Seetha Rama ; ಸತ್ಯ ಹೇಳಲು ಹೊರಟ ಚಾಂದಿನಿಯನ್ನು ತಡೆದ ಭಾರ್ಗವಿ ಮನದಲ್ಲಿ ಸರ್ಪ್ರೈಸ್ ಪ್ಲಾನ್..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಸೂರಿ ಅಜ್ಜನ ಮನಸ್ಸಿಗೆ ಇಷ್ಟವಾಗುವಂತೆ ನಡೆದುಕೊಂಡಿದ್ದಾಳೆ. ಆದರೆ ಅವಳು ಸೀತಾ ಮಗಳು ಎಂಬ ಸತ್ಯ ಗೊತ್ತಿಲ್ಲ. ಅಷ್ಟೇ ಅಲ್ಲದೇ, ಭಾರ್ಗವಿ ಕೂಡ ಬೇಕಂತಲೇ ಸೂರಿಯಿಂದ ಸಿಹಿ, ಸೀತಾ ಮಗಳು ಎಂಬ ಸತ್ಯವನ್ನು ಮುಚ್ಚಿಟ್ಟಿದ್ದಾಳೆ. ಸೀತಾಳೇ ತನ್ನ ವಿಷಯವನ್ನೆಲ್ಲಾ ಹೇಳಿಕೊಳ್ಳಲು ಹೊರಟಾಗಲು ತಡೆದಿದ್ದಾಳೆ. ಇದೆಲ್ಲವನ್ನೂ ಭಾರ್ಗವಿ ಬೇಕಂತಲೇ ಮಾಡಿದ್ದು, ಸೀತಾ ಮತ್ತು ರಾಮನನ್ನು ಒಂದು ಮಾಡುವುದಕ್ಕಿಂತಲೂ ಸೀತಾಳನ್ನು ಸಂಪೂರ್ಣವಾಗಿ ತನ್ನಿಂದ ದೂರ ಮಾಡಲು ಹೀಗೆ ಮಾಡುತ್ತಿದ್ದಾಳೆ.
ಸೀತಾ ಜೊತೆ ನಯವಾಗಿ ಮಾತನಾಡಿದ ಭಾರ್ಗವಿ
ಊಟಕ್ಕೆಂದು ಸೀತಾ ಮತ್ತು ರಾಮನನ್ನು ಕರೆಯಲು ಬಂದ ಭಾರ್ಗವಿ ಈಗ ಸೀತಾ ಜೊತೆಗೆ ಮಾತನಾಡಿದ್ದಾಳೆ. ರಾಮ ಮೇಲಿನ ಪ್ರೀತಿಯಿಂದಾಗಿ ಅವನಿಗೆ ಹತ್ತಿರವಾಗುವವರನ್ನೆಲ್ಲಾ ಅನುಮಾನಿಸುತ್ತಿದ್ದೆ. ಹಾಗಾಗಿ ನಿಮ್ಮ ಜೊತೆಗೆ ಸ್ವಲ್ಪ ರೂಢ್ ಆಗಿ ನಡೆದುಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ. ನಿನ್ನಲ್ಲಿ ಹುಡುಕಿದರೂ ಒಂದು ಹುಳುಕೂ ಸಿಗುವುದಿಲ್ಲ ಎಂದು ಭಾರ್ಗವಿ ರಾಮಗೆ ಕೇಳುವಂತೆ ಸೀತಾಳನ್ನು ಹೊಗಳುತ್ತಿರುತ್ತಾಳೆ. ಭಾರ್ಗವಿ ಮಾಸ್ಟರ್ ಮೈಂಡ್ ಬಗ್ಗೆ ಇಬ್ಬರಿಗೂ ಅರ್ಥವಾಗುವುದಿಲ್ಲ. ಸೀತಾ ಅಂತೂ ಚಿಕ್ಕಿ ತುಂಬಾ ಒಳ್ಳೆಯವರು ಎಂದು ನಂಬಿದ್ದಾಳೆ.

