Seetha Raama: ಬೀಳುತ್ತಿದ್ದ ಸೀತಾಳನ್ನು ಹಿಡಿದುಕೊಂಡ ರಾಮ್: ಇಬ್ಬರನ್ನು ಒಂದು ಮಾಡುತ್ತಾ ಸುಗ್ಗಿ ಹಬ್ಬ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ- ತಾತ ತಿಂಡಿಗಳನ್ನು ತಯಾರಿಸಿ, ಮನೆ ಮನೆಗೆ ತೆರಳಿ ಎಳ್ಳು ಬೆಲ್ಲವನ್ನು ಹಂಚುತ್ತಿದ್ದಾರೆ.

ಸೀತಾ, ಸಿಹಿಗೆ ಲಂಗಾ-ದಾವಣಿ ಹಾಕಿ ಸಿಂಗಾರ ಮಾಡಿದ್ದಾಳೆ. ಸಿಹಿಯೂ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾಳೆ. ಎಲ್ಲರ ಮನೆಗೂ ಹೋಗಿ ಎಳ್ಳು-ಬೆಲ್ಲಾ ಕೊಟ್ಟು ಬಂದಿದ್ದಾಳೆ.

written update on episode 15th January seetha raama serial

ಎಲ್ಲರಿಗೂ ಸಂಕ್ರಾಂತಿ ಹಬ್ಬಕ್ಕೆ ವಿಶ್ ಮಾಡಿದ್ದು, ಈಗ ತನ್ನ ಫ್ರೆಂಡ್ ರಾಮ್‌ನನ್ನು ನೆನಪು ಮಾಡಿಕೊಂಡಿದ್ದಾಳೆ. ಸ್ಕೂಲ್‌ಗೆ ಹೋಗುವುದು ಬಿಟ್ಟು ಫ್ರೆಂಡ್ ಬಗ್ಗೆ ಯೋಚಿಸಿದ್ದಾಳೆ.

ಸಿಹಿ ಆಸೆಗೂ ಮರುಗದ ಸೀತಾ ಮನಸ್ಸು

ಸೀತಮ್ಮನ ಬಳಿ ಹೋಗಿ ಎಲ್ಲರಿಗೂ ವಿಶ್ ಮಾಡಿದೆ, ಆದರೆ ಒಬ್ಬರಿಗೆ ಮಾಡಿಲ್ಲ ಎಂದು ಹೇಳುತ್ತಾಳೆ. ಸಿಹಿ, ರಾಮ್ ಬಗ್ಗೆ ಮಾತನಾಡುತ್ತಿದ್ದಾಳೆ ಎಂಬುದನ್ನು ಅರಿತ ಸೀತಾ ಮಾತು ಮರೆಸಿ ಆಫೀಸಿಗೆ ಹೊರಡುತ್ತಾಳೆ. ಹಬ್ಬದ ದಿನ ಸೀರೆ ಧರಿಸಿಕೊಂಡು ಹೋಗು ಎಂದು ಹೇಳುತ್ತಾಳೆ. ಮಗಳಿಗಾಗಿ ಸೀತಾ ಸೀರೆಯುಟ್ಟು ಸಿಂಗಾರ ಮಾಡಿಕೊಂಡು ಹೊರಡುತ್ತಾಳೆ. ಹಬ್ಬದ ಪ್ರಯುಕ್ತ ನೌಕರರಿಗೆ ಸ್ಪೆಷಲ್ ಈವೆಂಟ್ ಅನ್ನು ಅರೇಂಜ್ ಮಾಡಿದ್ದಾರೆ.

written update on episode 15th January seetha raama serial

ರೆಸಾರ್ಟ್‌ನಲ್ಲಿ ಸಂಕ್ರಾಂತಿ ಹಬ್ಬ

ಇನ್ನು ರೆಸಾರ್ಟ್‌ನಲ್ಲಿ ಹಬ್ಬದ ಪ್ರಯುಕ್ತ ಸಿಬ್ಬಂದಿಗೆ ಆಟ-ಊಟವನ್ನು ಸಿದ್ಧಪಡಿಸಲಾಗಿದೆ. ರಾಮ್, ಸೀತಾ ತನ್ನ ಜೊತೆಗೆ ಮಾತನಾಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದು, ಅಶೋಕ್ ಸಮಸ್ಯೆ ಅನ್ನು ಮಾತನಾಡಿ ಬೇಗ ಬಗೆಹರಿಸಿಕೊಳ್ಳಲು ಹೇಳುತ್ತಾನೆ. ರೆಸಾರ್ಟ್‌ಗೆ ಸೂರಿ ತಾತ, ವಿಶ್ವ ಚಿಕ್ಕಪ್ಪ ಹಾಗೂ ಭಾರ್ಗವಿ ಚಿಕ್ಕಿ ಕೂಡ ಸರ್ಪ್ರೈಸ್ ಆಗಿ ಆಗಮಿಸುತ್ತಾರೆ. ಸೂರಿ ತಾತ ಆಫಿಸ್‌ ಸಿಬ್ಬಂದಿ ಬಳಿ ಸಲುಗೆಯಿಂದ ಮಾತನಾಡುತ್ತಾರೆ. ಅದೇ ಸಂದರ್ಭದಲ್ಲಿ ಸೀತಾ ನೀವು ಇಷ್ಟು ವಯಸ್ಸಾದರೂ ಎಷ್ಟು ಲವಲವಿಕೆಯಿಂದ ಇರುತ್ತೀರಾ ಎಂದು ಕಾಂಪ್ಲಿಮೆಂಟ್ ಕೊಡುತ್ತಾಳೆ. ಸೂರಿ ತಾತನಿಗೆ ಸೀತಾ ಹಾಗೂ ರಾಮ್ ಬಗ್ಗೆ ಗೊತ್ತಿರುವುದಕ್ಕೆ ಲವಲವಿಕೆಯಿಂದ ಇರುವುದನ್ನು ನೀನು ರಾಮ್‌ಗೆ ಸ್ವಲ್ಪ ಹೇಳಿಕೊಡಮ್ಮ ಎಂದು ಹೇಳುತ್ತಾನೆ. ಈ ಮಾತು ಸೀತಾಳಿಗೆ ಮುಜುಗರ ಉಂಟು ಮಾಡುತ್ತದೆ.

