Seetha Rama ; ಸೀತಾ ಮನೆಗೆ ಬಂದ ರಾಮ ಕುಟುಂಬ : ಬಯಲಾಗುತ್ತಾ ಸಿಹಿ ರಹಸ್ಯ..?
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮನೆಗೆ ಬರುವ ಬದಲು ಅಶೋಕ್ ತನ್ನ ಪಾಡಿಗೆ ತಾನು ಚಾಂದಿನಿಯನ್ನು ಹುಡುಕಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾನೆ. ಪೊಲೀಸರನ್ನು ಭೇಟಿಯಾಗಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಚಾಂದಿನಿ ಬೇಕಂತಲೇ ಅಪಘಾತವಾಗುವಂತೆ ವಾಹನ ಚಲಾಯಿಸಿ, ಪರಾರಿಯಾದ ವಿಚಾರವನ್ನು ಹೇಳಿದ್ದಾನೆ. ಚಾಂದಿನಿ ಫೋನ್ ಸ್ವಿಚ್ ಆಫ್ ಆಗಿರುವ ಕಾರಣ ಅವಳನ್ನು ಹುಡುಕಿ ಸತ್ಯ ಬಾಯಿ ಬಿಡಿಸಿ ಎಂದು ಪೊಲೀಸರಲ್ಲಿ ಅಶೋಕ್ ಮನವಿಯನ್ನು ಮಾಡಿದ್ದಾನೆ.
ಚಿಕ್ಕಿ ಪ್ರಶ್ನೆಗೆ ಉತ್ತರಿಸದ ರಾಮ
ರಾಮ ಮನೆಯಲ್ಲಿ ಎಲ್ಲರೂ ಸೀತಾ ಮನೆಗೆ ಹೋಗಲು ರೆಡಿಯಾಗುತ್ತಿದ್ದಾರೆ. ಆದರೆ, ಭಾರ್ಗವಿಗೆ ಲಾಯರ್ ಆಸ್ತಿ ಬಗ್ಗೆ ಹೇಳಿದ ವಿಚಾರವೇ ಮನದಲ್ಲಿ ಕೊರೆಯುತ್ತಿದೆ. ರಾಮ ಬಳಿ ಇದೇ ವಿಚಾರವನ್ನು ಪ್ರಶ್ನಿಸಿದ್ದಾಳೆ. ನಿಮ್ಮ ಚಿಕ್ಕಪ್ಪ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದರು. ಲಾಯರ್ ಬಳಿ ಏನು ಮಾತನಾಡಿದೆ. ಅವರು ಆಸ್ತಿ ಬಗ್ಗೆ ಏನ್ ಹೇಳಿದರು ಎಂದು ಕೇಳುತ್ತಾಳೆ. ಆದರೆ, ರಾಮ ಮಾತನಾಡುವುದೇ ಇಲ್ಲ. ಮತ್ತೆ ಭಾರ್ಗವಿ ಬೆನ್ನು ಬಿಡದೇ ಕೇಳುತ್ತಾಳೆ. ಆಗ ರಾಮ ಈಗ ಸೀತಾ ಮನೆಗೆ ಹೋಗಿ ಬರುವ ಕೆಲಸದ ಕಡೆಗೆ ಗಮನ ಕೊಡೋಣ ಚಿಕ್ಕಿ. ಈ ವಿಚಾರ ಮಾತನಾಡುವುದಕ್ಕೆ ಬಹಳ ಸಮಯ ಇದೆ ಎಂದು ಹೇಳುತ್ತಾನೆ. ಈ ಮಾತು ಭಾರ್ಗವಿಗೆ ಕೋಪವನ್ನು ತರಿಸುತ್ತದೆ. ಈ ಮದುವೆಯೊಂದು ಆಗಲಿ. ಆಮೇಲೆ ಎಲ್ಲವೂ ನನ್ನಿಷ್ಟದಂತೆಯೇ ನಡೆಯಬೇಕು ಎಂದು ಗೊಣಗಿಕೊಳ್ಳುತ್ತಾಳೆ.