ಷರತ್ತು ಹಾಕಿ ಮನೆಗೆ ಪ್ರಿಯಾ ಎಂಟ್ರಿ
ಇನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರದಲ್ಲಿ ಪ್ರಿಯಾ ಷರತ್ತು ಹಾಕುತ್ತಾಳೆ. ಎಲ್ಲರೂ ಪ್ರಿಯಾ ಕಂಡೀಷನ್ ಎಂದು ಹೇಳಿದಾಗ ಶಾಕ್ ಆಗುತ್ತಾರೆ. ಆದರೆ, ಪ್ರಿಯಾ ಷರತ್ತು ಹಾಕಿದ್ದು ಅಂಜಲಿಗೆ ಮಾತ್ರ. ತಾನು ಸೇರನ್ನು ಒದ್ದು ಮನೆಯೊಳಗೆ ಬರಬೇಕು ಎಂದರೆ, ಅಂಜಲಿ ಕೂಡ ಪಿಜಿ ಬಿಟ್ಟು ಈ ಮನೆಗೆ ಬರಬೇಕು ಎಂದು ಹೇಳುತ್ತಾಳೆ. ಆದರೆ, ಅಂಜಲಿಗೆ ಅದು ಇಷ್ಟವಿರುವುದಿಲ್ಲ. ಅತ್ತಿಗೆ ಹಾಕಿದ ಕಂಡೀಷನ್ ಗೆ ಏನು ಹೇಳಬೇಕು ಎಂಬುದು ಗೊತ್ತಿಲ್ಲದೇ ಅಂಜಲಿ ಸುಮ್ಮನಿದ್ದಾಗ ಭಾರ್ಗವಿ ಬಿಟ್ಟಿ ಮನೆ, ಬಿಟ್ಟಿ ಮದುವೆ, ಕರ್ಚಿಲ್ಲದ ಸಂಸಾರ ಎಂದು ಮನದೊಳಗೆ ಗೊಣಗಿಕೊಳ್ಳುತ್ತಾಳೆ. ಅಂಜಲಿ ಪ್ರಿಯಾ ಮಾತಿಗೆ ಒಪ್ಪಿಗೆ ಕೊಟ್ಟ ಬಳಿಕ ಪ್ರಿಯಾ ಮನೆಯೊಳಗೆ ಬರುತ್ತಾಳೆ.
ಸೀತಾ ಮೇಲೆ ರಾಮ ಗೆ ಕೋಪ
ಇನ್ನು ಸೀತಾಳನ್ನು ಸಿಹಿ ಬಲವಂತವಾಗಿ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ರಾಮ ಮತ್ತು ಅಂಜಲಿ ಪ್ರಿಯಾ-ಅಶೋಕ್ ರೂಮ್ ನ ಡೆಕೊರೇಟ್ ಮಾಡುತ್ತಿರುತ್ತಾರೆ. ಅದನ್ನು ತೋರಿಸುವ ಸಿಹಿ ಹಾಸಿಗೆ ಮೇಲೆ ಹೂ ಯಾಕೆ ಹಾಕಬೇಕು ಎಂದು ಕೇಳುತ್ತಾಳೆ. ಆಗ ಸೀತಾ ಅದು ಶಾಸ್ತ್ರ ಎಂದು ಹೇಳಿದ್ದಕ್ಕೆ, ಸಿಹಿ ಸುಮ್ಮನಾಗದೇ ಅದು ಯಾವ ಶಾಸ್ತ್ರ ಎಂದು ಪ್ರಶ್ನೆ ಮಾಡುತ್ತಾಳೆ. ಮೂವರಿಗೂ ಉತ್ತರ ಕೊಡದೇ ಸುಮ್ಮನಾದ ಮೇಲೆ ಅಂಜಲಿ ಸಿಹಿ ನ ಕರೆದುಕೊಂಡು ಹೋಗುತ್ತಾಳೆ. ರಾಮ ಸೀತಾ ಜೊತೆಗೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾನೆ. ಅದೇ ವೇಳೆಗೆ ಫೋನ್ ಬರುತ್ತದೆ. ಸೀತಾ ಫೋನ್ ರಿಸೀವ್ ಮಾಡಿ ಎಂದು ರಾಮನನ್ನು ದೂರ ತಳ್ಳಿದ್ದಕ್ಕೆ ಸೀತಾ ಮೇಲೆ ರಾಮ ಕೋಪ ಮಾಡಿಕೊಂಡಿದ್ದಾನೆ.

ಚಾಂದಿನಿ ಮಾತನ್ನು ನಂಬಿದ ಭಾರ್ಗವಿ
ಚಾಂದಿನಿ ಬೇಸರ ಮಾಡಿಕೊಂಡು ಹೋಗಿದ್ದು, ರಾಮ ಗೆ ಭಾರ್ಗವಿ ಮೋಸದಾಟ ಆಡುತ್ತಿದ್ದಾಳೆ ಎಂದು ವಾಯ್ಸ್ ಮೆಸೇಜ್ ಕಳಿಸಿರುತ್ತಾಳೆ. ರಾಮ ಮೆಸೇಜ್ ನೋಡಿಲ್ಲ ಎಂದು ಕಾಲ್ ಕೂಡ ಮಾಡುತ್ತಾಳೆ. ಅಷ್ಟರಲ್ಲಿ ಭಾರ್ಗವಿ ಚಾಂದಿನಿಗೆ ಫೊನ್ ಮಾಡಿ ಮಾತನಾಡುತ್ತಾಳೆ. ಚಾಂದಿನಿ ಸಾಯಲು ಬಂದಿದ್ದೀನಿ ಎಂದಾಗ ಭಾರ್ಗವಿ ಸಮಾಧಾನ ಮಾಡುತ್ತಾಳೆ. ಸೀತಾಳನ್ನು ಸೂರಿ ತಾತ ಒಪ್ಪಬಾರದು ಎಂದೇ ಅವಳನ್ನು ತೋರಿಸಿದ್ದು. ಅಷ್ಟಕ್ಕೆ ನೀನು ಬೇಸರ ಮಾಡಿಕೊಳ್ಳಬೇಡ. ನಿನ್ನನ್ನೇ ರಾಮ ಗೆ ಕೊಟ್ಟು ಮದುವೆ ಮಾಡಿಸುತ್ತೇನೆ ಎನ್ನುತ್ತಾಳೆ.


Click it and Unblock the Notifications