ಸೀತಾಳಿಗೆ ಅರ್ಥ ಮಾಡಿಸಲು ರಾಮ್ ಯತ್ನ

ಅಂದಹಾಗೆ ಸೀತಾ ಆಫಿಸಿನಲ್ಲಿರುವುದು ಭಾರ್ಗವಿಗೆ ಕೊಂಚವೂ ಇಷ್ಟವಿರುವುದಿಲ್ಲ. ಮನದೊಳಗೆ ಸೀತಾ ಬಗ್ಗೆ ಏನಾದರೂ ಒಂದು ಲೆಕ್ಕಾಚಾರ ಹಾಕುತ್ತಿರುತ್ತಾಳೆ. ಸೀತಾಳ ಬಳಿ ಸತ್ಯ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಲು ರಾಮ್ ಮಾತನಾಡುತ್ತಿರುತ್ತಾನೆ. ಸೀತಾಳಿಗೆ ರಾಮ್ ಮಾತು ಕೇಳಿಸಿಕೊಳ್ಳುವುದು ಕೊಂಚವೂ ಇಷ್ಟವಿರುವುದಿಲ್ಲ. ಇದೇ ಸಂದರ್ಭದಲ್ಲಿ ಭಾರ್ಗವಿ ಬಂದು ರಾಮ್‌ನನ್ನು ಕರೆದುಕೊಂಡು ಹೋಗುತ್ತಾಳೆ. ಇನ್ನು ಗಾಳಿಪಟ ಹಾರಿಸುವ ಆಟದಲ್ಲಿ ಎಲ್ಲರೂ ಗಾಳಿಪಟ ಹಾರಿಸುತ್ತಿದ್ದರೆ, ಅಶೋಕ್-ಪ್ರಿಯಾ ಹಾಗೂ ಸೀತಾ-ರಾಮ್ ನಡುವೆ ಮಾತುಕತೆ ನಡೆಯುತ್ತಿರುತ್ತದೆ.

ಸೀತಾಳ ಸೊಂಟ ಹಿಡಿದ ರಾಮ್

ರಾಮ್ ಸಿಕ್ಕ ಅವಕಾಶದಲ್ಲೇ ಸೀತಾ ಬಳಿ ಮಾತನಾಡುತ್ತಾನೆ. ನನ್ನ ಕೈ ಬಿಡಬೇಡಿ. ನಾನು ಸೋತು ಹೋಗುತ್ತೇನೆ. ಕೆಲವರ ಬದುಕು ಗಾಳಿಪಟದ ಸೂತ್ರವಿದ್ದಂತೆ. ಸೂತ್ರ ಯಾರದೋ ಕೈಯಲ್ಲಿರುತ್ತದೆ, ಅವರು ಸ್ವಲ್ಪ ಯಾಮಾರಿದೂ ಸೂತ್ರ ಕಳಚಿ ಗಾಳಿಪಟ ದಿಕ್ಕಾಪಾಲಾಗುತ್ತದೆ. ನನ್ನ ಬದುಕನ್ನು ಬೀಳಿಸಬೇಡಿ ಎಂದು ಕೇಳುತ್ತಾನೆ. ಅಷ್ಟರಲ್ಲಿ ಸೀತಾ ಸ್ಟೇಜ್ ಮೇಲಿನಿಂದ ಕಾಲು ಜಾರುತ್ತಾಳೆ. ಪಕ್ಕದಲ್ಲೇ ಇದ್ದ ರಾಮ್, ಸೀತಾ ಸೊಂಟವನ್ನು ಹಿಡಿದುಕೊಳ್ಳುತ್ತಾನೆ. ಇದು ಸೀತಾ ಹಾಗೂ ರಾಮ್ ಮನಸ್ಸನ್ನು ಒಂದು ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Seetha Raama Serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X