Seetha Raama: ಕೊನೆಗೂ ಸೀತಾ ಹಾಗೂ ರುದ್ರಪ್ರತಾಪ್ ಮದುವೆ ಡೇಟ್ ಫಿಕ್ಸ್ ಆಯ್ತು

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಮನೆಯನ್ನು ನಿಭಾಯಿಸಲಾಗದೇ ಸೀತಾ ಅನಿವಾರ್ಯವಾಗಿ ಪಾರ್ಟ್ ಟೈಂ ಕೆಲಸಕ್ಕೆ ಹೋಗುವಂತಾಗಿದೆ.

ಸೀತಾಳ ಸಂಕಷ್ಟ ಗಮನಿಸಿದ ಎಲ್ಲರೂ ಆಕೆಗೆ ಮದುವೆಯ ಅಗತ್ಯವಿದೆ ಎಂದು ಅವಳಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಲಾಯರ್ ಕೂಡ ಸೀತಾಳನ್ನು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾನೆ.

written update on episode 15th December Seetha Raama kannada serial

ಸೀತಾ ಹಾಗೂ ಸಿಹಿಯನ್ನು ಈ ಮದುವೆಗೆ ಒಪ್ಪಿಸುವ ಜವಾಬ್ದಾರಿ ರಾಮನದ್ದಾಗಿದೆ. ಈಗ ರಾಮ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಲ್ಲದೇ, ಸಿಹಿಗೆ ಹೊಸ ಫ್ರೆಂಡ್ ಜೊತೆಗೆ ಅಪ್ಪನನ್ನು ಪರಿಚಯಿಸಿದ್ದಾನೆ.

ಸಿಹಿ ಅಪ್ಪನನ್ನು ಆಯ್ಕೆ ಮಾಡಿದ್ದಾಯ್ತು

ಮೊದಮೊದಲು ಸಿಹಿ ಲಾಯರ್ ರುದ್ರಪ್ರತಾಪ್ ಎಂದರೆ ಮೂಗು ಮುರಿಯುತ್ತಿದ್ದಳು. ಆದರೆ ರಾಮ್ ಸಿಹಿಗೆ ಲಾಯರ್ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿ ಫ್ರೆಂಡ್ ಎಂದು ಪರಿಚಯ ಮಾಡಿಸಿದ್ದಾನೆ. ಸಿಹಿ ತನಗೆ ಬೇಕಾದಂತೆ ಲಾಯರ್ ಅನ್ನು ಪರೀಕ್ಷೆಗೆ ಒಡ್ಡಿದ್ದಾಳೆ. ರಾಮ್ ಸಹಾಯದಿಂದ ಲಾಯರ್ ಸಿಹಿ ಮನಸ್ಸನ್ನು ಗೆದ್ದಿದ್ದಾನೆ. ಅಪ್ಪನಾಗಲು ಯಾವೆಲ್ಲಾ ಅರ್ಹತೆ ಬೇಕು, ಸೀತಾಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಪಡೆದು ಸಿಹಿ ಒಪ್ಪಿಕೊಂಡಿದ್ದಾಳೆ. ಆದರೆ ಈಗ ಸೀತಾಳಿಗೆ ಇದು ನುಂಗಲಾರದ ತುತ್ತಾಗಿದೆ.

written update on episode 15th December Seetha Raama kannada serial

ತ್ಯಾಗದ ಮೂಡ್‌ನಲ್ಲಿ ರಾಮ್

ಸೀತಾಳಿಗೆ ರಾಮ್ ಮದುವೆ ವಿಚಾರದಲ್ಲಿ ಮೂಗು ತೂರಿಸಿದ್ದೇ ಇಷ್ಟವಿಲ್ಲ. ಈಗ ಸಿಹಿ ಒಪ್ಪಿದರೆ ತನಗೇನು ಇಲ್ಲ ಎಂದು ಹೇಳಿ ಪೇಚಿಗೆ ಸಿಲುಕಿಕೊಂಡಿದ್ದಾಳೆ. ಸಿಹಿಯೂ ಈ ಮದುವೆಗೆ ಒಪ್ಪಿಕೊಂಡಿದ್ದು, ಈಗ ಸೀತಾ ಮುಂದೆ ನಡೆಯುವ ಎಲ್ಲಾ ಬದಲಾವಣೆಗಳನ್ನು ಒಪ್ಪಿಕೊಳ್ಳುವುದೊಂದೇ ಬಾಕಿ ಇದೆ. ರಾಮ್ ಅಂತೂ ಸಂಪೂರ್ಣವಾಗಿ ತ್ಯಾಗ ಮಾಡುವ ಮೂಡ್‌ನಲ್ಲೇ ಇದ್ದಾನೆ.

