಾಮ ತನಗೆ ತುಂಬಾ ಸ್ಪೆಷಲ್ ಎಂಬಂತೆ ಒಬ್ಬಳೇ ಕನವರಿಸುತ್ತಾಳೆ. ಹಗಲು ಕನಸಿನಲ್ಲಿ ಬರುವ ರಾಮ ಗೆ ನೀವಂದ್ರೆ ನನಗೂ ಇಷ್ಟ. ನನ್ನನ್ನು ದೂರ ಮಾಡಬೇಡಿ ಎಂದು ಕೇಳುತ್ತಾಳೆ. ಸೀತಾಳಿಗೆ ರಾಮ ಮೇಲಿನ ಪ್ರೀತಿ ಹೆಚ್ಚಾಗಿದೆ. ಆದರೆ, ರಾಮ ಗೆ ಸೀತಾ ತನ್ನ ಜೊತೆಗೆ ಹೇಗೆ ನಡೆದುಕೊಳ್ಳುತ್ತಾಳೋ ಎಂಬ ಆತಂಕವೂ ಇದ್ದು, ಸೀತಾ ಮೇಲೆ ಕೋಪವೂ ಬಂದಿದೆ.

ತನ್ನ ಕೆಲಸ ಸಾಧಿಸಿಕೊಳ್ಳಲು ಮುಂದಾದ ಭಾರ್ಗವಿ

ಇತ್ತ ಸೂರಿ ತಾತನ ಜೊತೆಗೆ ಮಾತನಾಡುವ ಭಾರ್ಗವಿ ಬೇಕಂತಲೇ ರಾಮ್ ಗೆ ಆದಷ್ಟು ಬೇಗ ಮದುವೆ ಮಾಡಿ. ಅಶೋಕನನ್ನು ರಾಮ್ ನಿಂದ ದೂರವಿಟ್ಟರೆ, ರಾಮ್ ತನ್ನ ಬದುಕಿನ ಬಗ್ಗೆ ಯೋಚಿಸುತ್ತಾನೆ ಎಂದು ಫಿಟ್ಟಿಂಗ್ ಇಡುತ್ತಾಳೆ. ಸೂರಿ ತಾತ ಕೂಡ ರಾಮ್ ಮದುವೆಯ ಬಗ್ಗೆ ನಿರ್ಧಾರ್ ಮಾಡಲು ಮನೆಯವರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾರೆ. ಇಂದು ರಾಮ್ ಮದುವೆಯ ಬಗ್ಗೆ ಯಾವುದಾದರೂ ಒಂದು ತೀರ್ಮಾನ ತೆಗೆದುಕೊಳ್ಳಲೇಬೇಕು ಎಂದುಕೊಂಡಿದ್ದಾರೆ.

written update on episode 15 March seetha rama serial

ರಾಮ ಮದುವೆ ಬಗ್ಗೆ ಸೂರಿ ಕಟು ನಿರ್ಧಾರ

ಮನೆಯವರ ಎದುರ ಸೂರಿ ತಾತ ಮಾತನಾಡುತ್ತಾರೆ. ಇಷ್ಟು ದಿನ ರಾಮ್ ತನ್ನ ಮದುವೆಯ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಿಟ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಭಾರ್ಗವಿ ರಾಮ್ ಮದುವೆಗೆ ಒಪ್ಪಿಸುತ್ತಾಳೆ ಎಂದುಕೊಂಡೆ. ಅದೂ ಕೂಡ ನೆರವೇರಲಿಲ್ಲ. ಈಗ ಪ್ರೀತಿ ಗೀತಿ ಎಲ್ಲಾ ಬಿಟ್ಟು, ರಾಮ್ ನಾನು ತೋರಿಸುವ ಹುಡುಗಿಯನ್ನು ಮದುವೆಯಾಗಬೇಕು. ಇದೇ ನನ್ನ ತೀರ್ಮಾನ ಎಂದು ಕಟುವಾಗಿ ಹೇಳುತ್ತಾರೆ. ಈ ಮಾತನ್ನು ಕೇಳಿದ ರಾಮ್ ಮನಸ್ಸಿಗೆ ಆಘಾತವಾಗುತ್ತದೆ. ಆದರೆ, ಭಾರ್ಗವಿ ಚಾಂದಿನಿ ಜೊತೆಗೆ ರಾಮ್ ಮದುವೆ ಮಾಡಿಸಿ, ಮುಂದೆ ಎಲ್ಲವನ್ನೂ ತನಗೆ ಬೇಕಾದಂತೆ ನಡೆಸಬೇಕು ಎಂದುಕೊಂಡಿದ್ದಾಳೆ.

More from Filmibeat

English summary
finally ram proposes seethe. Even seetha started loving ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X