ಹೆಣ್ಣು ನೋಡುವ ಶಾಸ್ತ್ರ ಶುರು
ಇತ್ತ ಸೀತಾ ಮನೆಯಲ್ಲಿ ಸಿಹಿ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಿರುತ್ತಾಳೆ. ಅವಳು ತನ್ನ ತಾಯಿ ಮದುವೆ ಮಾಡುತ್ತಿರುವ ಸಂಭ್ರಮದಲ್ಲಿ ಮುಳುಗಿದ್ದಾಳೆ. ಸೀತಾಳಿಗೆ ಮದರ್ಸ್ ಡೇ ವಿಶ್ ಕೂಡ ಮಾಡುತ್ತಾಳೆ. ತಟ್ಟೆಯ ಮೇಲೆ ಸಾಸ್ ಬಳಸಿ ಹ್ಯಾಪಿ ಮದರ್ಸ್ ಡೇ ಎಂದು ಬರೆದು ವಿಶ್ ಮಾಡುತ್ತಾಳೆ. ಸೀತಾ ಮಗಳ ನಡವಳಿಕೆ ಕಂಡು ಖುಷಿ ಪಡುತ್ತಾಳೆ. ಸೀತಾ ಕೂ ಅಷ್ಟೇ ಸಂಭ್ರಮದಲ್ಲಿ ತಯಾರಿ ಮಾಡುತ್ತಿರುತ್ತಾಳೆ. ಮನೆಗೆ ಪ್ರಿಯಾ ಬಂದು ಕಳೆಯನ್ನು ಹೆಚ್ಚಿಸುತ್ತಾಳೆ. ಅಜ್ಜಿ ಶಾಂತಮ್ಮ ಬಂದವರಿಗೆಂದು ಉಪ್ಪಿಟ್ಟು ಹಾಗೂ ಕೆಸರಿಬಾತ್ ಅನ್ನು ಸಿದ್ಧಪಡಿಸಿರುತ್ತಾರೆ. ಸಿಹಿ ಎಲ್ಲಾ ಕಡೆಯೂ ಉಸ್ತುವಾರಿ ನಡೆಸುತ್ತಾ ಓಡಾಡಿಕೊಂಡಿರುತ್ತಾಳೆ.
ಸೀತಾಳಿಗಾಗಿ ಹುಡುಕಾಡಿದ ರಾಮ
ಸಿಹಿ ಮತ್ತು ಪ್ರಿಯಾ ಇಬ್ಬರೂ ಸೀತಾಳನ್ನು ರೆಡಿಯಾಗಲು ರೂಮಿಗೆ ಕಳಿಸುತ್ತಾರೆ. ಅದೇ ವೇಳೆಗೆ ರಾಮ ಕುಟುಂಬದವರು ಮನೆಗೆ ಬರುತ್ತಾರೆ. ಭಾರ್ಗವಿ ಮತ್ತು ಸಾಧನಾ ದೇಸಾಯಿ ಕುಟುಂಬದ ಮೊಮ್ಮಗನಿಗೆ ಈ ವಠಾರದ ಹುಡುಗಿಯನ್ನು ತಂದುಕೊಳ್ಳುವ ಕರ್ಮ ಎಂದು ಮಾತನಾಡಿಕೊಂಡು ಮನೆಯೊಳಗೆ ಬರುತ್ತಾರೆ. ಭಾರ್ಗವಿ ಮಗನಿಗೆ ಸಿಹಿ ಎಂದರೆ ಸಿಟ್ಟು ಹಾಗಾಗಿ ಅವಳು ಹಾಕಿದ ರಂಗೋಲಿಯನ್ನು ಅಳಿಸಿ ಬಿಡುತ್ತಾನೆ. ಇನ್ನು ರಾಮ್ ಮನೆಗೆ ಬಂದ ಕೂಡಲೇ ಸೀತಾಳಿಗಾಗಿ ಹುಡುಕಾಡುತ್ತಾನೆ. ಪ್ರಿಯಾ ರಾಮ್ ನನ್ನು ರೇಗಿಸುತ್ತಿರುತ್ತಾಳೆ.

ಸಿಹಿ ರಹಸ್ಯ ಹೇಳುತ್ತಾಳಾ ಸೀತಾ..?
ಸೀತಾಳನ್ನು ಸಿಹಿ ಕರೆದುಕೊಂಡು ಬಂದ ಬಳಿಕ ರಾಮ್ ಮತ್ತು ಸೀತಾ ಇಬ್ಬರೂ ಮಾತನಾಡಲು ಹೋಗುತ್ತಾರೆ. ಆಗ ಸೀತಾ ತನ್ನ ಹಾಗೂ ಸಿಹಿಯ ರಹಸ್ಯವನ್ನು ಹೇಳಲು ಮುಂದಾಗುತ್ತಾಳೆ. ಸಿಹಿ ಬಗ್ಗೆ ನಾನು ನಿಮಗೆ ಏನೂ ಹೇಳೇ ಇಲ್ಲ. ನೀವು ಕೂಡ ಆ ವಿಚಾರದ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಆದರೆ, ನಾನು ಇರುವ ಸತ್ಯವನ್ನು ಹೇಳಲೇಬೇಕು ಎಂದು ಹೇಳುತ್ತಾಳೆ. ರಾಮ್ ಸೀತಾ ಮಾತನ್ನು ಕೇಳುತ್ತಾನಾ..? ಸಿಹಿ ಬಗ್ಗೆ ಸತ್ಯ ತಿಳಿದ ಬಳಿಕ ಇಬ್ಬರ ಮದುವೆ ನಡೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