ರಾಮ್‌ ದುಬೈಗೆ ಹೋಗುವ ನಿರ್ಧಾರ

ಸೀತಾಳನ್ನು ಲಾಯರ್‌ಗೆ ಕೊಟ್ಟು ಮದುವೆ ಮಾಡಿದ ಬಳಿಕ ತಾನು ಮತ್ತೆ ದುಬೈಗೆ ಹೋಗಿ ಸೆಟಲ್ ಆಗಬೇಕು ಎಂದು ಪ್ಲಾನ್ ಮಾಡಿದ್ದಾನೆ. ಆದರೆ, ಅಶೋಕನಿಗೆ ರಾಮ್ ಮಾಡುತ್ತಿರುವುದು ಸ್ವಲ್ಪವೂ ಇಷ್ಟವಿಲ್ಲ. ತನ್ನ ಮನದಲ್ಲಿರುವ ಪ್ರೀತಿಯನ್ನು ಬಚ್ಚಿಟ್ಟುಕೊಂಡು, ಸೀತಾಳನ್ನು ಅನವಶ್ಯಕವಾಗಿ ಬೇರೆಯವರಿಗೆ ಬಿಟ್ಟು ಕೊಡುತ್ತಿರುವುದಕ್ಕೆ ಬೈಯುತ್ತಲೇ ಇದ್ದಾನೆ.

ಮದುವೆ ಡೇಟ್ ಫಿಕ್ಸ್ ಆಯ್ತು

ಲಾಯರ್ ಜೊತೆ ಸೇರಿಕೊಂಡು ಸೀತಾಳ ಅಣ್ಣ ಮತ್ತು ಅತ್ತಿಗೆ ಸೇರಿಕೊಂಡು ಬೇಗ ಮದುವೆ ಮಾಡಿಸಲು ಪುರೋಹಿತರನ್ನು ಮನೆಗೆ ಕರೆಸಿದ್ದಾರೆ. ಮದುವೆಯ ಡೇಟ್ ಫಿಕ್ಸ್ ಮಾಡಲು ಹೇಳಿದ್ದಾಳೆ. ಅಜ್ಜಿಗೆ ಸೀತಾ ಮದುವೆ ಆಗುತ್ತಿರುವುದು ಖುಷಿ ಕೊಟ್ಟಿದ್ದರೆ, ತಾತನಿಗೆ ಮನದಲ್ಲೇ ಅನುಮಾನ. ಸೀತಾಳಿಗೆ ಈ ಮದುವೆ ಇಷ್ಟವಿಲ್ಲ ಅಂತ ಕಾಣುತ್ತೆ ಎಂದು ಹೇಳುತ್ತಲೇ ಇದ್ದರೂ ಕೂಡ ಶುಕ್ರವಾರವೇ ಒಳ್ಳೆಯ ಮೂಹೂರ್ತ ಇರುವುದು ಎಂದು ಪ್ಲಾನ್ ಮಾಡಿದ್ದಾರೆ. ಕಾಟಾಚಾರಕ್ಕೆಂದು ಲಾಯರ್ ಸೀತಾಳನ್ನು ಈ ದಿನ ನಿಮಗೆ ಒಪ್ಪಿಗೆನಾ ಎಂದು ಕೇಳುತ್ತಾನೆ. ಆದರೆ, ಸೀತಾ ಏನೂ ಉತ್ತರ ಕೊಡದೆಯೇ, ರಾಮ್ ಮುಖ ನೋಡುತ್ತಾಳೆ. ಇದು ಲಾಯರ್‌ ಕೋಪ ತರಿಸುತ್ತದೆ.

ಸೀತಾ ಮನದಲ್ಲಿ ರಾಮ್ ಇದ್ದಾನಾ..?

ಇನ್ನು ಎಲ್ಲರಿಗೂ ಕಾಫಿ ಮಾಡಲೆಂದು ಸೀತಾ ಅಡುಗೆ ಮನೆಗೆ ಹೋಗುತ್ತಾಳೆ. ಸೀತಾ ಹಾಗೂ ರಾಮ್ ಇಬ್ಬರೂ ಅಡುಗೆ ಮನೆಗೆ ಹೋಗಿದ್ದಾರೆ. ಸೀತಾ ತನ್ನ ಮನದಲ್ಲಿ ನೀನಿದ್ದೀಯಾ ರಾಮ್ ಎಂಬುದನ್ನು ಸಣ್ಣ ಕ್ಲೂ ನೀಡಿ ಹೇಳಿದ್ದಾಳೆ. ಆದರೆ ಇದು ರಾಮ್‌ಗೆ ಅರ್ಥವಾಗಿಲ್ಲ. ಆದರೆ, ಸೀತಾ ಮನದಲ್ಲಿ ರಾಮ್ ಇದ್ದಾನೆ. ಇಷ್ಟು ದಿನ ತನಗೆ ಮದುವೆಯಾಗುವ ಆಸೆ ಇಲ್ಲದಿದ್ದರೂ ಕೂಡ ಈಗ ಮದುವೆಯ ಮಾತುಕತೆ ಬಂದಾಗಿನಿಂದ ಹಾಗೂ ಸಿಹಿಗೆ ರಾಮ್ ಎಂದರೆ ಬಹಳ ಇಷ್ಟ. ಹೀಗಿರುವಾಗ ಈಗ ಸೀತಾ ಮನದಲ್ಲೂ ರಾಮ್ ಇದ್ದಾನಾ? ಎಂಬ ಅನುಮಾನ ಮೂಡಿದೆ.

More from Filmibeat

English summary
Seetha Raama kannada serial latest Episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X